ರೈಲ್ವೇ ಸಚಿವಾಲಯ

ಮೈಸೂರು – ಪುರಚ್ಚಿ ತಲೈವರ್ ಡಾ. ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್ ಪ್ರೆಸ್ ಮತ್ತು ಕಾಶಿ ಭಾರತ್ ಗೌರವ್ ರೈಲುಗಳಿಗೆ ಹಸಿರು ನಿಶಾನೆ ತೋರಿದ ಗೌರವಾನ್ವಿತ ಪ್ರಧಾನಮಂತ್ರಿ

Posted On: 11 NOV 2022 1:04PM by PIB Bengaluru

ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಅವರು ಕೆ.ಎಸ್.ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು. ದೇಶದಲ್ಲಿ ಇದು ಐದನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮತ್ತು ದಕ್ಷಿಣ ಭಾರತದಲ್ಲಿ ಇಂತಹ ಮೊದಲ ರೈಲು. ಬೆಂಗಳೂರಿನ ಕೆ.ಎಸ್.ಆರ್ ರೈಲ್ವೆ ನಿಲ್ದಾಣದಲ್ಲಿ ಭಾರತ್ ಗೌರವ್ ಕಾಶಿ ದರ್ಶನ್ ರೈಲು ಸೇವೆಗೆ ಚಾಲನೆ ನೀಡಿದರು.  


ಮೇಕ್ ಇನ್ ಇಂಡಿಯಾ ಯಶೋಗಾಥೆಗೆ ಇದು ಒಂದು ಉದಾಹರಣೆಯಾಗಿದ್ದು, ಭಾರತೀಯ ರೈಲ್ವೆ ಭಾರತದ ಮೊದಲ ಸೆಮಿ – ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ಗೆ 2019 ರ ಫೆಬ್ರವರಿ 15 ರಂದು ನವದೆಹಲಿಯಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಅವರು ಕಾನ್ಪುರ – ಅಲಹಾಬಾದ್ – ವಾರಣಸಿ ಮಾರ್ಗದ ರೈಲಿಗೆ  ಚಾಲನೆ ನೀಡಿದ್ದರು. ತರುವಾಯ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ನವದೆಹಲಿ – ಮತ್ತು ವೈಷ್ಣೋದೇವಿ ಕತ್ರಾ, ರಾಜಧಾನಿ ಗಾಂಧೀನಗರ್ – ಅಹ್ಮದಾಬಾದ್ – ಮುಂಬೈ ಸೆಂಟ್ರಲ್ ಮತ್ತು ಅಂದೂರು – ನವದೆಹಲಿ ಮಾರ್ಗಗಳಲ್ಲಿ ಆರಂಭವಾಯಿತು.  

ಈ ಹೊಸ ರೈಲು ಕೈಗಾರಿಕಾ ತಾಣ ಚೆನ್ನೈ ಮತ್ತು ಸಾಪ್ಟ್ ವೇರ್ ನವೋದ್ಯಮ ತಂತ್ರಜ್ಞಾನ ತಾಣ ಬೆಂಗಳೂರು ಹಾಗೂ ವಿಶ್ವದ ಪ್ರಮುಖ ಪ್ರವಾಸಿ ತಾಣ ಮೈಸೂರು ನಡುವೆ ಸಂಚರಿಸಲಿದೆ. ಈ ರೈಲು ಸೇವೆಯಿಂದ ಸಾಪ್ಟ್ ವೇರ್ ಮತ್ತು ವ್ಯಾಪಾರ ವೃತ್ತಿಪರರು, ತಂತ್ರಜ್ಞಾನ ವಲಯದವರು, ಪ್ರವಾಸಿಗರು, ವಿದ್ಯಾರ್ಥಿಗಳಲ್ಲದೇ ಮೈಸೂರು – ಬೆಂಗಳೂರು – ಚೆನ್ನೈ ನಡುವೆ ನಿಯಮಿತವಾಗಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದು ವಿಮಾನ ಸಂಚಾರದಂತೆ ಆರಾಮದಾಯಕ ಮತ್ತು ರೈಲು ಪ್ರಯಾಣದ ಅನುಭವವನ್ನು ಮರು ವ್ಯಾಖ್ಯಾನಿಸುತ್ತದೆ.   

ಮೈಸೂರು – ಚೆನ್ನೈ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಮಯ

ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಮೈಸೂರಿಗೆ ಸಂಚರಿಸುವ ರೈಲು ಸಂಖ್ಯೆ 20607 ರ ದರ ಚೈರ್ ಕಾರ್ 1,200 ರೂಪಾಯಿ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ದರ 2295 ರೂಪಾಯಿ.  ಮೈಸೂರು – ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣಕ್ಕೆ ತೆರಳುವ ರೈಲು ಸಂಖ್ಯೆ 20608 ರ ದರ ಚೈರ್ ಕಾರ್ 1,365 ರೂಪಾಯಿ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ದರ 2,485 ರೂಪಾಯಿ.

