ಪರಿಸರ ಮತ್ತು ಅರಣ್ಯ ಸಚಿವಾಲಯ

ಭಾರತವು ತನ್ನ ದೀರ್ಘಾವಧಿಯ ಕಡಿಮೆ ಹೊರಸೂಸುವಿಕೆ ಅಭಿವೃದ್ಧಿ ಕಾರ್ಯತಂತ್ರವನ್ನುಹವಾಮಾನ ಬದಲಾವಣೆಯ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶ-(UNFCCC)ಗೆ ಮಂಡಿಸಿದೆ


ಈ ಕಾರ್ಯತಂತ್ರದ ಬಿಡುಗಡೆಯೊಂದಿಗೆ, ಯುಎನ್‌ಎಫ್‌ಸಿಸಿಸಿಗೆ ತಮ್ಮ ದೀರ್ಘಾವಧಿಯ ಕಡಿಮೆ ಹೊರಸೂಸುವಿಕೆ ಮತ್ತು ಅಭಿವೃದ್ಧಿ ತಂತ್ರಗಳ-(LT LEDS)ನ್ನು ಸಲ್ಲಿಸಿದ 60 ಕ್ಕಿಂತ ಕಡಿಮೆ ದೇಶಗಳ ಆಯ್ದ ಪಟ್ಟಿಗೆ ಭಾರತ ಸೇರಿದೆ. 

Posted On: 14 NOV 2022 4:46PM by PIB Bengaluru

ಭಾರತವು ತನ್ನ ದೀರ್ಘಾವಧಿಯ ಕಡಿಮೆ ಹೊರಸೂಸುವಿಕೆ ಅಭಿವೃದ್ಧಿ ಕಾರ್ಯತಂತ್ರವನ್ನು ಹವಾಮಾನ ಬದಲಾವಣೆಯ ಮೇಲಿನ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶಕ್ಕೆ (UNFCCC) ಇಂದು 27 ನೇ ಸಮ್ಮೇಳನದಲ್ಲಿ (COP27) ಸಲ್ಲಿಸಿತು. ಈಜಿಪ್ಟ್‌ನ ಶರ್ಮ್-ಎಲ್-ಶೇಖ್‌ನಲ್ಲಿ ನಡೆಯುತ್ತಿರುವ ನವೆಂಬರ್ 6ರಿಂದ 18ವರೆಗೆ ನಡೆಯುತ್ತಿರುವ COP 27 ಗೆ ಭಾರತೀಯ ನಿಯೋಗವನ್ನು ಮುನ್ನಡೆಸುತ್ತಿರುವ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ದೀರ್ಘಕಾಲೀನ ಕಡಿಮೆ ಹೊರಸೂಸುವಿಕೆ ಅಭಿವೃದ್ಧಿ ಕಾರ್ಯತಂತ್ರವನ್ನು ಉದ್ಘಾಟಿಸಿದರು. 

ಕಾರ್ಯತಂತ್ರದ ಪ್ರಮುಖ ಲಕ್ಷಣಗಳು-

1. ಇಂಧನ ಭದ್ರತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸಂಪನ್ಮೂಲಗಳ ತರ್ಕಬದ್ಧ ಬಳಕೆಗೆ ಗಮನ ನೀಡಲಾಗುತ್ತದೆ. ಸುಗಮ, ಸಮರ್ಥ ಮತ್ತು ಎಲ್ಲವನ್ನೂ ಒಳಗೊಂಡ ರೀತಿಯಲ್ಲಿ ಪಳೆಯುಳಿಕೆ ಇಂಧನಗಳಿಂದ ಪರಿವರ್ತನೆಗಳನ್ನು ಕೈಗೊಳ್ಳಲಾಗುತ್ತದೆ.

2021 ರಲ್ಲಿ ಆರಂಭಗೊಂಡ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಭಾರತವನ್ನು ಹಸಿರು ಹೈಡ್ರೋಜನ್ ವಲಯವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಹಸಿರು ಹೈಡ್ರೋಜನ್ ಉತ್ಪಾದನೆಯ ತ್ವರಿತ ವಿಸ್ತರಣೆ ದೇಶದಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರೋಲೈಸರ್ ಉತ್ಪಾದನಾ ಸಾಮರ್ಥ್ಯ ಮತ್ತು 2032 ರ ವೇಳೆಗೆ ಪರಮಾಣು ಸಾಮರ್ಥ್ಯದಲ್ಲಿ ಮೂರು ಪಟ್ಟು ಹೆಚ್ಚಳವು ವಿದ್ಯುತ್ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಯ ಜೊತೆಗೆ ಕಲ್ಪಿಸಲಾದ ಇತರ ಕೆಲವು ಮೈಲಿಗಲ್ಲುಗಳಾಗಿವೆ.

