ವಾರ್ತಾ ಮತ್ತು ಪ್ರಸಾರ ಸಚಿವಾಲಯ

​​​​​​​ಸಂಸ್ಕೃತದಲ್ಲಿ ಚಿತ್ರೀಕರಿಸಲಾದ ಯಾನಂ ಭಾರತದ ಕನಸಿನ ಯೋಜನೆಯಾದ ಮಂಗಳಯಾನವನ್ನು ಚಿತ್ರಿಸುತ್ತದೆ


ಸಂಸ್ಕೃತ ಭಾಷೆ  ಯಾವುದೇ ಒಂದು ಧರ್ಮ ಅಥವಾ ಒಂದು ಸಮುದಾಯಕ್ಕೆ ಸೇರಿದ್ದಲ್ಲ

Posted On: 28 NOV 2022 6:17PM by PIB Bengaluru

ಯಾನಂ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 53ನೇ ಆವೃತ್ತಿಯಲ್ಲಿ ಭಾರತೀಯ ಪನೋರೋಮಾ ವಿಭಾಗದ ಅಡಿಯಲ್ಲಿ ಪ್ರದರ್ಶಿಸಲಾದ  ಚಲನಚಿತ್ರವಾಗಿದೆ. ಇದು ಮಾಜಿ ಬಾಹ್ಯಾಕಾಶ ಅಧ್ಯಕ್ಷ ಪದ್ಮಭೂಷಣ ಡಾ ಕೆ. ರಾಧಾಕೃಷ್ಣನ್ ಅವರ ಆತ್ಮಚರಿತ್ರೆಯ ಪುಸ್ತಕ "ಮೈ ಒಡಿಸ್ಸಿ: ಮೆಮ್ವಾಸ್  ಆಫ್ ದಿ   ಮ್ಯಾನ್ ಬೆಹೈಂಡ್ ಮಿಷನ್ ಮಂಗಲ್ ಯಾನ್ " ಅನ್ನು ಆಧರಿಸಿದೆ.

ಯಾನಂ ಚಲನಚಿತ್ರವು ಭಾರತದ ಕನಸಿನ ಯೋಜನೆಯಾದ ಮಾರ್ಸ್ ಆರ್ಬಿಟರ್ ಮಿಷನ್ (ಮಂಗಳ್ ಯಾನ್) ಅನ್ನು ಚಿತ್ರಿಸುತ್ತದೆ. ಇದು ವಿಶ್ವ ಸಿನಿಮಾದ ಇತಿಹಾಸದಲ್ಲಿ ಸಂಸ್ಕೃತ ಭಾಷೆಯಲ್ಲಿ ಮೊಟ್ಟ ಮೊದಲ  ವಿಜ್ಞಾನ ಸಾಕ್ಷ್ಯಚಿತ್ರವಾಗಿದೆ. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಸಾಮರ್ಥ್ಯ ಮತ್ತು ಪರಿಣತಿಯನ್ನು ತೋರಿಸುತ್ತದೆ, ಬಾಹ್ಯಾಕಾಶ ವಿಜ್ಞಾನಿಗಳ ಅತ್ಯುತ್ತಮ ಕೊಡುಗೆಯನ್ನು ಮತ್ತು ಸಂಸ್ಕೃತ ಭಾಷೆಯ ಪ್ರಾಮುಖ್ಯವನ್ನು ಭಾರತವು ಮೊದಲ ಪ್ರಯತ್ನದಲ್ಲಿಯೇ ಅವಿಸ್ಮರಣೀಯ ವಿಜಯಕ್ಕಾಗಿ ಹೇಗೆ ಕಠಿಣ ಅಂತರಗ್ರಹ ಪ್ರಯಾಣವನ್ನು ಮಾಡಿತು  ಎಂಬುದನ್ನು ತೋರಿಸುತ್ತದೆ.

ಚಿತ್ರದ ನಿರ್ಮಾಪಕ ಎವಿ ಅನೂಪ್ ಮಾತನಾಡಿ, "ಐಎಫ್ಎಫ್ಐನಲ್ಲಿ ಇಂಡಿಯನ್ ಪನೋರೋಮಾ ವಿಭಾಗದಲ್ಲಿ ನಾನು ಎಲ್ಲ ವಿಭಾಗಗಳ ಚಲನಚಿತ್ರಗಳನ್ನು ಪ್ರಸ್ತುತಪಡಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ಕಳೆದ ಬಾರಿ ನಾನು ಚಲನಚಿತ್ರ ಮತ್ತು ಕಿರುಚಿತ್ರವನ್ನು ಪ್ರಸ್ತುತಪಡಿಸಿದೆ. ಈ ವರ್ಷ ನಾನು ಈ ಚಲನಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದೇನೆ.

