ವಾರ್ತಾ ಮತ್ತು ಪ್ರಸಾರ ಸಚಿವಾಲಯ

​​​​​​​ಸ್ವಾತಂತ್ರ್ಯ ಚಳವಳಿಯ ಚಿತ್ರಣವನ್ನು ಸೆರೆ ಹಿಡಿದ ಐಎಫ್ಎಫ್ಐನಲ್ಲಿ ಸಿಬಿಸಿ ಪ್ರದರ್ಶನ

Posted On: 21 NOV 2022 3:57PM by PIB Bengaluru

ತಂತ್ರಜ್ಞಾನ ಪ್ರದರ್ಶನ ಈ ಬಾರಿಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ [ಎಫ್ಎಫ್ಐ]ದ ಹೊಸ ಉಪಕ್ರಮವಾಗಿದ್ದು, ಕೇಂದ್ರೀಯ ಸಂಪರ್ಕ ವಿಭಾಗದಿಂದ ಏರ್ಪಡಿಸಲಾದ “ಸಿನೆಮಾ ಮತ್ತು ಸ್ವಾತಂತ್ರ್ಯ ಚಳವಳಿ” ತಲ್ಲೀನಗೊಳಿಸುವ ಅನನ್ಯ ಅನುಭವದಿಂದ ಜನರನ್ನು ಆಕರ್ಷಿಸುತ್ತಿದೆ.

ಕ್ಯಾಂಫಾಲ್ ನ ಫುಟ್ಬಾಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಬಹು-ಮಾಧ್ಯಮ ಡಿಜಿಟಲ್ ಪ್ರದರ್ಶನವನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಹಲವಾರು ನಾವೀನ್ಯತೆಯ ತಂತ್ರಜ್ಞಾನವನ್ನು ಬಳಸಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಥನವನ್ನು ಈ ಪ್ರದರ್ಶನ ಪ್ರಸ್ತುತಪಡಿಸುತ್ತಿದೆ. ಪ್ರತಿಯೊಬ್ಬರೂ ಭೇಟಿ ನೀಡಲು ಇದು ಸ್ಫೂರ್ತಿದಾಯಕವಾಗಿದೆ ಮತ್ತು ನಮ್ಮ ಸ್ಫೂರ್ತಿಯುತ ನಾಯಕರ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು, ಅದರಲ್ಲೂ ನಿರ್ದಿಷ್ಟವಾಗಿ ಇದು ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ” ಎಂದರು.

   

“ಆಜಾದಿ ಕಾ ಅಮೃತ ಮಹೋತ್ಸವ” ಎಂಬ ವಿಶಾಲ ವಿಷಯದಡಿ ಸಿಬಿಸಿ ತಂಡ ರೂಪಿಸಿರುವ ಈ ವಸ್ತು ಪ್ರದರ್ಶನ ಕ್ಯಾಮರಾ ಲೆನ್ಸ್ ರೂಪದ ಮುಖವಾಡ ಹೊಂದಿದೆ. ಪ್ರದರ್ಶನ ಮಳಿಗೆಗೆ ಭೇಟಿ ನೀಡುತ್ತಿದ್ದಂತೆ 12 x 10 ಅಡಿ ಉದ್ದದ ಎಲ್ಇಡಿ ಪರದೆ ಮೇಲೆ ಹೊಸಹತುಶಾಹಿ ಆಡಳಿತದ ವಿರುದ್ಧ ಹೋರಾಟ ಮಾಡಿದ ಹಲವಾರು ಸ್ವಾತಂತ್ರ್ಯ ಸೇನಾನಿಗಳ ಜೀವನ ಮತ್ತು ಕೊಡುಗೆಯನ್ನೊಳಗೊಂಡ ದೂರದರ್ಶನದ ಜನಪ್ರಿಯ ದಾರಾವಾಹಿ ‘ಸ್ವರಾಜ್’ ನ ದೃಶ್ಯಗಳು ಪ್ರದರ್ಶನಗೊಳ್ಳಲಿವೆ.

ಮುಂದೆ ಸಾಗುತ್ತಿದ್ದಂತೆ 1857 ರ ಸ್ವಾತಂತ್ರ್ಯ ಆಂದೋನಲವನ್ನೊಳಗೊಂಡ ಅಪರೂಪದ ಚಿತ್ರಣಗಳು ದೊರೆಯಲಿದ್ದು, ರಾಜಾ ರಾಮ್ ಮೋಹನ್ ರಾಯ್, ನೇತಾಜಿ ಸುಭಾಶ್ ಚಂದ್ರ ಬೋಸ್, ಕಾಲಾಪಾನಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಇಲ್ಲಿನ ಬಹುತೇಕ ಚಿತ್ರಗಳನ್ನು ಚಲನಚಿತ್ರ ವಿಭಾಗದ ಶ್ರೀಮಂತ ಸಂಗ್ರಹಾರದ ಮೂಲದಿಂದ ಆರಿಸಲಾಗಿದೆ.

