ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉತ್ತರಾಖಂಡದ ಮಾನದಲ್ಲಿ 3,400 ಕೋಟಿ ರೂಪಾಯಿ ಮೊತ್ತದ ರಸ್ತೆ ಮತ್ತು ರೋಪ್ ವೇ ಯೋಜನೆಗಳಿಗೆ ಶಿಲಾನ್ಯಾನ ನೆರವೇರಿಸಿದ ಪ್ರಧಾನಮಂತ್ರಿ


 “ತಮಗೆ ಗಡಿಯಲ್ಲಿರುವ ಪ್ರತಿಯೊಂದು ಹಳ್ಳಿ ದೇಶದ ಮೊದಲ ಹಳ್ಳಿಯಾಗಿದೆ”

“ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ಸಾಧ್ಯವಿರುವ ಎಲ್ಲ ಪ್ರಯತ್ನಗಳು ಅಭಿವೃದ್ಧಿ ಹೊಂದಿದ 21 ನೇ ಶತಮಾನದ ಭಾರತಕ್ಕೆ ಆಧಾರ ಸ್ತಂಭಗಳಾಗಿವೆ”  

“ಈ ಯೋಜನೆಗಳನ್ನು ಪೂರ್ಣಗೊಳಿಸಿದರೆ ಜಗತ್ತಿನಾದ್ಯಂತ ಇರುವ ಭಕ್ತಾದಿಗಳು ಸಂತೋಷಪಡುತ್ತಾರೆ”

 “ಶ್ರಮಜೀವಿಗಳು ದೇವರ ಕೆಲಸ ಮಾಡುತ್ತಿದ್ದು, ನೀವು ಅವರನ್ನು ಆರೈಕೆ ಮಾಡಿ, ಅಂತಹವರನ್ನು ವೇತನ ಪಡೆಯುವ ಕಾರ್ಮಿಕರೆಂದು ಪರಿಗಣಿಸಬೇಡಿ”

 “ಈ ದೇವಾಲಯಗಳ ಶಿಥಿಲಾವಸ್ಥೆಯು ಮಾನಸಿಕ ಗುಲಾಮಗಿರಿಯ ಸ್ಪಷ್ಟ ಸಂಕೇತವಾಗಿತ್ತು”

“ಇಂದು ಕಾಶಿ, ಉಜ್ಜೈನಿ, ಅಯೋಧ್ಯೆ ಮತ್ತು ಇತರೆ ಹಲವಾರು ಧಾರ್ಮಿಕ ಕೇಂದ್ರಗಳು ಕಳೆದುಹೋದ ನಮ್ಮ ಹೆಮ್ಮೆ ಮತ್ತು ಪರಂಪರೆಯನ್ನು ಮರಳಿ ಪಡೆಯುತ್ತಿವೆ”

“ನಿಮ್ಮ ಪ್ರಯಾಣದ ಆಯವ್ಯಯ ಮೊತ್ತದ ಶೇ 5 ರಷ್ಟು ಮೊತ್ತವನ್ನು ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ತೆಗೆದಿಡಿ”

“ಬೆಟ್ಟಗುಡ್ಡಗಳ ಜನರನ್ನು ಪುನಶ್ಚೇತನ ಮಾಡದೇ ಅವರನ್ನು ವಿರುದ್ಧವಾಗಿ ನೋಡಲಾಯಿತು”

 “ನಾವು ಗಡಿ ಪ್ರದೇಶಗಳಲ್ಲಿ ಕೆಲಸ ಮಾಡಲು ಆರಂಭಿಸಿದ್ದು, ಅವುಗಳನ್ನು ಗುರುತಿಸುವುದು ಸಮೃದ್ಧತೆಯ ಆರಂಭವಾಗಿದೆ”

“ಗಡಿ ಪ್ರದೇಶಗಳು ಉಜ್ವಲ ಜೀವನ ಹೊಂದುವಂತೆ ಮಾಡಲು ಪ್ರಯತ್ನಿಸುತ್ತಿದ್ದು, ಅಲ್ಲಿ ಅಭಿವೃದ್ಧಿಯನ್ನು ಆಚರಿಸಲಾಗುತ್ತದೆ”

