ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಇ-ಕಾಮರ್ಸ್‌ನಲ್ಲಿ ನಕಲಿ ಮತ್ತು ಮೋಸಗೊಳಿಸುವಂಥ ಸಮೀಕ್ಷೆಗಳಿಂದ ಗ್ರಾಹಕರ ಹಿತಾಸಕ್ತಿ ಕಾಪಾಡಲು ಮತ್ತು ಅದರ ಸಂರಕ್ಷಣೆಗೆ ಕೇಂದ್ರವು ರೂಪುರೇಷೆಗಳನ್ನು ಸಿದ್ಧಗೊಳಿಸಿದೆ


ಮಾನದಂಡದ ನಿಬಂಧನೆಗಳ ಜೊತೆಗೆ ವಿಮರ್ಶೆ ಮಾಡಿದ ಲೇಖಕರ ಪರಿಶೀಲನೆ, ಸರಳೀಕರಣ ಮತ್ತು ಪ್ರಕಟಣೆ ಪ್ರಕ್ರಿಯೆಯು ಇನ್ನುಮುಂದೆ ಕಡ್ಡಾಯ

ರೂಪುರೇಷೆಗಳ ಅನುಸರಣೆ ಮೌಲ್ಯಮಾಪನ ಯೋಜನೆಯನ್ನು 15 ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವುದು

Posted On: 21 NOV 2022 5:07PM by PIB Bengaluru

ಇ-ಕಾಮರ್ಸ್‌ನಲ್ಲಿನ ನಕಲಿ ಮತ್ತು ಮೋಸಗೊಳಿಸುವಂಥ ಸಮೀಕ್ಷೆಗಳಿಂದ ಗ್ರಾಹಕರ ಹಿತಾಸಕ್ತಿ ಕಾಪಾಡಲು ಮತ್ತು ಅದನ್ನು ಸಂರಕ್ಷಿಸಲು ಇಂದು ಗ್ರಾಹಕರ ವ್ಯವಹಾರಗಳ ಇಲಾಖೆಯು ರೂಪುರೇಷೆಗಳನ್ನು ಬಿಡುಗಡೆ ಮಾಡಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ರೋಹಿತ್ ಕುಮಾರ್ ಸಿಂಗ್, ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಇಂಡಿಯನ್ ಸ್ಟ್ಯಾಂಡರ್ಡ್ (IS) 19000:2022 'ಆನ್‌ಲೈನ್ ಗ್ರಾಹಕ ವಿಮರ್ಶೆಗಳು - ಅವುಗಳ ಸಂಗ್ರಹಣೆಗಾಗಿ ತತ್ವಗಳು ಮತ್ತು ಅಗತ್ಯಗಳ ಸರಳೀಕರಣ ಮತ್ತು ಪ್ರಕಟಣೆ ' ಎಂದು ಹೆಸರಿಸಲಾದ ರೂಪುರೇಷೆಗಳನ್ನು ಬಿಡುಗಡೆ ಮಾಡಿದರು. ಗ್ರಾಹಕರ ವಿಮರ್ಶೆಗಳನ್ನು ಪ್ರಕಟಿಸುವ ಪ್ರತಿಯೊಂದು ಆನ್‌ಲೈನ್ ವೇದಿಕೆಗಳಿಗೆ ಈ ಮಾನದಂಡಗಳು ಅನ್ವಯಿಸುತ್ತವೆ.

https://static.pib.gov.in/WriteReadData/userfiles/image/image001DNZD.jpg

ಆರಂಭದಲ್ಲಿ ಮಾನದಂಡಗಳು ಎಲ್ಲ ಇ-ಕಾಮರ್ಸ್ ವೇದಿಗಳ ಸ್ವಯಂಪ್ರೇರಿತ ಅನುಸರಣೆಗಾಗಿ ಇರುತ್ತದೆ. ಈ ಉಪಕ್ರಮವನ್ನು ಸಂಪೂರ್ಣವಾಗಿ ನಿರ್ಣಯಿಸಲು, BIS 15 ದಿನಗಳಲ್ಲಿ ಮಾನದಂಡಕ್ಕಾಗಿ ಅನುಸರಣಾ ಮೌಲ್ಯಮಾಪನ ಯೋಜನೆಯನ್ನು ಸಹ ಸಿದ್ಧಪಡಿಸುತ್ತದೆ. 

