ಕಲ್ಲಿದ್ದಲು ಸಚಿವಾಲಯ
ಏಪ್ರಿಲ್ - ನವೆಂಬರ್ 2022 ರ ಅವಧಿಯಲ್ಲಿ ದಾಖಲೆಯ ಕಲ್ಲಿದ್ದಲು ಉತ್ಪಾದನೆ ಮತ್ತು ರವಾನೆ
ಏಪ್ರಿಲ್-ನವೆಂಬರ್‌ನಲ್ಲಿ ಶೇ.17.13 ರಷ್ಟು ಹೆಚ್ಚಳದೊಂದಿಗೆ 524.20 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ
ಕಂಪನಿಗಳ ಬಳಕೆಯ /ಇತರ ಗಣಿಗಳ ಉತ್ಪಾದನೆಯಲ್ಲಿ ಶೇ.33. 41 ರಷ್ಟು ಹೆಚ್ಚಳ
Posted On:
02 DEC 2022 4:18PM by PIB Bengaluru
ಭಾರತದ ಕಲ್ಲಿದ್ದಲು ಉತ್ಪಾದನೆಯು ಏಪ್ರಿಲ್-ನವೆಂಬರ್ 2022 ರ ಅವಧಿಯಲ್ಲಿ ಶೇ.17.13 ರಷ್ಟು ಹೆಚ್ಚಳದೊಂದಿಗೆ 524.20 ಮಿಲಿಯನ್ ಟನ್‌ಗಳಿಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 447.54 ಮಿಲಿಯನ್ ಟನ್ ಉತ್ಪಾದನೆ ಮಾಡಲಾಗಿತ್ತು. ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ನ ಕಲ್ಲಿದ್ದಲು ಉತ್ಪಾದನೆಯು 2023 ನೇ ಹಣಕಾಸು ವರ್ಷದ ನವೆಂಬರ್ ವರೆಗೆ 412.63 ಮಿಲಿಯನ್ ಟನ್‌ಗಳನ್ನು ವರದಿ ಮಾಡಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದ್ದ 353.41 ಮಿಲಿಯನ್ ಟನ್‌ಗಳಿಗೆ ಹೋಲಿಸಿದರೆ ಶೇ.16.76 ರಷ್ಟು ಹೆಚ್ಚಳವಾಗಿದೆ.
ಕಲ್ಲಿದ್ದಲು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ಕಲ್ಲಿದ್ದಲು ಸಚಿವಾಲಯವು 141 ಹೊಸ ಕಲ್ಲಿದ್ದಲು ಬ್ಲಾಕ್‌ಗಳನ್ನು ವಾಣಿಜ್ಯ ಹರಾಜಿಗಾಗಿ ಇರಿಸಿದೆ ಮತ್ತು ದೇಶದ ವಿವಿಧ ಕಲ್ಲಿದ್ದಲು ಕಂಪನಿಗಳೊಂದಿಗೆ ನಿಯಮಿತವಾಗಿ ತೊಡಗಿಸಿಕೊಂಡಿದೆ. ಈ ಕಂಪನಿಗಳ ಉತ್ಪಾದನೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ದೇಶೀಯ ಉತ್ಪಾದನೆ ಮತ್ತು ರವಾನೆಯನ್ನು ಹೆಚ್ಚಿಸಲು ಮಾಡಿದ ಸರ್ವತೋಮುಖ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ತೋರಿಸಿವೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಇಂಧನ ಬಳಕೆಯ ದೇಶವಾಗಿದೆ ಮತ್ತು ವಿದ್ಯುತ್ ಬೇಡಿಕೆಯು ವಾರ್ಷಿಕವಾಗಿ ಸುಮಾರು ಶೇ.4.7 ರಷ್ಟು ಹೆಚ್ಚಾಗುತ್ತದೆ.
