ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ವಿಭಿನ್ನ ದೀಪಾವಳಿ - ಶಾಲಾ ಮಕ್ಕಳ ನೇತೃತ್ವದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ


3 ವಾರಗಳ ಅಭಿಯಾನದಲ್ಲಿ ಮೂಲದಲ್ಲಿಯೇ ತ್ಯಾಜ್ಯ ಬೇರ್ಪಡಿಸುವ ಉದ್ದೇಶದಲ್ಲಿ 75 ಲಕ್ಷ ಮಕ್ಕಳು ಸೇರ್ಪಡೆ

Posted On: 30 OCT 2022 1:39PM by PIB Bengaluru

‌ಈ ದೀಪಾವಳಿಯು ಭಾರತದ ಅನೇಕ ನಗರಗಳಲ್ಲಿ ವಿಭಿನ್ನವಾಗಿತ್ತು. ದೀಪಾವಳಿಯ ಆಸುಪಾಸಿನಲ್ಲಿ ಸಾಮಾನ್ಯವಾಗಿ  ಕೇಳಿಬರುತ್ತಿದ್ದ ಪಟಾಕಿಗಳ ಶಬ್ದದ ಬದಲಿಗೆ, ‘ಹಮೇಂ ಗರ್ವ್ ಹೈ’ ಹಾಡು ಮತ್ತು “ಹರ ಗೀಲಾ ಸುಖ ನೀಲಾ” ಎಂಬ ಹಾಡುಗಳಿಂದ ರಸ್ತೆಗಳಲ್ಲಿ ಮತ್ತು ಸಮುದಾಯದ  ಬೀದಿಗಳಲ್ಲಿ ಎರಡು ಡಬ್ಬಿಗಳನ್ನು ಹೊಂದಿರುವ ಸಂಚಾರಿ  ವ್ಯಾನ್ಗಳು ಮತ್ತು ಕೈ ಗಾಡಿಗಳು ಮನೆ ಮನೆಗೆ ತೆರಳಿ ಬೇರ್ಪಡಿಸಿದ ತ್ಯಾಜ್ಯವನ್ನು ಸಂಗ್ರಹಿಸಿಸುತ್ತಿದ್ದವು.

ದೇಶದಾದ್ಯಂತ ಸುಮಾರು 45,000 ಶಾಲೆಗಳ 75 ಲಕ್ಷ ವಿದ್ಯಾರ್ಥಿಗಳು, ತ್ಯಾಜ್ಯ ಮುಕ್ತ ನಗರಗಳ ಗುರಿ ಸಾಧನೆ ನಿಟ್ಟಿನಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (ಎಂಒಎಚ್ಯುಎ) ಕೈಗೊಂಡ ಮೂಲದಲ್ಲಿ ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸುವ ಬೃಹತ್ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು. ಅಲ್ಲದೆ, ಅಯಾ ನಗರದ ನಗರ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆಗಳ ನೇತೃತ್ವದಲ್ಲಿ ಕೈಗೊಂಡ ಈ ಅಭಿಯಾನದಲ್ಲಿ ನಾಗರಿಕರು, ಸಮುದಾಯ ಗುಂಪುಗಳು ಮತ್ತು ಸಂಘಟನೆಗಳು ಅತ್ಯುತ್ಸಾಹದಿಂದ ಭಾಗವಹಿಸಿದ್ದರು.

