ಬಾಹ್ಯಾಕಾಶ ವಿಭಾಗ

ಭಾರತದ ಮೊದಲ ಖಾಸಗಿ ವಿಕ್ರಮ್-ಸಬ್ಆರ್ಬಿಟಲ್ (ವಿಕೆಎಸ್) ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇಸ್ರೋ ಇಂದು ಇತಿಹಾಸ ನಿರ್ಮಿಸಿದೆ


​​​​​​​ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ , ಪ್ರಧಾನಿ ಕಚೇರಿ, ಪರಮಾಣು ಮತ್ತು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಸಚಿವರಾದ  ಡಾ ಜಿತೇಂದ್ರ ಸಿಂಗ್ ಅವರು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಈ ಮಹತ್ವದ ಉಡಾವಣೆಯನ್ನು ಖುದ್ದಾಗಿ ವೀಕ್ಷಿಸಿದರು; ಭಾರತದ ಬಾಹ್ಯಾಕಾಶ ಪಯಣದಲ್ಲಿ ಇದು ಹೊಸ ಆರಂಭ, ಭಾರತದ ನವೊದ್ಯಮದ ಆಂದೋಲನಕ್ಕೆ ಇದು  ಒಂದು ತಿರುವು ಎಂದು ಬಣ್ಣಿಸಿದರು

Posted On: 18 NOV 2022 3:52PM by PIB Bengaluru

ಭಾರತದ ಮೊದಲ ಖಾಸಗಿ ರಾಕೆಟ್ ಉಡಾವಣೆಯ ಯಶಸ್ವಿ ಉಡಾವಣೆಯ ನಂತರ, ಉಡಾವಣಾ ಸ್ಥಳದಲ್ಲಿ ಖುದ್ದಾಗಿ ಹಾಜರಿದ್ದ ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಅವರು ತಮ್ಮ ಮೊದಲ ಪ್ರತಿಕ್ರಿಯೆಯಲ್ಲಿ, "ಅಭಿನಂದನೆಗಳು ಭಾರತ! ಭಾರತದ ಬಾಹ್ಯಾಕಾಶ ಪ್ರಯಾಣದಲ್ಲಿ ಹೊಸ ಆರಂಭ!  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾರ್ವಜನಿಕ-ಖಾಸಗಿ-ಭಾಗವಹಿಸುವಿಕೆಗೆ ಬಾಹ್ಯಾಕಾಶ ಕ್ಷೇತ್ರವನ್ನು ತೆರೆಯುವ ಮೂಲಕ ಈ ಪ್ರಯತ್ನವನ್ನು ಸಾಧ್ಯವಾಗಿಸಿದ್ದಕ್ಕಾಗಿ ಧನ್ಯವಾದಗಳು. ಭಾರತದ ಸ್ಟಾರ್ಟ್-ಅಪ್ ಆಂದೋಲನಕ್ಕೆ ಒಂದು ತಿರುವು!  ಸಾಧನೆಯ ಕಿರೀಟಕ್ಕೆ  ಪಡೆದ ಹೊಸ ಗರಿಗಾಗಿ ಇಸ್ರೋಗೆ ಅಭಿನಂದನೆಗಳು" ಎಂದು ಹೇಳಿದರು.

ಖಾಸಗಿ ಸಹಭಾಗಿತ್ವಕ್ಕಾಗಿ 2020 ರಲ್ಲಿ ಪ್ರಧಾನಮಂತ್ರಿ ಮೋದಿಯವರು ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸಿದ  ನಂತರ ಇಸ್ರೋದ ಪ್ರಯಾಣದಲ್ಲಿ ಇದು ಪ್ರಮುಖ ಮೈಲಿಗಲ್ಲು ಎಂದು ಸಚಿವರು ಹೇಳಿದರು.

