ಕಾನೂನು ಮತ್ತು ನ್ಯಾಯ ಸಚಿವಾಲಯ

​​​​​​​ಉದ್ಯೋಗ ಸೃಷ್ಟಿ ಕಡೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಪ್ರಧಾನ ಮಂತ್ರಿಯವರ ಬದ್ದತೆಯ ಭಾಗವಾಗಿ,ದೇಶಾದ್ಯಂತ 45 ಸ್ಥಳಗಳಲ್ಲಿ ರೋಜಗಾರ್ ಮೇಳ ಆಯೋಜನೆ.


ಪ್ರೋಪೆಸರ್.ಎಸ್.ಪಿ.ಸಿಂಗೆ ಬಗೇಲ್ ,ರಾಜ್ಯ  ಸಚಿವರು,ಕಾನೂನು ,ದೆಹಲಿಯ ವಸಂತ್ ಕುಂಜ್ಹ್ ನಲ್ಲಿನ ಉದ್ಯೋಗ ಮೇಳದಲ್ಲಿ ಭಾಗಿ.

Posted On: 22 NOV 2022 1:39PM by PIB Bengaluru

ಉದ್ಯೋಗ ಸೃಪ್ಠಿ ಕಡೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಪ್ರಧಾನ ಮಂತ್ರಿಯವರ ಬದ್ದತೆಯ ಭಾಗವಾಗಿ, ದೇಶಾದ್ಯಂತ ಇಂದು 45 ಸ್ಥಳಗಳಲ್ಲಿ ರೋಜಗಾರ್ ಮೇಳವನ್ನು ಆಯೋಜಿಸಲಾಗಿತ್ತು.ಈ ಸಂಧರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಸಂವಾದ ಮೂಲಕ ಹೊಸದಾಗಿ ನೇಮಕವಾದ 71000 ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಿಸಿದರು.

 

“ಶೌರ್ಯ ಆಫಿಸರ್ಸ್” ಸಂಸ್ಥೆ, ಸಿ.ಆರ್.ಪಿ.ಎಫ್.ವಸಂತ್ಕುಜ್ಹ್, ನವದೆಹಲಿಯಲ್ಲಿ ನಡೆದ  ಉದ್ಯೋಗ ಮೇಳದಲ್ಲಿ  ಭಾಗವಹಿಸಿದ ರಾಜ್ಯಸಚಿವ ,ಕಾನೂನು ಪ್ರೋಪೆಸರ್.ಎಸ್.ಪಿ.ಸಿಂಗೆ ಬಗೇಲ್, ನೆರದಿದ್ದವರನ್ನು ಉದ್ದೇಶಿಸಿ  ಮಾತನಾಡಿದರು ಮತ್ತು ಯುವಕರ ಕಲ್ಯಾಣಕ್ಕಾಗಿ ಪ್ರಧಾನಿಯವರ ನಾಯಕತ್ವದಲ್ಲಿನ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.ಅರ್ಹತೆ ಪಡೆದ ಒಟ್ಟು 224 ಆಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಪ್ರೋಪೆಸರ್.ಎಸ್.ಪಿ.ಸಿಂಗೆ ಬಗೇಲ್ ರವರು ಆಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.

 

ಪ್ರೋಪೆಸರ್.ಎಸ್.ಪಿ.ಸಿಂಗೆ ಬಗೇಲ್ ಅವರು ಆಭ್ಯರ್ಥಿಗಳಿಗೆ  ಆಭಿನಂದಿಸಿದರು  ಮತ್ತು ಇಂತಹ ವೈಭವಯುತ ಯುಗದಲ್ಲಿ ದೇಶಕ್ಕೆ ಸೇವೆ ಸಲ್ಲಿಸಲು ಒಂದು ದೂಡ್ಡ ಅವಕಾಶವೆಂದು ಮತ್ತು ಉನ್ನತ ಹಂತಕ್ಕೆ ಏರಲು ತಮ್ಮ ತಯಾರಿಯನ್ನು ಮುಂದುವರಿಸಲು ಆಭ್ಯರ್ಥಿಗಳಿಗೆ ಸಲಹೆ ನೀಡಿದರು.

ಈ ಉದ್ಯೋಗಿಗಳು ಪ್ರಮುಖವಾಗಿ   ರಕ್ಷಣೆ, ಹಣಕಾಸು, ಶಿಕ್ಷಣ, ರೈಲ್ವೆ, ಗೃಹ, ಶಕ್ತಿ, ಜಲಸಂಪನ್ಮೂಲ,ಮುಂತಾದ ಕ್ಷೇತ್ರಗಳಿಗೆ ನೇಮಕವಾದ ಉದ್ಯೋಗಿಗಳಾಗಿರುತ್ತಾರೆ.ಪ್ರಧಾನಿ ಮಂತ್ರಿಗಳ ಭಾಷಣನದ ನಂತರ, ಕಾನೂನು ಸಚಿವರಾದ ಪ್ರೋಪೆಸರ್.ಎಸ್.ಪಿ.ಸಿಂಗೆ ಬಗೇಲ್ ಕೆಲವು ಆಭ್ಯರ್ಥಿಗಳಿಗೆ ಭೌತಿಕವಾಗಿ ನೇಮಕಾತಿ ಪತ್ರಗಳನ್ನು ವಿತರಿಸಿದರು ಮತ್ತು ಅಭ್ಯರ್ಥಿಗಳೂಂದಿಗೆ ಸಂವಾದ  ನಡೆಸಿದರು.

 

ಹೂಸ ಉದ್ಯೋಗಿಗಳು ಸರ್ಕಾರವನ್ನು ಸೇರಿಕೂಳ್ಳುವರು ಮತ್ತು ದೇಶಕ್ಕೆ ಸೇವೆ ಸಲ್ಲಿಸುವರು.ಅವರು ದೇಶವನ್ನು ಕಟ್ಟುವುದರಲ್ಲಿ ಪ್ರಮುಖ ಪಾತ್ರವಹಿಸುವರು ಮತ್ತು ಭಾರತ@47ಗೆ  ಸಾಕ್ಷಿಯಾಗಲಿದ್ದಾರೆ.ಈ ಕಾರ್ಯಕ್ರಮವು  ಪ್ರಧಾನಿಯವರಿಂದ ರೂಪಿಸಿಕೂಂಡಿರುವಂತೆ ಮುಂದಿನ ಒಂದು ವರ್ಷದ ಅವಧಿಯಲ್ಲಿ 10 ಲಕ್ಷ ಉದ್ಯೋಗಳನ್ನು ನೀಡುವ ಯೋಜನೆಯ ಎರಡನೇ ಸರಣಿಯಾಗಿರುತ್ತದೆ (ಮೊದಲನೆಯದ್ದು 50 ಸ್ಥಳಗಳಲ್ಲಿ  22ನೇ  ಅಕ್ಟೋಬರ್ 2022 ರಂದು ನಡೆದಿತ್ತು

****



(Release ID: 1878054) Visitor Counter : 121