ವಾರ್ತಾ ಮತ್ತು ಪ್ರಸಾರ ಸಚಿವಾಲಯ

53ನೇ ಐಎಫ್ಎಫ್ಐ 2022ಕ್ಕೆ ಚಲನಚಿತ್ರಗಳ ಅಧಿಕೃತ ಆಯ್ಕೆ ಪ್ರಕಟಿಸಿದ ಭಾರತೀಯ  ಪನೋರಮಾ


ಐಎಫ್ಎಫ್ಐನಲ್ಲಿ 25 ಫೀಚರ್ ಫಿಲ್ಮ್ ಮತ್ತು 20 ನಾನ್-ಫೀಚರ್ ಫಿಲ್ಮ್ ಗಳ ಪ್ರದರ್ಶನ

ಕನ್ನಡದ ‘ಹದಿನೇಳೆಂಟು’ ಆರಂಭಿಕ (ಉದ್ಘಾಟನಾ) ಚಲನಚಿತ್ರವಾಗಿ ಪ್ರದರ್ಶನಗೊಳ್ಳಲಿದೆ

ನಾನ್-ಫೀಚರ್ ವಿಭಾಗದಲ್ಲಿ ಹಿಂದಿ ಭಾಷೆಯ ‘ದಿ ಶೋ ಮಸ್ಟ್ ಗೋ ಆನ್’ ಆರಂಭಿಕ ಚಲನಚಿತ್ರವಾಗಿ ಪ್ರದರ್ಶನಗೊಳ್ಳಲಿದೆ

Posted On: 22 OCT 2022 11:35AM by PIB Bengaluru

ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ(ಐಎಫ್ಎಫ್ಐ)ದ ಪ್ರಮುಖ ಭಾಗವಾಗಿರುವ ಭಾರತೀಯ ಪನೋರಮಾವು ಇಂದು 25 ಫೀಚರ್ ಚಲನಚಿತ್ರಗಳು ಮತ್ತು 20 ನಾನ್-ಫೀಚರ್ ಚಲನಚಿತ್ರಗಳನ್ನು ಅಧಿಕೃತ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ. ಗೋವಾದಲ್ಲಿ 2022 ನವೆಂಬರ್ 20ರಿಂದ 28ರ ವರೆಗೆ ಜರುಗಲಿರುವ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್ಎಫ್ಐ)ದಲ್ಲಿ ಆಯ್ಕೆಯಾದ ಈ ಚಲನಚಿತ್ರಗಳು ಪ್ರದರ್ಶನ ಕಾಣಲಿವೆ.

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಆಯೋಜಿಸಿರುವ ಭಾರತೀಯ ಪನೋರಮಾವು ತನ್ನ ನಿಯಮಗಳಡಿ ಬರುವ ಷರತ್ತುಗಳು ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿ, ಸಿನಿಮೀಯ, ವಿಷಯಾಧಾರಿತ ಮತ್ತು ಸೌಂದರ್ಯ ಉತ್ಕೃಷ್ಟತೆಯ ಫೀಚರ್(ವೈಶಿಷ್ಟ್ಯ) ಮತ್ತು ನಾನ್-ಫೀಚರ್(ವೈಶಿಷ್ಟ್ಯವಲ್ಲದ) ಚಲನಚಿತ್ರಗಳನ್ನು ಆಯ್ಕೆ ಮಾಡುವ ಉದ್ದೇಶ ಅಥವಾ ಗುರಿ ಹೊಂದಿದೆ.