"ಮಿಷನ್ ಪ್ರಾರಂಭ್ ಯಶಸ್ವಿಯಾಗಿ ನೆರವೇರಿದೆ" ಎಂದು ಇಸ್ರೋ ಹೇಳಿದರೆ, ವಿಕ್ರಮ್-ಎಸ್ ಆಕಾಶವನ್ನು ಅಲಂಕರಿಸಿದ ಭಾರತದ ಮೊದಲ ಖಾಸಗಿ ರಾಕೆಟ್ ಎಂದು ಇತಿಹಾಸವನ್ನು ನಿರ್ಮಿಸಿದೆ" ಎಂದು ಸ್ಕೈರೂಟ್ ಏರೋಸ್ಪೇಸ್ ಹೇಳಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಭಾರತದ ಚೊಚ್ಚಲ ಖಾಸಗಿ ವಿಕ್ರಮ್-ಸಬ್ ಆರ್ಬಿಟಲ್ (ವಿಕೆಎಸ್) ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ , ಪ್ರಧಾನಿ ಕಚೇರಿ, ಪರಮಾಣು ಮತ್ತು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವ ಸಚಿವರಾದ  ಡಾ. ಜಿತೇಂದ್ರ ಸಿಂಗ್ ಅವರು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಈ ಮಹತ್ವದ ಸಂದರ್ಭವನ್ನು ಖುದ್ದಾಗಿ ವೀಕ್ಷಿಸಿದರು.

ಇಸ್ರೋ ತಂಡ ಮತ್ತು ಸ್ಕೈರೂಟ್ ಏರೋಸ್ಪೇಸ್, ಭಾರತೀಯ ಬಾಹ್ಯಾಕಾಶ-ಟೆಕ್ ಸ್ಟಾರ್ಟ್ಅಪ್ಗೆ ತಮ್ಮ ಸಂಕ್ಷಿಪ್ತ ಅಭಿನಂದನಾ ಭಾಷಣದಲ್ಲಿ ಡಾ ಜಿತೇಂದ್ರ ಸಿಂಗ್, “ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇದೊಂದು ಐತಿಹಾಸಿಕ ಹೆಗ್ಗುರುತು! ಭಾರತೀಯ ನವೊದ್ಯಮಗಳಿಗೆ ಮಹತ್ವದ ತಿರುವು! ಮೊದಲ ಖಾಸಗಿ ರಾಕೆಟ್ "ವಿಕ್ರಮ್-ಎಸ್" ಅಂತರಿಕ್ಷದಲ್ಲಿ ಇಸ್ರೋಗೆ ಹೊಸ ಆರಂಭ” ಎಂದು ಹೇಳಿದರು.

75 ವರ್ಷಗಳ ಸ್ವತಂತ್ರ ಭಾರತದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ಮೂಲಕ ಇಸ್ರೋ ತನ್ನ ವೈಭವದ ಬಾಹ್ಯಾಕಾಶ ಯಾತ್ರೆಯಲ್ಲಿ ಮತ್ತೊಂದು ಗರಿಯನ್ನು ಸೇರಿಸಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಈ ಉಡಾವಣೆಯು ಭಾರತವನ್ನು ವಿಶ್ವದ ಮುಂಚೂಣಿಯಲ್ಲಿರುವ ಬಾಹ್ಯಾಕಾಶ ಶಕ್ತಿಗಳಲ್ಲಿ ಸೇರಿಸಿದೆ ಮತ್ತು ಅನೇಕ ಮಹತ್ವಾಕಾಂಕ್ಷಿ ರಾಷ್ಟ್ರಗಳು ಭಾರತೀಯ ಪರಿಣತಿಯಿಂದ ಸೂಚನೆಗಳನ್ನು ತೆಗೆದುಕೊಳ್ಳಲು ಎದುರು ನೋಡುತ್ತವೆ ಎಂದು ಸಚಿವರು ಹೇಳಿದರು. ಖಾಸಗಿ ಸಹಭಾಗಿತ್ವಕ್ಕಾಗಿ ಎರಡು ವರ್ಷಗಳ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸಿದ  ನಂತರ ಸಾಧಿಸಿದ ಇದು ಪ್ರಮುಖ ಮೈಲಿಗಲ್ಲು ಎಂದು ಅವರು ಬಣ್ಣಿಸಿದರು.

