ಜವಳಿ ಸಚಿವಾಲಯ
azadi ka amrit mahotsav

ಭಾರತದ ಉಪ ರಾಷ್ಟ್ರಪತಿಗಳು 28ನೇ ನವೆಂಬರ್, 2022 ಸೋಮವಾರದಂದು ಉತ್ಕೃಷ್ಟ ಕುಶಲಕರ್ಮಿಗಳಿಗೆ ಶಿಲ್ಪ ಗುರು ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಿರುವರು


ಶ್ರೀ ಪಿಯೂಷ್ ಗೋಯಲ್, ಕೇಂದ್ರ ಜವಳಿ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಶಿಲ್ಪ ಗುರು ಮತ್ತು ರಾಷ್ಟ್ರೀಯ ಪ್ರಶಸ್ತಿಗಳು ಕರಕುಶಲ ಕ್ಷೇತ್ರದಲ್ಲಿ ಅತ್ಯುತ್ತಮ ಕುಶಲಕರ್ಮಿಗಳನ್ನು ಗುರುತಿಸುವ ಗುರಿಯನ್ನು ಹೊಂದಿವೆ

Posted On: 27 NOV 2022 12:38PM by PIB Bengaluru

ಕೇಂದ್ರ ಜವಳಿ ಸಚಿವಾಲಯವು 2017, 2018 ಮತ್ತು 2019 ನೇ ಸಾಲಿನ ಉತ್ಕೃಷ್ಟ ಕುಶಲಕರ್ಮಿಗಳಿಗೆ ಶಿಲ್ಪ ಗುರು ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಸೋಮವಾರ, 28ನೇ ನವೆಂಬರ್ 2022 ರಂದು ಆಯೋಜಿಸಿದೆ.

ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಜವಳಿ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಗೌರವ ಅತಿಥಿಯಾಗಿ ರೈಲ್ವೇ ಮತ್ತು ಜವಳಿ ಖಾತೆ ರಾಜ್ಯ ಸಚಿವರಾದ ಶ್ರೀಮತಿ. ದರ್ಶನ ವಿಕ್ರಮ್ ಜರ್ದೋಶ್ ಭಾಗವಹಿಸಲಿದ್ದಾರೆ.

ಅಭಿವೃದ್ಧಿ ಆಯುಕ್ತರ ಕಚೇರಿ (ಕರಕುಶಲ) 1965 ರಿಂದ ಉತ್ಕೃಷ್ಟ ಕುಶಲಕರ್ಮಿಗಳಿಗೆ ರಾಷ್ಟ್ರ ಪ್ರಶಸ್ತಿಗಳನ್ನು ನೀಡುತ್ತಿದೆ ಮತ್ತು 2002 ರಲ್ಲಿ ಶಿಲ್ಪ ಗುರು ಪ್ರಶಸ್ತಿಗಳನ್ನು ಪರಿಚಯಿಸಲಾಯಿತು. ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಕರಕುಶಲ ಕಲೆಗಳ ಅತ್ಯುತ್ತಮ ಕುಶಲಕರ್ಮಿಗಳಿಗೆ ನೀಡಲಾಗುತ್ತಿದೆ. ದೇಶದ ಶ್ರೀಮಂತ ಮತ್ತು ವೈವಿಧ್ಯಮಯ ಕರಕುಶಲ ಪರಂಪರೆಯ ಸಂರಕ್ಷಣೆಗೆ ಮಾತ್ರವಲ್ಲದೆ ಒಟ್ಟಾರೆಯಾಗಿ ಕರಕುಶಲ ಕ್ಷೇತ್ರದ ಪುನರುತ್ಥಾನಕ್ಕೆ. ಕರಕುಶಲ ಕ್ಷೇತ್ರದಲ್ಲಿ ಅತ್ಯುತ್ತಮ ಕುಶಲಕರ್ಮಿಗಳಿಗೆ ಮನ್ನಣೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರಶಸ್ತಿ ಪುರಸ್ಕೃತರು ದೇಶದ ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿರುತ್ತಾರೆ, ಜೊತೆಗೆ ವಿವಿಧ ಸ್ಥಳಗಳ ವಿವಿಧ ಕರ ಕುಶಲ ಶೈಲಿಗಳ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಮೂರು ವರ್ಷಗಳಿಂದ ನಿಡಲಾಗದಿದ್ದ ಪ್ರಶಸ್ತಿಗಳನ್ನು ಈಗ ಒಟ್ಟಿಗೆ ನೀಡಲಾಗುತ್ತಿದೆ.

ಕರಕುಶಲ ಕ್ಷೇತ್ರವು ದೇಶದ ಆರ್ಥಿಕತೆಯಲ್ಲಿ ಮಹತ್ವದ ಮತ್ತು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಗ್ರಾಮೀಣ ಮತ್ತು ಉಪ ನಗರ ಪ್ರದೇಶಗಳಲ್ಲಿ ವ್ಯಾಪಕವಾದ ಕುಶಲಕರ್ಮಿಗಳಿಗೆ ಉದ್ಯೋಗವನ್ನು ಒದಗಿಸುತ್ತದೆ ಮತ್ತು ಅದರ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ದೇಶಕ್ಕೆ ಗಣನೀಯ ವಿದೇಶಿ ವಿನಿಮಯವನ್ನು ಉತ್ಪಾದಿಸುತ್ತದೆ. ಕರಕುಶಲ ವಲಯವು ಉದ್ಯೋಗ ಸೃಷ್ಟಿ ಮತ್ತು ರಫ್ತಿಗೆ ಗಣನೀಯವಾಗಿ ಕೊಡುಗೆ ನೀಡುವುದನ್ನು ಮುಂದುವರೆಸಿದೆ.

*****


(Release ID: 1879347) Visitor Counter : 155