ಹಣಕಾಸು ಸಚಿವಾಲಯ
azadi ka amrit mahotsav g20-india-2023

ಕರ್ನಾಟಕದಲ್ಲಿ ಆದಾಯ ತೆರಿಗೆ ಶೋಧಕಾರ್ಯ

Posted On: 18 NOV 2022 8:59AM by PIB Bengaluru

ಆದಾಯ ತೆರಿಗೆ ಇಲಾಖೆ ಕರ್ನಾಟಕದಲ್ಲಿ ಶೋಧ ಕಾರ್ಯಗಳನ್ನು ನಡೆಸುತ್ತಿದ್ದು, ಆದಾಯ ತೆರಿಗೆ ಇಲಾಖೆಯು 20.10.2022 ಮತ್ತು 02.11.2022 ರಂದು ಬೆಂಗಳೂರು, ಮುಂಬೈ ಮತ್ತು ಗೋವಾದಲ್ಲಿ 50 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿತು.ಈ ಸ್ಥಳಗಳಲ್ಲಿ ವಿವಿಧ ರಿಯಲ್ ಎಸ್ಟೇಟ್ ಡೆವಲಪರ್‌ಗಳೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದಗಳನ್ನು (ಜೆಡಿಎ) ಕಾರ್ಯಗತಗೊಳಿಸಿದ ಕೆಲವು ವ್ಯಕ್ತಿಗಳ ಮೇಲೆ ಶೋಧ ಕಾರ್ಯ‌ ನಡೆಸಿ ಅನಧಿಕೃತ ಆಸ್ತಿ ಸಂಪತ್ತನ್ನು ವಶಪಡಿಸಿಕೊಳ್ಳುವ ಕ್ರಮ ಕೈಗೊಂಡಿತು.

ಈ ಶೋಧ ಕಾರ್ಯಾಚರಣೆಯಲ್ಲಿ, ದಾಖಲೆಗಳು ಮತ್ತು ಡಿಜಿಟಲ್ ಡೇಟಾದ ರೂಪದಲ್ಲಿ ಕಂಡುಬಂದ ಹೆಚ್ಚಿನ ಸಂಖ್ಯೆಯ ದೋಷಾರೋಪಣೆಯ ಸಾಕ್ಷ್ಯಗಳನ್ನು  ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಮಾರಾಟ ಒಪ್ಪಂದಗಳು, ಅಭಿವೃದ್ಧಿ ಒಪ್ಪಂದಗಳು ಮತ್ತು ಆಕ್ಯುಪೆನ್ಸಿ ಸರ್ಟಿಫಿಕೇಟ್ (ನೆಲೆಸಿರುವಿಕೆ ಪ್ರಮಾಣಪತ್ರ) (ಒಸಿ) ಗಳಿಗೆ ಸಂಬಂಧಿಸಿದ ಪುರಾವೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳಿಂದ ಒಸಿಗಳನ್ನು ನೀಡಿದ ನಂತರವೂ ಭೂ ಮಾಲೀಕರು ಜೆಡಿಎಗಳ ಮೂಲಕ ಅಭಿವೃದ್ಧಿಗೆ ನೀಡಿದ ಭೂಮಿಯನ್ನು ವಿವಿಧ ಡೆವಲಪರ್‌ಗಳಿಗೆ ವರ್ಗಾಯಿಸಿ ಅದರ ಬಂಡವಾಳ ಲಾಭದಿಂದ ಬಂದ ಆದಾಯವನ್ನು ಬಹಿರಂಗಪಡಿಸಿಲ್ಲವೆಂಬುದನ್ನು  ಈ ಸಾಕ್ಷ್ಯಗಳು ಬಹಿರಂಗಪಡಿಸಿವೆ.

ಅನೇಕ ನಿದರ್ಶನಗಳಲ್ಲಿ, ಭೂಮಾಲೀಕರು ಸ್ವಾಧೀನದ ವೆಚ್ಚ ಮತ್ತು ಇತರ ವಿವಿಧ ವೆಚ್ಚಗಳನ್ನು ಕೃತಕವಾಗಿ ಹೆಚ್ಚಿಸಿ ವರ್ಗಾವಣೆ ಭೂಮಿಯ ಮೇಲಿನ ದರದ ಸಂಪೂರ್ಣ ಮೌಲ್ಯವನ್ನು ಬಹಿರಂಗಪಡಿಸದಿರುವುದು ಅಲ್ಲದೇ ಅನೇಕ ವರ್ಷಗಳವರೆಗೆ ಬಂಡವಾಳದ ಲಾಭದಿಂದ ಬಂದಂತಹ ಆದಾಯವನ್ನು ಉದ್ದೇಶಪೂರಕವಾಗಿ ಬಹಿರಂಗಪಡಿಸದೇ  ಬೇಕಂತಲೇ ಆದಾಯವನ್ನು ನಿಗ್ರಹಿಸಿರುವುದು ಕಂಡುಬಂದಿದೆ.ಇನ್ನೂ ಕೆಲವು ಭೂ ಮಾಲೀಕರು ತಮ್ಮ ಐಟಿಆರ್‌ಗಳನ್ನು ವಿವಿಧ ವರ್ಷಗಳಿಂದ ಸಲ್ಲಿಸದಿರುವುದು  ಈ ಮೂಲಕ  ಬಂಡವಾಳ ಲಾಭದ ಆದಾಯ ಸಂಗ್ರಹವಾಗಿರುವುದು ಶೋಧ ಕಾರ್ಯಾಚರಣೆಯಿಂದ ಕಂಡುಬಂದಿದೆ.

ಈ ಬಗ್ಗೆ ವಿಚಾರಣೆ ನಡೆಸಿದಾಗ ತಪ್ಪಿತಸ್ಥರು ತಮ್ಮ ಲೋಪಗಳನ್ನು ಒಪ್ಪಿಕೊಂಡಿದ್ದಾರೆ. ಆಯಾ ಪ್ರಕರಣಗಳಲ್ಲಿ ಪತ್ತೆಯಾದ ಬಂಡವಾಳ ಲಾಭಗಳಿಂದ ಬಂದಂತಹ ಆದಾಯವನ್ನು ಬಹಿರಂಗಪಡಿಸಲು ಮತ್ತು  ಬಾಕಿ ತೆರಿಗೆಗಳನ್ನು ಪಾವತಿಸಲು ಸಹ  ಒಪ್ಪಿಕೊಂಡಿದ್ದಾರೆ.

ಇಲ್ಲಿಯವರೆಗೆ ನಡೆಸಿದ ಶೋಧ ಕಾರ್ಯಗಳಿಂದ 1300 ಕೋಟಿ ರೂ.ಗಿಂತ ಹೆಚ್ಚಿನ ಲೆಕ್ಕವಿಲ್ಲದ ಆದಾಯವನ್ನು ಪತ್ತೆಹಚ್ಚಲು ಕಾರಣವಾಗಿದೆ.ಇದಲ್ಲದೇ 24 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ನಗದು ಮತ್ತು ಚಿನ್ನಾಭರಣಗಳ ಸ್ವರೂಪದಲ್ಲಿ ಬಹಿರಂಗಪಡಿಸದ ಆಸ್ತಿಗಳನ್ನು ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ  ವಶಪಡಿಸಿಕೊಂಡಿದ್ದಾರೆ.

*****(Release ID: 1877131) Visitor Counter : 110