ವಾರ್ತಾ ಮತ್ತು ಪ್ರಸಾರ ಸಚಿವಾಲಯ

​​​​​​​ನಿರ್ದೇಶಕ ಸಲೀಲ್ ಕುಲಕರ್ಣಿ ಅವರ ‘ಎಕ್ದಾ ಕಾಯ್ ಝಲಾ’ಚಿತ್ರ ಮಕ್ಕಳ ಜೊತೆ ಕಥೆಗಳ ಮೂಲಕ ಸಂವಹನ ನಡೆಸುವ ವಿಶಿಷ್ಟ ವಿಧಾನವನ್ನು ಅನ್ವೇಷಿಸುತ್ತದೆ


'ಒಳ್ಳೆಯ ಚಿತ್ರಗಳಲ್ಲಿ ನಟಿಸುವುದರಿಂದ ಸೂಕ್ತ ಕಥಾವಸ್ತುವಿಗೆ ಕಾಯುವ ನನ್ನ ನಂಬಿಕೆಯನ್ನು ಬಲಪಡಿಸುತ್ತದೆ' ಎನ್ನುತ್ತಾರೆ ನಾಯಕ ನಟ ಸುಮಿತ್ ರಾಘವನ್

Posted On: 26 NOV 2022 3:06PM by PIB Bengaluru

ಮಕ್ಕಳನ್ನು ನಿದ್ದೆ ಮಾಡಿಸುವಾಗ ಹೇಳುವ ಮರಾಠಿ ಭಾಷೆಯ ಕಥೆಗಳು ಸಾಮಾನ್ಯವಾಗಿ 'ಎಕ್ದಾ ಕಾಯ್ ಝಲಾ' ಎಂಬ ಪದಗುಚ್ಛದೊಂದಿಗೆ ಪ್ರಾರಂಭವಾಗುತ್ತವೆ, ಅಂದರೆ ಅದರರ್ಥ 'ಒಂದಾನೊಂದು ಕಾಲದಲ್ಲಿ' ಎಂದು. ಸಂಗೀತ ಸಂಯೋಜಕ, ಲೇಖಕ ಹಾಗೂ ನಿರ್ದೇಶಕ ಡಾ. ಸಲೀಲ್ ಕುಲಕರ್ಣಿ ಅವರ ಚಿತ್ರದ ಶೀರ್ಷಿಕೆಯೂ  ಇದೇ ಆಗಿದ್ದು, ಸುಂದರವಾದ ಕಥೆ ಹೇಳುತ್ತದೆ, ಆದರೆ ಖಂಡಿತವಾಗಿಯೂ ಇದು ಮಕ್ಕಳಿಗೆ ಮಾತ್ರ ಸಂಬಂಧಿಸಿದ ಕಥೆಯಲ್ಲ.

53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಏಕ್ದಾ ಕಾಯ್ ಝಲಾ ಒಬ್ಬ ವ್ಯಕ್ತಿ ನಡೆಸುತ್ತಿರುವ ವಿಶಿಷ್ಟ ಶಾಲೆಯ ಬಗ್ಗೆ ಸಂಬಂಧಿಸಿದ್ದಾಗಿದೆ. ಒಂದು ಕಥೆಯು ಈ ಭೂಮಿಯ ಮೇಲೆ ಯಾವುದೇ ಆಲೋಚನೆಯನ್ನು ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ ತಲುಪಿಸುತ್ತದೆ ಎನ್ನುತ್ತಾರೆ ನಿರ್ದೇಶಕ ಸಲೀಲ್ ಕುಲಕರ್ಣಿ. ಚಿತ್ರದಲ್ಲಿ ಶಾಲೆಯನ್ನು ನಡೆಸುವ ವ್ಯಕ್ತಿ ಶಾಲೆಯಲ್ಲಿ ವಿಷಯಗಳನ್ನು ಕಥೆಗಳ ಮೂಲಕ ಬೋಧಿಸುವ ಕಲಿಕಾ ವಿಧಾನವನ್ನು ಅಳವಡಿಸಿಕೊಳ್ಳುತ್ತಾನೆ. ಅಲ್ಲಿ ಅವನ ಮಗನೂ ಕಲಿಯುತ್ತಿರುತ್ತಾನೆ. ಅವನು ತನ್ನ ಜೀವನದಲ್ಲಿ ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸಿದಾಗ, ಅದನ್ನು ತನ್ನ ಮಗನಿಗೆ ತಿಳಿಸಲು ಕಥೆಗಳ ಮೂಲಕ ಮಗನಿಗೆ ಅರ್ಥವಾಗುವಂತೆ ಹೇಳುವ ತತ್ವವನ್ನು ಅನುಸರಿಸುತ್ತಾನೆ. 