ಮೇಲಿನ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳಲ್ಲಿ ಮಕ್ಕಳ ಟಿಕೆಟ್ ಇಲ್ಲ ಮತ್ತು ಯಾವುದೇ ರಿಯಾಯಿತಿಗೆ ಅವಕಾಶವಿಲ್ಲ. ವಯಸ್ಕರಿಗೆ ಇರುವಂತೆ ಪೂರ್ಣ ಟಿಕೆಟ್ ಎಲ್ಲರಿಗೂ ಅನ್ವಯವಾಗಲಿದೆ. ಶತಾಬ್ದಿ ರೈಲುಗಳಲ್ಲಿರುವಂತೆ ಮುಂಗಡ ಕಾಯ್ದಿರಿಸುವ, ರದ್ದುಪಡಿಸುವ, ರೀಫಂಡ್ ಮಾಡುವ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ.

ವಂದೇ ಭಾರತ್ ಎಕ್ಸ್ ಪ್ರೆಸ್ ನ ವೈಶಿಷ್ಟ್ಯಗಳು

ಇದರಲ್ಲಿ ವಿಶ್ವ ದರ್ಜೆಯ ಆಧುನಿಕ ಸೌಲಭ್ಯಗಳಿವೆ. ಈ ರೈಲಿನ ಕೆಲವು ಮೂಲಭೂತ ವೈಶಿಷ್ಟ್ಯಗಳು  

·       ಕಾರ್ಯಾಚರಣೆ ಸಂದರ್ಭದಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಕವಚ(ರೈಲು ಅವಘಡ ತಪ್ಪಿಸುವ ವ್ಯವಸ್ಥೆ)ಯನ್ನು ಹೊಂದಿದೆ.

·       ಸುರಕ್ಷತೆಯಲ್ಲಿ ಸುಧಾರಣೆಯಾಗಿದ್ದು, ಪ್ರತಿಯೊಂದು ಕೋಚ್ ನಲ್ಲಿ ನಾಲ್ಕು ತುರ್ತು ಕಿಟಕಿಗಳಿವೆ. ಕೋಚ್ ನ ಹೊರಗಡೆ ಹಿಂಭಾಗದಿಂದ ವೀಕ್ಷಣೆಯ ಕ್ಯಾಮರಾಗಳು ಸೇರಿದಂತೆ ನಾಲ್ಕು ಪ್ಲಾಟ್ ಫಾರ್ಮ್ ಗಳ ಬದಿಯಲ್ಲಿ ಕ್ಯಾಮರಾಗಳಿವೆ.   

·       ವಿದ್ಯುತ್ ಕ್ಯುಬಿಕಲ್ ಗಳು ಮತ್ತು ಶೌಚಾಲಯಗಳಲ್ಲಿ ಏರೋಸಾಲ್ ಆಧಾರಿತ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಯೊಂದಿಗೆ ಉತ್ತಮ ಅಗ್ನಿ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ.

·       650 ಮಿಲಿಮೀಟರ್ ಎತ್ತರದವರೆಗೆ ಪ್ರವಾಹ ತಡೆದುಕೊಳ್ಳಬಲ್ಲ, ಕೆಳ ಭಾಗದಲ್ಲಿ ಸ್ಲಂಗ್ ಎಲೆಕ್ಟ್ರಿಕಲ್ ಉಪಕರಣಗಳೊಂದಿಗೆ ಪ್ರವಾಹ ತಡೆ ವ್ಯವಸ್ಥೆ. ವಿದ್ಯುತ್ ವಿಫಲವಾದಲ್ಲಿ ಪ್ರತಿಯೊಂದು ಕೋಚ್ ನಲ್ಲಿ ನಾಲ್ಕು ತುರ್ತು ದೀಪಗಳಿರಲಿವೆ.  

·       3.5 ವಲಯದಲ್ಲಿ ಸಂಚರಿಸುವ ಸೂಚ್ಯಂಕದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ. ಇದರಲ್ಲಿ 32 ಇಂಚಿನ ಎಲ್.ಸಿ.ಡಿ ಟಿವಿ ಮತ್ತು ಪ್ರಯಾಣಿಕರ ಮಾಹಿತಿ ಹಾಗೂ ಸಂರ್ಪಕ ವ್ಯವಸ್ಥೆಯನ್ನು ಸುಸಜ್ಜಿತವಾಗಿ ಹೊಂದಿದೆ.  