ಎಂಎಂಡಿಆರ್ (ತಿದ್ದುಪಡಿ) ಕಾಯಿದೆ, 2021 ರ ಅಡಿಯಲ್ಲಿ 1960 ರ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳಿಗೆ ಸಚಿವಾಲಯವು ತಿದ್ದುಪಡಿ ಮಾಡಿದೆ, ಈ ತಿದ್ದುಪಡಿಯು ಕ್ಯಾಪ್ಟಿವ್ (ಕಂಪನಿಗಳ ಬಳಕೆಯ) ಗಣಿಗಳ ಗುತ್ತಿಗೆದಾರರು ತಮ್ಮ ಅವಶ್ಯಕತೆಗಳನ್ನು ಪೂರೈಸಿದ ನಂತರ ಒಟ್ಟು ಹೆಚ್ಚುವರಿ ಉತ್ಪಾದನೆಯ ಶೇ.50 ರಷ್ಟು ಕಲ್ಲಿದ್ದಲು ಅಥವಾ ಲಿಗ್ನೈಟ್ ಅನ್ನು ಮಾರಾಟ ಮಾಡಲು ಅವಕಾಶ ನೀಡುತ್ತದೆ. ಈ ತಿದ್ದುಪಡಿಯು ಕ್ಯಾಪ್ಟಿವ್ ಕಲ್ಲಿದ್ದಲು ಬ್ಲಾಕ್‌ಗಳ ಗಣಿಗಾರಿಕೆಗಳ ಹೆಚ್ಚಿನ ಸಾಮರ್ಥ್ಯದಿಂದಾಗಿ ಮಾರುಕಟ್ಟೆಗೆ ಹೆಚ್ಚುವರಿ ಕಲ್ಲಿದ್ದಲನ್ನು ಬಿಡುಗಡೆ ಮಾಡಲು ದಾರಿ ಮಾಡಿಕೊಟ್ಟಿದೆ, ಇದು ಕ್ಯಾಪ್ಟಿವ್ ಮತ್ತು ಇತರ ಕಂಪನಿಗಳ ಕಲ್ಲಿದ್ದಲಿನ ಉತ್ಪಾದನೆಯನ್ನು ಏಪ್ರಿಲ್-ನವೆಂಬರ್ 22 ರ ಅವಧಿಯಲ್ಲಿ ಇದು 71.07 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸಿದೆ. 2022 ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿದ್ದ 53.27 ಮಿಲಿಯನ್ ಟನ್‌ಗಳಿಗೆ ಉತ್ಪಾದನೆಗೆ ಹೋಲಿಸಿದರೆ ಶೇ.33.41 ರಷ್ಟು ಹೆಚ್ಚಳವಾಗಿದೆ.
ಕಲ್ಲಿದ್ದಲು ಸಚಿವಾಲಯವು ಪ್ರಧಾನಮಂತ್ರಿ ಗತಿ ಶಕ್ತಿಯ ಯೋಜನೆಯ ಅಡಿಯಲ್ಲಿ ಎಲ್ಲಾ ಪ್ರಮುಖ ಗಣಿಗಳಿಗೆ ರೈಲು ಸಂಪರ್ಕ ಕಲ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪರಿಣಾಮವಾಗಿ, ಒಟ್ಟು ಕಲ್ಲಿದ್ದಲು ರವಾನೆಯು ಏಪ್ರಿಲ್-ನವೆಂಬರ್ 22 ರ ಅವಧಿಯಲ್ಲಿದ್ದ 519.26 ಮಿಲಿಯನ್ ಟನ್‌ಗಳಿಗೆ ಹೋಲಿಸಿದರೆ 2022 ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ 557.95 ಮಿಲಿಯನ್ ಟನ್‌ಗಳಿಗೆ ತಲುಪಿದೆ, ಇದು ಶೇ.7.45 ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ, ಇದು ರಾಷ್ಟ್ರದಾದ್ಯಂತ ವಲಯಗಳಲ್ಲಿ ಕಲ್ಲಿದ್ದಲು ರವಾನೆಯ ಸ್ಥಿರ ಮತ್ತು ಪರಿಣಾಮಕಾರಿ ಪ್ರಮಾಣವನ್ನು ತೋರಿಸುತ್ತದೆ.
*****
(Release ID: 1880593)
Visitor Counter : 102