ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಅನುರಾಗ್ ಸಿಂಗ್ ಠಾಕೂರ್ ನಾಳೆ ಹಿಸಾರ್ ಭೇಟಿ
ಹಿಸಾರ್ ನಲ್ಲಿ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಘಟಿಕೋತ್ಸವದ ಮುಖ್ಯಅತಿಥಿ
Posted On:
03 DEC 2022 7:14PM by PIB Bengaluru
ಹಿಸಾರ್ ನಲ್ಲಿರುವ ಓಂ ಸ್ಟೆರ್ಲಿಂಗ್ ಗ್ಲೋಬಲ್ ಯೂನಿವರ್ಸಿಟಿಯ ಮೊದಲ ಘಟಿಕೋತ್ಸವ 2022 ರ ಡಿಸೆಂಬರ್ 4 ರಂದು ನಡೆಯಲಿದ್ದು, ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಖಾತೆ ಹಾಗೂ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಹಿಸಾರ್ ಲೋಕಸಭಾ ಸಂಸದರಾದ ಶ್ರೀ ಬ್ರಿಜೇಂದ್ರ ಸಿಂಗ್, ನಗರ ಸ್ಥಳೀಯ ಸಂಸ್ಥೆಗಳ ಸಚಿವ ಡಾ||ಕಮಲ್ ಗುಪ್ತಾ ಮತ್ತಿತರ ಗಣ್ಯರು ಘಟಿಕೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಸಾವಿರಾರು ಯುವಕರಿಗೆ ಶಿಕ್ಷಣ ನೀಡುತ್ತಾ, ಅವರನ್ನು ಉದ್ಯೋಗಕ್ಕೆ ಸಜ್ಜುಗೊಳಿಸುತ್ತಾ ವಿಶ್ವವಿದ್ಯಾಲಯ ದೇಶಕ್ಕೆ ಹೊಸ ದಿಕ್ಕನ್ನು ನೀಡಿದೆ.
ಘಟಿಕೋತ್ಸವ ಸಮಾರಂಭದಲ್ಲಿ 815 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. 15 ವಿವಿಧ ಪದವಿಪೂರ್ವ ಕೋರ್ಸ್ ಗಳ 184 ವಿದ್ಯಾರ್ಥಿಗಳಿಗೆ ಹಾಗೂ 59 ಸ್ನಾತಕೋತ್ತರ ಕೋರ್ಸ್ ಗಳ 426 ವಿದ್ಯಾರ್ಥಿಗಳಿಗೆ ಅವರವರ ಪದವಿ ಪ್ರದಾನ ಮಾಡಲಾಗುವುದು. ಇದಲ್ಲದೇ, 14 ಡಿಪ್ಲೋಮಾ ತರಗತಿಗಳ 178 ವಿದ್ಯಾರ್ಥಿಗಳಿಗೆ ಡಿಪ್ಲೋಮಾ ನೀಡಲಾಗುವುದು. ವಿವಿಧ ವಿಭಾಗಗಳ 3 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಅತ್ಯುತ್ತಮ ಅಧ್ಯಯನಕ್ಕಾಗಿ 8 ವಿದ್ಯಾರ್ಥಿಗಳಗೆ ಮೆರಿಟ್ ಸರ್ಟಿಫಿಕೇಟ್ ನೀಡಲಾಗುವುದು.
ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಈ ಸಂದರ್ಭದಲ್ಲಿ ಶಿಕ್ಷಣ, ವೃತ್ತಿ, ಕ್ರೀಡೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಯುವಜನತೆಯೊಂದಿಗೆ ವಿಶೇಷ ಸಂವಾದ ನಡೆಸಲಿದ್ದಾರೆ. ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗುವುದಲ್ಲದೇ, ಸಚಿವರು ಓಂ ಸ್ಟೆರ್ಲಿಂಗ್ ಗ್ಲೋಬಲ್ ವಿಶ್ವವಿದ್ಯಾಲಯದ ಪತಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಿಭಾಗ ಸ್ಥಾಪಿಸಿರುವ ಸಮುದಾಯ ಬಾನುಲಿ ಕೇಂದ್ರ 90.0 “ಭವ್ಯವಾಣಿ” ಗೂ ಚಾಲನೆ ನೀಡಲಿದ್ದಾರೆ. ಈ ಬಾನುಲಿ ಕೇಂದ್ರ ಸಮಾರಂಭದಲ್ಲಿ ಮಾನ್ಯ ಕೇಂದ್ರ ಸಚಿವರ ಭಾಷಣವನ್ನು ಪ್ರಸಾರ ಮಾಡಲಿದೆ.
****
(Release ID: 1880755)
Visitor Counter : 135