·       ಎಲ್ಲ ದರ್ಜೆ ಪ್ರಯಾಣಿಕರಿಗೆ ಸೈಡ್ ರೀಕ್ಲೈನರ್ ಆಸನ ಸೌಲಭ್ಯ ಒದಗಿಸಲಾಗಿದೆ. ಎಕ್ಸಿಕ್ಯೂಟಿವ್ ಕೋಚ್ ಗಳಲ್ಲಿ ಆಸನಗಳು 180 ಡಿಗ್ರಿ ತಿರುಗುವ ವಿಶೇಷತೆಗಳನ್ನು ಹೊಂದಿವೆ.

·       ಜೈವಿಕವಾಗಿ ಸ್ವಚ್ಛವಾಗುವ ಟಚ್ ಫ್ರೀ ಸೌಲಭ್ಯವಿರುವ ಶೌಚಾಲಯಗಳು ಮತ್ತು ಬೇಡಿಕೆಗೆ ಅನುಗುಣವಾಗಿ ವೈ-ಫೈ ವ್ಯವಸ್ಥೆ.

·       ಮುಕ್ತ ಗಾಳಿಯ ಪೂರೈಕೆಗಾಗಿ ಅಲ್ಟ್ರಾ ವೈಲೆಟ್ ದೀಪದೊಂದಿಗೆ [ಯುವಿ] ಹೆಚ್ಚಿನ ದಕ್ಷತೆಯ ಮೂಲಕ ಉತ್ತಮವಾದ ಶಾಖ ಹೊಂದಿರುವ ಗಾಳಿ ಮತ್ತು ಹವಾನಿಯಂತ್ರಿತ ವ್ಯವಸ್ಥೆಯಿರುವ ಸೌಲಭ್ಯವನ್ನು ಒಳಗೊಂಡಿದೆ.

·       ಕೇವಲ 140 ಸೆಕೆಂಡ್ ಗಳಲ್ಲಿ ರೈಲು ಪ್ರತಿ ಗಂಟೆಗೆ 160 ಕಿಲೋಮೀಟರ್ ನಷ್ಟು ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಚಾಲಕರಿಗೆ ಧ್ವನಿಯನ್ನು ರೆಕಾರ್ಡ್ ಮಾಡುವ ರಕ್ಷಣಾ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ.

·      ಮಾರ್ಗ ಬದಿಗಳಲ್ಲಿ ನಿಲ್ದಾಣಗಳೊಂದಿಗೆ ಸಂಕೇತಗಳ ವಿನಿಮಯಕ್ಕಾಗಿ ಕೋಚ್ ಗಳಲ್ಲಿ ಎರಡು ಸಂಕೇತ ವಿನಿಮಯ ದೀಪಗಳಿವೆ.

ವಂದೇ ಭಾರತ್ ರೈಲುಗಳನ್ನು ಚೆನ್ನೈನ ಪೆರಂಬೂರ್ ನ ಸಮಗ್ರ ಕೋಚ್ ಫ್ಯಾಕ್ಟರಿಯಲ್ಲಿ ದೇಶೀಯವಾಗಿ ಉತ್ಪಾದಿಸಲಾಗುತ್ತಿದ್ದು, ಇದು ಭಾರತೀಯ ಇಂಜಿನಿಯರ್ ಗಳ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ ಮತ್ತು ಮೇಕ್ ಇನ್ ಇಂಡಿಯಾದ ಶ್ರೇಷ್ಠತೆಯಾಗಿದೆ. ಪ್ರಧಾನಮಂತ್ರಿಯವರ ಸ್ವಾವಲಂಬಿ ಭಾರತ್ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇದು ದೊಡ್ಡ ಮೈಲಿಗಲ್ಲು.

ಬೆಂಗಳೂರು – ವಾರಾಣಸಿ ಭಾರತ್ ಗೌರವ್ ಕಾಶಿ ದರ್ಶನ್

ಬೆಂಗಳೂರು – ಕಾಶಿ ನಡುವೆ ಸುಗಮ ಮತ್ತು ಅನುಕೂಲಕ್ಕೆ ತಕ್ಕಂತೆ ರೈಲು ಪ್ರಯಾಣ, ವಸತಿ, ಉಳಿದುಕೊಳ್ಳುವ ಮತ್ತು ದರ್ಶನ ಮಾಡುವ ಎಲ್ಲ ಸೌಲಭ್ಯಗಳನ್ನು ಭಾರತ್ ಗೌರವ್ ರೈಲು ಪ್ಯಾಕೇಜ್ ಒಳಗೊಂಡಿದೆ. ಈ ರೈಲು ಹುಬ್ಬಳ್ಳಿ, ಬೆಳಗಾವಿ ಮೂಲಕ ಸಂಚರಿಸುತ್ತಿದ್ದು, ಕಾಶಿಗೆ ಪ್ರಯಾಣಿಸುವ ಬೆಂಗಳೂರು ಅಷ್ಟೇ ಅಲ್ಲದೇ ಉತ್ತರ ಕರ್ನಾಟಕ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಈ ರೈಲು ಮೂಲಕ ಪ್ರಯಾಗ್ ರಾಜ್ ಮತ್ತು ಅಯೋಧ್ಯೆಗೂ ತೆರಳಬಹುದಾಗಿದೆ.  