53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬದಿಯಲ್ಲಿ ಇಂದು ಸಾರ್ವಜನಿಕ ಮಾಹಿತಿ ಇಲಾಖೆ(PIB) ಆಯೋಜಿಸಿದ್ದ 'ಟೇಬಲ್ ಟಾಕ್' ಅಧಿವೇಶನದಲ್ಲಿ ಮಾಧ್ಯಮ ಪ್ರತಿನಿಧಿಗಳು ಮತ್ತು ಚಲನಚಿತ್ರೋತ್ಸವದ ನಿಯೋಗದೊಂದಿಗೆ ಮಾತನಾಡಿದ ನಿರ್ದೇಶಕ ಡಾ ಸಲೀಲ್ ಕುಲಕರ್ಣಿ, "ವಯಸ್ಕರು ಸಾಮಾನ್ಯವಾಗಿ ಮಕ್ಕಳು ತಮಗೆ ಹೇಳುವ ವಿಷಯಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಊಹಿಸುತ್ತಾರೆ. ವಯಸ್ಕರಿಗೆ ಈ ವಿಷಯವನ್ನು ನಿಭಾಯಿಸಲು ಕಷ್ಟವಾಗಿದ್ದರೆ ಮಕ್ಕಳಿಗೆ ಪರಿಸ್ಥಿತಿಯನ್ನು ತಿಳಿಸುವುದು ವಿಶೇಷವಾಗಿ ಕಷ್ಟಕರವಾಗಿರುತ್ತದೆ. ವಯಸ್ಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಕುರಿತು ಯಾವುದೇ ಪೂರ್ವ-ಕಲ್ಪಿತ ಕಲ್ಪನೆಗಳನ್ನು ಹೇರದೆ ಈ ಚಿತ್ರದ ಮೂಲಕ ನಾನು ಮಕ್ಕಳಿಗೆ ಒಳ್ಳೆಯ ಮತ್ತು ಕೆಟ್ಟ ಸುದ್ದಿಗಳನ್ನು ಹೇಗೆ ಸೂಕ್ಷ್ಮವಾಗಿ ಹಂಚಿಕೊಳ್ಳಬಹುದು ಎಂಬುದನ್ನು ಅನ್ವೇಷಿಸಲು ಪ್ರಯತ್ನಿಸಿದೆ ಎಂದರು.
ಐಎಫ್‌ಎಫ್‌ಐ 53ಕ್ಕೆ ತಮ್ಮ ಚಿತ್ರ ಆಯ್ಕೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಡಾ ಕುಲಕರ್ಣಿ, ಚಿತ್ರದ ಕೊನೆಯಲ್ಲಿ ಪ್ರೇಕ್ಷಕರು ಕಣ್ಣೀರು ಹಾಕುವುದನ್ನು ನೋಡಿ ಮನಮುಟ್ಟಿತು ಎಂದರು. ತೆರೆಯ ಮೇಲೆ ಚಿತ್ರ ಕಂಡ ಅನುಭವವನ್ನು ಲತಾ ಮಂಗೇಶ್ಕರ್ ಹಾಡನ್ನು ಮುದ್ರಿಸುವಾಗ ಅನುಭವಿಸಿದ ಅನುಭವಕ್ಕೆ ಹೋಲಿಕೆ ಮಾಡಿ ಎರಡೂ ಸಂದರ್ಭಗಳಲ್ಲಿ ಸಮಾನ ಅನುಭವವಾಯಿತು, ಕಣ್ತುಂಬಿ ಬಂತು ಎಂದಿದ್ದಾರೆ.

