ಪರಿಸರ ಮತ್ತು ಅರಣ್ಯ ಸಚಿವಾಲಯ

ಸಿಒಪಿ- 27 ರಲ್ಲಿ “ಅಭಿವೃದ್ಧಿಶೀಲ ಸಣ್ಣ ದ್ವೀಪ ರಾಷ್ಟ್ರಗಳಲ್ಲಿ (ಎಸ್‌ ಐ ಡಿ ಎಸ್) ವೇಗವರ್ಧಿತ ಸ್ಥಿತಿಸ್ಥಾಪಕ ಮೂಲಸೌಕರ್ಯ” ಕುರಿತ ಅಧಿವೇಶನದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ಭಾಗವಹಿಸಿದರು

Posted On: 17 NOV 2022 2:00PM by PIB Bengaluru

ಮುಖ್ಯಾಂಶಗಳು:

'ದ್ವೀಪ ರಾಷ್ಟ್ರಗಳಿಗೆ ವಿಪತ್ತು ತಾಳಿಕೆಯ ಮೂಲಸೌಕರ್ಯ' (ಐಆರ್‌ಐಎಸ್‌) ದೃಷ್ಟಿಕೋನವನ್ನು ಪ್ರಸ್ತುತಪಡಿಸಲಾಯಿತು.

ಐಆರ್‌ಐಎಸ್‌ಅಡಿಯಲ್ಲಿ ಯೋಜನೆಗಳನ್ನು ಆರಂಭಿಸಲು ಮೊದಲ 'ಪ್ರಸ್ತಾವನೆಗಳಿಗೆ ಕರೆ' ಘೋಷಿಸಲಾಯಿತು.

ಐಆರ್‌ಐಎಸ್‌ ಭಾರತದ ಲೈಫ್ ಉಪಕ್ರಮದ ತತ್ವವನ್ನು ಪ್ರತಿಪಾದಿಸುತ್ತದೆ.

ಸಿಒಪಿ- 27 ರಲ್ಲಿ ಇಂದು ಯು ಎನ್‌ ಎಫ್‌ಸಿಸಿಸಿ ಪೆವಿಲಿಯನ್‌ನಲ್ಲಿ ಅಭಿವೃದ್ಧಿಶೀಲ ಸಣ್ಣ ದ್ವೀಪ ರಾಷ್ಟ್ರಗಳಲ್ಲಿ (ಎಸ್‌ಐಡಿಎಸ್) ವೇಗವರ್ಧಿತ ಸ್ಥಿತಿಸ್ಥಾಪಕ ಮೂಲಸೌಕರ್ಯ ಕುರಿತು ಅಧಿವೇಶನ ನಡೆಯಿತು. ಭಾರತದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್, ಮಾರಿಷಸ್ ನ ಪರಿಸರ, ಘನ ತ್ಯಾಜ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಕಾವಿಡಾಸ್‌ ರಾಮನೋ, ಜಮೈಕಾದ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ ಸಚಿವಾಲಯದ ಸೆನೆಟರ್ ಮ್ಯಾಥ್ಯೂ ಸಮುದಾ ಮತ್ತು ಎಒಎಸ್‌ಐಎಸ್‌ ಹಾಗೂ ಫಿಜಿಯ ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸಿದ್ದರು.