ಭಾರತ್ ಗೌರವ್ ಕಾಶಿ ದರ್ಶನ್ ರೈಲಿನ ಒಂದು ಕೋಚ್

ಈ ಪ್ರವಾಸಕ್ಕೆ 20,000 ರೂಪಾಯಿ ವೆಚ್ಚವಾಗಲಿದೆ ಮತ್ತು 5,000 ರೂಪಾಯಿ ಸಬ್ಸಿಡಿಯನ್ನು ರಾಜ್ಯ ಸರ್ಕಾರ ಒದಗಿಸಲಿದೆ. ಮೊದಲ ರೈಲಿನಲ್ಲಿ 600 ಪ್ರಯಾಣಿಕರು ಪ್ರಯಾಣಿಸಲಿದ್ದಾರೆ; ಕಾಶಿಯಷ್ಟೇ ಅಲ್ಲದೇ ಯಾತ್ರಾರ್ಥಿಗಳು ಅಯೋಧ್ಯೆ ಮತ್ತು ಪ್ರಯಾಗ್ ರಾಜ್ ಗೂ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ.   

ಭಾರತ್ ಗೌರವ್ ರೈಲುಗಳು [ಪ್ರವಾಸಿ ಆಧಾರಿತ ಸರ್ಕ್ಯೂಟ್ ರೈಲುಗಳು] ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳಗಳನ್ನು ಭಾರತ ಮತ್ತು ಪ್ರಪಂಚದ ಜನರಿಗೆ ದರ್ಶನ ಕಲ್ಪಿಸಲು ಭಾರತ್ ಗೌರವ್ ರೈಲು ಸಂಚಾರ ಆರಂಭಿಸಲಾಗಿದೆ.

ನೀತಿಯ ಸಂಕ್ಷಿಪ್ತ ವ್ಯಾಪ್ತಿ

·       ಭಾರತೀಯ ರೈಲ್ವೆ ಪ್ರವಾಸೋದ್ಯಮ ಕ್ಷೇತ್ರದ ವೃತ್ತಿಪರರ ಪ್ರಮುಖ ಸಾಮರ್ಥ್ಯಗಳನ್ನು ಬಳಸಿಕೊಂಡು ಭಾರತದ ವಿಶಾಲವಾದ ಪ್ರವಾಸಿಗರಿಗೆ ಅನುಕೂಲಕ್ಕೆ ತಕ್ಕಂತೆ ವಿಷಯ ಆಧಾರಿತ ರೈಲುಗಳನ್ನು ಸಂಚರಿಸುವ ಗುರಿ ಹೊಂದಲಾಗಿದೆ.

·       ಈ ನೀತಿಯಡಿ ನೋಂದಾಯಿತ ಸೇವಾ ಪೂರೈಕೆದಾರರಿಗೆ ಭಾರತ್ ಗೌರವ್ ರೈಲುಗಳ ಕಾರ್ಯಾಚರಣೆಗಾಗಿ ಭಾರತೀಯ ರೈಲ್ವೆ ಮೂಲಕ [ಐಆರ್] “ಬಳಕೆ ಹಕ್ಕು” ಮಾದರಿಯ ಅಡಿಯಲ್ಲಿ ಐಸಿಎಫ್ ಕೋಚ್ ಗಳನ್ನು ಒಳಗೊಂಡಿರುವ ರೇಕ್ ಗಳನ್ನು ಒದಗಿಸಲಾಗುತ್ತದೆ. ಎನ್.ಆರ್.ಸಿ [ರೈಲ್ವೆಯೇತರ ಗ್ರಾಹಕರು] ಯೋಜನೆಯಡಿ ಸೇವಾ ಪೂರೈಕೆದಾರರು ಹೊಸ ಕೋಚ್ ಗಳನ್ನು ಉತ್ಪಾದನಾ ಘಟಕಗಳಿಂದ ಖರೀದಿಸುವ ಅಧಿಕಾರ ಹೊಂದಿದ್ದಾರೆ.

·      ಈ ಮಾದರಿಯೊಂದಿಗೆ ಸಂಪರ್ಕ ಹೊಂದಿರುವ ವಿಷಯಗಳು, ಮಾರ್ಗಗಳು, ಪ್ರಯಾಣ, ಸುಂಕ ಮತ್ತು ಇತರೆ ಗುಣ ಲಕ್ಷಣಗಳನ್ನು ಒಳಗೊಂಡಂತೆ ವ್ಯಾಪಾರ ಮಾದರಿಯನ್ನು ನಿರ್ಧರಿಸಬಹುದಾಗಿದೆ. 

******



(Release ID: 1875208) Visitor Counter : 192