ಮುಂದಿನ ವರ್ಷ ವಿಕ್ರಮ್-1 ಉಡಾವಣೆಯಾಗುವ ಮುನ್ನ ಸ್ಕೈರೂಟ್ ಏರೋಸ್ಪೇಸ್ನ ಯೋಜನೆಯಲ್ಲಿ ಹೆಚ್ಚಿನ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಪರೀಕ್ಷಿಸಲು ವಿಕ್ರಮ್-ಎಸ್ ಏಕ  ಹಂತದ ಇಂಧನ ರಾಕೆಟ್ ಆಗಿದೆ ಎಂದು ಡಾ ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು. ರಾಕೆಟ್ ಗರಿಷ್ಠ 81.5 ಕಿಲೋಮೀಟರ್ ಎತ್ತರಕ್ಕೆ ಹೋಗುತ್ತದೆ ಮತ್ತು ಸಮುದ್ರಕ್ಕೆ ಧುಮುಕುತ್ತದೆ ಮತ್ತು ಉಡಾವಣೆಯ ಒಟ್ಟಾರೆ ಅವಧಿಯು ಸುಮಾರು 300 ಸೆಕೆಂಡುಗಳು ಮಾತ್ರ ಎಂದು ಹೇಳಿದರು.

ಸ್ಕೈರೂಟ್ ತನ್ನ ರಾಕೆಟ್ಗಳನ್ನು ಉಡಾವಣೆ ಮಾಡಲು ಇಸ್ರೋದೊಂದಿಗೆ ತಿಳುವಳಿಕೆ ಪತ್ರಕ್ಕೆ   ಸಹಿ ಹಾಕಿದ ಮೊದಲ ನವೋದ್ಯಮ  ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ರಾಷ್ಟ್ರದ ಮೊದಲ ಖಾಸಗಿ ಉಡಾವಣೆ ಮಾತ್ರವಲ್ಲದೆ, ಇದು ಸ್ಕೈರೂಟ್ ಏರೋಸ್ಪೇಸ್ನ ಮೊದಲ ಮಿಷನ್ ಆಗಿದೆ, ಇದನ್ನು "ಪ್ರಾರಂಭ್" ಎಂದು ಹೆಸರಿಸಲಾಗಿದೆ.

ಮಿಷನ್ ಪ್ರಾರಂಭ್ ಯಶಸ್ವಿಯಾಗಿ ನೆರವೇರಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ, ಸ್ಕೈರೂಟ್ ಏರೋಸ್ಪೇಸ್ ವಿಕ್ರಮ್-ಎಸ್ ಆಕಾಶವನ್ನು ಅಲಂಕರಿಸಿದ ಭಾರತದ ಮೊದಲ ಖಾಸಗಿ ರಾಕೆಟ್ ಎಂದು ಇತಿಹಾಸವನ್ನು ನಿರ್ಮಿಸುತ್ತದೆ ಎಂದು ಹೇಳಿದೆ. ಇದು ವಿದೇಶಿ ಗ್ರಾಹಕರದೊಂದು ಸೇರಿದಂತೆ ಒಟ್ಟು ಮೂರು ಪೇಲೋಡ್ಗಳನ್ನು ಬಾಹ್ಯಾಕಾಶದಲ್ಲಿ ಸಾಗಿಸಿತು.

ನಂತರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಡಾ.ಜಿತೇಂದ್ರ ಸಿಂಗ್, ಇಸ್ರೋದ ಮೊದಲ ಅಧ್ಯಕ್ಷರು ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಸಂಸ್ಥಾಪಕ ಡಾ.ವಿಕ್ರಮ್ ಸಾರಾಭಾಯ್ ಅವರು ತಮ್ಮ ಮೊತ್ತ ಮೊದಲ  ವೈಜ್ಞಾನಿಕ ವ್ಯವಸ್ಥೆಯಲ್ಲಿ ಕುಳಿತು ಕಂಡ ಭಾರತದ ಮಹತ್ವಾಕಾಂಕ್ಷೆಯ ಕನಸು ಇಂದು ಅದ್ಭುತವಾಗಿ ಸಾಬೀತಾಗಿದೆ ಎಂದು ಹೇಳಿದರು.

