ಪರಿಸರ ಮತ್ತು ಅರಣ್ಯ ಸಚಿವಾಲಯ
ಕಾಪ್ 27 ರಲ್ಲಿ ಭಾರತೀಯ ಪೆವಿಲಿಯನ್ ಉದ್ಘಾಟಿಸಿದ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಶ್ರೀ ಭೂಪೇಂದರ್ ಯಾದವ್
ಲೈಫ್ (ಎಲ್.ಐ.ಎಫ್.ಇ.)- ಪರಿಸರಕ್ಕಾಗಿ ಜೀವನಶೈಲಿ, ಭಾರತೀಯ ಪೆವಿಲಿಯನ್ ನ ವಿಷಯ
ಭಾರತವು ಪರಿಹಾರದ ಒಂದು ಭಾಗವೆ ಹೊರತು ಸಮಸ್ಯೆಯಲ್ಲ: ಕಾಪ್ 27 ರಲ್ಲಿ ಶ್ರೀ ಭೂಪೇಂದರ್ ಯಾದವ್
Posted On:
06 NOV 2022 6:31PM by PIB Bengaluru
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಶ್ರೀ ಭೂಪೇಂದರ್ ಯಾದವ್ ಅವರು ಇಂದು ಈಜಿಪ್ಟ್ ನ ಶರ್ಮ್ ಎಲ್-ಶೇಖ್ ನಲ್ಲಿ ಯು.ಎನ್.ಎಫ್.ಸಿಸಿಸಿ (ಕಾಪ್ 27) ನ ಪಕ್ಷಕಾರರ ಸಮ್ಮೇಳನದ 27ನೇ ಅಧಿವೇಶನದಲ್ಲಿ ಭಾರತೀಯ ಪೆವಿಲಿಯನ್ ಉದ್ಘಾಟಿಸಿದರು. 2022ರ ನವೆಂಬರ್ 6 ರಿಂದ 18 ರವರೆಗೆ ಸಮಾವೇಶ (ಕಾಪ್ 27) ನಡೆಯಲಿದೆ.
ಎಲ್ಲಾ ದೇಶಗಳ ಪ್ರತಿನಿಧಿಗಳನ್ನು ಭಾರತೀಯ ಪೆವಿಲಿಯನ್ ಗೆ ಸ್ವಾಗತಿಸಿದ ಶ್ರೀ ಯಾದವ್, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಕೀರ್ಣವಾದ ಹವಾಮಾನ ಬದಲಾವಣೆ ಸಮಸ್ಯೆಗೆ ಸರಳ ಪರಿಹಾರವನ್ನು ಒದಗಿಸಿದ್ದಾರೆ ಎಂದು ಹೇಳಿದರು. ಹವಾಮಾನ ಕ್ರಮವು ತಳಮಟ್ಟದಿಂದ, ವೈಯಕ್ತಿಕ ಮಟ್ಟದಿಂದ ಪ್ರಾರಂಭವಾಗುತ್ತದೆ ಎಂದು ಭಾರತವು ಭಾವಿಸುತ್ತದೆ, ಹೀಗಾಗಿ ಪರಿಸರಕ್ಕಾಗಿ ಜೀವನಶೈಲಿ - ಲೈಫ್ (ಎಲ್.ಐ.ಎಫ್.ಇ.)- ಎಂಬ ಧ್ಯೇಯವಾಕ್ಯದೊಂದಿಗೆ ಭಾರತ ಪೆವಿಲಿಯನ್ ವಿನ್ಯಾಸಗೊಳಿಸಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ, ಶ್ರೀ ಯಾದವ್ ಅವರು ಸಕಾರಾತ್ಮಕ ಹವಾಮಾನ ಬದಲಾವಣೆ ಪರಿಹಾರಗಳತ್ತ ಶ್ರಮಿಸಿದ ಭಾರತದ ಕಾಪ್ ಯುವ ವಿದ್ವಾಂಸರನ್ನು ಸನ್ಮಾನಿಸಿದರು.
" ಭಾರತೀಯ ಪೆವಿಲಿಯನ್ ಕಾಪ್ ಅವಧಿಯುದ್ದಕ್ಕೂ, ಸರಳ ಜೀವನಶೈಲಿ ಮತ್ತು ಪ್ರಕೃತಿಯಲ್ಲಿ ಸುಸ್ಥಿರವಾಗಿರುವ ವೈಯಕ್ತಿಕ ರೂಢಿಗಳು ಭೂತಾಯಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ಪ್ರತಿನಿಧಿಗಳಿಗೆ ನೆನಪಿಸುತ್ತಲೇ ಇರುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ಕೇಂದ್ರ ಪರಿಸರ ಸಚಿವ ಶ್ರೀ ಯಾದವ್ ಹೇಳಿದರು.