Posted On: 21 OCT 2022 3:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉತ್ತರಾಖಂಡದಲ್ಲಿಂದು 3400 ಕೋಟಿ ರೂಪಾಯಿ ಮೊತ್ತದ ರಸ್ತೆ ಮತ್ತು ರೋಪ್ ವೇ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು. ಇದಕ್ಕೂ ಮುನ್ನ ಪ್ರಧಾನಮಂತ್ರಿ ಅವರು ಕೇದಾರನಾಥ್ ಗೆ ಭೇಟಿ ನೀಡಿದರು ಮತ್ತು ಕೇದಾರನಾಥ್ ದೇವಾಲಯದಲ್ಲಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಆದಿ ಗುರು ಶಂಕರಾಚಾರ್ಯರ ಸಮಾಧಿ ಸ್ಥಳಕ್ಕೆ ತೆರಳಿ ಅಲ್ಲಿ ಮಂದಾಕಿನಿ ಅಷ್ಟಪೀಠ ಮತ್ತು ಸರಸ್ವತಿ ಅಷ್ಟಪೀಠದ ಕಾಮಗಾರಿಯನ್ನು ಪರಿಶೀಲಿಸಿದರು.

ಪ್ರಧಾನಮಂತ್ರಿ ಅವರು ಬದರೀನಾಥ್ ಗೆ ಭೇಟಿ ನೀಡಿದರು ಮತ್ತು ಬದರೀನಾಥ್ ದೇವಾಲಯದಲ್ಲಿ ದರ್ಶನ ಪಡೆದು ಪೂಜೆ ನೆರವೇರಿಸಿದರು. ತರುವಾಯ ಅಲಕನಂದಾ ನದಿ ತೀರದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಯನ್ನು ವೀಕ್ಷಿಸಿದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ದೇವಾಲಯಗಳಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸಿದ ನಂತರ ತಮ್ಮ ಆನಂದ ಭಾವನೆಯನ್ನು ವ್ಯಕ್ತಪಡಿಸಿದರು. “ತಮ್ಮ ಜೀವನ ಆಶೀರ್ವದಿಸಲ್ಪಟ್ಟಿದ್ದು, ಮನಸ್ಸು ಸಂತಸವಾಗಿದೆ ಮತ್ತು ಈ ಕ್ಷಣಗಳು ತಮ್ಮನ್ನು ಜೀವಂತಗೊಳಿಸಿವೆ” ಎಂದರು. ಈ ದಶಕ  ಉತ್ತರಾಖಂಡಕ್ಕೆ ಸೇರುತ್ತದೆ ಎಂದು ಈ ಹಿಂದೆ ತಾವು ಭೇಟಿ ನೀಡಿದ್ದ ಸಂದರ್ಭದಲ್ಲಿ ಆಡಿದ್ದ ಮಾತುಗಳನ್ನು ಸ್ಮರಿಸಿಕೊಂಡ ಪ್ರಧಾನಮಂತ್ರಿ ಅವರು, ಬಾಬಾ ಕೇದಾರ್ ಮತ್ತು ಬದ್ರಿ ವಿಶಾಲ್ ಅವರು ತಮ್ಮ ಈ ಆಶಯಗಳಿಗೆ ಆಶೀರ್ವಾದ ಮಾಡುತ್ತಾರೆ ಎಂಬ ಸಂಪೂರ್ಣ ನಂಬಿಕೆ ತಮಗಿದೆ ಎಂದು ಹೇಳಿದರು. “ಇಂದು ಈ ಹೊಸ ಯೋಜನೆಗಳೊಂದಿಗೆ ಅದೇ ಸಂಕಲ್ಪವನ್ನು ಪುನರುಚ್ಚರಿಸಲು ನಾನು ನಿಮ್ಮ ನಡುವೆ ಬಂದಿದ್ದೇನೆ” ಎಂದು ಹೇಳಿದರು.