ಸಂಗೀತ ಸಂಯೋಜಕರಾಗಿ ತಮ್ಮದೇ ಚಿತ್ರಗಳಿಗೆ ಹಾಡುಗಳನ್ನು ಸಂಯೋಜನೆ ಮಾಡುವ ಅನುಭವಗಳನ್ನು ಕೇಳಿದಾಗ, ಹಾಡುಗಳನ್ನು ಹೇಗೆ ಚಿತ್ರಿಸಲಾಗುತ್ತದೆ ಎಂದು ಸರಿಯಾಗಿ ತಮಗೆ ಗೊತ್ತಿದ್ದರಿಂದ ಅದೊಂದು ಭಿನ್ನ ಅನುಭವ. ಬೇರೆಯವರು ಚಿತ್ರೀಕರಿಸುವುದೆಂದರೆ ಅಲ್ಲಿ ಅಚ್ಚರಿ, ಸಂತೋಷ ಬೇರೆಯದೇ ರೀತಿ ಇರುತ್ತದೆ ಎಂದರು.

ಚಿತ್ರ ನಿರ್ಮಾಣದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಡಾ ಕುಲಕರ್ಣಿ, ತಮ್ಮ ಚಿತ್ರಗಳಲ್ಲಿ ವಿಲನ್ ಗಳೇ ಇರಬಾರದು ಎಂದು ತೀರ್ಮಾನಿಸಿದ್ದೆ. ನಮ್ಮಲ್ಲೇ ಸಾಕಷ್ಟು ಸಮಸ್ಯೆಗಳಿರುತ್ತವೆ. ಹಾಗಾಗಿ ಕೆಟ್ಟ ಜನರು ನಮಗೆ ಬೇಕಾಗಿಲ್ಲ. ಸಂದರ್ಭಗಳೇ ನಮಗೆ ಶತ್ರುಗಳಾಗುತ್ತವೆ ಎಂದು ವ್ಯಾಖ್ಯಾನಿಸಿದರು.

ಇನ್ನು ಚಿತ್ರಕ್ಕೆ ಪಾತ್ರಗಳ ಆಯ್ಕೆಗೆ ಸಂಬಂಧಪಟ್ಟಂತೆ ಪಟ್ಟ ಪ್ರಯತ್ನಗಳ ಬಗ್ಗೆ ಕೇಳಿದಾಗ, ಚಿತ್ರದಲ್ಲಿ ಬಾಲ ಚಿಂತನ್ ಪಾತ್ರವನ್ನು ಮಾಡಿದ ಅರ್ಜುನ್ ಪೂರ್ಣಪಾತ್ರೆಯವರನ್ನು ಆಯ್ಕೆ ಮಾಡುವ ಮೊದಲು 1700 ಕ್ಕೂ ಹೆಚ್ಚು ಮಕ್ಕಳನ್ನು ಆಡಿಷನ್ ಮಾಡಿದ್ದೆ ಎಂದರು. ಇಲ್ಲಿ ಸುಮಿತ್ ರಾಘವನ್ ತಂದೆಯ ಪಾತ್ರವನ್ನು ನಿರ್ವಹಿಸಿದರೆ, ಊರ್ಮಿಳಾ ಕಾನೇಟ್ಕರ್ ಕೊಠಾರೆ ತಾಯಿಯಾಗಿ ನಟಿಸಿದ್ದಾರೆ.
ಸಂವಾದ ವೇಳೆ ಉಪಸ್ಥಿತರಿದ್ದ ಚಿತ್ರದ ನಾಯಕ ನಟ ಸುಮಿತ್ ರಾಘವನ್ ತಮ್ಮ ಪಾತ್ರದ ಕುರಿತು ಮಾತನಾಡಿ, ಸಲೀಲ್ ಕುಲಕರ್ಣಿ ಅವರು ಕಥೆಯನ್ನು ಹೇಳಿದಾಗ ಈ ಪಾತ್ರವನ್ನು ಮಾಡಲು ಒಪ್ಪಿಕೊಳ್ಳಬೇಕು ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ. ನಟರಿಗೆ ಅಂತಹ ಉತ್ತಮ ಚಿತ್ರಕಥೆ ಸಿಗುವುದು ವಿರಳ ಎಂದರು.