ಮಾನದಂಡದ ಮಾರ್ಗದರ್ಶಿ ತತ್ವಗಳೆಂದರೆ ಸಮಗ್ರತೆ, ನಿಖರತೆ, ಗೋಪ್ಯತೆ, ಭದ್ರತೆ, ಪಾರದರ್ಶಕತೆ, ಲಭ್ಯತೆ ಮತ್ತು ಸ್ಪಂದಿಸುವಿಕೆಯಾಗಿದೆ. ಈ ಮಾನದಂಡಗಳು ವಿಮರ್ಶೆ ಲೇಖಕ ಮತ್ತು ವಿಮರ್ಶೆ ನಿರ್ವಾಹಕರಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ಹೊಂದಿಸುತ್ತದೆ. ಎಲ್ಲ ಪ್ರಕಾರದ ವಿಮರ್ಶೆ ಬರಹಗಾರರಿಗೆ, ಸಂಪರ್ಕ ಮಾಹಿತಿಯನ್ನು ಒದಗಿಸುವುದರ ಜೊತೆಗೆ ಇದು ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪುವುದನ್ನು ದೃಢೀಕರಿಸುತ್ತದೆ, ಮತ್ತು ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವುದು ಹಾಗೂ ವಿಮರ್ಶೆ ನಿರ್ವಾಹಕರಿಗೆ ಸಿಬ್ಬಂದಿ ತರಬೇತಿಯನ್ನು ಕೂಡಾ ಇದು ಒಳಗೊಂಡಿರುತ್ತದೆ. 

ಒಮ್ಮೆ ಕಡ್ಡಾಯಗೊಳಿಸಿದ ನಂತರ, ಅಗತ್ಯವಿದ್ದಲ್ಲಿ, ಯಾವುದೇ ಘಟಕದ ಮಾನದಂಡಗಳ ಉಲ್ಲಂಘನೆಯನ್ನು ಅನ್ಯಾಯಯುತ ಅಭ್ಯಾಸವೆಂದು ಅಥವಾ ಗ್ರಾಹಕ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಬಹುದಾಗಿದೆ ಮತ್ತು ಗ್ರಾಹಕರು ಅಂತಹ ಕುಂದುಕೊರತೆಗಳನ್ನು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ, ಗ್ರಾಹಕ ಆಯೋಗಗಳು ಅಥವಾ CCPA ಗೆ ಸಲ್ಲಿಸಬಹುದು.

ನಿಯಮಿತ ಅಭ್ಯಾಸದ ಕೋಡ್ ಅಭಿವೃದ್ಧಿಪಡಿಸುವುದು ಸೇರಿದಂತೆ ಲಭ್ಯತೆ, ಮಾನದಂಡಗಳು ಮುಂತಾದ ಸಂಸ್ಥೆಯ ಹಲವು  ಜವಾಬ್ದಾರಿಗಳನ್ನು ಒದಗಿಸುತ್ತದೆ, ಮಾನದಂಡಗಳು ಮತ್ತು ಅದರ ವಿಷಯ ವಸ್ತು  ಖಚಿತಪಡಿಸಿಕೊಳ್ಳಲು ಹಣಕಾಸಿನ ಮಾಹಿತಿಯನ್ನು ಪಡೆಯುವುದು ಒಳಗೊಂಡಿಲ್ಲ.
ವಿಮರ್ಶೆ ಲೇಖಕರ ಪತ್ತೆಹಚ್ಚುವಿಕೆ ಮತ್ತು ನೈಜತೆಯನ್ನು ಪರಿಶೀಲಿಸುವುದಕ್ಕೆ ಇಮೇಲ್ ವಿಳಾಸ, ಟೆಲಿಫೋನ್ ಕರೆ ಅಥವಾ SMS ಮೂಲಕ ವಿಮರ್ಶೆ ಲೇಖಕರ ಪರಿಶೀಲನೆ,  ಲಿಂಕ್ ಅನ್ನು ಕ್ಲಿಕ್ ಮಾಡುವ ಕ್ಯಾಪ್ಚಾ ವ್ಯವಸ್ಥೆಯನ್ನು ಬಳಸಿಕೊಂಡು ನೋಂದಣಿಯನ್ನು ದೃಢೀಕರಿಸುವುದು ಮುಂತಾದವನ್ನು ಮಾಡಬಹುದು. 

ಮಾಡರೇಶನ್‌ಗೆ ಸಂಬಂಧಿಸಿದಂತೆ, ಮಾನದಂಡವು ಸ್ವಯಂಚಾಲಿತ ಮತ್ತು ಹಸ್ತಚಾಲಿತ ಮಾಡರೇಶನ್ ಎರಡನ್ನೂ ಒದಗಿಸುತ್ತದೆ ಮತ್ತು ವಿಮರ್ಶೆ ವಿಷಯವನ್ನು ವಿಶ್ಲೇಷಿಸಲು ಅಂಶಗಳನ್ನು ಒದಗಿಸುತ್ತದೆ. ಪ್ರಕಟಣೆಗೆ ಸಂಬಂಧಿಸಿದಂತೆ, ಮಾನದಂಡವು ಪ್ರಕಟಣೆಯ ಪ್ರಕ್ರಿಯೆಯ ಸಮಯದಲ್ಲಿ ಮತ್ತು ಪ್ರಕಟಣೆಯ ಪ್ರಕ್ರಿಯೆಯ ನಂತರ ವಿಮರ್ಶೆ ನಿರ್ವಾಹಕರ ಪರಿಗಣನೆಗಳನ್ನು ಒಳಗೊಂಡಿರುತ್ತದೆ. ವಿಮರ್ಶೆಯ ನಿಖರತೆ, ಪೂರ್ವ ನಿಯೋಜಿತ ಪ್ರದರ್ಶನ ಮತ್ತು ರೇಟಿಂಗ್‌ಗಳ ತೂಕವನ್ನು ಪ್ರಕಟಣೆ ಪ್ರಕ್ರಿಯೆಯಲ್ಲಿ ವ್ಯಾಖ್ಯಾನಿಸಲಾಗಿದೆ.

