ರಾಷ್ಟ್ರಪತಿಗಳ ಕಾರ್ಯಾಲಯ
ಡಿಸೆಂಬರ್ 4 ರಿಂದ 5 ರವರೆಗೆ ಭಾರತದ ರಾಷ್ಟ್ರಪತಿ ಅವರು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ
Posted On:
03 DEC 2022 6:46PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು 2022 ರ ಡಿಸೆಂಬರ್ 4 ರಿಂದ 5 ರವರೆಗೆ ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
2022 ರ ಡಿಸೆಂಬರ್ 4 ರಂದು, ವಿಜಯವಾಡದಲ್ಲಿಆಂಧ್ರಪ್ರದೇಶ ಸರ್ಕಾರವು ರಾಷ್ಟ್ರಪತಿ ಅವರ ಗೌರವಾರ್ಥ ಆಯೋಜಿಸಿರುವ ನಾಗರಿಕ ಸ್ವಾಗತ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಅವರು ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ, ನೌಕಾಪಡೆಯ ದಿನದಂದು ವಿಶಾಖಪಟ್ಟಣಂನಲ್ಲಿ ಭಾರತೀಯ ನೌಕಾಪಡೆಯು ನಡೆಸಲಿರುವ ಕಾರ್ಯಾಚರಣೆಯ ಪ್ರದರ್ಶನಕ್ಕೆ ಅವರು ಸಾಕ್ಷಿಯಾಗಲಿದ್ದಾರೆ ಮತ್ತು ರಕ್ಷಣಾ ಸಚಿವಾಲಯ; ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು; ಮತ್ತು ಬುಡಕಟ್ಟು ವ್ಯವಹಾರಗಳ ಯೋಜನೆಗಳಿಗೆ ವರ್ಚುವಲ್ ಮೂಲಕ ಉದ್ಘಾಟನೆ / ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
2022ರ ಡಿಸೆಂಬರ್ 5 ರಂದು ರಾಷ್ಟ್ರಪತಿ ಅವರು ತಿರುಪತಿಯ ಶ್ರೀ ಪದ್ಮಾವತಿ ಮಹಿಳಾ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಲಿದ್ದು, ಅಲ್ಲಿಅವರು ವಿದ್ಯಾರ್ಥಿಗಳು, ಬೋಧಕ ಸದಸ್ಯರು ಹಾಗೂ ಮಹಿಳಾ ಸಾಧಕಿಯರೊಂದಿಗೆ ಸಂವಾದ ನಡೆಸಲಿದ್ದಾರೆ.
*****
(Release ID: 1880750)
Visitor Counter : 130