ಭಾರತೀಯ ಪನೋರಮಾದ ಚಲನಚಿತ್ರಗಳ ಆಯ್ಕೆ ಸಮಿತಿಯಲ್ಲಿ ಜಾಗತಿಕ ಚಿತ್ರರಂಗದ ದಿಗ್ಗಜರು ತೀರ್ಪುಗಾರರಾಗಿದ್ದಾರೆ. ಫೀಚರ್ ಚಲನಚಿತ್ರಗಳ ವಿಭಆಗದಲ್ಲಿ 12 ತೀರ್ಪುಗಾರರು ಮತ್ತು ನಾನ್-ಫೀಚರ್ ಚಲನಚಿತ್ರಗಳ ವಿಭಾಗದಲ್ಲಿ 6 ತೀರ್ಪುಗಾರರು ಸೇರಿ ಈ ಚಲನಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ. ಈ ವಿಭಾಗಗಳಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಆಯ್ಕೆ ಸಮಿತಿಯ ತೀರ್ಪುಗಾರರು ತಮ್ಮ ವೈಯಕ್ತಿಕ ಪರಿಣತಿಯೊಂದಿಗೆ ಚಿತ್ರಗಳ ಆಯ್ಕೆಗೆ ಸಮತೋಲಿತ ಕೊಡುಗೆ ನೀಡಿದ್ದು, ಇದು ಆಯಾ ವರ್ಗಗಳ ಭಾರತೀಯ ಪನೋರಮಾ ಚಲನಚಿತ್ರಗಳ ಆಯ್ಕೆಗೆ ಕಾರಣವಾಗಿದೆ.

ಫೀಚರ್ ಚಲನಚಿತ್ರಗಳು

ಫೀಚರ್ ಚಲನಚಿತ್ರಗಳ ಆಯ್ಕೆ ಸಮಿತಿಯು 12 ಸದಸ್ಯರನ್ನು ಒಳಗೊಂಡಿದ್ದು, ಖ್ಯಾತ ನಿರ್ದೇಶಕ ಮತ್ತು ಸಂಪಾದಕ ಶ್ರೀ ವಿನೋದ್ ಗಣತ್ರ ಅವರು ಸಮಿತಿಯ ಅಧ್ಯಕ್ಷರಾಗಿ ನೇತೃತ್ವ ವಹಿಸಿದ್ದರು. ಫೀಚರ್ ಚಲನಚಿತ್ರಗಳ ಆಯ್ಕೆ ಸಮಿತಿಯು ವಿವಿಧ ಮೆಚ್ಚುಗೆ ಪಡೆದ ಚಲನಚಿತ್ರಗಳು ಮತ್ತು ಚಲನಚಿತ್ರ-ಸಂಬಂಧಿತ ವೃತ್ತಿಗಳನ್ನು ಪ್ರತ್ಯೇಕವಾಗಿ ಪ್ರತಿನಿಧಿಸುವ ಕೆಳಗಿನ ಸದಸ್ಯರನ್ನು ಒಳಗೊಂಡಿದೆ. ಆದರೆ ಒಟ್ಟಾರೆ, ವೈವಿಧ್ಯಮಯ ಭಾರತೀಯ ಹಿತಾಸಕ್ತಿ ಹೊಂದಿರುವ ಬಳಗವನ್ನು ಪ್ರತಿನಿಧಿಸುತ್ತದೆ:

1. ಶ್ರೀ. ಎ. ಕಾರ್ತಿಕ್ ರಾಜ; ಸಿನಿಮಾಟೋಗ್ರಾಫರ್
2. ಶ್ರೀ. ಆನಂದ ಜ್ಯೋತಿ; ಸಂಗೀತಗಾರ, ಕಥೆಗಾರ ಮತ್ತು ಚಲನಚಿತ್ರ ನಿರ್ಮಾಪಕ
3. ಶ್ರೀಮತಿ ಡಾ. ಅನುರಾಧಾ ಸಿಂಗ್; ಚಲನಚಿತ್ರ ನಿರ್ಮಾಪಕ ಮತ್ತು ಸಂಕಲನಕಾರ
4. ಶ್ರೀ. ಅಶೋಕ್ ಕಶ್ಯಪ್; ನಿರ್ಮಾಪಕ, ನಿರ್ದೇಶಕ ಮತ್ತು ಸಿನಿಮಾಟೋಗ್ರಾಫರ್
5. ಶ್ರೀ ಎನುಮುಲ ಪ್ರೇಮರಾಜ್; ನಿರ್ದೇಶಕ ಮತ್ತು ಚಿತ್ರಕಥೆಗಾರ
6. ಶ್ರೀಮತಿ ಗೀತಾ ಎಂ ಗುರಪ್ಪ; ಶಬ್ಧ ತಂತ್ರಜ್ಞ
7. ಶ್ರೀ ಇಮೋ ಸಿಂಗ್; ನಿರ್ಮಾಪಕ, ನಿರ್ದೇಶಕ ಮತ್ತು ಕಥೆಗಾರ
8. ಶ್ರೀ. ಜುಗಲ್ ಡಿಬಾಟ; ನಿರ್ಮಾಪಕ, ನಿರ್ದೇಶಕ ಮತ್ತು ಸಿನಿಮಾಟೋಗ್ರಾಫರ್
9. ಶ್ರೀ. ಸೈಲೇಶ್ ದವೆ; ನಿರ್ಮಾಪಕ
10. ಶ್ರೀ. ಶಿಬು ಜಿ ಸುಶೀಲನ್; ನಿರ್ಮಾಪಕ
11. ಶ್ರೀ ವಿ.ಎನ್. ಆದಿತ್ಯ; ನಿರ್ಮಾಪಕ, ನಿರ್ದೇಶಕ ಮತ್ತು ಚಿತ್ರಕಥೆಗಾರ
12. ಶ್ರೀ. ವಿಷ್ಣು ಶರ್ಮ; ಲೇಖಕ ಮತ್ತು ಚಲನಚಿತ್ರ ವಿಮರ್ಶಕ

53ನೇ ಐಎಫ್ಎಫ್ಐನ ಭಾರತೀಯ ಪನೋರಮಾ ವಿಭಾಗದಲ್ಲಿ 354 ಅರ್ಹತಾ ಸಮಕಾಲೀನ ಭಾರತೀಯ ಚಲನಚಿತ್ರಗಳ ಪೈಕಿ 25 ಫೀಚರ್ ಚಲನಚಿತ್ರಗಳ ಪ್ಯಾಕೇಜ್ ಅನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಕೆಳಗಿನ ಚಲನಚಿತ್ರಗಳ ಪ್ಯಾಕೇಜ್ ಭಾರತೀಯ ಚಲನಚಿತ್ರೋದ್ಯಮದ ಚೈತನ್ಯ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ.

2022 ಭಾರತೀಯ ಪನೋರಮಾಕ್ಕೆ ಆಯ್ಕೆಯಾಗಿರುವ 25 ಫೀಚರ್ ಚಲನಚಿತ್ರಗಳ ಪಟ್ಟಿ ಇಂತಿದೆ:

ಕ್ರಮ ಸಂಖ್ಯೆ

ಚಲನಚಿತ್ರದ ಹೆಸರು(ಟೈಟಲ್)

ಭಾಷೆ

ನಿರ್ದೇಶಕ

 

ಮಹಾನಂದ

ಬೆಂಗಾಲಿ

ಅರಿಂದಮ್ ಸಿಲ್

 

ತ್ರೀ ಆಫ್ ಅಸ್

ಹಿಂದಿ

ಅವಿನಾಶ್ ಅರುಣ್ ಧಾವರೆ

 

ದಿ ಸ್ಟೋರಿ ಟೆಲ್ಲರ್

ಹಿಂದಿ

ಅನಂತ್ ನಾರಾಯಣ್ ಮಹದೇವನ್

 

ಮೇಜರ್

ಹಿಂದಿ

ಶಶಿ ಕಿರಣ್ ಟಿಕ್ಕಾ

 

ಶಿವ

ಹಿಂದಿ

ಮನೀಶ್ ಮುಂಡ್ರಾ

 