https://static.pib.gov.in/WriteReadData/userfiles/image/image002OD8U.jpg

ಗ್ರಾಹಕರು, ಇ-ಕಾಮರ್ಸ್ ವೇದಿಕೆಗಳು, ಮಾರಾಟಗಾರರು ಇತ್ಯಾದಿ ಹೀಗೆ ಮಾನದಂಡಗಳು ಇ-ಕಾಮರ್ಸ್ ಪರಿಸರ ವ್ಯವಸ್ಥೆಯಲ್ಲಿನ ಎಲ್ಲ ಪಾಲುದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಆನ್‌ಲೈನ್‌ನಲ್ಲಿ ಸರಕುಗಳನ್ನು ಖರೀದಿಸಲು ಗ್ರಾಹಕರಲ್ಲಿ ವಿಶ್ವಾಸವನ್ನು ಮೂಡಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಉತ್ತಮ ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.

ಕಳೆದ ಕೆಲವು ವರ್ಷಗಳಿಂದ, ದೇಶಾದ್ಯಂತ ಇ-ಕಾಮರ್ಸ್ ವಹಿವಾಟುಗಳಲ್ಲಿ ಸ್ಥಿರವಾದ ಏರಿಕೆ ಕಂಡುಬಂದಿದೆ. ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ವಿಮರ್ಶೆಗಳು ಖರೀದಿ ನಿರ್ಧಾರಗಳನ್ನು ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಮತ್ತು ಗ್ರಾಹಕರು ಈಗಾಗಲೇ ಸರಕು ಖರೀದಿಸಿದ ಅಥವಾ ಸೇವೆಯನ್ನು ಪಡೆದುಕೊಂಡ ಬಳಕೆದಾರರ ಅಭಿಪ್ರಾಯ ಮತ್ತು ಅನುಭವವನ್ನು ನೋಡಲು ಇ-ಕಾಮರ್ಸ್ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾದ ವಿಮರ್ಶೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಇ-ಕಾಮರ್ಸ್ ನಲ್ಲಿ ಉತ್ಪನ್ನವನ್ನು ಭೌತಿಕವಾಗಿ ವೀಕ್ಷಿಸಲು ಅಥವಾ ಪರೀಕ್ಷಿಸಲು ಯಾವುದೇ ಅವಕಾಶವಿರುವುದಿಲ್ಲ, ಬದಲಾಗಿ ವರ್ಚುವಲ್ ಶಾಪಿಂಗ್ ಅನುಭವವನ್ನು ಒಳಗೊಂಡಿರುತ್ತದೆ, ವಿಮರ್ಶೆಗಳು ನಿಜವಾದವು, ಅಧಿಕೃತ ಮತ್ತು ವಿಶ್ವಾಸಾರ್ಹವಾಗಿರುವುದು ಇಲ್ಲಿ ಅತ್ಯಗತ್ಯವಾಗಿರುತ್ತದೆ.

https://static.pib.gov.in/WriteReadData/userfiles/image/image003X3FR.jpg

ಇ-ಕಾಮರ್ಸ್‌ನಲ್ಲಿನ ನಕಲಿ ಮತ್ತು ಮೋಸಗೊಳಿಸುವಂಥ ವಿಮರ್ಶೆಗಳ ಪ್ರಭಾವ ಮತ್ತು ಗ್ರಾಹಕರ ಹಿತಾಸಕ್ತಿಯ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು, ಗ್ರಾಹಕ ವ್ಯವಹಾರಗಳ ಇಲಾಖೆಯು ಜೂನ್ 10, 2022 ರಂದು ಇ-ಕಾಮರ್ಸ್‌ನಲ್ಲಿ ನಕಲಿ ಮತ್ತು ಮೋಸಗೊಳಿಸುವಂಥ ವಿಮರ್ಶೆಗಳನ್ನು ಪರಿಶೀಲಿಸುವ ರೂಪುರೇಷೆಗಳನ್ನು ಅಭಿವೃದ್ಧಿಪಡಿಸಲು ಇ-ಕಾಮರ್ಸ್ ಕಂಪನಿಗಳು, ಉದ್ಯಮ ಸಂಘಗಳು, ಗ್ರಾಹಕ ಸಂಸ್ಥೆಗಳು ಮತ್ತು ಕಾನೂನು ಅಧ್ಯಕ್ಷರು ಸೇರಿದಂತೆ ವಿವಿಧ ಮಧ್ಯಸ್ಥಗಾರರನ್ನು ಒಳಗೊಂಡ ಸಮಿತಿಯನ್ನು ರಚಿಸಿತು.

*****(Release ID: 1877909) Visitor Counter : 227