ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ಮತ್ತೆ ಎಲ್ಲಾ ನಿರೀಕ್ಷೆಗಳನ್ನು ಮೀರಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ʻಇನ್‌ವೈಟ್ʼ
ಪ್ರಕಟಣಾ ದಿನಾಂಕ:
27 OCT 2022 6:21PM by PIB Bengaluru
ʻಇನ್‌ವೈಟ್ʼನ (InvIT) #2ನೇ ಸುತ್ತು ನಿಗದಿತ ಅವಧಿಯ 10% ಒಳಗಾಗಿ ಸುಮಾರು 5 ಪಟ್ಟು ಗರಿಷ್ಠ ಮಿತಿಯನ್ನು ಮೀರಿ ನೋಂದಣಿಯಾಗಿದೆ(ಓವರ್‌ಸಬ್‌ಸ್ಕ್ರೈಬ್ ಆಗಿದೆ).
ಈ ಸುತ್ತು ವಿಶೇಷವಾಗಿದೆ, ಏಕೆಂದರೆ 25% ರಷ್ಟು ʻಪರಿವರ್ತಿಸಲಾಗದ ಸಾಲಪತ್ರಗಳುʼ (ನಾನ್ ಕನ್‌ವರ್ಟಿಬಲ್ ಡಿಬೆಂಚರ್ಸ್-ʻಎನ್‌ಸಿಡಿʼ) ಚಿಲ್ಲರೆ ಹೂಡಿಕೆದಾರರಿಗೆ ಮೀಸಲಾಗಿವೆ. ನಮ್ಮ ದೇಶದ ಸಾಮಾನ್ಯ ನಾಗರಿಕರಿಗೆ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುವ ಈ ಕಾರ್ಯಸೂಚಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಚಾಲಕ ಶಕ್ತಿಯಾಗಿದ್ದಾರೆ.
ಈ ಆಯ್ಕೆಯೊಂದಿಗೆ ನಿವೃತ್ತ ನಾಗರಿಕರು, ವೇತನದಾರರು, ಸಣ್ಣ ಮತ್ತು ಮಧ್ಯಮ ವ್ಯಾಪಾರ ಮಾಲೀಕರು ನವ ಭಾರತವನ್ನು ನಿರ್ಮಿಸುವಲ್ಲಿ ಹೂಡಿಕೆ ಮಾಡಲು ಮತ್ತು ಅದೇ ಸಮಯದಲ್ಲಿ ಆರೋಗ್ಯಕರ ಆದಾಯವನ್ನು (ವರ್ಷಕ್ಕೆ ಕನಿಷ್ಠ 8.05% ರಷ್ಟು) ಪಡೆಯಲು ಉತ್ತಮ ಅವಕಾಶವನ್ನು ಪಡೆದಿದ್ದಾರೆ. ನಾಳೆ ಈ ʻಇನ್‌ವೈಟ್ʼ ಸಾಲಪತ್ರಗಳನ್ನು (ಎನ್‌ಸಿಡಿ) ʻಬಾಂಬೆ ಷೇರು ವಿನಿಮಯ ಕೇಂದ್ರʼಕ್ಕೆ (ಬಿಎಸ್ಇ) ಸೇರ್ಪಡೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇದೊಂದು ಐತಿಹಾಸಿಕ ದಿನವಾಗಿದೆ. ಶ್ರೀ ಗಡ್ಕರಿ ಅವರು ಗಂಟೆ ಮೊಳಗಿಸುವ ಮೂಲಕ ಮೂಲಸೌಕರ್ಯ ಕ್ಷೇತ್ರದ ಬಂಡವಾಳ ಹೂಡಿಕೆಯಲ್ಲಿ ಸಾರ್ವಜನಿಕ ಪಾಲ್ಗೊಳ್ಳುವಿಕೆಗೆ ಶುಭಸೂಚನೆ ನೀಡಲಿದ್ದಾರೆ.
******
(ಪ್ರಕಟಣೆ ಐ.ಡಿ.: 1871490)
ವಿಸಿಟರ್ ಕೌಂಟರ್ : 184