ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕಲಾಸಂಗಮ(ಸಮಾಗಮ)ವಾದ ಐಎಫ್ಎಫ್ಐ 53ನೇ ಆವೃತ್ತಿ


ಐಎಫ್ಎಫ್ಐ-53ರಲ್ಲಿ ವಿಶಿಷ್ಟಚೇತನ ವ್ಯಕ್ತಿಗಳಿಗೆ ಉಚಿತ ಕೋರ್ಸ್ ಒದಗಿಸುತ್ತಿದೆ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್ಟಿಐಐ)

Posted On: 10 NOV 2022 11:09AM by PIB Bengaluru

53ನೇ ಆವೃತ್ತಿಯ ಅಂತಾರಾಷ್ಟ್ರೀಯ ಭಾರತ ಚಲನಚಿತ್ರೋತ್ಸವ (ಐಎಫ್ಎಫ್ಐ) ನವೆಂಬರ್ 20ರಿಂದ 28ರ ವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್‌ಟಿಐಐ)ವು ತನ್ನ ಮುಕ್ತ ಕಲಿಕಾ ಕೇಂದ್ರ (ಸಿಎಫ್‌ಒಎಲ್)ದ ಉಪಕ್ರಮದ ಅಡಿ, ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎನ್‌ಎಫ್‌ಡಿಸಿ) ಮತ್ತು ಗೋವಾದ ಎಂಟರ್‌ಟೈನ್‌ಮೆಂಟ್ ಸೊಸೈಟಿ (ಇಎಸ್‌ಜಿ) ಜತೆಗೂಡಿ, ವಿಶಿಷ್ಟಚೇತನ ವ್ಯಕ್ತಿಗಳಿಗೆ 2 ಉಚಿತ ಕೋರ್ಸ್‌ಗಳನ್ನು ಘೋಷಿಸಿದೆ. 

ನರಮಂಡಲ ಬೆಳವಣಿಗೆಯ ನ್ಯೂನತೆ (ಆಟಿಸಂ) ಇರುವವರಿಗೆ ಸ್ಮಾರ್ಟ್‌ಫೋನ್ ಫಿಲ್ಮ್ ಮೇಕಿಂಗ್‌ನಲ್ಲಿ ಮೂಲ(ಬೇಸಿಕ್) ಕೋರ್ಸ್ ಮತ್ತು ಗಾಲಿಕುರ್ಚಿ ಆಶ್ರಯಿಸಿರುವ ವಿಶಿಷ್ಟಚೇತನರಿಗೆ ಸ್ಕ್ರೀನ್ ಆಕ್ಟಿಂಗ್‌ ಮೂಲ ಕೋರ್ಸ್ ನೀಡಲಾಗುತ್ತದೆ.

ಸಿನಿಮಾ ಕಲೆಯನ್ನು ಸೃಜಿಸುವ ಪ್ರಕ್ರಿಯೆ ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಎಫ್‌ಟಿಐಐ, ವಿಶಿಷ್ಟಚೇತನ  ವ್ಯಕ್ತಿಗಳನ್ನು ಸಿನಿಮಾ ಕ್ಷೇತ್ರದಲ್ಲಿ ಭಾಗವಹಿಸಲು, ಉತ್ಕೃಷ್ಟಗೊಳಿಸಲು ಮತ್ತು ಸಬಲೀಕರಿಸಲು ವಿವಿಧ ಕೋರ್ಸ್‌ಗಳನ್ನು ನಡೆಸುತ್ತಿದೆ. ಐಎಫ್ಎಫ್ಐ-53ರ ಕೋರ್ಸ್‌ಗಳು 8 ದಿನ ನಡೆಯಲಿದ್ದು, ನ.21ರಿಂದ 28ರ ವರೆಗೆ ಜರುಗಲಿವೆ. ಒಂದು ಕೋರ್ಸ್ ನಲ್ಲಿ  ಭಾಗವಹಿಸುವವರನ್ನು ಆಧುನಿಕ ಕಾಲದ ಸ್ವಂತಿಕೆ ಮೆರೆಯುವ ಸಿನಿಮಾ ಕಲಾವಿದರನ್ನಾಗಿ ರೂಪಿಸುವ ಗುರಿ ಹೊಂದಿದ್ದರೆ, ಇನ್ನೊಂದು ಅವರಲ್ಲಿ ಸುಪ್ತವಾಗಿರುವ ನಟರನ್ನು ಹೊರತೆಗೆಯಲು ಪ್ರಯತ್ನಿಸುತ್ತದೆ.

ಸ್ವಲೀನತೆ(ಆಟಿಸಂ) ಹೊಂದಿರುವ ವಿಶಿಷ್ಟಚೇತನ ವ್ಯಕ್ತಿಗಳಿಗೆ ಸ್ಮಾರ್ಟ್‌ಫೋನ್ ಫಿಲ್ಮ್ ತಯಾರಿಕೆಯ ಮೂಲ ಕೋರ್ಸ್ ಅನ್ನು ದೃಶ್ಯ ಸಂವಹನ ಕ್ಷೇತ್ರದಲ್ಲಿ ಖ್ಯಾತ ವೃತ್ತಿಪರರಾದ ಅಜ್ಮಲ್ ಜಾಮಿ ಕಲಿಸುತ್ತಾರೆ. ಅವರು ಹಲವಾರು ಕ್ಷೇತ್ರಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ.  ಯುದ್ಧ ಭೂಮಿ ಮತ್ತು ಸಂಘರ್ಷದ ಪ್ರದೇಶಗಳಲ್ಲಿ ಸಾಕ್ಷ್ಯಚಿತ್ರಗಳು, ಪ್ರಚಾರದ ಚಲನಚಿತ್ರಗಳು, ಸಾಫ್ಟ್ ಫೀಚರ್‌ಗಳು ಮತ್ತು ಪ್ರದರ್ಶನಗಳವರೆಗೆ ಅವರು ಸಾಧನೆ ಮಾಡಿದ್ದಾರೆ.  ಸಿನಿಮಾಟೋಗ್ರಾಫರ್, ಫಿಲ್ಮ್ ಮೇಕರ್ ಮತ್ತು ಛಾಯಾಗ್ರಾಹಕರಾಗಿ ಅವರು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಸಂಸ್ಥೆಗಳಿಗೆ ಪ್ರತಿಷ್ಠಿತ ಯೋಜನೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