ಡಾ.ವಿಕ್ರಮ್ ಸಾರಾಭಾಯ್ ಅವರು "ರಾಷ್ಟ್ರೀಯವಾಗಿ" ಇಸ್ರೋ ಅರ್ಥಪೂರ್ಣ ಪಾತ್ರವನ್ನು ವಹಿಸಬೇಕೆಂದು ಯಾವಾಗಲೂ ಒತ್ತಾಯಿಸುತ್ತಿದ್ದರು ಎಂದು ಡಾ ಜಿತೇಂದ್ರ ಸಿಂಗ್ ಸ್ಮರಿಸಿದರು ಮತ್ತು ಪ್ರಧಾನಮಂತ್ರಿ ಮೋದಿ ನೇತೃತ್ವದ ಸರ್ಕಾರದ ಎಂಟು ವರ್ಷಗಳ ಅವಧಿಯಲ್ಲಿ, ಭಾರತದ ಯುವ ಪ್ರತಿಭೆಗಳು, ಉತ್ಸಾಹದಿಂದ, ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ವೇದಿಕೆಗಾಗಿ  ಕಾಯುತ್ತಿದ್ದವು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಹೇಳಿದರು.  ಭಾರತವು ಯಾವಾಗಲೂ ಅಪಾರ  ಪ್ರತಿಭೆಗಳ ಸಂಗ್ರಹವನ್ನು ಹೊಂದಿದೆ ಮತ್ತು ದೊಡ್ಡ ಕನಸು ಕಾಣುವ ಉತ್ಸಾಹವನ್ನು ಹೊಂದಿದೆ, ಕಡೆಗೆ ಮೋದಿಯವರು ಅವುಗಳಿಗೆ  ಪರಿಪೂರ್ಣವಾದ ದಾರಿ ನೀಡಿದರು.

ಡಾ ಜಿತೇಂದ್ರ ಸಿಂಗ್ ಅವರು, ಬಾಹ್ಯಾಕಾಶ ಸುಧಾರಣೆಗಳು ನವೋದ್ಯಮ (ಸ್ಟಾರ್ಟ್ಅಪ್)ಗಳ ನವೀನ ಸಾಮರ್ಥ್ಯಗಳನ್ನು ಅನಾವರಣಗೊಳಿಸಿವೆ ಮತ್ತು ಮೂರು-ನಾಲ್ಕು ವರ್ಷಗಳ ಹಿಂದೆ ಒಂದೆರಡು ಸ್ಪೇಸ್ ಸ್ಟಾರ್ಟ್-ಅಪ್ಗಳಿಂದ ಅಲ್ಪಾವಧಿಯಲ್ಲಿಯೇ, ಇಂದು ನಾವು  ಬಾಹ್ಯಾಕಾಶದಲ್ಲಿನ  ತ್ಯಾಜ್ಯಗಳ ನಿರ್ವಹಣೆ, ನ್ಯಾನೊ-ಉಪಗ್ರಹ, ಉಡಾವಣಾ ವಾಹನ, ಭೂಮಟ್ಟದಲ್ಲಿನ ವ್ಯವಸ್ಥೆಗಳು, ಸಂಶೋಧನೆ ಇತ್ಯಾದಿಗಳಲ್ಲಿ 102 ಸ್ಟಾರ್ಟ್ಅಪ್ಗಳು ಬಾಹ್ಯಾಕಾಶದ ಅತ್ಯಾಧುನಿಕ ತಂತ್ರಜ್ಙಾನದೊಂದಿಗೆ ಕಾರ್ಯನಿರ್ವಹಿಸುತ್ತಿವೆ.

ಭಾರತದ ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ ಸಾಮರ್ಥ್ಯಗಳಿಗೆ ಸಾರ್ವತ್ರಿಕ ಮನ್ನಣೆಯನ್ನು ಗಳಿಸಲು ಪ್ರಧಾನಮಂತ್ರಿ ಮೋದಿಯವರು ಭಾರತವನ್ನು ಸಕ್ರಿಯಗೊಳಿಸಿದ್ದಾರೆ ಮತ್ತು ನಮ್ಮ ನವೋದ್ಯಮಗಳು ಹೆಚ್ಚು ಬೇಡಿಕೆಯಲ್ಲಿವೆ ಎಂದು ಸಚಿವರು ಒತ್ತಿ ಹೇಳಿದರು. ಇಡೀ ಜಗತ್ತು ಭಾರತವನ್ನು ಸ್ಪೂರ್ತಿದಾಯಕ ಸ್ಥಳವಾಗಿ ನೋಡುತ್ತಿದೆ, ಏಕೆಂದರೆ ಇದು ನ್ಯಾನೊಸಾಟಲೈಟ್ಗಳು ಸೇರಿದಂತೆ ಸಾಮರ್ಥ್ಯ ವರ್ಧನೆ ಮತ್ತು ಉಪಗ್ರಹ ನಿರ್ಮಾಣದಲ್ಲಿ ಉದಯೋನ್ಮುಖ ದೇಶಗಳಿಗೆ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.

****



(Release ID: 1877107) Visitor Counter : 250