ವಾರ್ತಾ ಮತ್ತು ಪ್ರಸಾರ ಸಚಿವಾಲಯ

‘ವಸುಧೈವ ಕುಟುಂಬಕಂʼಸಾಕಾರರೂಪವನ್ನು ಐಎಫ್‌ಎಫ್‌ಐನ ವೈವಿಧ್ಯತೆಯಲ್ಲಿ ಪ್ರದರ್ಶಿಸಲಾಗಿದೆ: ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್

 
ಪ್ರಾದೇಶಿಕ ಸಿನಿಮಾ ಇನ್ನು ಪ್ರಾದೇಶಿಕವಾಗಿರುವುದಿಲ್ಲ, ಅದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಗಿದೆ’
 
'ಭಾರತದಲ್ಲಿ ಸಮೃದ್ಧವಾದ ಚಿತ್ರೀಕರಣ ಪರಿಸರ ವ್ಯವಸ್ಥೆ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಉದ್ಯಮವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ'

Posted On: 28 NOV 2022 7:12PM by PIB Bengaluru

ಚಲನಚಿತ್ರಗಳ ಬಗೆಗಿನ ಮೆಚ್ಚುಗೆ ಹಾಗೂ ಉತ್ಕಟ ಪ್ರೀತಿಯನ್ನು ಪೋಷಿಸುವ ಮತ್ತು ಪ್ರೋತ್ಸಾಹಿಸುವ ಮೂಲಕ, ಭಾರತದ 53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಗೋವಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನೆರೆದಿದ್ದ ಅಪಾರ ತಾರಾಗಣದ ಭವ್ಯ ಸಮಾರಂಭದೊಂದಿಗೆ ಮುಕ್ತಾಯವಾಯಿತು. ವರ್ಣರಂಜಿತ ಮತ್ತು ರೋಮಾಂಚಕ ಸಮಾರೋಪ ಸಮಾರಂಭಕ್ಕೆ ಅತಿಥಿಗಳನ್ನು ಸ್ವಾಗತಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್, ಐಎಫ್‌ಎಫ್‌ಐ ಎಲ್ಲ ಪ್ರದೇಶಗಳ ಯುವಜನರು ಮತ್ತು ಹಳೆಯ ತಲೆಮಾರು, ಹೊಸಬರು ಮತ್ತು ಅನುಭವಿ ಪ್ರೇಕ್ಷಕರಿಗೆ ಸಿನಿಮಾದ ಸೂಕ್ಷ್ಮ ಜಗತ್ತನ್ನು ತೆರೆಯಿತು ಎಂದು ಹೇಳಿದರು. “ಐಎಫ್‌ಎಫ್‌ಐ ನಮಗೆ ಮನರಂಜನೆ ಮಾತ್ರವಲ್ಲದೆ ಶಿಕ್ಷಣವನ್ನೂ ನೀಡಿದೆ. ಐಎಫ್‌ಎಫ್‌ಐ ನಮ್ಮ ಹಾಸ್ಯವನ್ನು ಪ್ರಚೋದಿಸಿತು ಮತ್ತು ಇಂದ್ರಿಯಗಳನ್ನು ನಿರ್ಮಲಗೊಳಿಸಿತು ”ಎಂದು ಅವರು ಹೇಳಿದರು.