ಈ ಅಧಿವೇಶನದ ಕಾರ್ಯಸೂಚಿಯು ಐಆರ್‌ಐಎಸ್‌ ದೃಷ್ಟಿಕೋನವನ್ನು ಪ್ರಸ್ತುತಪಡಿಸುವುದು ಮತ್ತು ಮೊದಲ 'ಪ್ರಸ್ತಾವನೆಗಳಿಗಾಗಿ ಕರೆ' ಘೋಷಿಸುವುದಾಗಿತ್ತು. ಅಧಿವೇಶನವು ಐಆರ್‌ಐಎಸ್‌ದೃಷ್ಟಿಕೋನ 2022-2030 ಮೇಲೆ ಕೇಂದ್ರೀಕರಿಸಿತು ಮತ್ತು ಮೊದಲ 'ಪ್ರಸ್ತಾವನೆಗಳಿಗೆ ಕರೆ' ಅಡಿಯಲ್ಲಿ ಐಆರ್‌ಐಎಸ್‌ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗುವ ಪ್ರಮುಖ ಅಂಶಗಳ ಮೇಲೆ ಚರ್ಚಿಸಿತುತು. ಕಳೆದ ವಾರ ಸಿಒಪಿ 27 ರಲ್ಲಿ ವಿಪತ್ತು ತಾಳಿಕೆ ಮೂಲಸೌಕರ್ಯ (ಸಿಡಿಆರ್ಐ) ಒಕ್ಕೂಟದಿಂದ ಪ್ರಾರಂಭಿಸಲಾದ ಮೂಲಸೌಕರ್ಯ ಸ್ಥಿತಿಸ್ಥಾಪಕತ್ವ ವೇಗವರ್ಧಕ ನಿಧಿಯ (ಐಆರ್‌ಎಎಫ್) ಮೂಲಕ ಹೊರತರಲಾಗುವ ಮೊದಲ ಉಪಕ್ರಮ ಐಆರ್‌ಐಎಸ್‌ ಆಗಿದೆ.

ತಮ್ಮ ಮುಖ್ಯ ಭಾಷಣದಲ್ಲಿ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಹೇಳಿದ್ದು:

“ಜಾಗತಿಕ ಪ್ರೇಕ್ಷಕರಿಗೆ 'ದ್ವೀಪ ರಾಷ್ಟ್ರಗಳಿಗೆ ಸ್ಥಿತಿಸ್ಥಾಪಕ ಮೂಲಸೌಕರ್ಯ' (ಐಆರ್‌ಐಎಸ್‌) ದೃಷ್ಟಿಕೋನವನ್ನು ಪ್ರಸ್ತುತಪಡಿಸಲು ಮತ್ತು ಐಆರ್‌ಐಎಸ್‌ಅಡಿಯಲ್ಲಿ ಯೋಜನೆಗಳನ್ನು ಆರಂಭಿಸಲು ರೋ ಮೊದಲ ‘ಪ್ರಸ್ತಾವನೆಗಳಿಗೆ ಕರೆ’ಯಅನ್ನು ಘೋಷಿಸಲು ಇಂದು ನಿಮ್ಮೆಲ್ಲರೊಂದಿಗೆ ಇರುವುದು ನನಗೆ ಸಂತೋಷ ತಂದಿದೆ.
ನಿಮಗೆಲ್ಲರಿಗೂ ತಿಳಿದಿರುವಂತೆ, ಐಆರ್‌ಐಎಸ್‌ ಒಂದು ಪ್ರಮುಖ ಕಾರ್ಯತಂತ್ರದ ಉಪಕ್ರಮವಾಗಿದ್ದು, ಎಸ್‌ಐಡಿಎಸ್‌ ಗೆ ಸ್ಥಿತಿಸ್ಥಾಪಕತ್ವ ಮತ್ತು ಹವಾಮಾನ ಹೊಂದಾಣಿಕೆಯ ಪರಿಹಾರಗಳನ್ನು ಅತ್ಯಂತ ದುರ್ಬಲ ಮತ್ತು ಅಪಾಯದ ದೇಶಗಳಲ್ಲಿ ಸಾಧಿಸಲು ಮತ್ತು ತಲುಪಿಸಲು ಸಾಧನವಾಗಿ ವಿನ್ಯಾಸಗೊಳಿಸಲಾಗಿದೆ.