 ಸಿನಿಮಾ ಭಾಷೆಯ ಪರಿಚಯದಿಂದ ಹಿಡಿದು ಸ್ಮಾರ್ಟ್‌ಫೋನ್‌ಗಳಲ್ಲಿ ಶೂಟಿಂಗ್ ಮತ್ತು ಎಡಿಟಿಂಗ್‌ವರೆಗೆ ಬಹು ಮಾದರಿ ತರಬೇತಿಯನ್ನು ಕೋರ್ಸ್‌ ಒಳಗೊಂಡಿರುತ್ತದೆ. ಕೋರ್ಸ್ ಕೊನೆಯಲ್ಲಿ ಸ್ಕ್ರೀನಿಂಗ್ ಮತ್ತು ವಿಮರ್ಶೆಯ ತರಗತಿಗಳು ನಡೆಯುತ್ತವೆ.  ಗೋವಾದಲ್ಲಿ ಆಟಿಸಂನಿಂದ ಬಳಲುತ್ತಿರುವ ವಿಶಿಷ್ಟಚೇತನರು ವಿವರಗಳು ಮತ್ತು ನೋಂದಣಿಗಾಗಿ, ಅಧಿಕೃತ ಎಫ್ಟಿಐಐ ವೆಬ್‌ಸೈಟ್‌ನಲ್ಲಿ ಈ ಲಿಂಕ್ ಅನುಸರಿಸಬಹುದು.

https://www.ftii.ac.in/p/vtwa/basic-course-in-smartphone-film-making-21st-28th-november-2022

ಗಾಲಿಕುರ್ಚಿ ಅವಲಂಬಿತ ವ್ಯಕ್ತಿಗಳಿಗೆ ಸ್ಕ್ರೀನ್ ಆಕ್ಟಿಂಗ್‌ನ ಮೂಲ ಕೋರ್ಸ್ ಅನ್ನು ಪಿ.ಆರ್. ಜಿಜೋಯ್ ಅವರು ಕಲಿಸುತ್ತಾರೆ. ಅವರು ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಪ್ರಭಾರಿ ಡೀನ್ (ಚಲನಚಿತ್ರ) ಮತ್ತು ಸಹಪ್ರಾಧ್ಯಾಪಕರಾಗಿದ್ದಾರೆ. ರಂಗಭೂಮಿ ಕಲಾವಿದ, ಚಲನಚಿತ್ರ ನಟ, ತರಬೇತುದಾರ ಮತ್ತು ನಿರ್ಮಾಪಕರಾಗಿರುವ ಜಿಜೋಯ್ ಅವರು, 55 ಚಲನಚಿತ್ರಗಳಲ್ಲಿ ಮತ್ತು 4 ಖಂಡಗಳಲ್ಲಿ ಸುಮಾರು 400 ಅಂತಾರಾಷ್ಟ್ರೀಯ ರಂಗಭೂಮಿ ಪ್ರದರ್ಶನಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ನಟನೆ ಅಥವಾ ಅಭಿನಯ ಕೋರ್ಸ್ 6 ಮಾಡ್ಯೂಲ್‌ಗಳನ್ನು ಹೊಂದಿದೆ. ಇದು ನಾಟ್ಯಶಾಸ್ತ್ರದ ಪರಿಚಯದೊಂದಿಗೆ ಪ್ರಾರಂಭವಾಗುತ್ತದೆ. ಈ ಕೋರ್ಸ್ ಹಾಸ್ಯ ರಸ ಅಥವಾ ವಿನೋದ(ಹಾಸ್ಯ) ನಟನೆಯ ಮೇಲೆ ವಿಶೇಷ ಒತ್ತು ನೀಡುತ್ತದೆ. ಚಲನೆ, ನಟನೆ ಆಟಗಳು ಮತ್ತು ಇಂದ್ರಿಯ ಜಾಗೃತಿ ಆಟಗಳು ಪ್ರತಿಬಂಧಕಗಳನ್ನು ಒಡೆಯುವ ಮೇಲೆ ಗಮನ ಕೇಂದ್ರೀಕರಿಸುವ ಇತರೆ ಮುಖ್ಯಾಂಶಗಳಾಗಿವೆ. ಗೋವಾದಲ್ಲಿ ಗಾಲಿಕುರ್ಚಿ ಅವಲಂಬಿಸಿರುವ ವಿಶೇಷಚೇತನರು ವಿವರಗಳು ಮತ್ತು ನೋಂದಣಿಗಾಗಿ ಇಲ್ಲಿ ಭೇಟಿ ನೀಡಿ:

https://www.ftii.ac.in/p/vtwa/basic-course-in-screen-acting-21st-to-28th-november-2022

ಎರಡೂ ಕೋರ್ಸ್‌ಗಳನ್ನು ಗೋವಾದ ಮ್ಯಾಕ್ವಿನೆಜ್ ಪ್ಯಾಲೇಸ್‌ನಲ್ಲಿರುವ ಆರ್ಟ್ ಗ್ಯಾಲರಿಯಲ್ಲಿ ನಡೆಸಲಾಗುತ್ತಿದೆ.

********

 



(Release ID: 1874951) Visitor Counter : 133