ಭಾರತದ ಗಡಿ ಭಾಗದ ಮಾನ ಹಳ್ಳಿ ಕಡೆಯ ಹಳ್ಳಿ ಎಂಬುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, “ತಮಗೆ ಗಡಿಯಲ್ಲಿರುವ ಪ್ರತಿಯೊಂದು ಹಳ್ಳಿ ದೇಶದ ಮೊದಲ ಹಳ್ಳಿಯಾಗುತ್ತದೆ ಮತ್ತು ಗಡಿ ಬಳಿ ವಾಸಿಸುವ ಜನತೆ ದೇಶದ ಬಲಿಷ್ಠ ಕಾವಲುಗಾರರಾಗುತ್ತಾರೆ ಎಂದು ಹೇಳಿದರು. ಈ ಭಾಗದೊಂದಿಗೆ ಸುದೀರ್ಘ ಬಾಂಧವ್ಯವನ್ನು ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು ಮತ್ತು ಇದರ ಮಹತ್ವದ ಬಗ್ಗೆ ನಿರಂತರ ಪ್ರತಿಪಾದನೆ ಮಾಡುತ್ತಿರುವುದಾಗಿ ಹೇಳಿದರು. ಇಲ್ಲಿನ ಜನರ ಬೆಂಬಲ ಮತ್ತು ವಿಶ್ವಾಸವನ್ನು ಬಲ್ಲೆ. ಮಾನ ದಲ್ಲಿನ ಜನರ ನಿರಂತರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದರು.

ಪ್ರಧಾನಮಂತ್ರಿ ಅವರು ಎರಡು ಆಧಾರ ಸ್ತಂಭಗಳ ಬಗ್ಗೆ ಮಾತನಾಡಿದ್ದು, “ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮತ್ತು ಸಾಧ್ಯವಿರುವ ಎಲ್ಲಾ ಪ್ರಯತ್ನಗಳು, ಅಭಿವೃದ್ಧಿ ಹೊಂದಿದ 21 ನೇ ಶತಮಾನದ ಭಾರತಕ್ಕೆ ಆಧಾರ ಸ್ತಂಭಗಳಾಗಿವೆ. ಇಂದು ಉತ್ತರಾಖಂಡ ಎರಡೂ ಆಧಾರ ಸ್ತಂಭಗಳನ್ನು ಬಲಿಷ್ಠಗೊಳಿಸುತ್ತಿದೆ” ಎಂದರು. ಕೇದಾರನಾಥ ಮತ್ತು ಬದರಿ ವಿಶಾಲ್ ಅವರ ದರ್ಶನದಿಂದ ತಮಗೆ ಆಶಿರ್ವಾದ ದೊರೆತಿದೆ ಎಂದು ಭಾವಿಸಿದ್ದು, ಇಲ್ಲಿನ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿದ್ದೇನೆ, “ತಮಗೆ 130 ಕೋಟಿ ಜನ ಕೂಡ ದೇವರ ರೂಪ” ಎಂದು ಹೇಳಿದರು.

ಕೇದಾರನಾಥ ದಿಂದ ಗೌರಿಕುಂದ್ ಮತ್ತು ಹೇಮಕುಂಡ್ ನ ಎರಡು ರೋಪ್ ವೇ ಕುರಿತು ಮಾತನಾಡಿದ ಅವರು, ಬಾಬಾ ಕೇದಾರಿನಾಥ, ಬದರಿ ವಿಶಾಲ್ ಮತ್ತು ಸಿಖ್ ಗುರುಗಳ ಆಶಿರ್ವಾದದ ಸ್ಫೂರ್ತಿಯಿಂದ ಈ ಪ್ರಗತಿ ಸಾಧ್ಯವಾಗುತ್ತಿದೆ. ಈ ಉಪಕ್ರಮಗಳು ಪೂರ್ಣಗೊಂಡರೆ ಹಿಂದೆಂದೂ ಇಲ್ಲದ ರೀತಿಯಲ್ಲಿ ಜಗತ್ತಿನಾದ್ಯಂತ ಇರುವ ಭಕ್ತಾದಿಗಳು ಸಂತೋಷಪಡುತ್ತಾರೆ ಎಂದು ಹೇಳಿದರು.