ಧಾಬರಿ ಖುರುವಿ

ಇರುಳಾ

ಪ್ರಿಯಾನಂದನ್

 

ಹದಿನೇಳೆಂಟು

ಕನ್ನಡ

ಪೃಥ್ವಿ ಕೊಣನೂರು

 

ನಾನು ಕುಸುಮಾ

ಕನ್ನಡ

ಕೃಷ್ಣೇಗೌಡ

 

ಲೋಟಸ್ ಬ್ಲೂಮ್ಸ್

ಮೈಥಿಲಿ

ಪ್ರತೀಕ್ ಶರ್ಮ

 

ಅರಿಯಿಪ್ಪು

ಮಲಯಾಳಂ

ಮಹೇಶ್ ನಾರಾಯಣನ್

 

ಸೌದಿ ವೆಲ್ಲಕ್ಕ ಸಿಸಿ.225/2009

ಮಲೆಯಾಳಂ

ತರುಣ್ ಮೂರ್ತಿ

 

ಫ್ರೇಮ್

ಮರಾಠಿ

ವಿಕ್ರಮ್ ಪಟವರ್ಧನ್

 

ಶೆರ್ ಶಿವರಾಜ್

ಮರಾಠಿ

ದಿಗ್ಪಾಲ್ ಲಾಂಜೇಕರ್

 

ಏಕ್ದಾ ಕಾಯ್ ಝಲಾ

ಮರಾಠಿ

ಡಾ. ಸಲೀಲ್ ಶ್ರೀನಿವಾಸ್ ಕುಲ್ಕರ್ಣಿ

 

ಪ್ರತಿಕ್ಷ್ಯಾ

ಒರಿಯಾ

ಅನುಪಮ್ ಪಟ್ನಾಯಕ್

 

ಕುರಂಗು ಪೆಡಲ್

ತಮಿಳು

ಕಮಲಕಣ್ಣನ್ ಎಸ್

 

ಕಿದಾ

ತಮಿಳು

ಆರ್ ಎ ವೆಂಕಟ್

 

ಜೈ ಭೀಮ್

ತಮಿಳು

ಥಾ ಸೆ ಜ್ಞಾನವೇಲ್

 

ಸಿನಿಮಾ ಬಂದಿ

ತೆಲುಗು

ಕಂದ್ರೆಗುಳ ಪ್ರವೀಣ್

 

ಕುಧಿರಾಮ್ ಬೋಸ್

ತೆಲುಗು

ವಿದ್ಯಾಸಾಗರ್ ರಾಜು

 

ಮುಖ್ಯವಾಹಿನಿಯ ಸಿನಿಮಾ ವಿಭಾಗ

 

 

ದಿ ಕಾಶ್ಮೀರ್ ಫೈಲ್ಸ್

ಹಿಂದಿ

ವಿವೇಕ್ ರಂಜನ್ ಅಗ್ನಿಹೋತ್ರಿ

 

ಆರ್ ಆರ್ ಆರ್ (ರೌದ್ರಂ ರಣಂ ರುಧಿರಂ)

ತೆಲುಗು

ಎಸ್ ಎಸ್ ರಾಜಮೌಳಿ

 

ಟಾನಿಕ್

ಬೆಂಗಾಲಿ

ಅವಜಿತ್ ಸೆನ್

 

ಅಖಂಡ

ತೆಲುಗು

ಬೋಯಾಪತಿ ಶ್ರೀನಿವಾಸ ರಾವ್

 

ಧರ್ಮವೀರ್….ಮುಕ್ಕಂ ಪೋಸ್ಟ್ ಥಾಣೆ

ಮರಾಠಿ

ಪ್ರವೀಣ್ ವಿಠಲ್ ತರ್ದೆ

 

 ಭಾರತೀಯ ಪನೋರಮಾ 2022ರ ಆರಂಭಿಕ ಚಲನಚಿತ್ರವಾಗಿ ಫೀಚರ್ ಫಿಲ್ಮ್ ತೀರ್ಪುಗಾರರ ಆಯ್ಕೆಯು ಶ್ರೀ ಪೃಥ್ವಿ ಕೊಣನೂರು ನಿರ್ದೇಶನದ 'ಹದಿನೇಳೆಂಟು' (ಕನ್ನಡ) ಪ್ರದರ್ಶನವಾಗಲಿದೆ.