"ಹವಾಮಾನ ಹಣಕಾಸು ಸಂಬಂಧಿತ ಚರ್ಚೆಗಳಲ್ಲಿ ಗಣನೀಯ ಪ್ರಗತಿಯನ್ನು ಭಾರತ ಎದುರು ನೋಡುತ್ತಿದೆ. ಹೊಸ ತಂತ್ರಜ್ಞಾನಗಳ ಪರಿಚಯ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಅನುಕೂಲವಾಗುವಂತೆ ಹೊಸ ಸಹಯೋಗಗಳನ್ನು ಸಹ ನಾವು ಎದುರು ನೋಡುತ್ತಿದ್ದೇವೆ" ಎಂದು ಶ್ರೀ ಯಾದವ್ ಹೇಳಿದರು.
"ಲೈಫ್ ಅಭಿಯಾನ ಈ ಭೂಮಿಯ ರಕ್ಷಣೆಗಾಗಿ ಜನರ ಶಕ್ತಿಯನ್ನು ಒಗ್ಗೂಡಿಸುತ್ತದೆ ಮತ್ತು ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಅವರಿಗೆ ಕಲಿಸುತ್ತದೆ. ಲೈಫ್ ಅಭಿಯಾನ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಪ್ರಜಾಸತ್ತಾತ್ಮಕಗೊಳಿಸುತ್ತದೆ, ಇದರಲ್ಲಿ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಡುಗೆ ನೀಡಬಹುದು. ಸಣ್ಣ ಪ್ರಯತ್ನಗಳು ಸಹ ದೊಡ್ಡ ಪರಿಣಾಮ ಬೀರಬಹುದು ಎಂದು ಲೈಫ್ ಅಭಿಯಾನ ನಂಬುತ್ತದೆ" ಶ್ರೀ. ನರೇಂದ್ರ ಮೋದಿ, ಭಾರತದ ಪ್ರಧಾನಮಂತ್ರಿ.
ಈಜಿಪ್ಟ್ ನ ಶರ್ಮ್ ಎಲ್-ಶೇಖ್ ನಲ್ಲಿರುವ ಯುಎನ್ಎಫ್.ಸಿ.ಸಿಸಿಯ ಕಾಪ್ 27 ರಲ್ಲಿ ಭಾರತೀಯ ಪೆವಿಲಿಯನ್.
ಲೈಫ್ (ಎಲ್.ಐ.ಎಫ್.ಇ.) @ ಕಾಪ್ 27 ರಲ್ಲಿ ಭಾರತೀಯ ಪೆವಿಲಿಯನ್
ಕಾಪ್ 27 ರಲ್ಲಿ ಭಾರತವು ಲೈಫ್ (ಎಲ್.ಐ.ಎಫ್.ಇ.)- ಪರಿಸರಕ್ಕಾಗಿ ಜೀವನಶೈಲಿ ಎಂಬ ವಿಷಯದೊಂದಿಗೆ ಪೆವಿಲಿಯನ್ ಅನ್ನು ಆಯೋಜಿಸುತ್ತಿದೆ. ವಿವಿಧ -ದೃಕ್ ಶ್ರವ್ಯ, ಲಾಂಛನ, 3ಡಿ ಮಾದರಿಗಳು, ವ್ಯವಸ್ಥೆ, ಅಲಂಕಾರ ಮತ್ತು ಪೂರಕ ಕಾರ್ಯಕ್ರಮಗಳ ಮೂಲಕ ಲೈಫ್ (ಎಲ್.ಐ.ಎಫ್.ಇ.) ಸಂದೇಶವನ್ನು ರವಾನಿಸಲು ಪೆವಿಲಿಯನ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಪೆವಿಲಿಯನ್ ನ ವಿನ್ಯಾಸದಲ್ಲಿ ಮಾರ್ಗದರ್ಶಿ ಚಿಂತನೆಯೆಂದರೆ, ಶತಮಾನಗಳಿಂದ, ಭಾರತೀಯ ನಾಗರಿಕತೆಗಳು ಸುಸ್ಥಿರ ಜೀವನಶೈಲಿಯನ್ನು ರೂಢಿಗಳನ್ನು ಮುನ್ನಡೆಸಿವೆ. ಪರಿಸರ ಸ್ನೇಹಿ ರೂಢಿಗಳನ್ನು ಭಾರತೀಯ ಸಂಸ್ಕೃತಿಯಲ್ಲಿ ಅಳವಡಿಸಲಾಗಿದೆ. ಸ್ವಾಭಾವಿಕ ಪರಿಸರದ ಬಗ್ಗೆ ಗೌರವವನ್ನು ತೋರಿಸುವ ದೈನಂದಿನ ಜೀವನದಲ್ಲಿ ಹಲವಾರು ರೂಢಿಗಳು ಬೇರೂರಿವೆ. ಹವಾಮಾನ ಬದಲಾವಣೆಯ ವಿರುದ್ಧದ ನಮ್ಮ ಹೋರಾಟದಲ್ಲಿ ಅವು ಅಮೂಲ್ಯವೆಂದು ಸಾಬೀತಾಗಿವೆ.
