ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಪಠ್ಯಕ್ರಮದ ಭಾಗವಾಗಿ ಭಾರತೀಯ ಮಾನದಂಡಗಳನ್ನು ಪರಿಚಯಿಸಲು ಬಿಐಎಸ್ ಭಾರತದ ಅಗ್ರ ಆರು ಎಂಜಿನಿಯರಿಂಗ್ ಸಂಸ್ಥೆಗಳೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ
ಸಂಸ್ಥೆಗಳಲ್ಲಿ ‘ಬಿಐಎಸ್ ಸ್ಟ್ಯಾಂಡರ್ಡೈಸೇಶನ್ ಚೇರ್ ಪ್ರೊಫೆಸರ್ʼ ಅನ್ನು ಸ್ಥಾಪಿಸಲಾಗಿದೆ
Posted On:
30 NOV 2022 1:27PM by PIB Bengaluru
ಭಾರತೀಯ ಮಾನದಂಡಗಳ ಸಂಸ್ಥೆ (ಬಿಐಎಸ್) ಭಾರತೀಯ ಮಾನದಂಡಗಳನ್ನು ಪಠ್ಯಕ್ರಮದ ಅವಿಭಾಜ್ಯ ಅಂಗವಾಗಿ ಪರಿಚಯಿಸಲು ಭಾರತದ ಅಗ್ರ ಆರು ಎಂಜಿನಿಯರಿಂಗ್ ಸಂಸ್ಥೆಗಳೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ. ಇದು ಶೈಕ್ಷಣಿಕ ಚಟುವಟಿಕೆಗಳ ಸಕ್ರಿಯ ಭಾಗವಹಿಸುವಿಕೆಯನ್ನು ಖಾತ್ರಿಪಡಿಸುವ ಸಲುವಾಗಿ ಪ್ರಖ್ಯಾತ ಸಂಸ್ಥೆಗಳೊಂದಿಗೆ ಬಿಐಎಸ್ ನ ಸಾಂಸ್ಥಿಕ ಒಪ್ಪಂದದೆಡೆಗಿನ ಒಂದು ಉಪಕ್ರಮವಾಗಿದೆ.
ಭಾರತೀಯ ತಂತ್ರಜ್ಞಾನ ಸಂಸ್ಥೆ ಬಿಎಚ್ ಯು, ಮಾಳವೀಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಜೈಪುರ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂದೋರ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪಾಟ್ನಾ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ಮತ್ತು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಿರುಚ್ಚಿಯೊಂದಿಗೆ 28 ನವೆಂಬರ್ 2022 ರಂದು ಈ ಸಂಸ್ಥೆಗಳಲ್ಲಿ ʼಬಿಐಎಸ್ ಸ್ಟಾಂಡರ್ಡೈಸೇಶನ್ ಚೇರ್ ಪ್ರೊಫೆಸರ್' ಸ್ಥಾಪನೆಗಳ ಒಪ್ಪಂದಕ್ಕೆ ಸಹಿ ಹಾಕಲಾಯಿತು..
ಇದು ಆಯಾ ಸಂಸ್ಥೆಗಳಲ್ಲಿ ವಿಜ್ಞಾನ ಮತ್ತು ವಿವಿಧ ವಿಭಾಗಗಳಲ್ಲಿ ಬೋಧನೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಶ್ರೇಷ್ಠತೆ ಮತ್ತು ಮುಖಂಡತ್ವವನ್ನು ಉತ್ತೇಜಿಸುತ್ತದೆ.