"ಕಳೆದ ಒಂಬತ್ತು ದಿನಗಳಲ್ಲಿ, ಐಎಫ್‌ಎಫ್‌ಐ 35000 ನಿಮಿಷಗಳ ವೀಕ್ಷಣಾ ಸಮಯದ 282 ಚಲನಚಿತ್ರಗಳನ್ನು ಪ್ರದರ್ಶಿಸಿತು. ಈ ಉತ್ಸವದಲ್ಲಿ 65 ಅಂತರರಾಷ್ಟ್ರೀಯ ಮತ್ತು 15 ಭಾರತೀಯ ಭಾಷೆಗಳ ಪ್ರಪಂಚದಾದ್ಯಂತ 78 ದೇಶಗಳ 183 ಅಂತರರಾಷ್ಟ್ರೀಯ ಚಲನಚಿತ್ರಗಳು ಮತ್ತು 97 ಭಾರತೀಯ ಚಲನಚಿತ್ರಗಳು ಪ್ರದರ್ಶನಗೊಂಡವು. 20 ಕ್ಕೂ ಹೆಚ್ಚು ಮಾಸ್ಟರ್‌ಕ್ಲಾಸ್‌ಗಳು, ಸಂವಾದಗಳು ಮತ್ತು ಪ್ರಸಿದ್ಧ ತಾರೆಯರ ಕಾರ್ಯಕ್ರಮಗಳನ್ನು ನಡೆಸಲಾಯಿತು, ಅವುಗಳಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭೌತಿಕವಾಗಿ ಮಾತ್ರವಲ್ಲದೆ ವರ್ಚುವಲ್‌ ಮಾದರಿಯಲ್ಲೂ ಸಹ ಭಾಗವಹಿಸಬಹುದಾಗಿತ್ತು. ಉತ್ಸವದಲ್ಲಿ ಪ್ರದರ್ಶಿಸಲಾದ ವೈವಿಧ್ಯತೆಯು ಪ್ರಪಂಚದಾದ್ಯಂತದ ಸೃಜನಶೀಲ ಚಿಂತಕರು, ಚಲನಚಿತ್ರ ತಯಾರಕರು, ಸಿನಿಮಾ ಪ್ರೇಮಿಗಳು ಮತ್ತು ಸಾಂಸ್ಕೃತಿಕ ಉತ್ಸಾಹಿಗಳನ್ನು ಒಂದೇ ಸೂರಿನಡಿ ಸೇರಿಸುವ ‘ವಸುಧೈವ ಕುಟುಂಬಕಂʼನ ಜೀವಂತ ಸಾಕಾರವಾಗಿತ್ತು ಎಂದು ಅನುರಾಗ್ ಠಾಕೂರ್ ಹೇಳಿದರು. 

53 ನೇ ಐಎಫ್‌ಎಫ್‌ಐನಲ್ಲಿ ಅನೇಕ ಹೊಸ ಆರಂಭಗಳು

ಅನೇಕ ಮೊದಲುಗಳಿಗೆ ಸಾಕ್ಷಿಯಾದ 53 ನೇ ಐಎಫ್‌ಎಫ್‌ಐ ಮುಕ್ತಾಯಗೊಂಡಿದೆ ಎಂದು ಸಚಿವರು ಹೇಳಿದರು. ಫ್ರಾನ್ಸ್ ಅನ್ನು 'ಕಂಟ್ರಿ ಆಫ್ ಫೋಕಸ್' ಎಂದು ಆಯ್ಕೆ ಮಾಡುವ ಮೂಲಕ ಭಾರತಕ್ಕೆ ಫ್ರಾನ್ಸ್ ನೀಡಿದ ʼಕಾನ್ಸ್‌ ಕಂಟ್ರಿ ಆಫ್‌ ಆನರ್‌ʼ ಗೌರವಕ್ಕೆ ಪ್ರತಿ ಗೌರವ ಸಲ್ಲಿಸಲಾಯಿತು. ಟೆಕ್ನಲಾಜಿಕಲ್ ಪಾರ್ಕ್ ಸಿನಿಮಾ ಪ್ರಪಂಚದ ಇತ್ತೀಚಿನ ಆವಿಷ್ಕಾರಗಳನ್ನು ಪ್ರದರ್ಶಿಸಿತು, 75 ಭವಿಷ್ಯದ ಸೃಜನಶೀಲ ಮನಸ್ಸುಗಳಿಗೆ 53 ಗಂಟೆಗಳ ಸವಾಲು, ಮಣಿಪುರಿ ಸಿನಿಮಾಕ್ಕಾಗಿ ವಿಶೇಷವಾಗಿ ಕ್ಯೂರೇಟೆಡ್ ಪ್ಯಾಕೇಜ್ ಅವುಗಳಲ್ಲಿ ಕೆಲವು.. ಮೊದಲ ಬಾರಿಗೆ, ಕೆನಡಾದ ಚಲನಚಿತ್ರ ಶಾಲೆಗಳು, ಒಟಿಟಿ ವೇದಿಕೆಗಳು ಮತ್ತು ಕುಂಗ್ ಫೂ ಪಾಂಡಾ ನಿರ್ದೇಶಕ ಮಾರ್ಕ್ ಓಸ್ಬೋರ್ನ್‌ರಂತಹ ಆಸ್ಕರ್ ನಾಮನಿರ್ದೇಶಿತರೊಂದಿಗೆ ಸಹಭಾಗಿತ್ವದಲ್ಲಿ ಮಾಸ್ಟರ್‌ಕ್ಲಾಸ್‌ಗಳನ್ನು ನಡೆಸಲಾಯಿತು ಎಂದು ಅವರು ಹೇಳಿದರು.