ಒಂದು ಸಾವಿರ ವರ್ಷಗಳಲ್ಲಿ ತಲೆಮಾರುಗಳಿಂದ ಹಾದುಹೋದ ಸುಸ್ಥಿರತೆಯ ಬಗ್ಗೆ ಆಳವಾಗಿ ಬೇರೂರಿರುವ ಈ ಜ್ಞಾನವು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ವಿಶ್ವಕ್ಕೆ ಲೈಫ್ ಮಂತ್ರವನ್ನು ನೀಡಲು ಪ್ರೇರೇಪಿಸಿವೆ - ಅದು ಭೂಮಿಯ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಗಣನೀಯ ಪರಿಣಾಮ ಬೀರುವ ಗುರಿಯನ್ನು ಹೊಂದಿದೆ. ಜಾಗತಿಕ ಹವಾಮಾನ ಬಿಕ್ಕಟ್ಟನ್ನು ನಿಭಾಯಿಸಲು ಲೈಫ್ ಆಂದೋಲನವು ಭಾರತದ ಕೊಡುಗೆಯಾಗಿದೆ. ಆಧುನಿಕ ಜಗತ್ತಿನಲ್ಲಿ ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ವ್ಯಕ್ತಿಗಳನ್ನು 'ಗ್ರಹ-ಪರವಾದ ಜನರು' ಎಂದು ಪರಿವರ್ತಿಸಲು ಲೈಫ್ ಆಂದೋಲನ ಪ್ರಯತ್ನಿಸುತ್ತದೆ.
LiFE |
Pavilion |
|
|
ಪೆವಿಲಿಯನ್ ಲಾಂಛನ ಕುರಿತಂತೆ ಹೇಳುವುದಾದರೆ, ಹಸಿರು ಬಣ್ಣ ಹಚ್ಚಹಸಿರು ಭೂಮಿಯ ಸೂಚಕವಾಗಿದ್ದು, ಈ ಬಣ್ಣವನ್ನು ಲಾಂಛನದಲ್ಲಿ ವಿವಿಧಛಾಯೆಗಳಲ್ಲಿ ಬಳಸಲಾಗಿದೆ. ಪರಿಧಿಯ ಮೇಲಿನ ಎಲೆಯು ಪ್ರಕೃತಿಯನ್ನು ಪ್ರತಿನಿಧಿಸುತ್ತದೆ ಮತ್ತು ಹೆಗ್ಗುರುತುಗಳು ಭಾರತ ಸರ್ಕಾರದ ವಿವಿಧ ಉಪಕ್ರಮಗಳ ಮೂಲಕ ಪ್ರಕೃತಿಯೊಂದಿಗೆ ಸಮತೋಲನ ಮತ್ತು ಸಾಮರಸ್ಯವನ್ನು ಹೇಗೆ ಸಾಧಿಸಬಹುದು ಎಂಬುದನ್ನು ಪ್ರತಿನಿಧಿಸುತ್ತವೆ. ಲಾಂಛನದ ಕೇಂದ್ರ ಭಾಗವು ಸೂರ್ಯನ ನಡುವೆ ವೃಕ್ಷದೊಂದಿಗೆ ಸಮತೋಲಿತ ಪ್ರಕೃತಿಯನ್ನು ಪ್ರತಿನಿಧಿಸುತ್ತದೆ, ಪರ್ವತಗಳು, ನೀರು ಮತ್ತು ಜೀವವೈವಿಧ್ಯವನ್ನೂ ಲಾಂಛನ ಒಳಗೊಂಡಿದೆ. http://“सर्वे भवन्तु सुखिना”ಎಂಬ ಈ ಘೋಷವಾಕ್ಯವು ಜೀವನದ ಪ್ರಮುಖ ಸಂದೇಶವಾದ ಎಲ್ಲರೂ ಸಂತೋಷವಾಗಿರಲಿ ಎಂಬ ಸಂದೇಶದಿಂದ ಪ್ರೇರಿತವಾಗಿದೆ.