2. ಜೈವಿಕ ಇಂಧನಗಳ ಹೆಚ್ಚಿದ ಬಳಕೆ, ವಿಶೇಷವಾಗಿ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ಅಭಿಯಾನ ಮತ್ತು ಹಸಿರು ಹೈಡ್ರೋಜನ್ ಇಂಧನದ ಹೆಚ್ಚಿದ ಬಳಕೆಯು ಸಾರಿಗೆ ವಲಯದ ಕಡಿಮೆ ಇಂಗಾಲದ ಅಭಿವೃದ್ಧಿಯನ್ನು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗುತ್ತದೆ. ಭಾರತದಲ್ಲಿ 2025ರ ವೇಳೆಗೆ ನಾಗರಿಕರು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು, ಪೆಟ್ರೋಲ್ ನಲ್ಲಿ ಎಥೆನಾಲ್ ಮಿಶ್ರಣವನ್ನು ಶೇಕಡಾ 20ರವರೆಗೆ ತಲುಪಿಸಲು, ಜನರು ಸಾರ್ವಜನಿಕ ಸಾರಿಗೆ ಮತ್ತು ಸರಕು ಸಾಗಣೆಗಳನ್ನು ಬಳಸಲು ಕೇಂದ್ರ ಸರ್ಕಾರ ವ್ಯಾಪಕ ಕ್ರಮಕ್ಕೆ ಮುಂದಾಗಿದೆ. 

3. ನಗರೀಕರಣವು ಕಡಿಮೆ ನೆಲೆಯಿಂದ ಬಲವಾದ ಪ್ರವೃತ್ತಿಯಾಗಿ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಭವಿಷ್ಯದ ಸುಸ್ಥಿರ ಮತ್ತು ಹವಾಮಾನ ಸ್ಥಿತಿಸ್ಥಾಪಕ ನಗರ ಅಭಿವೃದ್ಧಿಯು ಸ್ಮಾರ್ಟ್ ಸಿಟಿ ಉಪಕ್ರಮಗಳು, ಮುಖ್ಯವಾಹಿನಿಯ ರೂಪಾಂತರಕ್ಕಾಗಿ ನಗರಗಳ ಸಮಗ್ರ ಯೋಜನೆ ಮತ್ತು ಶಕ್ತಿ ಮತ್ತು ಸಂಪನ್ಮೂಲ ದಕ್ಷತೆಯನ್ನು ಹೆಚ್ಚಿಸುವುದು, ಪರಿಣಾಮಕಾರಿ ಹಸಿರು ಕಟ್ಟಡ ಕೋಡ್ ಗಳು ಮತ್ತು ನವೀನ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿನ ವೇಗದ ಬೆಳವಣಿಗೆಗಳಿಂದ ನಡೆಯುತ್ತದೆ.

4. ಭಾರತದ ಕೈಗಾರಿಕಾ ವಲಯ 'ಆತ್ಮನಿರ್ಭರ ಭಾರತ' ಮತ್ತು 'ಮೇಕ್ ಇನ್ ಇಂಡಿಯಾ' ದೃಷ್ಟಿಕೋನದಲ್ಲಿ ಬಲವಾದ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದೆ. ಕೈಗಾರಿಕಾ ವಲಯದಲ್ಲಿ ಕಡಿಮೆ ಇಂಗಾಲದ ಅಭಿವೃದ್ಧಿ ಪರಿವರ್ತನೆಗಳು ಇಂಧನ ಭದ್ರತೆ, ಶಕ್ತಿ ಲಭ್ಯತೆ ಮತ್ತು ಉದ್ಯೋಗದ ಮೇಲೆ ಪರಿಣಾಮ ಬೀರಬಾರದು. ಕಾರ್ಯಕ್ಷಮತೆ, ಸಾಧನೆ ಮತ್ತು ವ್ಯಾಪಾರ (PAT) ಯೋಜನೆ, ರಾಷ್ಟ್ರೀಯ ಹೈಡ್ರೋಜನ್ ಮಿಷನ್, ಎಲ್ಲಾ ಸಂಬಂಧಿತ ಪ್ರಕ್ರಿಯೆಗಳು ಮತ್ತು ಚಟುವಟಿಕೆಗಳಲ್ಲಿ ಉನ್ನತ ಮಟ್ಟದ ವಿದ್ಯುದ್ದೀಕರಣ, ವಸ್ತು ದಕ್ಷತೆಯನ್ನು ಹೆಚ್ಚಿಸುವುದು ಮತ್ತು ವೃತ್ತಾಕಾರದ ಆರ್ಥಿಕತೆಯ ವಿಸ್ತರಣೆಗೆ ಕಾರಣವಾಗುವ ಮರುಬಳಕೆ ಮತ್ತು ಉಕ್ಕು, ಸಿಮೆಂಟ್, ಅಲ್ಯೂಮಿನಿಯಂ ಮತ್ತು ಇತರ  ಆಯ್ಕೆಗಳನ್ನು ಅನ್ವೇಷಿಸುವ ಮೂಲಕ ಇಂಧನ ದಕ್ಷತೆಯನ್ನು ಸುಧಾರಿಸುವತ್ತ ಗಮನಹರಿಸಲಾಗುತ್ತದೆ. 