ನಾನ್-ಫೀಚರ್ ಚಲನಚಿತ್ರಗಳು

6 ಸದಸ್ಯರನ್ನು ಒಗೊಂಡ ನಾನ್-ಫೀಚರ್ ಚಲನಚಿತ್ರಗಳ ತೀರ್ಪುಗಾರರ ಸಮಿತಿಯು  ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ಮಾಪಕ, ಕಥೆಗಾರ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಶ್ರೀ ಓಯಿನಮ್ ಡೋರೆನ್ ಅವರ ಅಧ್ಯಕ್ಷತೆಯಲ್ಲಿತ್ತು. ವಿವಿಧ ಮೆಚ್ಚುಗೆ ಪಡೆದ ಚಲನಚಿತ್ರಗಳು ಮತ್ತು ಚಲನಚಿತ್ರ-ಸಂಬಂಧಿತ ವೃತ್ತಿಗಳನ್ನು ಪ್ರತ್ಯೇಕವಾಗಿ ಪ್ರತಿನಿಧಿಸುವ ಕೆಳಗಿನ ಸದಸ್ಯರನ್ನು ಒಳಗೊಂಡಿರುವ ನಾನ್-ಫೀಚರ್ ಆಯ್ಕೆ ಸಮಿತಿ ರಚಿಸಲಾಗಿದೆ. 

1. ಶ್ರೀ ಚಂದ್ರಶೇಖರ್ ಎ; ಚಲನಚಿತ್ರ ವಿಮರ್ಶಕ, ಪತ್ರಕರ್ತ ಮತ್ತು ಮಾಧ್ಯಮ ಶಿಕ್ಷಣ ತಜ್ಞ.
2. ಶ್ರೀ ಹರೀಶ್ ಭೀಮಾನಿ, ಚಲನಚಿತ್ರ ನಿರ್ಮಾಪಕ, ಚಿತ್ರಕಥೆಗಾರ, ಆಂಕರ್ ಮತ್ತು, ನಟ
3. ಶ್ರೀ ಮನೀಶ್ ಸೈನಿ; ಚಲನಚಿತ್ರ ನಿರ್ಮಾಪಕ, ಲೇಖಕ ಮತ್ತು ಸಂಪಾದಕ
4. ಶ್ರೀ ಪಿ. ಉಮೇಶ್ ನಾಯ್ಕ್; ಚಲನಚಿತ್ರ ನಿರ್ಮಾಪಕ ಮತ್ತು ಪತ್ರಕರ್ತ
5. ಶ್ರೀ ರಾಕೇಶ್ ಮಿತ್ತಲ್; ಚಲನಚಿತ್ರ ವಿಮರ್ಶಕ, ಪತ್ರಕರ್ತ ಮತ್ತು ಲೇಖಕ
6. ಶ್ರೀ ಸಂಸ್ಕಾರ ದೇಸಾಯಿ; ಚಲನಚಿತ್ರ ನಿರ್ಮಾಪಕ, ಚಿತ್ರಕಥೆಗಾರ, ಶಿಕ್ಷಣ ತಜ್ಞ

53ನೇ ಐಎಫ್‌ಎಫ್‌ಐನಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕಾಗಿ 20 ನಾನ್-ಫೀಚರ್ ಚಲನಚಿತ್ರಗಳ ಪ್ಯಾಕೇಜ್ ಆಯ್ಕೆಮಾಡಲಾಗಿದೆ. ನಾನ್-ಫೀಚರ್ ಚಲನಚಿತ್ರಗಳ ಪ್ಯಾಕೇಜ್ ಉದಯೋನ್ಮುಖ ಮತ್ತು ಸ್ಥಾಪಿತ ಚಲನಚಿತ್ರ ನಿರ್ಮಾಪಕರ ಸಾಮರ್ಥ್ಯ ದಾಖಲೆ, ಮನರಂಜನೆ ಮತ್ತು ಸಮಕಾಲೀನ ಭಾರತೀಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.