ಚಿತ್ರಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ವಿವರಿಸಿದ ರಾಘವನ್, ''ಸಂಭಾವನೆಗಿಂತ ಉತ್ತಮ ಪಾತ್ರ ಸಿಗುವವರೆಗೆ ಕಾಯುವ ಆಟವನ್ನು ತಾನು ಪ್ರಯತ್ನಿಸಿದ್ದೇನೆ. ನಟನ ಬೀರು ಅಥವಾ ಖಜಾನೆ ಬದುಕು ಸೀಮಿತವಾಗಿರುತ್ತದೆ ಎಂದು ನನಗೆ ಗೊತ್ತಿದೆ. ನನ್ನ ಕೆಲಸದಲ್ಲಿ ತಾಳ್ಮೆಯಿರಬೇಕು. ಅಂತಹ ಚಿತ್ರಗಳಲ್ಲಿ ನಟಿಸುವುದು ಆ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ” ಎಂದು ಹೇಳಿದರು.

ಇಷ್ಟು ವರ್ಷಗಳಲ್ಲಿ ಡಾ ಸಲೀಲ್ ಕುಲಕರ್ಣಿಯವರು ಮಕ್ಕಳಿಗಾಗಿ ಮಾಡಿಕೊಂಡು ಬಂದಿರುವ ಕೆಲಸಗಳ ಬಗ್ಗೆ ಶ್ಲಾಘಿಸಿದ ಡಾ ಸಲೀಲ್ ಕುಲಕರ್ಣಿ, “ಸಲೀಲ್‌ಗೆ ಮಗುವಿನ ಸೂಕ್ಷ್ಮತೆಗಳು ತಿಳಿದಿವೆ. ಅವರು ಮಕ್ಕಳೊಂದಿಗೆ ಬಹಳ ಸಮಯದಿಂದ ಕೆಲಸ ಮಾಡಿ, ಮಕ್ಕಳೊಟ್ಟಿಗೆ ಬೆರೆತು ಗೊತ್ತಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ದೊರೆತ ಪ್ರತಿಕ್ರಿಯೆ ಕುರಿತು ಮಾತನಾಡಿದ ರಾಘವನ್, ಚಿತ್ರದ ವಿಷಯ ಸಾರ್ವತ್ರಿಕವಾಗಿದೆ ಮತ್ತು ಪ್ರತಿಯೊಬ್ಬರಿಗೂ ಇದು ಅನ್ವಯವಾಗುತ್ತದೆ. ಚಿತ್ರದ ಪೋಷಕ ಪಾತ್ರಗಳು ಸಹ ಸಹಜವಾಗಿ ಹೋದವು. ಚಿತ್ರವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ಭುತವಾದ ಸಾಧನೆ ಮಾಡಿದೆ. ಈ ಚಲನಚಿತ್ರೋತ್ಸವಕ್ಕೆ ಆಯ್ಕೆ ಮಾಡಿದ್ದು ಕೇಕ್ ಮೇಲಿರುವ ಚೆರ್ರಿಯಂತಾಗಿದೆ ಎಂದರು. 

'ಎಕ್ದಾ ಕೇ ಝಲಾ' ಚಿತ್ರ ನಿನ್ನೆ ಅಂದರೆ ನವೆಂಬರ್ 26ರಂದು ಗೋವಾದಲ್ಲಿ ನಡೆದ 53 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ ಪ್ರದರ್ಶನಗೊಂಡಿದೆ.

******



(Release ID: 1879215) Visitor Counter : 147