ಸಹ-ಸೃಷ್ಟಿ ಮತ್ತು ಪೂರಕತೆಯ ಪ್ರಮುಖ ಮಾರ್ಗದರ್ಶಿ ತತ್ವಗಳನ್ನು ಆಧರಿಸಿರುವ ಐಆರ್‌ಐಎಸ್‌ ಅನ್ನು ಸಿಒಪಿ 26 ರಲ್ಲಿ ಭಾರತ, ಬ್ರಿಟನ್, ಆಸ್ಟ್ರೇಲಿಯಾ, ಜಮೈಕಾ, ಮಾರಿಷಸ್ ಮತ್ತು ಫಿಜಿ ರಾಷ್ಟ್ರಗಳ ವಿಶ್ವ ನಾಯಕರ ಶೃಂಗಸಭೆಯಲ್ಲಿ ಪ್ರಾರಂಭಿಸಲಾಯಿತು. ಇದು ಎಸ್‌ಐಡಿಎಸ್‌ ನಲ್ಲಿ ಮೂಲಸೌಕರ್ಯ ಸ್ಥಿತಿಸ್ಥಾಪಕತ್ವಕ್ಕೆ ಪರಿಹಾರಗಳನ್ನು ಕುರಿತ ಪರಸ್ಪರ ಕಲಿಕೆ, ಹಂಚಿಕೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಸುಲಭಗೊಳಿಸುವ ಜಂಟಿ ವೇದಿಕೆಯಾಗಿದೆ.‌

ಮಹಿಳೆಯರೇ ಮತ್ತು ಮಹನೀಯರೇ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಬದಲಾಗುತ್ತಿರುವ ಹವಾಮಾನ ಸನ್ನಿವೇಶದಲ್ಲಿ ಎಸ್‌ಐಡಿಎಸ್‌ ನ ಹಿತಾಸಕ್ತಿಗಳನ್ನು ಕಾಪಾಡಲು ಬದ್ಧವಾಗಿದೆ.

ಹವಾಮಾನ ಬದಲಾವಣೆಯು ಇತರ ಎಲ್ಲಾ ಪರಿಸರ ಸವಾಲುಗಳಲ್ಲಿ ಅತ್ಯಂತ ಪ್ರಮುಖವಾದುದು ಎಂದು ನಮಗೆ ತಿಳಿದಿದೆ. ಸಂಚಿತ ಹೊರಸೂಸುವಿಕೆಯ ನಿಯಂತ್ರಣವಿಲ್ಲದೆ, ಇತರ ಪರಿಸರ ಸವಾಲುಗಳಲ್ಲಿ ಯಶಸ್ಸು ಸಾಧಿಸಿದರೂ ಸಹ, ಅವುಗಳು ಶಾಶ್ವತ ಮೌಲ್ಯವನ್ನು ಹೊಂದಿರುವುದಿಲ್ಲ.
ಹವಾಮಾನ ಬದಲಾವಣೆಯ ಕುರಿತು ದೇಶೀಯ ಕ್ರಮ ಮತ್ತು ಬಹುಪಕ್ಷೀಯ ಸಹಕಾರ ಎರಡಕ್ಕೂ ಭಾರತ ಬದ್ಧವಾಗಿದೆ. ಮನುಕುಲದ ಗ್ರಹವನ್ನು ರಕ್ಷಿಸುವ ಕರೆಯಲ್ಲಿ ನಾವು ಎಲ್ಲ ಜಾಗತಿಕ ಪರಿಸರ ಕಳವಳಗಳ ವಿರುದ್ಧ ಹೋರಾಡುವುದನ್ನು ಮುಂದುವರಿಸುತ್ತೇವೆ. ಆದರೆ ಜಾಗತಿಕ ತಾಪಮಾನ ಏರಿಕೆಯು ಸಮಾನ ಮತ್ತು ಅಂತಾರಾಷ್ಟ್ರೀಯ ಸಹಕಾರ, ಯಾರನ್ನೂ ಹಿಂದೆ ಬಿಡದಿರುವುದು, ಮತ್ತು ಅತ್ಯಂತ ಅದೃಷ್ಟವಂತ ರಾಷ್ಟ್ರಗಳು ಮುನ್ನಡೆಸುವಂತಾಗಬೇಕು ಎಂಬ ಎಚ್ಚರಿಕೆಯನ್ನು ನಮಗೆ ನೀಡಿದೆ. ಈ ಪ್ರಯಾಣವನ್ನು ಯಾವುದೇ ರಾಷ್ಟ್ರವು ಏಕಾಂಗಿಯಾಗಿ ಕೈಗೊಳ್ಳಲು ಸಾಧ್ಯವಿಲ್ಲ. ಸರಿಯಾದ ತಿಳಿವಳಿಕೆ, ಸರಿಯಾದ ಚಿಂತನೆ ಮತ್ತು ಸಹಕಾರ ಕ್ರಿಯೆ - ಇವು ಮುಂದಿನ ನಿರ್ಣಾಯಕ ಅರ್ಧ ಶತಮಾನದ ನಮ್ಮ ಹಾದಿಯನ್ನು ಸುಗಮಗೊಳಿಸಬೇಕಾಗಿದೆ.