5. ಕಳೆದ ಮೂರು ದಶಕಗಳಲ್ಲಿ ಭಾರತ ದೇಶ ಅರಣ್ಯ ಪ್ರದೇಶ ಮತ್ತು ವೃಕ್ಷಗಳ ವಲಯಗಳನ್ನು ವಿಸ್ತರಿಸುವ ಬಲವಾದ ದಾಖಲೆಗಳನ್ನು ಹೊಂದಿದೆ, ಜೊತೆಗೆ ಅತ್ಯಂತ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ಭಾರತದ ಕಾಡ್ಗಿಚ್ಚು ಘಟನೆಗಳು ಜಾಗತಿಕ ಮಟ್ಟಕ್ಕಿಂತ ಕಡಿಮೆಯಾಗಿದೆ, ಆದರೆ ಭಾರತದ ಅರಣ್ಯ ಮತ್ತು ಮರಗಳ ಹೊದಿಕೆಯು 2016 ರಲ್ಲಿ  CO2 ಹೊರಸೂಸುವಿಕೆಯನ್ನು  ಶೇಕಡಾ 15ರಷ್ಟಿತ್ತು. ಭಾರತವು ತನ್ನ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಬದ್ಧತೆಯ 2.5 ರಿಂದ 3 ಶತಕೋಟಿ ಟನ್ ಗಳಷ್ಟು ಹೆಚ್ಚುವರಿ ಕಾರ್ಬನ್ ಆಸ್ತಿ ವಶಪಡಿಸಿಕೊಳ್ಳುವಿಕೆಯನ್ನು ಅರಣ್ಯ ಮತ್ತು ಮರ ಹೊದಿಕೆಯಲ್ಲಿ 2030ರ ವೇಳೆಗೆ ಪೂರೈಸುವ ಹಾದಿಯಲ್ಲಿದೆ. 

6.ಕಡಿಮೆ ಇಂಗಾಲ ಹೊರಸೂಸುವಿಕೆ ಸಾಧನೆ ಮಾರ್ಗಕ್ಕೆ ಪರಿವರ್ತನೆಯು ಹೊಸ ತಂತ್ರಜ್ಞಾನಗಳ ಅಭಿವೃದ್ಧಿ, ಹೊಸ ಮೂಲಸೌಕರ್ಯ ಮತ್ತು ಇತರ ವಹಿವಾಟು ವೆಚ್ಚಗಳಿಗೆ ಸಂಬಂಧಿಸಿದ ಹಲವಾರು ವೆಚ್ಚಗಳನ್ನು ಒಳಗೊಳ್ಳುತ್ತದೆ. 2050ರ ವೇಳೆಗೆ ಟ್ರಿಲಿಯನ್ ನಿಂದ ಡಾಲರ್ ವರೆಗೆ ಇದರ ಅಧ್ಯಯನಕ್ಕೆ ಖರ್ಚುವೆಚ್ಚಗಳು ತಗಲಲಿದೆ ಎಂದು ಅಂದಾಜಿಸಲಾಗಿದೆ. ಅಭಿವೃದ್ಧಿ ಹೊಂದಿದ ದೇಶಗಳಿಂದ ಹವಾಮಾನ ಹಣಕಾಸು ಒದಗಿಸುವಿಕೆಯು ಇಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.UNFCCC ಯ ತತ್ವಗಳಿಗೆ ಅನುಗುಣವಾಗಿ, ಪ್ರಧಾನವಾಗಿ ಸಾರ್ವಜನಿಕ ಮೂಲಗಳಿಂದ ಪ್ರಮಾಣ, ವ್ಯಾಪ್ತಿ ಮತ್ತು ವೇಗವನ್ನು ಖಾತರಿಪಡಿಸುವ ಅನುದಾನ ಮತ್ತು ರಿಯಾಯಿತಿ ಸಾಲಗಳ ರೂಪದಲ್ಲಿ ಗಣನೀಯವಾಗಿ ವರ್ಧಿಸುವ ಅಗತ್ಯವಿದೆ.

