ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ತಮಿಳು ನಿಯೋಗದ ಎರಡನೇ ಪ್ರಯಾಣಿಕರ ತಂಡ ‘ಕಾಶಿ ತಮಿಳು ಸಂಗಮಂ’ ನ 5 ನೇ ದಿನದಂದು ಕಾಶಿಯ ಸಂಪ್ರದಾಯ, ಕಲೆ ಮತ್ತು ಸಂಸ್ಕೃತಿಯ ನೇರ ಅನುಭವವನ್ನು ಪಡೆಯಿತು.


ಈ ಎರಡನೇ ತಂಡವು ಹನುಮಾನ್ ಘಾಟ್’ಗೆ ಭೇಟಿ, ಸುಬ್ರಹ್ಮಣ್ಯ ಭಾರತಿ ಅವರ ನಿವಾಸ, ಟ್ರೇಡ್ ಫೆಸಿಲಿಟೇಶನ್ ಸೆಂಟರ್‌ನಲ್ಲಿರುವ ವಸ್ತು ಸಂಗ್ರಹಾಲಯ, ಸಾರನಾಥ ಮತ್ತು ಬನಾರಸ್ ಹಿಂದೂ ವಿಶ್ವ ವಿದ್ಯಾಲಯದ ಆಂಫಿಥಿಯೇಟರ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನದ ಪ್ರಮುಖ ಆಕರ್ಷಣೆಗಳಾಗಿವೆ.

Posted On: 23 NOV 2022 2:47PM by PIB Bengaluru

ಒಂದು ತಿಂಗಳು ನಡೆಯುವ ‘ಕಾಶಿ ತಮಿಳು ಸಂಗಮಂ’ ಉತ್ಸವದಲ್ಲಿ ಪಾಲ್ಗೊಳ್ಳುವ ತಮಿಳುನಾಡಿನ ಎರಡನೇ ತಂಡದ ನಿಯೋಗವು ಗಂಗಾ ನದಿಯ ದಡದಲ್ಲಿರುವ ‘ಹನುಮಾನ್ ಘಾಟ್’ ನಲ್ಲಿ ಮುಂಜಾನೆಯೇ ಪವಿತ್ರ ಸ್ನಾನ ಕೈಗೊಂಡಿತು. 
 ಮೊದಲು ‘ರಾಮೇಶ್ವರಂ ಘಾಟ್’ ಎಂದು ಕರೆಯಲಾಗುತ್ತಿದ್ದ ‘ಹನುಮಾನ್ ಘಾಟ್’ ಇದು ವಾರಾಣಸಿಯ ಅತಿ ಹೆಚ್ಚು ಭೇಟಿ ನೀಡುವ ಪ್ರಮುಖ ಘಾಟ್‌ಗಳಲ್ಲಿ ಒಂದಾಗಿದೆ.  ಸುತ್ತಮುತ್ತಲಿನ ಪ್ರದೇಶಗಳು ಕೇರಳದ ಮಠ, ಕಂಚಿ ಮಠ, ಶಂಕರ ಮಠ, ಶೃಂಗೇರಿ ಮಠ ಮುಂತಾದ ದಕ್ಷಿಣ ಭಾರತದ ಮಠಗಳಿಂದಾಗಿ ಇಲ್ಲಿ   ಜನದಟ್ಟಣೆ ಹೆಚ್ಚು.