ಈ ಯೋಜನೆಯಲ್ಲಿ ಭಾಗಿಯಾಗಿರುವ ಶ್ರಮಜೀವಿಗಳು ಮತ್ತು ಇತರೆ ಸಿಬ್ಬಂದಿ ಸುರಕ್ಷತೆಗಾಗಿ ಪ್ರಧಾನಮಂತ್ರಿ ಅವರು ಪ್ರಾರ್ಥಿಸಿದರು ಹಾಗೂ ಕಠಿಣ ಕೆಲಸದ ಪರಿಸ್ಥಿತಿಯಲ್ಲಿ ಅವರ ಭಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಇವರು ದೇವರ ಕೆಲಸ ಮಾಡುತ್ತಿದ್ದು, ನೀವು ಅವರನ್ನು ಆರೈಕೆ ಮಾಡಿ, ಇವರು ಕೇವಲ ವೇತನ ಪಡೆಯುವ ಕಾರ್ಮಿಕರೆಂದು ಪರಿಗಣಿಸಬೇಡಿ. ಇವರು ದೈವಿಕ ಯೋಜನೆಗೆ ಕೊಡುಗೆ ನೀಡುತ್ತಿದ್ದಾರೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಕೇದಾರನಾಥದಲ್ಲಿ ಶ್ರಮಜೀವಿಗಳೊಂದಿಗೆ ಸಂವಾದ ನಡೆಸಿದ್ದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಕಾರ್ಮಿಕರು ಮತ್ತು ಇಂಜಿನಿಯರ್ ಗಳ ಕೆಲಸವನ್ನು ಹೋಲಿಸಿದಾಗ ಇದು ಕೇದಾರನಾಥನನ್ನು ಪೂಜಿಸಲು ಒಂದು ಉತ್ತಮ ಅನುಭವವಾಗಿದೆ ಎಂದರು.

ವಸಾಹತುಶಾಯಿ ಮನಸ್ಥಿತಿಯಿಂದ ಮುಕ್ತರಾಗುವಂತೆ ತಾವು ಕೆಂಪುಕೋಟೆಯ ಆವರಣದಿಂದ ಮಾಡಿದ ಮನವಿಯನ್ನು ಸ್ಮರಿಸಿಕೊಂಡ ಅವರು, ಸ್ವಾತಂತ್ರ್ಯ ಪಡೆದ 75 ವರ್ಷಗಳ ನಂತರ ಈ ಮನವಿ ಮಾಡುವ ಅಗತ್ಯದ ಬಗ್ಗೆ ವಿವರಿಸಿದರು. ಗುಲಾಮಗಿರಿ ಮನಸ್ಥಿತಿ ದೇಶವನ್ನು ಎಷ್ಟು ಗಾಢವಾಗಿ ಆವರಿಸಿಕೊಂಡಿದೆ ಎಂದರೆ ದೇಶದ ಕೆಲವು ಜನ ದೇಶದಲ್ಲಿ ಅಭಿವೃದ್ಧಿ ಕೆಲಸವನ್ನು ಅಪರಾಧವೆಂದು ಪರಿಗಣಿಸಿದ್ದಾರೆ ಎಂದು ಒತ್ತಿ ಹೇಳಿದರು. “ದೇಶದ ಅಭಿವೃದ್ಧಿಯಲ್ಲಿ ಸಾಧಿಸಿದ ಪ್ರಗತಿಯನ್ನು ಗುಲಾಮಗಿರಿಯ ಮಾಪನದ ಮೇಲೆ ಅಳೆಯಲಾಗುತ್ತದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. ದೀರ್ಘಕಾಲದಿಂದ ದೇಶದ ಧಾರ್ಮಿಕ ಸ್ಥಳಗಳನ್ನು ಕೀಳಾಗಿ ನೋಡಲಾಗುತ್ತಿತ್ತು, “ಪ್ರಪಂಚದಾದ್ಯಂತ ಜನತೆ ಈ ದೇವಾಲಯಗಳನ್ನು ಹೊಗಳುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ” ಎಂದು ಹೇಳಿದರು.  ಹಿಂದಿನ ಪ್ರಯತ್ನಗಳನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಸೋಮನಾಥ ದೇವಾಲಯ ಮತ್ತು ರಾಮ ಮಂದಿರ ನಿರ್ಮಾಣದ ಸಂದರ್ಭದಲ್ಲಿ ಏನಾಯಿತು ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ ಎಂದರು.