ಇಸ್ರೋ ಜೊತೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ ಅವರು, ಇಸ್ರೋ ಭಾರತದ ಹೆಮ್ಮೆ. ಇಸ್ರೋ ಅನುಮತಿ ಕೋರಿ ಪತ್ರ ಬರೆದಿದ್ದೆವು. ಡಾ. ಎಸ್ ಸೋಮನಾಥ್, ಈಗಿನ ಅಧ್ಯಕ್ಷರು ಪತ್ರಗಳನ್ನು ನೋಡಿದರು ಮತ್ತು ನಮಗೆ ಕರೆ ಮಾಡಿ “ಹೌದು. ನಾವು ಮಾಡೋಣ”ಎಂದು ಹೇಳಿದರು. ಇಸ್ರೋ ನಮ್ಮ ಕೋರಿಕೆಯನ್ನು ಸ್ವೀಕರಿಸಿದ್ದು ನಮ್ಮ ಅದೃಷ್ಟ. ಇದು ಅತ್ಯಂತ ಗೌಪ್ಯ ಮತ್ತು ಹೆಚ್ಚಿನ ಭದ್ರತಾ ಪ್ರದೇಶವಾಗಿದೆ. ನಾವು ಚಲನಚಿತ್ರವನ್ನು 4 ದಕ್ಷಿಣದ ರಾಜ್ಯಗಳಲ್ಲಿ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಿದ್ದೇವೆ - ಕೇರಳದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ, ಆಂಧ್ರಪ್ರದೇಶದ ಶ್ರೀಹರಿಕೋಟಾ, ಕರ್ನಾಟಕದ ಇಸ್ರೋ ಪ್ರಧಾನ ಕಛೇರಿ ಮತ್ತು ತಮಿಳುನಾಡಿನ ಅತ್ಯಂತ ಹಳೆಯ ವೀಕ್ಷಣಾಲಯದಲ್ಲಿ. ಎಲ್ಲ ಕಡೆ  ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿತ್ತು. ಉಡಾವಣೆಯ ಸಮಯದಲ್ಲಿ ಅವರು ಬಳಸಿದ ಎಲ್ಲ ವಸ್ತುಗಳನ್ನು ಅವರು ನಮಗೆ ಒದಗಿಸಿದ್ದಾರೆ ಎಂದು ಅವರು ಹೇಳಿದರು.

ಐಐಟಿ ಸೇರಿದಂತೆ ವಿಜ್ಞಾನ ಕಾಲೇಜುಗಳಿಂದ ನಮಗೆ ಆಹ್ವಾನ ಬರುತ್ತಿದೆ. ಭಾರತದಲ್ಲಿ ಈಗ ಸಂಸ್ಕೃತವನ್ನು ಕಲಿಸುವ 500 ಕ್ಕೂ ಹೆಚ್ಚು ಕಾಲೇಜುಗಳಿವೆ. ಅವರೆಲ್ಲರೂ ನಮ್ಮನ್ನು ಆಹ್ವಾನಿಸುತ್ತಿದ್ದಾರೆ. ಚಿತ್ರವನ್ನು ಸಂಸ್ಕೃತದಲ್ಲಿ ಮಾತ್ರ ಮಾಡಲು ಏಕೆ ನಿರ್ಧರಿಸಿದಿರಿ ಎಂದು ಕೇಳಿದಾಗ, ನಿರ್ಮಾಪಕರು ಉತ್ತರಿಸಿದರು “ಸಂಸ್ಕೃತವು ಅತ್ಯಂತ ಹಳೆಯ ಭಾಷೆಯಾಗಿದೆ. ಅಲ್ಲದೆ, ಈ ಭಾಷೆ ಒಂದೇ ಧರ್ಮ, ಒಂದು ಸಮುದಾಯಕ್ಕೆ ಸೇರಿದ್ದು ಎನ್ನುವ ತಪ್ಪು ಕಲ್ಪನೆಯೂ ಇದೆ. ನಾವು ಈ ಆಲೋಚನೆಯನ್ನು   ಮುರಿಯಲು ಬಯಸಿದ್ದೆವು” ಎಂದು ಹೇಳಿದರು.

"ಬಹುತೇಕ ಪ್ರತಿ ವಾರ, ನಾವು ಪ್ರಪಂಚದಾದ್ಯಂತದ ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗುತ್ತಿದ್ದೇವೆ" ಎಂದು ಹೇಳುವ ಮೂಲಕ ಅವರು ಮಾತನ್ನು ಮುಕ್ತಾಯಗೊಳಿಸಿದರು.

****



(Release ID: 1879668) Visitor Counter : 128