ರಾಷ್ಟ್ರಪತಿಗಳ ಕಾರ್ಯಾಲಯ
ಗುರು ತೇಗ್ ಬಹಾದೂರ್ ಜೀ ಅವರ ‘ಹುತಾತ್ಮ ದಿನ’ದ ಮುನ್ನಾದಿನದಂದು ಭಾರತದ ರಾಷ್ಟ್ರಪತಿ ಅವರ ಸಂದೇಶ
Posted On:
23 NOV 2022 4:41PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಗುರು ತೇಗ್ ಬಹಾದೂರ್ ಜೀ ಅವರ ‘ಹುತಾತ್ಮ ದಿನ’ದ ಮುನ್ನಾದಿನದಂದು ತಮ್ಮ ಸಂದೇಶದಲ್ಲಿ ಹೀಗೆ ಹೇಳಿದ್ದಾರೆ:-
‘‘ ಗುರು ತೇಗ್ ಬಹಾದೂರ್ ಜೀ ಅವರ ಹುತಾತ್ಮ ದಿನಾಚರಣೆಯ ಸಂದರ್ಭದಲ್ಲಿ ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ.
ಗುರು ತೇಗ್ ಬಹಾದೂರ್ ಜೀ ಧರ್ಮಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಅವರ ಬಗ್ಗೆ ಸರ್ ದಿಯಾ ಪರ್ ಸಾರ್ ನಾ ದಿಯಾ" (ತಲೆ ಕೊಟ್ಟರೂ ಸಾರವನ್ನು ಕೊಡಲಿಲ್ಲ) ಎಂದು ಸರಿಯಾಗಿ, ಹೇಳಲಾಗಿದೆ. ಅವರ ತ್ಯಾಗವನ್ನು ಮುಂದಿನ ಎಲ್ಲ ಕಾಲಕ್ಕೂ ಸ್ಮರಿಸಲಾಗುವುದು.
ಅವರ ಬಲಿದಾನವನ್ನು ಮಾನವೀಯತೆಗಾಗಿ ತ್ಯಾಗವೆಂದು ಪರಿಗಣಿಸಲಾಗಿರುವುದರಿಂದ ಅವರನ್ನು ‘ಹಿಂದ್ ಕಿ ಚಾದರ್’ ಎಂದು ಕರೆಯಲಾಗುತ್ತದೆ.
ನಾವೆಲ್ಲರೂ ಗುರು ತೇಗ್ ಬಹಾದೂರ್ ಜೀ ಅವರ ಏಕತೆ ಮತ್ತು ಭ್ರಾತೃತ್ವದ ಬೋಧನೆಗಳನ್ನು ನಮ್ಮ ಜೀವನದಲ್ಲಿಅಳವಡಿಸಿಕೊಳ್ಳುವ ಪ್ರತಿಜ್ಞೆ ಮಾಡೋಣ,’’
ಹಿಂದಿಯಲ್ಲಿ ರಾಷ್ಟ್ರಪತಿಯವರ ಸಂದೇಶವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
*****
(Release ID: 1878380)
Visitor Counter : 133