ಸ್ನೇಹಿತರೇ,

ತಾಪಮಾನ ಏರಿಕೆಗೆ ಇಂಗಾಲದ  ಸಂಚಿತ ಹೊರಸೂಸುವಿಕೆಯ ಕೊಡುಗೆಯು ನೇರವಾಗಿ ಜವಾಬ್ದಾರಿಯಾಗಿದೆ ಎಂದು ಐಪಿಸಿಸಿಯ ಎಆರ್‌ 6 ವರದಿಗಳು ನಮಗೆ ಸ್ಪಷ್ಟವಾಗಿ ಹೇಳುತ್ತವೆ. ಎಲ್ಲಾ ಇಂಗಾಲ ಹೊರಸೂಸುವಿಕೆಗಳು, ತಾಪಮಾನ ಏರಿಕೆಗೆ ಸಮಾನವಾಗಿ ಕೊಡುಗೆ ನೀಡುತ್ತವೆ.
ಐಪಿಸಿಸಿ ವರದಿಗಳು ಮತ್ತು ಲಭ್ಯವಿರುವ ಎಲ್ಲ ಇತರ ಅತ್ಯುತ್ತಮ ವಿಜ್ಞಾನವು ಹವಾಮಾನ ಬದಲಾವಣೆಗೆ ಹೆಚ್ಚಿನ ಅಪಾಯವನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಸಹ ಇದೆ ಎಂದು ತೋರಿಸುತ್ತದೆ. ಆದ್ದರಿಂದ, ದ್ವೀಪ ರಾಷ್ಟ್ರಗಳು ಮತ್ತು ಇತರರ ಪರಿಸ್ಥಿತಿಯ ಬಗ್ಗೆ ನಾವು ತುಂಬಾ ಸಹಾನುಭೂತಿ ಹೊಂದಿದ್ದೇವೆ. ಭಾರತವು 7500 ಕಿಲೋಮೀಟರ್‌ಗಿಂತಲೂ ಹೆಚ್ಚು ಕರಾವಳಿ ಮತ್ತು ಸುತ್ತಮುತ್ತಲಿನ ಸಮುದ್ರಗಳಲ್ಲಿ 1000 ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿದೆ ಮತ್ತು ಜೀವನ ಮತ್ತು ಜೀವನೋಪಾಯಕ್ಕಾಗಿ ಸಮುದ್ರವನ್ನು ಅವಲಂಬಿಸಿರುವ ಕರಾವಳಿಯ ಬೃಹತ್‌  ಜನಸಂಖ್ಯೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚು ಅಪಾಯದ ರಾಷ್ಟ್ರವಾಗಿದೆ. ಕೇವಲ ಒಂದು ಉದಾಹರಣೆ ನೀಡುವುದಾರೆ, 1995 - 2020 ರ ನಡುವೆ ಭಾರತವು 1058 ಹವಾಮಾನ ವಿಪತ್ತು ಘಟನೆಗಳಿಗೆ ಸಾಕ್ಷಿಯಾಗಿದೆ.