ಪವಿತ್ರ ಸ್ನಾನದ ನಂತರ, ನಿಯೋಗವು ‘ಹನುಮಾನ್ ಘಾಟ್’ನಲ್ಲಿರುವ ಸುಬ್ರಹ್ಮಣ್ಯ ಭಾರತಿ ಅವರ ನಿವಾಸಕ್ಕೆ ಭೇಟಿ ನೀಡಿತು.  ನಿಯೋಗದ ಸದಸ್ಯರು ದರ್ಶನಗೊಂಡ ಈ ಸ್ಥಳಗಳೆಲ್ಲ ತಮ್ಮ ಸಂಪ್ರದಾಯಗಳು ಮತ್ತು ಸಂಸ್ಕೃತಿಗೆ ಸಂಬಂಧಿಸಿರುವುದರಿಂದ ಸರ್ಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ತಮಿಳು ನಿಯೋಗದ ಎರಡನೇ ತಂಡ ಕುಶಲಕರ್ಮಿಗಳು ಮತ್ತು ವ್ಯಾಪಾರಿಗಳನ್ನು  ಒಳಗೊಂಡಿತ್ತು.  ಅದರ ನಂತರ ಅವರು TFC (ಟಿಎಫ್‌ಸಿ)ಕೇಂದ್ರದಲ್ಲಿರುವ ವಸ್ತುಸಂಗ್ರಹಾಲಯದ ಮೊದಲ ಅನುಭವವನ್ನು ಪಡೆಯಲು ಟ್ರೇಡ್ ಫೆಸಿಲಿಟೇಶನ್ ಸೆಂಟರ್ (TFC) ಗೆ ಭೇಟಿ ನೀಡಿದರು.  ವಸ್ತು ಸಂಗ್ರಹಾಲಯದಲ್ಲಿ ಪೂರ್ವಾಂಚಲ್ ಪ್ರದೇಶದ ಕೈಮಗ್ಗ ಉತ್ಪನ್ನಗಳ ವೈಭವ ಮತ್ತು ಸಾರನಾಥದ ಪುರಾತತ್ವ ವಸ್ತುಗಳ ಪ್ರತಿಕೃತಿಗಳನ್ನು ಅತಿಥಿಗಳಿಗೆ ಪ್ರದರ್ಶಿಸಲಾಯಿತು.  ಭೇಟಿ ನೀಡಿದ ನಿಯೋಗಕ್ಕಾಗಿ ಟಿಎಫ್‌ಸಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಹ ಆಯೋಜಿಸಲಾಯಿತು, ಅಲ್ಲಿ ಕೆಲವು ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು.  ಸಾಂಸ್ಕೃತಿಕ ಕಾರ್ಯಕ್ರಮದ ನಂತರ, ನಂತರ ಹಗಲಿನಲ್ಲಿ ಅವರನ್ನು ಸಾರನಾಥ ಪ್ರವಾಸಕ್ಕೆ ಕರೆದೊಯ್ಯಲಾಯಿತು.

 

ನಿಯೋಗವು ಸಂಜೆ ಸಾರನಾಥದಿಂದ ಬಿಎಚ್‌ಯು ಆಂಫಿಥಿಯೇಟರ್‌ಗೆ ತಲುಪಲಿದೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.  ಸ್ಥಳದಲ್ಲಿರುವ ವಿವಿಧ ಮಳಿಗೆಗಳಿಗೂ ಭೇಟಿ ನೀಡಲಿದ್ದಾರೆ.  75 ಸ್ಟಾಲ್‌ಗಳು ಉತ್ತರ ಮತ್ತು ದಕ್ಷಿಣ ಭಾರತದ ಅಂಗಡಿಗಳನ್ನು ಒಳಗೊಂಡಿದ್ದು, ಇದರಲ್ಲಿ ಕಲಾಕೃತಿಗಳು, ಕೈಮಗ್ಗ, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಉಡುಗೆ, ಉತ್ತರ ಮತ್ತು ದಕ್ಷಿಣ ಭಾರತೀಯ ಆಹಾರ ಇತ್ಯಾದಿಗಳನ್ನು ನಿಯೋಗ ಮತ್ತು ವಾರಣಾಸಿಯ ಸ್ಥಳೀಯ ಜನರಿಗೆ ಪ್ರದರ್ಶಿಸಲಾಗುತ್ತಿದೆ.

*****



(Release ID: 1878383) Visitor Counter : 91