 
ಪ್ರಾದೇಶಿಕ ಸಿನಿಮಾ ಇನ್ನು ಪ್ರಾದೇಶಿಕವಾಗಿರುವುದಿಲ್ಲ

ಪ್ರಾದೇಶಿಕ ಸಿನಿಮಾಕ್ಕೆ ಹೆಚ್ಚಿನ ಒತ್ತು ನೀಡಿ ಅದರ ಬೆಳವಣಿಗೆಗೆ ವೇದಿಕೆ ಕಲ್ಪಿಸುವ ಬದ್ಧತೆಯನ್ನು ಸಚಿವರು ಪುನರುಚ್ಚರಿಸಿದರು. ಪ್ರಾದೇಶಿಕ ಸಿನಿಮಾ ಇನ್ನು ಪ್ರಾದೇಶಿಕವಾಗಿರುವುದಿಲ್ಲ, ಅದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ ಎಂದು ಅವರು ಹೇಳಿದರು. “ಈ ವರ್ಷ ನಾವು ಆರ್‌ಆರ್‌ಆರ್, ಕೆಜಿಎಫ್ ಮತ್ತು ಇತರ ಅನೇಕ ಚಲನಚಿತ್ರಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿರುವುದನ್ನು ನೋಡಿದ್ದೇವೆ. ಇತ್ತೀಚೆಗೆ, ಬಾಂಗ್ಲಾದೇಶದಿಂದ ಮತ್ತು ಮಧ್ಯ ಏಷ್ಯಾದ ದೇಶಗಳಿಂದ 80 ಕ್ಕೂ ಹೆಚ್ಚು ಯುವಕರನ್ನು ಒಳಗೊಂಡ ನಿಯೋಗ ಬಂದಿತ್ತು. ಹಿಂದಿ ಚಿತ್ರಗೀತೆಗಳು ಮತ್ತು ಪ್ರಾದೇಶಿಕ ಚಿತ್ರಗೀತೆಗಳನ್ನು ಕೇಳುವುದುಅವರಿಗೆ ಬೇಕಾಗಿತ್ತು. ಅವರು ಮಿಧುನ್ ಚಕ್ರವರ್ತಿ ಅವರ ಕಾಲದಿಂದ ಅಕ್ಷಯ್ ಕುಮಾರ್ ಮತ್ತು ಚಿರಂಜೀವಿ ಅವರವರೆಗಿನ ಚಲನಚಿತ್ರಗಳ ಬಗ್ಗೆ ಮಾತನಾಡಿದರು, ಅವು ಎಲ್ಲೆಗಳನ್ನು ಮೀರಿವೆ. ಯಾವುದೇ ವಿಷಯವು ಪ್ರಬಲವಾಗಿದ್ದರೆ, ಅದು ನಿರ್ದಿಷ್ಟ ಪ್ರದೇಶದ ಮಿತಿಯಲ್ಲಿ ಮಾತ್ರ ಉಳಿಯುವುದಿಲ್ಲ ಎಂದು ಸಚಿವರು ಹೇಳಿದರು.