"ಸ್ವಚ್ಛತಾ ಕೆ ದೋ ರಂಗ್" (ಸ್ವಚ್ಛತೆಯ ಎರಡು ಬಣ್ಣಗಳು), "ಹರ ಗೀಲಾ ಸುಖ ನೀಲಾ" (ಹಸಿ ತ್ಯಾಜ್ಯಕ್ಕೆ ಹಸಿರು ತೊಟ್ಟಿ ಮತ್ತು ಒಣ ತ್ಯಾಜ್ಯಕ್ಕೆ ನೀಲಿ ತೊಟ್ಟಿ) ಅಭಿಯಾನದ ಭಾಗವಾಗಿ, ಮೂಲದಲ್ಲಿಯೇ ಕಸ ವಿಂಗಡಣೆಗೆ ಕನಿಷ್ಠ ಎರಡು ಬಿನ್ ಹೊಂದಲು ಒತ್ತು ನೀಡಲಾಯಿತು. ಸ್ವಚ್ಛ ಭಾರತ್ ಮಿಷನ್ ಮೂಲಕ ೩೨ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ೩೫೦೦ ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳು (ಯುಎಲ್ ಬಿಗಳು) ಶಾಲೆಗಳು, ಸಮುದಾಯಗಳನ್ನು ತಲುಪಿದವು, ಮನೆ ಮನೆಗೆ ತೆರಳಿ ಮೂಲದಲ್ಲಿ ತ್ಯಾಜ್ಯವನ್ನು ವಿಂಗಡಿಸುವ ಕುರಿತು ತಳಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮದೊಂದಿಗೆ ಮನೆಗಳನ್ನು ತಲುಪಲಾಯಿತು. ಬೇರೆ ಬೇರೆ ವಯೋಮಾನದ ವಿದ್ಯಾರ್ಥಿಗಳು ಚಿತ್ರಕಲೆ, ಕಲೆ ಮತ್ತು ಕರಕುಶಲ ಹಸಿರು ಲೇಬಲ್ಗಳ ಸೃಷ್ಟಿ (ಹಸಿ ತ್ಯಾಜ್ಯಕ್ಕಾಗಿ) ಮತ್ತು ನೀಲಿ ಲೇಬಲ್ಗಳು (ಒಣ ತ್ಯಾಜ್ಯಕ್ಕಾಗಿ), ತ್ಯಾಜ್ಯದಿಂದ ಕಸದ ತೊಟ್ಟಿಗಳು ಮತ್ತು ಆಟಿಕೆಗಳನ್ನು ನಿರ್ಮಿಸುವುದು, ಬೀದಿ ನಾಟಕಗಳು ಮುಂತಾದ ವಿಶೇಷ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು ಮತ್ತು ಸ್ವಚ್ಛತಾ ಕಾ ಉಪ್ಹಾರ್ ಸಂದೇಶವನ್ನು ಮನೆಗಳಿಗೆ ತಲುಪಿಸಿದರು.

ಅಸ್ಸಾಂನ ಖೋವಾಯ್ನ ಶಾಲಾ ವಿದ್ಯಾರ್ಥಿಗಳು, ಮಹಾತ್ಮ ಗಾಂಧಿಯವರ ಸ್ವಚ್ಛ ಭಾರತದ ದೂರದೃಷ್ಟಿಯನ್ನು ಆಧರಿಸಿದ ನೃತ್ಯ ನಾಟಕವನ್ನು ಪ್ರದರ್ಶಿಸಿದರೆ, ಪಾಟ್ನಾ ನಗರ ನಿಗಮ ಶಾಲೆಯ ವಿದ್ಯಾರ್ಥಿಗಳು "ತ್ಯಾಜ್ಯದಿಂದ ಅದ್ಭುತ" ಎಂಬ ಶೀರ್ಷಿಕೆಯಡಿಯಲ್ಲಿ ತ್ಯಾಜ್ಯದಿಂದ ಮಾದರಿಗಳನ್ನು ತಯಾರಿಸಿದವು. ಛೋಟಾ ಭೀಮ್ನಂತಹ ಮಕ್ಕಳ ನೆಚ್ಚಿನ ಪಾತ್ರಗಳು ಜಾಗೃತಿಯನ್ನು ಹರಡಲು ಈ ಮಾದರಿಗಳ ಭಾಗವಾಗಿದ್ದವು. ಎಂಸಿಡಿ ಅಡಿಯಲ್ಲಿ ಕೆಲವು ಶಾಲೆಗಳು ವಿದ್ಯಾರ್ಥಿಗಳಿಗೆ ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸುವ ಪ್ರಾಮುಖ್ಯತೆಯನ್ನು ಪ್ರದರ್ಶಿಸಲು ಜಿಂಗಲ್ಸ್,  ಪಜಲ್ಸ್ (ಪದಬಂಧ)ಗಳ ವಿಶಿಷ್ಟ ಆಟಗಳನ್ನು ಸಹ  ಆಯೋಜಿಸಿದವು.

ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿಗಳಲ್ಲಿ ಆರು ಬಾರಿ ಭಾರತದ ಸ್ವಚ್ಛ ನಗರ ಮತ್ತು ೭-ಸ್ಟಾರ್ ಕಸ ಮುಕ್ತ ನಗರ ಪ್ರಶಸ್ತಿ ಜಯಿಸಿರುವ ಇಂದೋರ್, ದೀಪಾವಳಿಯ ನಂತರ ನಗರದಾದ್ಯಂತ ಸ್ವಚ್ಛತಾ ಅಭಿಯಾನವನ್ನು ನಡೆಸುವ ಗಮನಾರ್ಹ ಪ್ರಯತ್ನವನ್ನು ಪ್ರದರ್ಶಿಸಿದೆ. ಜಾಗೃತಿ ಅಭಿಯಾನದ ಭಾಗವಾಗಿ, ನವದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್ ಡಿಎಂ ಸಿ ) ಸ್ವಚ್ಛತಾ ಲಾಂಛನದೊಂದಿಗೆ ಬೀದಿಗಿಳಿದಿದೆ. ಫಾರೆಸ್ಟ್ ಘಾಟ್ನಲ್ಲಿ ಸ್ವಯಂ-ಸುಸ್ಥಿರ ಪ್ರದೇಶದ ಉದ್ದೇಶದೊಂದಿಗೆ, ಅಸ್ಸಾಂನ ತೇಜ್ಪುರ ಪೌರಾಡಳಿತ ನಿಗಮದಿಂದ ವರ್ಮಿ-ಕಾಂಪೋಸ್ಟಿಂಗ್ (ಎರೆಹುಳುವಿನ ಗೊಬ್ಬರ) ಮತ್ತು ಪಿಟ್-ಕಾಂಪೋಸ್ಟಿಂಗ್ ಕುರಿತು ಎಸ್ಎಚ್ಜಿ ಸದಸ್ಯರು ಮತ್ತು ನಿವಾಸಿಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನೀಡಲಾಯಿತು. ಕೇರಳದ ಮಲಪ್ಪುರಂ ಪುರಸಭೆಯು ಪ್ರತ್ಯೇಕತಾ ಅಭಿಯಾನದ ಅಡಿಯಲ್ಲಿ ಅಂತಾರಾಜ್ಯ ಕಾರ್ಮಿಕರಿಗೆ ತರಬೇತಿ  ಗೋಷ್ಠಿಗಳನ್ನು ನಡೆಸಿತು. ಸಿಆರ್ ಪಿಎಫ್  ಪಡೆಗಳು ಕೂಡ ಕಾಶ್ಮೀರದ ಒಪಿಎಸ್ ವಲಯದಿಂದ ಅಭಿಯಾನದಲ್ಲಿ ಸೇರಿಕೊಂಡವು.  ಅವರು ಸಿಆರ್ಪಿಎಫ್ ಶಿಬಿರದ ರಸ್ತೆಗಳು, ಉದ್ಯಾನವನಗಳು ಮತ್ತು ಆವರಣಗಳನ್ನು ಸ್ವಚ್ಛಗೊಳಿಸಲು ಅವರು ಪೊರಕೆ ಹಿಡಿದರು. 

ಮೂಲದಲ್ಲಿ ತ್ಯಾಜ್ಯ ವಿಂಗಡಣೆಯ ರಾಷ್ಟ್ರವ್ಯಾಪಿ ಅಭಿಯಾನವು ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ ಮತ್ತು ಪಾರಂಪರಿಕ ತ್ಯಾಜ್ಯವನ್ನು ಸುರಿಯುವ ಜಾಗಕ್ಕೆ ಹೋಗುವ ತ್ಯಾಜ್ಯವನ್ನು ಕಡಿಮೆ ಮಾಡಲು ತಳ ಮಟ್ಟದ ಕ್ರಿಯೆಯ ಮೂಲಕ ಕೇಂದ್ರೀಕೃತ ವ್ಯವಸ್ಥೆಂಯಲ್ಲಿ ಪಾಲ್ಗೊಳ್ಳುವಿಕೆಯನ್ನ್ನು ಉತ್ತೇಜನ  ನೀಡಿತು. ಈ ಬೃಹತ್ ಜನಾಂದೋಲನವು ಸಮಾಜದ ಎಲ್ಲಾ ವರ್ಗಗಳ ನಾಗರಿಕರು ತಮ್ಮದೇ ಆದ ವಿಶೇಷ ರೀತಿಯಲ್ಲಿ ಮೂಲದಲ್ಲಿ ತ್ಯಾಜ್ಯವನ್ನು ಪ್ರತ್ಯೇಕಿಸುವ ಬಗ್ಗೆ ಜಾಗೃತಿ ಮೂಡಿಸಿದರು ಮತ್ತು ಅಭಿಯಾನ ಯಶಸ್ವಿಗೊಳಿಸಿದರು. ನಗರಗಳನ್ನು ಕಸ ಮುಕ್ತಗೊಳಿಸುವತ್ತ ರಾಜ್ಯಗಳು ತಮ್ಮ ಶಕ್ತಿಯನ್ನು ವ್ಯಯಿಸಲು ಆರಂಭಿಸಿರುವುದರಿಂದ ಇದರ ಪರಿಣಾಮವು ಈಗಾಗಲೇ ಕ್ಷೇತ್ರಮಟ್ಟದಲ್ಲಿ ಅಥವಾ ತಳಮಟ್ಟದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

******



(Release ID: 1872090) Visitor Counter : 138