ಡಿಜಿಟಲ್ ಪ್ಲಿಪ್ – ಬುಕ್ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕಾಲಾನುಕ್ರಮದ ಪ್ರಯಾಣವನ್ನು ಸಿಬಿಸಿ ಕ್ಯುರೇಟೆಡ್ ಪೋಸ್ಟರ್ ಗಳ ಮೂಲಕ ಪ್ರದರ್ಶಿಸಲಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಧ್ವನಿಯಾಗಿರುವ ಗೀತೆಗಳನ್ನು ಸಹ ಆಲಿಸಬಹುದಾಗಿದ್ದು, ಸಮೀಪದಲ್ಲಿರುವ ಸೌಂಡ್ ಶವರ್ ಸ್ವಾತಂತ್ರ್ಯ ನಾಯಕರ ಭಾಷಣಗಳನ್ನು ಕೇಳಲು ಅನುವು ಮಾಡಿಕೊಡುತ್ತದೆ.  

   

ನೇತಾಜಿ ಅವರೊಂದಿಗೆ ‘ಕೆ. ಕದಂ ಬಧಾಯೆ ಜಾ’ ಸಾಗುವುದು ಒಂದು ವಾಸ್ತವಿಕ ಅನುಭವವಾಗಿದ್ದು, ಅಲ್ಲಿ ಅಜಾದ್ ಹಿಂದ್ ಫೌಜ್ ಸಮವಸ್ತ್ರದಲ್ಲಿ ಭಾರತದ ಸ್ಫೂರ್ತಿದಾಯಕ ನಾಯಕರೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಬಹುದು ಮತ್ತು ಅವರ ಚಿತ್ರವನ್ನು ಸೆರೆ ಹಿಡಿಯಬಹುದು.

   

1857 ರ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಒಂದು ತನ್ಮಯಗೊಳಿಸುವ ಥಿಯೇಟರ್ ನ ವಿಶಿಷ್ಟ ಅನುಭವವನ್ನು ಕಟ್ಟಿಕೊಡಲಾಗಿದ್ದು, ಇದನ್ನು ನೋಡಲೇಬೇಕಾಗಿದೆ ಮತ್ತು ಅನುಭವಿಸಬೇಕಾಗಿದೆ. ಕಾಕೊರಿ ರೈಲು ಹೋರಾಟವನ್ನು ಹೊಸ ರೀತಿಯಲ್ಲಿ ನೋಡಲು ಸಹಾಯ ಮಾಡುತ್ತದೆ.

ಪ್ಲಿಪ್ ಪೋಸ್ಟರ್ ಪ್ರದರ್ಶನ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರೇರಿತವಾದ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆ ನೀಡಿದ ಚಲನಚಿತ್ರಗಳನ್ನು ಚಿತ್ರಿಸಿದೆ. ಉದಯಕಾಲ್, ಉಪ್ಕಾರ್, ಮದರ್ ಇಂಡಿಯಾ, ಬೋಸ್, ಫರ್ಗಾಟನ್ ಹಿರೋ, ಇವು ಕೆಲವು ಉದಾಹರಣೆಗಳಾಗಿವೆ.

ಸಿಬಿಸಿ ಪ್ರದರ್ಶನ ಆಜಾದಿ ಕ್ವೆಸ್ಟ್ ಗೇಮ್ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೊಸದಾಗಿ ಪ್ರಾರಂಭಿಸಲಾದ ನೆಟ್ ಪ್ಲಿಕ್ಸ್ ಅನಿಮೇಷನ್ ಸರಣಿಯನ್ನು ಪ್ರದರ್ಶಿಸುತ್ತದೆ.

ಪ್ರದರ್ಶನದ ಕೊನೆಯಲ್ಲಿ ದೇಶ ಹೇಗೆ ಬಹು ಆಯಾಮ ವಲಯಗಳಲ್ಲಿ ಪ್ರಗತಿ ಸಾಧಿಸಿದೆ ಎನ್ನುವ ಭಾರತದ ಅನ್ಷೇಷಣೆಯನ್ನು ಅನಾವರಣಗೊಳಿಸುತ್ತದೆ.

ವಸ್ತು ಪ್ರದರ್ಶನ ಸಭಾಂಗಣ ಕೇಂದ್ರದಲ್ಲಿ ಸಾಂಕೇತಿಕ ಶಹೀದ್  ಕೌನ್ ಅಥವಾ ಜಲಿಯನ್ ವಾಲಾಭಾಗ್ ಹುತಾತ್ಮರ ಬಾವಿ ಇದ್ದು, ಅಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಎಲ್ಲಾ ಪ್ರಸಿದ್ಧ ಮತ್ತು ಬೆಳಕಿಗೆ ಬಾರದ ಸೇನಾನಿಗಳಿಗೆ ಗೌರವ ಸಲ್ಲಿಸಬಹುದಾಗಿದೆ.

 

* * *



(Release ID: 1877770) Visitor Counter : 161