ಭಾರತೀಯ ಪನೋರಮಾ 2022ಕ್ಕೆ ಆಯ್ಕೆಯಾದ ನಾನ್-ಫೀಚರ್ ಚಲನಚಿತ್ರಗಳ ಪಟ್ಟಿ ಇಂತಿದೆ:

 

 

ಕ್ರಮ ಸಂಖ್ಯೆ

ಚಲನಚಿತ್ರದ ಹೆಸರು

ಭಾಷೆ

ನಿರ್ದೇಶಕ

 

ಪಟಾಲ್-ಟೀ

ಭೊಟಿಯಾ

ಮುಕುಂದ್ ನಾರಾಯಣ್ &

ಸಂತೋಷ್ ಸಿಂಗ್

 

ತಾಂಘ್

ಇಂಗ್ಲೀಷ್

ಬನಿ ಸಿಂಗ್

 

ಆಯುಷ್ಮಾನ್

ಇಂಗ್ಲೀಷ್

ಜಾಕೊಬ್ ವರ್ಗೀಸ್

 

ಅದರ್ ರೇ: ಆರ್ಟ್ ಆಱ್ ಸತ್ಯಜಿತ್ ರೇ

ಇಂಗ್ಲೀಷ್

ಜಯದೀಪ್ ಮುಖರ್ಜಿ

 

ಗುರುಜನ

ಇಂಗ್ಲೀಷ್

ಸುದಿಪ್ತೊ ಸೆನ್

 

ಹಟಿಬೊಂಧು

ಇಂಗ್ಲೀಷ್

ಕೃಪಾಲ್ ಕಲಿತಾ

 

ಕ್ಲಿಂಟನ್

ಇಂಗ್ಲೀಷ್

ಪೃಥ್ವಿರಾಜ್ ದಾಸ್ ಗುಪ್ತ

 

ದಿ ಷೋ ಮಸ್ಟ್ ಗೋ ಆನ್

ಇಂಗ್ಲೀಷ್

ದಿವ್ಯ ಕೊವಸ್ಜಿ

 

ಖಜುರಾವೊ, ಆನಂದ್ ಔರ್ ಮುಕ್ತಿ

ಹಿಂದಿ

ರಮ್ಜಿ ಓಂ & ದೀಪಿಕಾ ಕೊಥಾರಿ

 

ವಿಭಜನ್ ಕೀ ವಿಭಿಷ್ಕ ಉಂಕಾಯಿ ಕಹಾನಿಯನ್

ಹಿಂದಿ

ಹಿತೇಶ್ ಶಂಕರ್

 

ಫಾತಿಮಾ

ಹಿಂದಿ

ಸೌರಭ್ ಕಾಂತಿ ದತ್ತ

 

ಚ್ಹು ಮೆದ್ ನಾ ಯುಲ್ ಮೆದ್

ಹಿಂದಿ

ಮುನ್ಮುನ್ ಧಲಾರಿಯಾ

 

ಬಿಫೋರ್ ಐ ಡೈ

ಹಿಂದಿ

ನಕುಲ್ ದೇವ್

 

ಮಧ್ಯಂತರ

ಕನ್ನಡ

ಬಸ್ತಿ ದಿನೇಶ್ ಶೆಣೈ

 

ವಾಗ್ರೊ

ಕೊಂಕಣಿ

ಸಾಯಿನಾಥ್ ಎಸ್ ಉಸ್ಕೈಕರ್

 