ಭಾರತದಲ್ಲಿ ಸಮೃದ್ಧವಾದ ಚಿತ್ರೀಕರಣ ಪರಿಸರ ವ್ಯವಸ್ಥೆ

ಐಎಫ್‌ಎಫ್‌ಐ ಕಲ್ಪನೆಗಳು ಹೊರಹೊಮ್ಮುವ ಮತ್ತು ಸಿನಿಮೀಯ ನಾವೀನ್ಯತೆಯನ್ನು ಪ್ರದರ್ಶಿಸುವ ವೇದಿಕೆಯಾಗಿ ಮಾರ್ಪಟ್ಟಿದೆ. ಇಲ್ಲಿ ಸಹಯೋಗಗಳು ಮತ್ತು ಸಹ-ನಿರ್ಮಾಣಗಳನ್ನು ಕೈಗೊಳ್ಳಲಾಗುತ್ತದೆ ಮತ್ತು ಅನುಭವಗಳನ್ನು ಹಂಚಿಕೊಳ್ಳಲಾಗುತ್ತದೆ. ತಲೆಮಾರುಗಳವರೆಗೆ ಆನಂದಿಸುವ ಮತ್ತು ನೆನಪಿಟ್ಟುಕೊಳ್ಳುವ ಶಾಶ್ವತ ಸಿನಿಮಾಗಳು ಹೊರಹೊಮ್ಮುವ ಸ್ಥಳವಾಗಿದೆ ಎಂದು ಸಚಿವರು ಹೇಳಿದರು. ಐಎಫ್‌ಎಫ್‌ಐನ ಭವಿಷ್ಯದ ಆವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲಿ ಸಮೃದ್ಧವಾದ ಚಲನಚಿತ್ರ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಉದ್ಯಮವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು, ಇದಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದ ಸರ್ಕಾರದ ಸಂಪೂರ್ಣ ಬೆಂಬಲ ಇರುತ್ತದೆ ಎಂದರು.

ಸಿನಿಮಾದಲ್ಲಿನ ಪ್ರತಿಭೆಗಳು ಮತ್ತು ಪ್ರವೃತ್ತಿಗಳನ್ನು ಉಲ್ಲೇಖಿಸಿದ ಅನುರಾಗ್ ಠಾಕೂರ್, ಸಿನಿಮಾ ಪ್ರಪಂಚವು ಸಹಜ ಪ್ರತಿಭೆಗಳಿಂದ ತುಂಬಿ ತುಳುಕುತ್ತಿದೆ, ನಾಟಕ ಶಾಲೆಗಳು, ಸಣ್ಣ ಸ್ವತಂತ್ರ ನಿರ್ಮಾಣ ಸಂಸ್ಥೆಗಳು ಮತ್ತು ಭಾರತದ ಒಳನಾಡಿನಿಂದ ಪ್ರತಿಭೆಗಳು ಬರುತ್ತಿವೆ ಎಂದು ಅವರು ಹೇಳಿದರು. ಪ್ಲಾಟ್‌ಫಾರ್ಮ್‌ಗಳು ಹೊಸದಾಗಿವೆ, ಅವು ನಿಮ್ಮ ಮೊಬೈಲ್ ಸಾಧನಗಳಲ್ಲಿನ ಕಿರುಚಿತ್ರಗಳಿರಬಹುದು, ದಿಢೀರ್‌ ವೀಕ್ಷಣೆಯ ಅಥವಾ ಒಟಿಟಿಯಲ್ಲಿ ಅತಿಯಾಗಿ ವೀಕ್ಷಿಸುವ ಚಲನಚಿತ್ರಗಳಾಗಿರಬಹುದು. ಅಸಾಧಾರಣ ಪ್ರತಿಭೆಗಳು ಪ್ರೇಕ್ಷಕರನ್ನು ಆಕರ್ಷಿಸುವುದನ್ನು ಮತ್ತು ಅಭಿಮಾನಿಗಳಿಂದ ಪ್ರೀತಿಸಲ್ಪಡುವುದನ್ನು ಮತ್ತು ಉತ್ತಮ ವ್ಯಾಪಾರ ಮಾಡುವುದನ್ನು ನಾವು ನೋಡುತ್ತಿದ್ದೇವೆ ಎಂದು ಅವರು ಹೇಳಿದರು. 

