ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐಎಫ್ಎಫ್ಐ – 53 ಚಲನಚಿತ್ರೋತ್ಸವದ ವೈಭವಯುತ ಉದ್ಘಾಟನೆಗೆ ಸಾಕ್ಷಿಯಾಗಲಿದೆ ಆಸ್ಟ್ರಿಯಾದ ‘ಅಲ್ಮಾ ಮತ್ತು ಆಸ್ಕರ್’ ಚಲನಚಿತ್ರ
ಆಸ್ಟ್ರಿಯಾ ನಿರ್ದೇಶಕ ಡೈಟರ್ ಬರ್ನರ್ ಅವರ ‘ಅಲ್ಮಾ ಮತ್ತು ಆಸ್ಕರ್’ ಚಲನಚಿತ್ರದೊಂದಿಗೆ ವಿಧ್ಯುಕ್ತ ಆರಂಭ ಕಾಣಲಿದೆ ಐಎಫ್ಎಫ್ಐ – 53
ಚಲನಚಿತ್ರೋತ್ಸವ
ಗೋವಾದ ಪಣಜಿಯಲ್ಲಿ 2022 ನವೆಂಬರ್ 20ರಿಂದ ನವೆಂಬರ್ 28ರ ವರೆಗೆ ನಡೆಯಲಿರುವ 53ನೇ ಆವೃತ್ತಿಯ ಅಂತಾರಾಷ್ಟ್ರೀಯ ಭಾರತ ಚಲನಚಿತ್ರೋತ್ಸವ (ಐಎಫ್ಎಫ್ಐ)ವು ಆಸ್ಟ್ರಿಯಾದ ‘ಅಲ್ಮಾ ಮತ್ತು ಆಸ್ಕರ್’ ಚಲನಚಿತ್ರ ಪ್ರದರ್ಶನದೊಂದಿಗೆ ವಿಧ್ಯುಕ್ತ ಆರಂಭ ಕಾಣಲಿದೆ. ವಿಯೆನ್ನಾ ಸಮಾಜದ ಗ್ರ್ಯಾಂಡ್ ಡೇಮ್ ಅಲ್ಮಾ ಮಾಹ್ಲರ್ (1879-1964) ಮತ್ತು ಆಸ್ಟ್ರಿಯಾದ ಕಲಾವಿದ ಓಸ್ಕರ್ ಕೊಕೊಸ್ಕಾ ((1886-1980) ನಡುವಿನ ಭಾವೋದ್ರಿಕ್ತ ಸಂಬಂಧದ ಆತ್ಮಚರಿತ್ರೆಯೇ ಈ ಸಿನಿಮಾದ ಕಥಾವಸ್ತುವಾಗಿದೆ. ಡೈಟರ್ ಬರ್ನರ್ ನಿರ್ದೇಶಿಸಿದ ಈ ಚಲನಚಿತ್ರವು ಒಟ್ಟು 110 ನಿಮಿಷಗಳ ಕಥಾನಕ ಹೊಂದಿದೆ.
ಸಿನಿಮಾ ಕಲೆಯನ್ನು ಪರಿಪೂರ್ಣವಾಗಿ ಆಚರಿಸಲು ಬಯಸುವ ಉತ್ಸವವಾಗಿ, ಸಂಯೋಜಕ ಮತ್ತು ಕಲಾವಿದರ ನಡುವಿನ ಪ್ರೇಮ ಸಂಬಂಧ ಕುರಿತಾದ ಚಲನಚಿತ್ರದೊಂದಿಗೆ ಐಎಫ್ಎಫ್ಐ ತೆರೆದುಕೊಳ್ಳುತ್ತಿದೆ. ಉದಯೋನ್ಮುಖ ವರ್ಣಚಿತ್ರ ಕಲಾವಿದ ಆಸ್ಕರ್ ಕೊಕೊಸ್ಕಾ ಎಂಬಾತನಿಗೆ ಸಂಗೀತ ಸಂಯೋಜಕಿ ಅಲ್ಮಾ ಪರಿಚಯವಾಗುತ್ತದೆ. ಆಕೆ ಆ ಹೊತ್ತಿಗಾಗಲೇ ಮೊದಲ ಪತಿ ಗುಸ್ತಾವ್ ಮಹ್ಲೆರ್ ಮರಣದ ನಂತರ, ವಾಸ್ತುಶಿಲ್ಪಿ ವಾಲ್ಟರ್ ಗ್ರೋಪಿಯಸ್ ಜತೆಗೆ ಸಂಬಂಧ ಹೊಂದಿರುತ್ತಾಳೆ. ತನ್ನ ನೈಜ ಕಲಾತ್ಮಕ ಸಾಮರ್ಥ್ಯ ಅರಿತುಕೊಳ್ಳಲು ಸಾಧ್ಯವಾಗದ ಇನ್ನೊಬ್ಬ ವ್ಯಕ್ತಿಯ ನೆರಳಿನಲ್ಲಿ ಇರಲು ಆಕೆ ಬಯಸುವುದಿಲ್ಲ. ಆಗ ಅಲ್ಮಾಳು ಆಸ್ಕರ್ ಕೊಕೊಸ್ಕಾ ಅವನೊಂದಿಗೆ ಪ್ರೇಮ ಸಂಬಂಧ ಪ್ರಾರಂಭಿಸುತ್ತಾಳೆ. ಅವರಿಬ್ಬರ ಗಾಢ ಸಂಬಂಧ ಸ್ವರೂಪ ಹೇಗಿತ್ತೆಂದರೆ, ಕೊಕೊಸ್ಕಾ ತನ್ನ ಬಹುತ್ತೇಕ ಎಲ್ಲಾ ಅದ್ಭುತ ಕಲಾಕೃತಿಗಳನ್ನು ಇವರ ಗಾಢ ಸಂಬಂಧದ ಮೇಲಿಯೇ ಚಿತ್ರಿಸುತ್ತಾನೆ. 'ಬಿರುಗಾಳಿ' ಎಬ್ಬಿಸುವ ಮತ್ತು 'ಗೊಂದಲ'ಮಯದಿಂದ ಕೂಡಿರುವ ಈ ಪ್ರೇಮಿಗಳ ಪ್ರೀತಿ, ಪ್ರೇಮ, ಪ್ರಣಯ ಮತ್ತು ಬದುಕನ್ನು ಎಳೆಎಳೆಯಾಗಿ ಬಣ್ಣಿಸಿರುವ ಈ ಚಲನಚಿತ್ರವು, ಈ ಪ್ರೇಮಿಗಳ ಪ್ರೇಮ ಸಂಬಂಧವನ್ನು ಅನ್ವೇಷಿಸಿದೆ.
ಬ್ರೈಡ್ ಆಫ್ ದಿ ವಿಂಡ್ - ಅಲ್ಮಾ ಮಹ್ಲೆರ್ ಅವರೊಂದಿಗೆ ಹೊಂದಿದ್ದ ಪ್ರೇಮ ಸಂಬಂಧ ಆಧರಿಸಿದ ಆಸ್ಕರ್ ಕೊಕೊಸ್ಕಾ ಅವರ ಅದ್ಭುತ ಕಲಾಕೃತಿ.
ನಿರ್ದೇಶಕ ಡೈಟರ್ ಬರ್ನರ್ ಆಸ್ಟ್ರಿಯಾದ ಖ್ಯಾತ ಚಲನಚಿತ್ರ ಮತ್ತು ರಂಗಭೂಮಿ ನಿರ್ದೇಶಕ, ನಟ ಮತ್ತು ಚಿತ್ರಕಥೆಗಾರ. ಅವರು 1976-1980ರ ಅವಧಿಯಲ್ಲಿ ನಡೆದ ಕುಟುಂಬ ಮತ್ತು ಹಳ್ಳಿಯ ವೃತ್ತಾಂತವಿರುವ ಪ್ರಶಸ್ತಿ ವಿಜೇತ ಅಲ್ಪೆನ್‌ಸಾಗಾದ 6 ಚಲನಚಿತ್ರಗಳ ನಿರ್ದೇಶಕರಾಗಿ ಆಸ್ಟ್ರಿಯಾದಲ್ಲಿ ರಾಷ್ಟ್ರವ್ಯಾಪಿ ಪ್ರಸಿದ್ಧರಾದರು. ಶಿಜ್ಲರ್ ರಂಗಭೂಮಿ ನಾಟಕ ಡೆರ್ ರೈಜೆನ್ ಆಧರಿಸಿ ನಿರ್ಮಿಸಿದ ಬರ್ಲಿನರ್ ರೈಜೆನ್ (2006) ಚಲನಚಿತ್ರಕ್ಕಾಗಿ ಅವರು ಅಂತಾರಾಷ್ಟ್ರೀಯ ಮೆಚ್ಚುಗೆ ಪಡೆದಿದ್ದಾರೆ.
ಪಣಜಿಯ ಇನೊಕ್ಸ್ ಚಿತ್ರಮಂದಿರದಲ್ಲಿ ನವೆಂಬರ್ 20ರ ಭಾನುವಾರ ‘ಅಲ್ಮಾ ಮತ್ತು ಆಸ್ಕರ್’ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
****
(Release ID: 1874503)
Visitor Counter : 190