ಬುಡಕಟ್ಟು ವ್ಯವಹಾರಗಳ ಸಚಿವಾಲಯ

ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ಸೊಸೈಟಿ(NESTS) ಮತ್ತು 1ಎಂ1ಬಿ ಫೌಂಡೇಶನ್ ಏಕಲವ್ಯ ಮಾದರಿ ವಸತಿ ಶಾಲೆಗಳ(EMRSs) ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಒಪ್ಪಂದಕ್ಕೆ ಸಹಿ 

Posted On: 18 NOV 2022 2:10PM by PIB Bengaluru

 

•    ಆಗ್ಮೆಂಟೆಡ್ ರಿಯಾಲಿಟಿ (AR) ಮತ್ತು ವರ್ಚುವಲ್ ರಿಯಾಲಿಟಿ (VR) ಕೌಶಲ್ಯಗಳ ಕ್ಷೇತ್ರದಲ್ಲಿ ತರಬೇತಿ ನೀಡುತ್ತದೆ.
•    ಪ್ರಾಯೋಗಿಕ ಹಂತದಲ್ಲಿ, ಒಪ್ಪಂದದ ಭಾಗವಾಗಿ, 2 ರಾಜ್ಯಗಳ- ರಾಜಸ್ಥಾನ ಮತ್ತು ಉತ್ತರಾಖಂಡ್‌ಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.

ನವೆಂಬರ್ 18, ಪಿಐಬಿ ದೆಹಲಿ:  ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆ ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸೊಸೈಟಿ(NESTS) ಮತ್ತು 1ಎಂ1ಬಿ - 1 ಮಿಲಿಯನ್ 1 ಬಿಲಿಯನ್ ಫೌಂಡೇಶನ್(1M1B) ದೆಹಲಿಯ NESTS ಕೇಂದ್ರ ಕಚೇರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ. ನೆಸ್ಟ್ಸನ ಆಯುಕ್ತ ಶ್ರೀ ಅಸಿತ್ ಗೋಪಾಲ್ ಮತ್ತು 1ಎಂ1ಬಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಮಾನವ್ ಸುಬೋದ್ ಅವರು 1ಎಂ1ಬಿ ಮತ್ತು ನೆಸ್ಟ್ಸ್ ತಂಡದ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.


ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಿಬಿಎಸ್ ಇ ಆರಂಭಿಸಿದ ಪಠ್ಯಕ್ರಮ ಆಗ್ಮೆಂಟೆಡ್ ರಿಯಾಲಿಟಿ(AR) ಮತ್ತು ವರ್ಚುವಲ್ ರಿಯಾಲಿಟಿ(VR) ಕೌಶಲ್ಯಗಳನ್ನು ಬಳಸಿಕೊಂಡು ಅದರಲ್ಲಿ ತರಬೇತಿ ನೀಡಿ ಸಾಮರ್ಥ್ಯ ಹೆಚ್ಚಿಸಲಿದೆ. ಕಾರ್ಯಕ್ರಮದ ಉದ್ದೇಶಗಳು ಏಕಲವ್ಯ ಮಾದರಿ ವಸತಿ ಶಾಲೆಗಳ (EMRS) ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಸಾಮರ್ಥ್ಯ-ವರ್ಧನೆಯ ಕಾರ್ಯಕ್ರಮಗಳನ್ನು ಒಳಗೊಂಡಿವೆ. ಪ್ರಾಯೋಗಿಕ ಹಂತದಲ್ಲಿ, ಒಪ್ಪಂದದ ಭಾಗವಾಗಿ, 2 ರಾಜ್ಯಗಳಾದ ರಾಜಸ್ಥಾನ ಮತ್ತು ಉತ್ತರಾಖಂಡ್‌ಗಳ ಏಕಲವ್ಯ ಮಾದರಿ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ.

1 ಮಿಲಿಯನ್ 1 ಬಿಲಿಯನ್ (1M1B), ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆಯಾಗಿದ್ದು, ವಿಶ್ವಸಂಸ್ಥೆಯ ಮಾನ್ಯತೆ ಪಡೆದಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಗೆ (ECOSOC) ವಿಶೇಷ ಸಲಹಾ ಸ್ಥಾನಮಾನವನ್ನು ಹೊಂದಿದೆ. ಇದು ವಿಶ್ವಸಂಸ್ಥೆಯ ಜಾಗತಿಕ ಸಂವಹನ ಇಲಾಖೆಯೊಂದಿಗೆ ಮತ್ತು ನೀತಿ ಆಯೋಗದ NGO ದರ್ಪಣ್ ಪೋರ್ಟಲ್‌ನೊಂದಿಗೆ ನೋಂದಾಯಿತ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಇದು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ (SDGs) ಜೊತೆ ಸಂಪರ್ಕಿಸಲಾದ ಸಾಮಾಜಿಕ ನಾವೀನ್ಯ ಮತ್ತು ಭವಿಷ್ಯದ ಕೌಶಲ್ಯ ಉಪಕ್ರಮವಾಗಿದೆ.

NESTS ಅನುಷ್ಠಾನ ಸಂಸ್ಥೆ, 1M1B ಸಹಭಾಗಿತ್ವದಲ್ಲಿ EMRS ನ ವಿದ್ಯಾರ್ಥಿಗಳನ್ನು ರಾಷ್ಟ್ರ-ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉದಯೋನ್ಮುಖ ತಂತ್ರಜ್ಞಾನಗಳು ನೀಡುವ ಸಾಧ್ಯತೆಗಳ ಜಗತ್ತನ್ನು ಅರ್ಥಮಾಡಿಕೊಳ್ಳಲು, ವರ್ಧಿತ ರಿಯಾಲಿಟಿ (AR) ಮತ್ತು ವರ್ಚುವಲ್ ರಿಯಾಲಿಟಿ (VR) ನ್ನು ಬಳಸಿಕೊಂಡು ಭಾರತದ ಕಂಪ್ಯೂಟರ್-ರಚಿತ ಪರಿಸರ ಮತ್ತು ಇತರ ಬಳಕೆದಾರರೊಂದಿಗೆ ಸಂವಹನ ನಡೆಸಬಹುದಾದ ವರ್ಚುವಲ್-ರಿಯಾಲಿಟಿ Metaverse ನ್ನು ಸೃಷ್ಟಿಸಲು ಅನುವು ಮಾಡಿಕೊಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ-NEP 2020ಕ್ಕೆ ಹೊಂದಿಕೆಯಾಗುವಂತೆ,  ಈ ಸಹಯೋಗವು EMRS ನ ವಿದ್ಯಾರ್ಥಿಗಳಿಗೆ ದೃಶ್ಯ ಮತ್ತು ಅನುಭವದ ಕಲಿಕೆಗೆ ದೀರ್ಘಕಾಲಕ್ಕೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದು ರಾಷ್ಟ್ರಕ್ಕೆ ಮಾನವ ಮೂಲಸೌಕರ್ಯ ಸಂಪನ್ಮೂಲವನ್ನು ಹೆಚ್ಚಿಸುತ್ತದೆ.

*****



(Release ID: 1877102) Visitor Counter : 117


Read this release in: English , Urdu , Hindi , Tamil , Telugu