ಪ್ರವಾಸೋದ್ಯಮ ಸಚಿವಾಲಯ

ಲಂಡನ್ನಲ್ಲಿ ನವೆಂಬರ್ 7 ರಿಂದ 9 ರವರೆಗೆ ನಡೆಯುವ ವಿಶ್ವ ಪ್ರವಾಸ ಮಾರುಕಟ್ಟೆ 2022 ಪ್ರದರ್ಶನದಲ್ಲಿ ಪ್ರವಾಸೋದ್ಯಮ ಸಚಿವಾಲಯವು ಭಾಗವಹಿಸಲಿದೆ


ಈ ವರ್ಷದ ಪ್ರದರ್ಶನದ ಧ್ಯೇಯವಾಕ್ಯ 'ಪ್ರವಾಸದ ಭವಿಷ್ಯ ಈಗ ಪ್ರಾರಂಭವಾಗುತ್ತಿದೆ'

Posted On: 05 NOV 2022 3:57PM by PIB Bengaluru

ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯವು, ನವೆಂಬರ್ 7 ರಿಂದ 9 ರವರೆಗೆ ಲಂಡನ್ನಲ್ಲಿ ನಡೆಯುವ ವಿಶ್ವ ಪ್ರವಾಸ ಮಾರುಕಟ್ಟೆ (ಡಬ್ಲ್ಯು ಟಿ ಎಂ) 2022 ರಲ್ಲಿ ಭಾಗವಹಿಸಲಿದೆ, ಇದು ಅತಿದೊಡ್ಡ ಅಂತರರಾಷ್ಟ್ರೀಯ ಪ್ರವಾಸ ಪ್ರದರ್ಶನಗಳಲ್ಲಿ ಒಂದಾಗಿದೆ. ಈ ವರ್ಷದ ಪ್ರದರ್ಶನದ ಧ್ಯೇಯವಾಕ್ಯ 'ಪ್ರವಾಸದ ಭವಿಷ್ಯ ಈಗ ಪ್ರಾರಂಭವಾಗುತ್ತಿದೆ'. ಸುಮಾರು 2 ವರ್ಷಗಳ ನಂತರ ವಿದೇಶಿ ಪ್ರವಾಸಿಗರಿಗೆ ದೇಶವನ್ನು ಪುನಃ ತೆರೆಯುವುದರೊಂದಿಗೆ, ಭಾರತದ ಈ ವರ್ಷದ ಭಾಗವಹಿಸುವಿಕೆ ವಿಶೇಷವಾಗಿ ಮಹತ್ವ ಪಡೆದುಕೊಂಡಿದೆ. ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನದ ನಂತರ, ದೇಶವು ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಸಿದ್ಧವಾಗಿದೆ. ಪ್ರವಾಸೋದ್ಯಮಕ್ಕೆ ಆದ್ಯತೆಯ ತಾಣವಾಗಿ ತನ್ನನ್ನು ಪ್ರದರ್ಶಿಸಲು ಭಾರತವು ಡಬ್ಲ್ಯು ಟಿ ಎಂ 2022 ರಲ್ಲಿ ಭಾಗವಹಿಸುತ್ತಿದೆ.

2019 ರಲ್ಲಿ, ಭಾರತದ ಜಿಡಿಪಿಗೆ ಪ್ರಯಾಣ ಮತ್ತು ಪ್ರವಾಸೋದ್ಯಮದ ಕೊಡುಗೆಯು ಒಟ್ಟು ಆರ್ಥಿಕತೆಯ ಶೇ.5.19 ಆಗಿತ್ತು. 2019 ರಲ್ಲಿ, ಭಾರತೀಯ ಪ್ರವಾಸೋದ್ಯಮ ಕ್ಷೇತ್ರವು 79.86 ಮಿಲಿಯನ್ ಉದ್ಯೋಗಗಳನ್ನು (ನೇರ ಮತ್ತು ಪರೋಕ್ಷ ಉದ್ಯೋಗ) ಹೊಂದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರಂತರ ಪ್ರಯತ್ನಗಳು ಪ್ರವಾಸೋದ್ಯಮವು ಕೋವಿಡ್ -19 ಸಾಂಕ್ರಾಮಿಕ ಆಘಾತದಿಂದ ಕ್ರಮೇಣವಾಗಿ ಸಾಂಕ್ರಾಮಿಕ ಪೂರ್ವ ಮಟ್ಟಕ್ಕೆ ಚೇತರಿಸಿಕೊಳ್ಳಲು ಸಹಾಯ ಮಾಡಿವೆ.

ರಾಜ್ಯ ಸರ್ಕಾರಗಳು, ಕೇಂದ್ರ ಸಚಿವಾಲಯಗಳು, ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ), ಡಿಎಂಸಿಗಳು, ಪ್ರವಾಸ ನಿರ್ವಾಹಕರು, ಹೋಟೆಲ್ ಮಾಲೀಕರು, ಟ್ರಾವೆಲ್ ಏಜೆಂಟ್ಗಳು, ಆನ್ಲೈನ್ ಟ್ರಾವೆಲ್ ಏಜೆಂಟ್ಗಳು, ವೈದ್ಯಕೀಯ ಪ್ರಯಾಣದ ಸುಗಮಗಾರರು ಸೇರಿದಂತೆ ಒಟ್ಟು 16 ಭಾಗೀದಾರರು ಇಂಡಿಯಾ ಪೆವಿಲಿಯನ್ನಲ್ಲಿ ಸಹ ಪ್ರದರ್ಶಕರಾಗಿ ಭಾಗವಹಿಸುತ್ತಿದ್ದಾರೆ. ವೈದ್ಯಕೀಯ ಪ್ರಯಾಣ, ಐಷಾರಾಮಿ ರೈಲುಗಳು ಮತ್ತು ಪ್ರವಾಸೋದ್ಯಮ ಉತ್ಪನ್ನಗಳ ಹರವು ಸೇರಿದಂತೆ ವೈವಿಧ್ಯಮಯ ಪ್ರವಾಸೋದ್ಯಮ ಉತ್ಪನ್ನಗಳು ಮತ್ತು ಸೇವೆಗಳನ್ನು ಅಂತರರಾಷ್ಟ್ರೀಯ ವ್ಯಾಪಾರ ಸಮುದಾಯಕ್ಕೆ ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ. ಈ ವರ್ಷ, ಭಾರತೀಯ ನಿಯೋಗದ ನೇತೃತ್ವವನ್ನು ಭಾರತ ಸರ್ಕಾರದ ಕಾರ್ಯದರ್ಶಿ (ಪ್ರವಾಸೋದ್ಯಮ) ಶ್ರೀ ಅರವಿಂದ್ ಸಿಂಗ್ ವಹಿಸಿದ್ದಾರೆ, ಶ್ರೀ ರಾಕೇಶ್ ವರ್ಮಾ, ಹೆಚ್ಚುವರಿ ಕಾರ್ಯದರ್ಶಿ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು, ಭಾರತೀಯ ಪ್ರಯಾಣ ಮತ್ತು ಪ್ರವಾಸೋದ್ಯಮ ಪಾಲುದಾರರ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ.

ಭಾರತ ಸರ್ಕಾರಕ್ಕೆ ಪ್ರವಾಸೋದ್ಯಮದಲ್ಲಿ ದೇಶದ ಸಾಮರ್ಥ್ಯದ ಬಗ್ಗೆ ಅರಿವಿದೆ ಮತ್ತು ಭಾರತವನ್ನು ಜಾಗತಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಡಬ್ಲ್ಯು ಟಿ ಎಂ 2022 ರ ಸಂದರ್ಭದಲ್ಲಿ, ಪ್ರವಾಸೋದ್ಯಮ ಕಾರ್ಯದರ್ಶಿ ಶ್ರೀ ಅರವಿಂದ್ ಸಿಂಗ್ ನೇತೃತ್ವದ ಭಾರತೀಯ ನಿಯೋಗವು, ಭಾರತ ಸರ್ಕಾರದ ಪ್ರವಾಸೋದ್ಯಮ ಕೊಡುಗೆಗಳನ್ನು ಜಾಗತಿಕ ಪ್ರವಾಸೋದ್ಯಮದ ಪಾಲುದಾರರಾದ ಪ್ರವಾಸ ನಿರ್ವಾಹಕರು, ಟ್ರಾವೆಲ್ ಏಜೆಂಟ್ಗಳು, ಮಾಧ್ಯಮ ಇತ್ಯಾದಿಗಳಿಗೆ ಪ್ರದರ್ಶಿಸುತ್ತದೆ. ಭಾರತವು ಭವಿಷ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೃಹತ್ ಬೆಳವಣಿಗೆಗೆ ಸಿದ್ಧವಾಗಿದ್ದು, ಜಾಗತಿಕ ಹೂಡಿಕೆದಾರರಿಗೆ ಭಾರತ ನೀಡುವ ಹೂಡಿಕೆ ಅವಕಾಶಗಳು ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಲು ಭಾರತ ಸರ್ಕಾರದ ನಿಯೋಗಕ್ಕೆ ಇದು ಅವಕಾಶವನ್ನು ಒದಗಿಸುತ್ತದೆ.

ಭಾರತವು 01 ಡಿಸೆಂಬರ್ 2022 ರಿಂದ ಪ್ರಾರಂಭವಾಗಲಿರುವ ಜಿ20 ಅಧ್ಯಕ್ಷತೆಗೆ ಸಜ್ಜಾಗುತ್ತಿದೆ. ತನ್ನ ಅಧ್ಯಕ್ಷತೆಯಲ್ಲಿ, ದೇಶವು ದೇಶದ 55 ನಗರಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸುವ ನಿರೀಕ್ಷೆಯಿದೆ. ಜಿ-20 ಅಧ್ಯಕ್ಷತೆಯು ಭಾರತದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರತದ ಪ್ರವಾಸೋದ್ಯಮ ಕೊಡುಗೆಗಳನ್ನು ತಿಳಿಸಲು ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಪ್ರವಾಸೋದ್ಯಮದ ಯಶೋಗಾಥೆಗಳನ್ನು ಹಂಚಿಕೊಳ್ಳಲು ಅಪ್ರತಿಮ ಅವಕಾಶವನ್ನು ನೀಡುತ್ತದೆ.

ಪ್ರವಾಸೋದ್ಯಮ ಸಚಿವಾಲಯವು ಪ್ರವಾಸೋದ್ಯಮ ಕ್ಷೇತ್ರವನ್ನು ವಿಶೇಷವಾಗಿ ಕೋವಿಡ್ ಸಾಂಕ್ರಾಮಿಕದ ನಂತರ ಹೊಸ ಎತ್ತರಕ್ಕೆ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ ಮತ್ತು 2030 ರ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯನ್ನು ವೇಗಗೊಳಿಸುತ್ತದೆ.

******



(Release ID: 1873988) Visitor Counter : 198