ವೀಟಿಲೆಕ್ಕು

ಮಲೆಯಾಳಂ

ಅಖಿಲ್ ದೇವ್ ಎಂ

 

ಬಿಯಾಂಡ್ ಬ್ಲಾಸ್ಟ್

ಮಣಿಪುರಿ

ಸೈಖೊಮ್ ರತನ್

 

ರೇಖಾ

ಮರಾಠಿ

ಶೇಖರ್ ಬಾಪು ರಂಖಾಂಬೆ

 

ಯಾನಮ್

ಸಂಸ್ಕೃತ

ವಿನೋದ್ ಮಂಕಾರ

 

ಲಿಟ್ಲ್ ವಿಂಗ್ಸ್

ತಮಿಳು

ನವೀನ್ ಕುಮಾರ್ ಮುತ್ತಯ್ಯ

ಭಾರತೀಯ ಪನೋರಮಾ, 2022ರ ನಾನ್-ಫೀಚರ್ ವಿಭಾಗದಲ್ಲಿ ತೀರ್ಪುಗಾರರ ಆಯ್ಕೆಯು ಶ್ರೀಮತಿ ದಿವ್ಯಾ ಕೊವಾಸ್ಜಿ ನಿರ್ದೇಶನದ 'ದಿ ಶೋ ಮಸ್ಟ್ ಗೋ ಆನ್' (ಇಂಗ್ಲಿಷ್) ಚಲನಚಿತ್ರವು ಪ್ರದರ್ಶನಗೊಳ್ಳಲಿದೆ.

ಸಿನಿಮಾ ಕಲೆಯ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಹೊಂದಿರುವ ಭಾರತೀಯ ಚಲನಚಿತ್ರಗಳನ್ನು ಉತ್ತೇಜಿಸಲು ಐಎಫ್ಎಫ್ಐ ಭಾಗವಾಗಿ 1978ರಲ್ಲಿ ಭಾರತೀಯ ಪನೋರಮಾ ಆರಂಭಿಸಲಾಯಿತು. ಆರಂಭದಿಂದಲೂ ವರ್ಷದ ಅತ್ಯುತ್ತಮ ಭಾರತೀಯ ಚಲನಚಿತ್ರಗಳನ್ನು ಪ್ರದರ್ಶಿಸಲು ಭಾರತೀಯ ಪನೋರಮಾವು ಸಂಪೂರ್ಣ ಮೀಸಲಾಗಿದೆ. ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾದ ಚಲನಚಿತ್ರಗಳನ್ನು ಚಲನಚಿತ್ರ ಕಲೆ ಉತ್ತೇಜಿಸುವ ಗುರಿಯೊಂದಿಗೆ ಭಾರತ ಮತ್ತು ವಿದೇಶಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು, ದ್ವಿಪಕ್ಷೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಮತ್ತು ವಿಶೇಷ ಭಾರತೀಯ ಚಲನಚಿತ್ರಗಳ ಅಡಿಯಲ್ಲಿ ನಡೆಯುವ ಭಾರತೀಯ ಚಲನಚಿತ್ರ ವಾರಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಇವು ಲಾಭರಹಿತ ಪ್ರದರ್ಶನ ಕಾರ್ಯಕ್ರಮಗಳಾಗಿವೆ. ಸಾಂಸ್ಕೃತಿಕ ವಿನಿಮಯ ಪ್ರೋಟೋಕಾಲ್‌ಗಳ ಹೊರಗಿನ ಉತ್ಸವಗಳು ಮತ್ತು ಭಾರತದಲ್ಲಿ ನಡೆಯುವವಿಶೇಷ ಭಾರತೀಯ ಪನೋರಮಾ ಉತ್ಸವಗಳಲ್ಲೂ ಪ್ರದರ್ಶನ ಕಾಣುತ್ತವೆ.

******(Release ID: 1870301) Visitor Counter : 218