ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ದೆಹಲಿಯ ಸೂಚನಾ ಭವನದಲ್ಲಿರುವ ಕೇಂದ್ರೀಯ ಸಂವಹನ ಶಾಖೆಯಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ 2.0 ರನ್ವಯ ಪ್ರಗತಿ ಪರಿಶೀಲಿಸಿದ ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ

Posted On: 28 OCT 2022 7:02PM by PIB Bengaluru

2022ರ ಅಕ್ಟೋಬರ್ 27ರಂದು ಸೂಚನಾ ಭವನದಲ್ಲಿರುವ ಕೇಂದ್ರೀಯ ಸಂವಹನ ಶಾಖೆ (ಸಿಬಿಸಿ)ಯ ಪ್ರಧಾನ ಕಚೇರಿಯಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ 2.0 ರನ್ವಯ ಆಗಿರುವ ಪ್ರಗತಿಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಪರಿಶೀಲಿಸಿದರು.   ಎಎಸ್ ಮತ್ತು ಎಫ್ಎ ಶ್ರೀ ಜಯಂತ್ ಸಿನ್ಹಾ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಆರ್ಥಿಕ ಸಲಹೆಗಾರ ಶ್ರೀ ಆರ್.ಕೆ. ಜೆನಾ, ಎಡಿಜಿ (ಆಡಳಿತ) ಶ್ರೀ ಸತೀಶ್ ನಂಬುದಿರಿಪಾಡ್, ಮತ್ತು ಎಡಿಜಿ (ಎಸಿಸಿಟಿಟಿಎಸ್) ಶ್ರೀಮತಿ ರಂಜನಾ ದೇವ್ ಶರ್ಮಾ ಮತ್ತು ಸಿಬಿಸಿಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಚಂದ್ರ ಅವರು ಲೆಕ್ಕಪತ್ರ ವಿಭಾಗದ ಅಭಿಲೇಖಾಲಯ ಸೇರಿದಂತೆ ಕಚೇರಿಯ ವಿವಿಧ ಮಹಡಿಗಳಲ್ಲಿ ಒಂದು ಸುತ್ತು ಹಾಕಿ, ವಿಶೇಷ ಅಭಿಯಾನದ ಸಮಯದಲ್ಲಿ ತೆಗೆದುಹಾಕಲು ನಿಗದಿಪಡಿಸಲಾಗಿರುವ 10 ವರ್ಷಗಳಿಂದ ಬಿದ್ದಿರುವ ಹಳೆಯ ಪಾವತಿಸಿದ ಬಿಲ್ ಗಳನ್ನು ಪರಿಶೀಲಿಸಿದರು. ಹಳೆಯ ದಾಖಲೆಗಳನ್ನು ನಾಶಪಡಿಸಿ ಸ್ಥಳವನ್ನು ತೆರವು ಮಾಡುವಲ್ಲಿ ಆಗಿರುವ ಪ್ರಗತಿಯನ್ನು ಅಧಿಕಾರಿಗಳು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯವರಿಗೆ ವಿವರಿಸಿದರು. 2017-18ನೇ ಸಾಲಿಗೆ ಮುಂಚಿನ ದಾಖಲೆಗಳನ್ನು ಪಟ್ಟಿ ಮಾಡಿ ಚೂರುಚೂರು ಮಾಡಲು ನಿರ್ಧರಿಸಲಾಗಿದ್ದು, ಈಗಾಗಲೇ ಶೇ.50ಕ್ಕೂ ಹೆಚ್ಚು ಕೆಲಸ ಪೂರ್ಣಗೊಂಡಿವೆ. ವಿಂಗಡಿಸಿದ ಬಿಲ್ ಗಳನ್ನು ಇಡಲು ಮತ್ತು ಬಿಲ್ ಚೂರುಚೂರು ಮಾಡಲು ನಿಯೋಜಿಸಲಾದ ಕೊಠಡಿಗಳನ್ನು ಸಹ ತಂಡಕ್ಕೆ ತೋರಿಸಲಾಯಿತು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯವರು ಆಗಿರುವ ಕೆಲಸದ ಪ್ರಮಾಣ ಮತ್ತು ತೆರವಾಗಿರುವ ಸ್ಥಳದ ಕುರಿತಂತೆ ತೃಪ್ತಿ ವ್ಯಕ್ತಪಡಿಸಿದರು. ವಿಶೇಷ ಅಭಿಯಾನದ ಭಾಗವಾಗಿ ಬಿಲ್ ಗಳು, ಐಟಿ ತ್ಯಾಜ್ಯ ಮತ್ತು ದಿನಪತ್ರಿಕೆಯ ಹಳೆಯ ಮಾದರಿ ಪ್ರತಿಗಳನ್ನು ತೆರವುಗೊಳಿಸಿದ ನಂತರ 2500 ಚದರ ಅಡಿಯಷ್ಟು ಜಾಗವನ್ನು ಮುಕ್ತಗೊಳಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯವರು ಲೆಕ್ಕಪತ್ರ ವಿಭಾಗಕ್ಕೂ ಭೇಟಿ ನೀಡಿದ್ದರು, ಅಲ್ಲಿ ಅವರಿಗೆ ಬಿಲ್ಲಿಂಗ್ ಪ್ರಕ್ರಿಯೆಗಳನ್ನು ವಿವರಿಸಲಾಯಿತು. ಸಿಬಿಸಿ ಅಧಿಕಾರಿಗಳ ತಂಡದ ಪ್ರಯತ್ನಗಳನ್ನು ಅವರು ಶ್ಲಾಘಿಸಿ, ಉಳಿದ ಕೆಲಸವನ್ನು ಶೀಘ್ರ ಪೂರ್ಣಗೊಳಿಸುವ ಅಗತ್ಯವಿದೆ ಎಂದು ಹೇಳಿದರು.

  

  

********


(Release ID: 1871830) Visitor Counter : 144