ಶ್ರೀ ಭೂಪೇಂದರ್ ಯಾದವ್ ಅವರು ಈಜಿಪ್ಟ್, ಯುಕೆಯಿಂದ ಕಾಪ್ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಪ್ 27ರ ವಿದ್ಯುಕ್ತ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಲೈಫ್ (ಎಲ್.ಐ.ಎಫ್.ಇ.) ಅಭಿಯಾನದ ಬಗ್ಗೆ
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರಲ್ಲಿ ಗ್ಲ್ಯಾಸ್ಗೋದಲ್ಲಿ ನಡೆದ ಕಾಪ್ 26 ರಲ್ಲಿ ವಿಶ್ವಕ್ಕೆ ಲೈಫ್ ಮಂತ್ರವನ್ನು ನೀಡಿದರು ಮತ್ತು ಅಂದಿನಿಂದ ಈ ಆಂದೋಲನವನ್ನು ವಿಶ್ವ ನಾಯಕರು ವ್ಯಾಪಕವಾಗಿ ಬೆಂಬಲಿಸಿದ್ದಾರೆ. ಹವಾಮಾನ ಬಿಕ್ಕಟ್ಟನ್ನು ಪರಿಹರಿಸಲು ವಿಶ್ವದಾದ್ಯಂತ ವೈಯಕ್ತಿಕ ಮತ್ತು ಸಾಮೂಹಿಕ ಕ್ರಮಗಳ ಶಕ್ತಿಯನ್ನು ಬಳಸಿಕೊಳ್ಳುವ ಜಾಗತಿಕ ಜನಾಂದೋಲನವಾಗಿ ಲೈಫ್ ಅಭಿಯಾನವನ್ನು ಭಾರತ ಮುನ್ನಡೆಸಿದೆ.
ಇದು ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ವಿವೇಚನಾರಹಿತ ಮತ್ತು ದುಂದುಗಾರಿಕೆಯ ಬಳಕೆಯಿಂದ ಪ್ರಜ್ಞಾಪೂರ್ವಕ ಮತ್ತು ಉದ್ದೇಶಪೂರ್ವಕಬಳಕೆಗೆ ಮನಃಪರಿವರ್ತನೆಯನ್ನು ಉತ್ತೇಜಿಸುವ ಮೂಲಕ ಮಾನವ ಮತ್ತು ಪ್ರಕೃತಿಯ ನಡುವಿನ ಸೂಕ್ಷ್ಮ ಸಮತೋಲನವನ್ನು ಪುನರುಜ್ಜೀವಗೊಳಿಸುವ ಗುರಿಯನ್ನು ಹೊಂದಿದೆ.
2022 ರಿಂದ 2027 ರ ಅವಧಿಯಲ್ಲಿ ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ವೈಯಕ್ತಿಕ ಮತ್ತು ಸಾಮೂಹಿಕ ಕ್ರಮಗಳನ್ನು ತೆಗೆದುಕೊಳ್ಳಲು ಕನಿಷ್ಠ ಒಂದು ಶತಕೋಟಿ ಭಾರತೀಯರು ಮತ್ತು ಇತರ ಜಾಗತಿಕ ನಾಗರಿಕರನ್ನು ಸಜ್ಜುಗೊಳಿಸುವ ಉದ್ದೇಶದೊಂದಿಗೆ ಲೈಫ್ ಅಭಿಯಾನವನ್ನು ವಿನ್ಯಾಸಗೊಳಿಸಲಾಗಿದೆ. 2028ರ ವೇಳೆಗೆ ಭಾರತದೊಳಗೆ, ಎಲ್ಲಾ ಗ್ರಾಮಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಕನಿಷ್ಠ ಶೇ.80ರಷ್ಟು ಪರಿಸರ ಸ್ನೇಹಿಯಾಗುವ ಗುರಿಯನ್ನು ಹೊಂದಿವೆ.
ಹೆಚ್ಚಿನ ಉಲ್ಲೇಖ:
ಲೈಫ್ ಅಭಿಯಾನ (ಎಲ್.ಐ.ಎಫ್.ಇ.) ದಸ್ತಾವೇಜನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:
ಹೆಚ್ಚಿನ ಮಾಹಿತಿಗಾಗಿ:
ಇಲ್ಲಿ ನಮ್ಮನ್ನು ಸಂಪರ್ಕಿಸಿ: http://envforestpib[at]gmail[dot]com
*****
(Release ID: 1874161)
Visitor Counter : 232