ಬಿಐಎಸ್ ನ ಮಹಾನಿರ್ದೇಶಕ ಶ್ರೀ ಪ್ರಮೋದ್ ಕುಮಾರ್ ತಿವಾರಿಯವರು ಪ್ರೀಮಿಯಂ ಶೈಕ್ಷಣಿಕ ಸಂಸ್ಥೆಗಳು ಮತ್ತು ಬಿಐಎಸ್ ನಡುವಿನ ತಿಳಿವಳಿಕಾ ಒಪ್ಪಂದವು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಸುಗಮಗೊಳಿಸುವ ಮೂಲಕ ಗುಣಮಟ್ಟ ರಚನೆಯ ಚಟುವಟಿಕೆಯನ್ನು ಬಲಪಡಿಸುತ್ತದೆ ಮತ್ತು ವರ್ಧಿಸುತ್ತದೆ, ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಯುವ ಮನಸ್ಸುಗಳನ್ನು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ. ಮತ್ತು ಜಂಟಿಯಾಗಿ ಸಮ್ಮೇಳನಗಳು, ಕಾರ್ಯಾಗಾರಗಳು ವಿಚಾರ ಸಂಕಿರಣಗಳು ಅಥವಾ ಉಪನ್ಯಾಸಗಳು, ತರಬೇತಿ ಮತ್ತು ಅಲ್ಪಾವಧಿಯ ಶಿಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಸಹಿ ಮಾಡುವ ಸಂದರ್ಭದಲ್ಲಿ ತಿಳಿಸಿದರು. ಹೊಸ ಮಾನದಂಡಗಳನ್ನು ರೂಪಿಸುವಲ್ಲಿ ಮತ್ತು ಅಸ್ತಿತ್ವದಲ್ಲಿರುವ ಮಾನದಂಡಗಳ ಅನುಸರಣೆಯಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ನವೋದ್ಯಮಗಳು ಮತ್ತು ಇನ್ಕ್ಯುಬೇಶನ್ ಕೇಂದ್ರಗಳೊಂದಿಗೆ ತೊಡಗಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ತಂತ್ರಜ್ಞಾನ ಆಧಾರಿತ ಉತ್ಪನ್ನಗಳು ಮತ್ತು ಸೇವೆಗಳ ಅಭಿವೃದ್ಧಿಯನ್ನು ಉತ್ತೇಜಿಸಲು ತಂತ್ರಜ್ಞಾನ ನಾವೀನ್ಯ ಮತ್ತು ಮಾನದಂಡಗಳ ಅಭಿವೃದ್ಧಿಯು ಜೊತೆಯಲ್ಲಿಯೇ ನಿರಂತರವಾಗಿ ಇರುವುದು ಎಂದು ನಿರೀಕ್ಷಿಸಲಾಗಿದೆ.
ಪ್ರೊ. ಪ್ರೊ.ವಿಕಾಸ್ ದುಬೆ, ಡೀನ್ (ಆರ್&ಡಿ) ಐಐಟಿ ಬಿಎಚ್ ಯು; ಡಾ. ನಾರಾಯಣ ಪ್ರಸಾದ್ ಪಾಧಿ, ನಿರ್ದೇಶಕರು ಎಂಎನ್ಐಟಿ; ಸುಹಾಸ್ ಎಸ್ ಜೋಶಿ, ಐಐಟಿ ಇಂದೋರ್ ನಿರ್ದೇಶಕರು, ಡಾ. ಪ್ರೊ. ಟಿ.ಎನ್ ಸಿಂಗ್, ನಿರ್ದೇಶಕರು ಐಐಟಿ ಪಾಟ್ನಾ; ಐಐಟಿ ಮದ್ರಾಸ್ನ ಡೀನ್ ಅಲುಮ್ನಿ ಮತ್ತು ಕಾರ್ಪೊರೇಟ್ ರಿಲೇಶನ್ಸ್ ಪ್ರೊ.ಮಹೇಶ್ ಪಂಚಾಗ್ನುಲ ಮತ್ತು ಡಾ. ಎಸ್. ಮುತ್ತುಕುಮಾರನ್, ಡೀನ್ ಆರ್ & ಸಿ, ಎನ್ಐಟಿ ತಿರುಚ್ಚಿ ಅವರು ಈ ಉಪಕ್ರಮಕ್ಕೆ ಬದ್ಧತೆಯ ಭರವಸೆ ನೀಡಿದರು ಮತ್ತು ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಲು ಸಮ್ಮತಿಸಿದರು.
*****
(Release ID: 1879994)
Visitor Counter : 188