“ಈ ದೇವಾಲಯಗಳ ಶಿಥಿಲಾವಸ್ಥೆಯು ಗುಲಾಮಗಿರಿ ಮನಸ್ಥಿತಿಯ ಸ್ಪಷ್ಟ ಸಂಕೇವಾಗಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಈ ದೇವಾಲಯಗಳಿಗೆ ಸಾಗುವ ಮಾರ್ಗಗಳು ಸಹ ಅತ್ಯಂತ ಕಳಪೆ ಸ್ಥಿತಿಯಲ್ಲಿವೆ ಎಂದರು. “ದಶಕಗಳ ಕಾಲದಿಂದ ಭಾರತದಲ್ಲಿ ಧಾರ್ಮಿಕ ಕೇಂದ್ರಗಳು ನಿರ್ಲಕ್ಷ್ಯಕ್ಕೊಳಗಾಗಿವೆ” ಎಂದು ಮಾತು ಮುಂದುವರಿಸಿದ ಅವರು, “ಹಿಂದಿನ ಸರ್ಕಾರಗಳ ಸ್ವಾರ್ಥವೇ ಇದಕ್ಕೆ ಕಾರಣ” ಎಂದರು. ಕೋಟ್ಯಂತರ ಭಾರತೀಯರಿಗೆ ಈ ಆಧ್ಯಾತ್ಮಿಕ ಕೇಂದ್ರಗಳು ಏನನ್ನು ಅರ್ಥೈಸುತ್ತವೆ ಎಂಬುದನ್ನು ಈ ಜನ ಮರೆತಿದ್ದಾರೆ ಎಂದು ಅವರು ಗಮನಸೆಳೆದರು. ಈ ಆಧ್ಯಾತ್ಮಿಕ ಕೇಂದ್ರಗಳ ಮಹತ್ವವನ್ನು ಅವರ ಪ್ರಯತ್ನಗಳಿಂದ ನಿರ್ಧರಿಸಲು ಸಾಧ್ಯವಾಗಿಲ್ಲ ಅಥವಾ ಈಗಿನ ಆಧ್ಯಾತ್ಮಿಕ ಕೇಂದ್ರಗಳ ಬಗ್ಗೆ ಜನ ಹೊಂದಿರುವ ನಂಬಿಕೆಯಲ್ಲಿ ಯಾವುದೇ ಕುಸಿತ ಕಂಡು ಬಂದಿಲ್ಲ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

“ಇಂದು ಕಾಶಿ, ಉಜ್ಜೈನಿ, ಅಯೋಧ್ಯೆ ಮತ್ತು ಇತರೆ ಹಲವಾರು ಧಾರ್ಮಿಕ ಕೇಂದ್ರಗಳು ಕಳೆದುಹೋದ ನಮ್ಮ ಹೆಮ್ಮೆ ಮತ್ತು ಪರಂಪರೆಯನ್ನು ಮರಳಿ ಪಡೆಯುತ್ತಿವೆ. ಕೇದರನಾಥ್, ಬದರಿನಾಥ್ ಮತ್ತು ಹೇಮಕುಂದ್ ಸಾಹಿಬ್ ನಂಬಿಕೆಯನ್ನು ಉಳಿಸಿಕೊಂಡು ಸೇವೆಯ ತಂತ್ರಜ್ಞಾನದೊಂದಿಗೆ ಬೆಸದುಕೊಂಡಿವೆ ಎಂದು ಒತ್ತಿ ಹೇಳಿದರು. “ಅಯೋಧ್ಯೆಯ ರಾಮಮಂದಿರದಿಂದ ಪವಗಢ್ ನ ಮಾತೆ ಕಾಳಿಕಾ ದೇವಾಲಯ, ಗುಜರಾತ್ ನ ದೇವಿ ವಿಂಧ್ಯಾಂಚಲ್ ಕಾರಿಡಾರ್ ನಲ್ಲಿ ಭಾರತವು ತನ್ನ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಉನ್ನತಿಯನ್ನು ಪೋಷಿಸುತ್ತಿದೆ” ಎಂದು ಹೇಳಿದರು. ನಂಬಿಕೆಯ ಈ ಕೇಂದ್ರಗಳಿಗೆ ಯಾತ್ರಾರ್ಥಿಗಳು ಸುಲಭವಾಗಿ ತಲುಪಲು ಮತ್ತು ಪರಿಚಯಿಸಿರುವ ಸೇವೆಗಳಿಂದ ಹಿರಿಯ ನಾಗರಿಕರಿಗೆ ಸುಲಭವಾಗಿದೆ ಎಂದು ಹೇಳಿದರು.