ಪರಿಚ್ಛೇದ 4, ಕಲಮು 19 ರಲ್ಲಿ ಪ್ಯಾರಿಸ್ ಒಪ್ಪಂದವು, "ಎಲ್ಲಾ ದೇಶಗಳು ದೀರ್ಘಾವಧಿಯ ಕಡಿಮೆ ಹಸಿರುಮನೆ ಅನಿಲ ಹೊರಸೂಸುವಿಕೆ ಅಭಿವೃದ್ಧಿ ಕಾರ್ಯತಂತ್ರಗಳನ್ನು ರೂಪಿಸಲು, ಸಂವಿಧಾನ ಪರಿಚ್ಛೇದ 2ನ್ನು ಗಮನದಲ್ಲಿಟ್ಟುಕೊಂಡು ತಮ್ಮ ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳನ್ನು ವಿಭಿನ್ನ ರಾಷ್ಟ್ರೀಯ ಸಂದರ್ಭಗಳಲ್ಲಿ  ಪರಿಗಣಿಸಬೇಕಾಗುತ್ತದೆ.

ಇದಲ್ಲದೆ, ಕಳೆದ ವರ್ಷ 2021ರ ನವೆಂಬರ್ ನಲ್ಲಿ ಗ್ಲ್ಯಾಸ್ಗೋದಲ್ಲಿ ನಡೆದಿದ್ದ COP 26ನಲ್ಲಿ ನಿರ್ಧಾರ 1/CP.26 ರಲ್ಲಿ, (i) ಇನ್ನೂ ಸಲ್ಲಿಕೆ ಮಾಡದಿರುವ ದೇಶಗಳು ಈ ವರ್ಷದ COP 27 ರೊಳಗೆ ತಮ್ಮ ದೀರ್ಘಾವಧಿಯ ಕಡಿಮೆ ಹೊರಸೂಸುವಿಕೆ ಮತ್ತು ಅಭಿವೃದ್ಧಿ ತಂತ್ರಗಳ-LT-LEDS ನ್ನು ತಿಳಿಸುವಂತೆ ಒತ್ತಾಯಿಸಲಾಗಿದೆ. 

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಎಲ್ಲಾ ಸಂಬಂಧಿತ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು, ಸಂಶೋಧನಾ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ ವ್ಯಾಪಕವಾದ ಸಮಾಲೋಚನೆಗಳನ್ನು ನಡೆಸಿದ ನಂತರ ದಾಖಲೆಯನ್ನು ಸಿದ್ಧಪಡಿಸಲಾಗಿದೆ.

ಭಾರತದ ವಿಧಾನವು ಅದರ ದೀರ್ಘಾವಧಿಯ ಕಡಿಮೆ-ಇಂಗಾಲ ಅಭಿವೃದ್ಧಿ ಕಾರ್ಯತಂತ್ರಕ್ಕೆ ಆಧಾರವಾಗಿ ಕೆಳಗಿನ ನಾಲ್ಕು ಪ್ರಮುಖ ಪರಿಗಣನೆಗಳನ್ನು ಆಧರಿಸಿದೆ, ಅವುಗಳು: 

1. ಜಗತ್ತಿನ ಶೇಕಡಾ 17ರಷ್ಟು ಜನಸಂಖ್ಯೆಯನ್ನು ಭಾರತ ಹೊಂದಿದ್ದರೂ ಜಾಗತಿಕ ಇಂಗಾಲ ಹೊರಸೂಸುವಿಕೆ, ಹಸಿರುಮನೆ ಅನಿಲ ಹೊರಸೂಸುವಿಕೆ, ಜಾಗತಿಕ ತಾಪಮಾನ ಏರಿಕೆಯಲ್ಲಿ ಭಾರತದ ಪಾಲು ಕಡಿಮೆಯಾಗಿದೆ. 

2.  ಅಭಿವೃದ್ಧಿಗೆ ಬೇಕಾದ ಇಂಧನ ಅಗತ್ಯಗಳನ್ನು ಭಾರತವು ಹೊಂದಿದೆ.

3. ಭಾರತವು ಅಭಿವೃದ್ಧಿಗಾಗಿ ಕಡಿಮೆ ಇಂಗಾಲ ಹೊರಸೂಸುವಿಕೆ ತಂತ್ರಗಳನ್ನು ಅನುಸರಿಸಲು ಬದ್ಧವಾಗಿದೆ. ರಾಷ್ಟ್ರದ ಪರಿಸ್ಥಿತಿಗಳು, ಸಂದರ್ಭಗಳಿಗೆ ಅನುಗುಣವಾಗಿ ಅವುಗಳನ್ನು ಸಕ್ರಿಯವಾಗಿ ಅನುಸರಿಸುತ್ತಿದೆ.

4. ಹವಾಮಾನ ಪುನಶ್ಚೈತನ್ಯವನ್ನು ಭಾರತವು ನಿರ್ಮಿಸಬೇಕಾಗಿದೆ.

"ಹವಾಮಾನ ನ್ಯಾಯ" ಮತ್ತು "ಸುಸ್ಥಿರ ಜೀವನಶೈಲಿ" ಎಂಬ ಎರಡು ವಿಷಯಗಳು, ಸಮಾನತೆ ಮತ್ತು ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳ (CBDR-RC) ತತ್ವಗಳ ಜೊತೆಗೆ, ಭಾರತವು ಪ್ಯಾರಿಸ್ ಸಮ್ಮೇಳನದಲ್ಲಿ ಒತ್ತಿ ಹೇಳಿರುವಂತೆ ರಾಷ್ಟ್ರೀಯ ಸನ್ನಿವೇಶಗಳಲ್ಲಿ ಕಡಿಮೆ ಇಂಗಾಲ, ಕಡಿಮೆ ಹೊರಸೂಸುವಿಕೆ ಭವಿಷ್ಯದ ಮೇಲೆ ನಿಂತಿದೆ. 

ಅದೇ ರೀತಿ, LT-LEDನ್ನು ಜಾಗತಿಕ ಇಂಗಾಲದ ನಿರ್ವಹಣೆ, ಕೆಲಸ ಕಾರ್ಯಗಳ ಹಣಕಾಸು ವ್ಯವಸ್ಥೆಗೆ ಸಮಾನ ಮತ್ತು ನ್ಯಾಯೋಚಿತ ಪಾಲನ್ನು ಪಡೆಯುವ ಭಾರತದ ಹಕ್ಕಿನ ಚೌಕಟ್ಟಿನಲ್ಲಿ ಸಿದ್ಧಪಡಿಸಲಾಗಿದ್ದು, ಇದು “ಹವಾಮಾನ ನ್ಯಾಯಕ್ಕಾಗಿ ಭಾರತದ ಕರೆಯ ಪ್ರಾಯೋಗಿಕ ಅನುಷ್ಠಾನವಾಗಿದೆ. ವೇಗವಾದ ಅಭಿವೃದ್ಧಿ ಮತ್ತು ಆರ್ಥಿಕ ರೂಪಾಂತರಕ್ಕೆ

ಪರಿಸರದ ಸಂರಕ್ಷಣೆ ನಡುವೆ ಭಾರತದ ದೃಷ್ಟಿಕೋನವನ್ನು ಅರಿಯಲು ಯಾವುದೇ ಅಡೆತಡೆಗಳಿಲ್ಲ ಎಂಬುದನ್ನು ಖಚಿತಪಡಿಸಲು ಇದು ಅಗತ್ಯವಾಗಿದೆ. ದೀರ್ಘಾವಧಿಯ ಕಡಿಮೆ ಹೊರಸೂಸುವಿಕೆ ಮತ್ತು ಅಭಿವೃದ್ಧಿ ತಂತ್ರಗಳು ಜೀವನ ಯೋಜನೆ ಆಂದೋಲನ (ಪರಿಸರಕ್ಕಾಗಿ ಜೀವನಶೈಲಿ ದೃಷ್ಟಿಕೋನವನ್ನು ಹೊಂದಿದೆ. ಆಲೋಚನಾರಹಿತವಾಗಿ ಮತ್ತು ವಿನಾಶಕಾರಿ ಇಂಗಾಲದ ಸೇವನೆಯ ಬದಲಿಗೆ ಜಾಗೃತವಾಗಿ ಉದ್ದೇಶಪೂರ್ವಕ ಬಳಕೆಗೆ ವಿಶ್ವಾದ್ಯಂತ ಮಾದರಿ ಬದಲಾವಣೆಗೆ ಕರೆ ನೀಡುತ್ತದೆ.
ಕೇಂದ್ರ ಸಚಿವರ ಸಂಪೂರ್ಣ ಭಾಷಣದ ಪಠ್ಯಕ್ಕಾಗಿ ಇಲ್ಲಿhttp://ಕ್ಲಿಕ್ ಮಾಡಿ.



(Release ID: 1875952) Visitor Counter : 322