ತಲಾವಾರು ಹೊರಸೂಸುವಿಕೆಯನ್ನು ಪರಿಗಣಿಸಿದರೆ, ವಸ್ತುನಿಷ್ಠ ಪ್ರಮಾಣದ ಹೋಲಿಕೆಯಲ್ಲಿ ಭಾರತದ ಹೊರಸೂಸುವಿಕೆಗಳು ಇಂದಿಗೂ ಸಹ, ಜಾಗತಿಕ ಸರಾಸರಿಯ ಸುಮಾರು ಮೂರನೇ ಒಂದು ಭಾಗವಾಗಿದೆ. ಇಡೀ ಪ್ರಪಂಚದಲ್ಲಿ ಭಾರತದಲ್ಲಿರುವಂತೆ ತಲಾವಾರು ಮಟ್ಟದ ಹೊರಸೂಸುವಿಕೆ ಇದ್ದರೆ, ಹವಾಮಾನ ಬಿಕ್ಕಟ್ಟು ಇರುವುದಿಲ್ಲ ಎಂದು ವಿಜ್ಞಾನ ಹೇಳುತ್ತದೆ.

ಇಂದಿನ ಸಭೆಯು ಐಆರ್‌ಐಎಸ್‌ ಯೋಜನೆಗಳನ್ನು ಅನುಷ್ಠಾನಗೊಳಿಸುವ ದೀರ್ಘಾವಧಿಯ ದೃಷ್ಟಿಕೋನದ ಮೇಲೆ ಕೇಂದ್ರೀಕರಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ಇಲ್ಲಿ ನಿರ್ಧರಿಸಿದ ದೃಷ್ಟಿಕೋನವು ಸಂಪನ್ಮೂಲಗಳು ಮತ್ತು ಸಾಮರ್ಥ್ಯಗಳನ್ನು ಸಮನ್ವಯಗೊಳಿಸುವ ಮೂಲಕ ಎಸ್‌ಐಡಿಎಸ್‌ ಗೆ ಅವರ ಅತ್ಯಂತ ಪ್ರಮುಖ ಮೂಲಸೌಕರ್ಯ ಸವಾಲುಗಳನ್ನು ಪರಿಹರಿಸಲು ಅವಕಾಶವನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ.

ಮಹಿಳೆಯರೇ ಮತ್ತು ಮಹನೀಯರೇ, ಐಆರ್‌ಐಎಸ್‌ ಮೂಲಕ, ಭಾರತವು ವಸುಧೈವ ಕುಟುಂಬಕಂ - ಜಗತ್ತು ಒಂದು ಕುಟುಂಬ- ಎಂಬ ತನ್ನ ನಂಬಿಕೆಯನ್ನು ಕಾರ್ಯರೂಪಕ್ಕೆ ತರುತ್ತಿದೆ ಮತ್ತು ಭೂಮಿಯನ್ನು ಎಲ್ಲರಿಗೂ ಉತ್ತಮ ಮತ್ತು ಸುರಕ್ಷಿತ ಗ್ರಹವನ್ನಾಗಿ ಮಾಡಲು ಪಾಲುದಾರರೊಂದಿಗೆ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸಲು ತನ್ನ ಬದ್ಧತೆಯನ್ನು ತೋರಿಸುತ್ತದೆ.

ಕೊನೆಯಲ್ಲಿ, ಐಆರ್‌ಐಎಸ್‌ನ ಸಾರವನ್ನು ಪರಿಣಾಮಕಾರಿಯಾಗಿ ತಿಳಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾತನ್ನು ಉಲ್ಲೇಖಿಸಿ ನನ್ನ ಮಾತು ಮುಕ್ತಾಯಗೊಳಿಸಲು ಬಯಸುತ್ತೇನೆ.