ಕ್ರಿಕೆಟ್, ಕಬಡ್ಡಿ, ಹಾಕಿ ಮುಂತಾದವುಗಳಲ್ಲಿನ ಸಹಜ ಪ್ರತಿಭೆಗಳಿಗೆ ಶ್ರೇಷ್ಠ ಕ್ರೀಡಾ ಲೀಗ್‌ಗಳನ್ನು ಮಾಡಿದಂತೆಯೇ ಈಗ ಚಿತ್ರರಂಗದಲ್ಲಿ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.  ಭಾರತವು ಯಾವಾಗಲೂ ಪ್ರತಿಭೆಯನ್ನು ಹೊಂದಿದೆ. ಅವರ ಯಶಸ್ಸನ್ನು ನಿರ್ಧರಿಸುವ ಪ್ರೇಕ್ಷಕರು ಗೇಟ್ ಕೀಪರ್‌ಗಳಿಲ್ಲದೆ ಅದನ್ನು ನೋಡಲು ಅವಕಾಶ ಬೇಕಿತ್ತು ಎಂದರು.

ಡಿಜಿಟಲ್ ಇಂಡಿಯಾದಿಂದ ಉತ್ತೇಜಿತವಾದ ಆವಿಷ್ಕಾರಗಳ ಕುರಿತು ಮಾತನಾಡಿದ ಸಚಿವರು, 'ಡಿಜಿಟಲ್ ಇಂಡಿಯಾ'ದ ಕೈಗೆಟುಕುವ ಬೆಲೆಯ ಮೊಬೈಲ್‌ ಗಳು ಮತ್ತು ಅಗ್ಗದ ಡೇಟಾ ಬೆಲೆಗಳಿಂದ ಪ್ರೇರೇಪಿತವಾದ ಸಿನಿಮಾದ ವಿಭಿನ್ನ ಸ್ಟ್ರೀಮ್‌ಗಳ ಆಗಮನವು ಶಕ್ತಿಯುತ ಮತ್ತು ಆಕರ್ಷಕ ಕಥೆಗಳನ್ನು ಜಗತ್ತಿಗೆ ಪ್ರದರ್ಶಿಸಲು ಸಂಪೂರ್ಣ ಸ್ವಂತ ಪ್ರತಿಭೆಯಿಂದ ಮುನ್ನಡೆಯುತ್ತಿದೆ ಎಂದರು.

ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ಇಸ್ರೇಲ್‌ನೊಂದಿಗೆ ಹೊಸ ಪಾಲುದಾರಿಕೆ

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಇಸ್ರೇಲಿ ಸರಣಿ ಫೌಡಾದ ನಾಲ್ಕನೇ ಸೀಸನ್ ಅನ್ನು 53 ನೇ ಐಎಫ್‌ಎಫ್‌ಐನಲ್ಲಿ ಅದರ ಜಾಗತಿಕ ಬಿಡುಗಡೆಗೆ ಮುಂಚೆಯೇ ಪ್ರದರ್ಶಿಸಲಾಯಿತು. ಫೌಡಾ ಭಾರತದಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ ಮತ್ತು ಅದರ ನಾಲ್ಕನೇ ಸೀಸನ್‌ನ ಪ್ರಥಮ ಪ್ರದರ್ಶನವು ಐಎಫ್‌ಎಫ್‌ಐನಲ್ಲಿ ಭಾರಿ ಸ್ವಾಗತವನ್ನು ಪಡೆಯಿತು ಎಂದು ಅನುರಾಗ್ ಠಾಕೂರ್ ಹೇಳಿದರು. 53ನೇ ಐಎಫ್‌ಎಫ್‌ಐಗಾಗಿ ಗೋವಾಕ್ಕೆ ಆಗಮಿಸಿದ್ದಕ್ಕಾಗಿ ಇಸ್ರೇಲಿ ರಾಯಭಾರಿ ನಾರ್ ಗಿಲೋನ್‌ಅವರಿಗೆ ಸಚಿವರು ಧನ್ಯವಾದ ಅರ್ಪಿಸಿದರು.