“ಸಿಡಿಆರ್‌ಐ ಅಥವಾ ಐಆರ್‌ಐಎಸ್‌ಕೇವಲ ಮೂಲಸೌಕರ್ಯ ಕುರಿತ ವಿಷಯವಲ್ಲ, ಬದಲಿಗೆ ಇದು ಮಾನವ ಕಲ್ಯಾಣದ ಅತ್ಯಂತ ಸೂಕ್ಷ್ಮ ಜವಾಬ್ದಾರಿಯ ಭಾಗವಾಗಿದೆ. ಇದು ಮನುಕುಲದ ಕಡೆಗೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಇದು ಒಂದು ರೀತಿಯಲ್ಲಿ ನಮ್ಮ ಪಾಪಗಳಿಗೆ ಸಾಮಾನ್ಯ ಪ್ರಾಯಶ್ಚಿತ್ತವಾಗಿದೆ”

ಸಿ ಡಿ ಆರ್‌ ಐ ಮತ್ತು ಐ ಆರ್‌ ಐ ಎಸ್‌ ಬಗ್ಗೆ
ವಿಪತ್ತು ತಾಳಿಕೆ ಮೂಲಸೌಕರ್ಯಗಳ ಒಕ್ಕೂಟ (ಸಿಡಿಆರ್‌ಐ) ಕ್ಕೆ ಗೌರವಾನ್ವಿತ ಪ್ರಧಾನ ಮಂತ್ರಿಯವರು ಸೆಪ್ಟೆಂಬರ್ 2019 ರಲ್ಲಿ ನ್ಯೂಯಾರ್ಕ್‌ನಲ್ಲಿ ಚಾಲನೆ ನೀಡಿದರು. ಸುಸ್ಥಿರ ಅಭಿವೃದ್ಧಿಗೆ ಬೆಂಬಲವಾಗಿ ಹವಾಮಾನ ಮತ್ತು ವಿಪತ್ತು ಅಪಾಯಗಳಿಗೆ ಹೊಸ ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯ ವ್ಯವಸ್ಥೆಗಳಲ್ಲಿ ತಾಳಿಕೆಯನ್ನು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ. ಮೂಲಭೂತ ಸೇವೆಗಳಿಗೆ ಸಾರ್ವತ್ರಿಕ ಪ್ರವೇಶವನ್ನು ವಿಸ್ತರಿಸುವ, ಸಮೃದ್ಧಿ ಮತ್ತು ಯೋಗ್ಯವಾದ ಕೆಲಸವನ್ನು ಸಕ್ರಿಯಗೊಳಿಸುವ ಸುಸ್ಥಿರ ಅಭಿವೃದ್ಧಿ ಗುರಿಗಳ ಅಗತ್ಯಗಳಿಗೆ ಪ್ರತಿಕ್ರಿಯಿಸಲು ಸಿಡಿಆರ್‌ಐ ತಾಳಿಕೆ ಮೂಲಸೌಕರ್ಯದ ತ್ವರಿತ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.

ಐಆರ್‌ಐಎಸ್‌ನ ವಿನ್ಯಾಸದ ಹಂತದಿಂದಲೂ ಅದರ ರಚನೆ ಮತ್ತು ಕಾರ್ಯಾಚರಣೆಯಲ್ಲಿ ಒಕ್ಕೂಟವನ್ನು ಭಾರತ ಸರ್ಕಾರ ಬೆಂಬಲಿಸಿದೆ. ಐಆರ್‌ಐಎಸ್‌ ಮೂಲಕ, ಭಾರತ ಸರ್ಕಾರವು ತಮ್ಮ ಹೊಸ ಮತ್ತು ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ವಿಪತ್ತು ಮತ್ತು ಹವಾಮಾನ ಅಪಾಯಗಳಿಗೆ ಸ್ಥಿತಿಸ್ಥಾಪಕವಾಗಿಸಲು ಜಗತ್ತಿನಾದ್ಯಂತ ಎಸ್‌ಐಡಿಎಸ್‌  ಅನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ.

For more information on IRIS click here

****



(Release ID: 1876806) Visitor Counter : 148