ಫೌಡಾ ತಂಡವನ್ನು ಅಭಿನಂದಿಸಿದ ಅವರು, ಭಾರತ ಮತ್ತು ಇಸ್ರೇಲ್ ಬಹಳ ವಿಶೇಷವಾದ ಸಂಬಂಧವನ್ನು ಹೊಂದಿವೆ ಎಂದರು. ನಮಗೆ ನೆರೆಹೊರೆಯಲ್ಲಿ ಸಂಘರ್ಷವಿದೆ. ಅದೇ ಸಮಯದಲ್ಲಿ, ನಮಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ನಾವು ಅನೇಕ ಕ್ಷೇತ್ರಗಳಲ್ಲಿ, ವಿಶೇಷವಾಗಿ ಭದ್ರತಾ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಇಸ್ರೇಲ್‌ನ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯ ಬಗ್ಗೆ ಮಾತನಾಡಿದ ಸಚಿವರು, ಸಿನಿಮಾ ಮತ್ತು ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ಇಸ್ರೇಲ್‌ನೊಂದಿಗೆ ಹೊಸ ಪಾಲುದಾರಿಕೆಯನ್ನು ರೂಪಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು. "ಇಸ್ರೇಲಿ ಸಹವರ್ತಗಳೊಂದಿಗೆ ಸಹ-ನಿರ್ಮಾಣ ಮತ್ತು ಸಹಯೋಗ ಇರಬೇಕು. ಭಾರತವು ಮುಂದಿನ ದಿನಗಳಲ್ಲಿ ಪ್ರಪಂಚದ ಕಂಟೆಂಟ್‌ ಕೇಂದ್ರವಾಗಲಿದೆ. ಜಗತ್ತಿಗೆ ಹೇಳದೇ ಉಳಿದಿರುವ ಕಥೆಗಳನ್ನು ಹೇಳಲು ಮತ್ತು ಚಲನಚಿತ್ರಗಳನ್ನು ಮಾಡಲು ಇದು ಸೂಕ್ತವಾದ ಸಮಯ. ಭಾರತವು ಅಂತಹ ಸ್ಥಳವಾಗಿದೆ ಮತ್ತು ಇಸ್ರೇಲ್ ಸರಿಯಾದ ಪಾಲುದಾರನಾಗಿದೆ ಎಂದು ಅವರು ಹೇಳಿದರು.

ಅನುರಾಗ್ ಠಾಕೂರ್ ಅವರು ತೆಲುಗು ನಟ ಚಿರಂಜೀವಿ ಅವರಿಗೆ ಭಾರತೀಯ ವರ್ಷದ ವ್ಯಕ್ತಿತ್ವ ಪ್ರಶಸ್ತಿಯನ್ನು ಪಡೆದಿದ್ದಕ್ಕಾಗಿ ಅಭಿನಂದನೆ ತಿಳಿಸಿದರು. ಸುಮಾರು ನಾಲ್ಕು ದಶಕಗಳ ಕಾಲ ಚಿರಂಜೀವಿ ಅವರು ಸುಪ್ರಸಿದ್ಧ ವೃತ್ತಿಜೀವನವನ್ನು ಹೊಂದಿದ್ದಾರೆ ಮತ್ತು 150 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿವೆ ಎಂದು ಅವರು ಹೇಳಿದರು.

****



(Release ID: 1879686) Visitor Counter : 178