ಈ ನಂಬಿಕೆಯ ಸ್ಥಳಗಳನ್ನು ಪುನರುಜ್ಜೀವಗೊಳಿಸುವ ಮತ್ತೊಂದು ಅಂಶವನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಈ ಆಯಾಮದಲ್ಲಿ ಗುಡ್ಡಗಾಡು ಪ್ರದೇಶಗಳ ಜನರಲ್ಲಿ ಸುಗಮ ಜೀವನ ಮತ್ತು ಈ ಪ್ರದೇಶಗಳ ಯುವ ಸಮೂಹದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. “ರೈಲು, ರಸ್ತೆ ಮತ್ತು ರೋಪ್ ವೇ ಗಳಿಂದ ಇವರಿಗೆ ಉದ್ಯೋಗ ದೊರೆತಿದೆ ಮತ್ತು ಜೀವನ ಸುಗಮ ಹಾಗೂ ಸಬಲೀಕರಣಗೊಂಡಿದೆ. ಈ ಸೌಲಭ್ಯಗಳಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಪ್ರವಾಸೋದ್ಯಮ ವಲಯದಲ್ಲಿ ವೃದ್ಧಿ ಮತ್ತು ಸಾಗಣೆ ಸುಲಭವಾಗಿದೆ. ಸಂಕಷ್ಟದಾಯಕ ಪ್ರದೇಶಗಳಲ್ಲಿ ಸಾಗಣೆಯನ್ನು ಸುಧಾರಿಸಲು ಡ್ರೋನ್ ವ್ಯವಸ್ಥೆಯನ್ನು ಸಹ ಪರಿಚಯಿಸಲಾಗುತ್ತಿದೆ” ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಸ್ಥಳೀಯ ಉತ್ಪನ್ನಗಳು ಮತ್ತು ಸ್ಥಳೀಯ ಸ್ವಸಹಾಯ ಗುಂಪುಗಳ ಪ್ರಯತ್ನಗಳನ್ನು ಶ್ಲಾಘಿಸಿದ  ಪ್ರಧಾನಮಂತ್ರಿ ಅವರು, ಈ ಸಂಬಂಧ ದೇಶದ ಜನರಿಗೆ ಮನವಿ ಮಾಡಿದರು. ದೇಶದ ಯಾವುದೇ ಭಾಗದಲ್ಲಿ ಪ್ರವಾಸ ಕೈಗೊಂಡಾಗ ತಮ್ಮ ಪ್ರಯಾಣದ ಬಜೆಟ್ ನಲ್ಲಿ ಶೇ 5 ರಷ್ಟು ಮೊತ್ತವನ್ನು ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಬಳಸಬೇಕು. “ಇದರಿಂದ ಸ್ಥಳೀಯ ಉತ್ಪನ್ನಗಳಿಗೆ ಅತಿ ದೊಡ್ಡ ಪುಷ್ಟಿ ನೀಡಲಿದೆ ಮತ್ತು ಇದರಿಂದ ಅಪಾರ ಸಂತೃಪ್ತಿಯೂ ಸಹ ದೊರೆಯುತ್ತದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಪುಟಿದೇಳುವ ಗುಡ್ಡಗಾಡು ಪ್ರದೇಶಗಳ ಜನರ ವಿರುದ್ಧವಾಗಿರುವ ಕ್ರಮಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪ್ರಧಾನಮಂತ್ರಿ ಅವರು, ಕಠಿಣ ಪರಿಶ್ರಮದ ಸ್ವಭಾವ ಮತ್ತು ಶಕ್ತಿ ಹೊಂದಿರುವ ಇವರು ಸೌಲಭ್ಯಗಳಿಂದ ವಂಚಿತರಾಗುವಂತೆ ಮಾಡಲಾಗಿತ್ತು. ಸೌಕರ್ಯ ಮತ್ತು ಪ್ರಯೋಜನಗಳನ್ನು ಪಡೆಯುವಲ್ಲಿ ಅವರಿಗೆ ಕೊನೆಯ ಆದ್ಯತೆಯಾಗಿತ್ತು. ನಾವು ಇದನ್ನು ಬದಲಿಸಿದ್ದೇವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಈ ಹಿಂದೆ ದೇಶದ ಗಡಿಗಳನ್ನು ನಿರ್ಲಕ್ಷಿತ ಪ್ರದೇಶಗಳನ್ನಾಗಿ ಮಾಡಲಾಗಿತ್ತು, ಇದೀಗ ನಾವು ಅಭ್ಯುದಯದ ಆರಂಭ ಎಂದು ಗುರುತಿಸುವ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ. ಹಿಂದೆ ಸ್ಥಳೀಯ ಜನರ ಶಕ್ತಿ ನಷ್ಟವಾಗುತ್ತಿತ್ತು. ನಾವು ಇದೀಗ ಪರ್ವತಗಳಷ್ಟು ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದೇವೆ.  ಎಲ್ಲ ಹಳ್ಳಿಗಳನ್ನು ವಿದ್ಯುದೀಕರಣ ಮಾಡುವ, ಪ್ರತಿಯೊಂದು ಮನೆಗಳಿಗೆ ಶುದ್ಧ ಕುಡಿಯುವ ನೀರು, ಆಪ್ಟಿಕಲ್ ಫೈಬರ್ ನಿಂದ ಪಂಚಾಯತ್ ಗಳೊಂದಿಗೆ ಸಂಪರ್ಕ, ಪ್ರತಿಯೊಂದು ಹಳ್ಳಿಗಳಲ್ಲಿ ಆರೋಗ್ಯ ಮತ್ತು ಯೋಗ ಕ್ಷೇಮ ಕೇಂದ್ರಗಳು, ಗುಡ್ಡಗಾಡು ಪ್ರದೇಶದಲ್ಲಿ ಲಸಿಕೆಗೆ ಆದ್ಯತೆ, ಸಾಂಕ್ರಾಮಿಕ ಸಂದರ್ಭದಲ್ಲಿ ಬಡವರಿಗೆ ಉಚಿತ ಪಡಿತರ ವಿತರಿಸುವಂತಹ ಕ್ರಮಗಳಿಂದ ಜನರ ಬದುಕು ಸುಗಮವಾಗಿದೆ ಮತ್ತು ಜನರ ಘನತೆಯನ್ನು ಕಾಪಾಡಲಾಗಿದೆ ಎಂದು ಹೇಳಿದರು. ಈ ಸೌಲಭ್ಯಗಳಿಂದ ಯುವ ಜನಾಂಗಕ್ಕೆ ಹೊಸ ಅವಕಾಶಗಳು ಲಭಿಸಿವೆ ಮತ್ತು ಪ್ರವಾಸೋದ್ಯಮಕ್ಕೆ ಪುಷ್ಟಿ ದೊರೆತಿದೆ. “ಹೋಮ್ ಸ್ಟೇಗಳಲ್ಲಿ ಸೌಲಭ್ಯಗಳನ್ನು ಸುಧಾರಿಸಲು ಯುವ ಸಮೂಹದ ಕೌಶಲ್ಯಾಭಿವೃದ್ಧಿಗಾಗಿ ಡಬಲ್ ಎಂಜಿನ್ ಸರ್ಕಾರ ನಿರಂತರವಾಗಿ ಹಣಕಾಸು ನೆರವು ಒದಗಿಸುತ್ತಿದೆ. ಗಡಿ ಪ್ರದೇಶಗಳ ಯುವ ಸಮೂಹವನ್ನು ಎನ್.ಸಿ.ಸಿ.ಯೊಂದಿಗೆ ಸಂಪರ್ಕಿಸುವ ಅಭಿಯಾನವು ಉಜ್ವಲ ಭವಿಷ್ಯಕ್ಕಾಗಿ ಅವರನ್ನು ಸನ್ನದ್ಧಗೊಳಿಸುತ್ತದೆ” ಎಂದು ಹೇಳಿದರು.

“ರಾಷ್ಟ್ರದ ರಕ್ಷಣೆಗೆ ಆಧುನಿಕ ಸಂಪರ್ಕ ವ್ಯವಸ್ಥೆ ಖಾತರಿಯಾಗಿದೆ”. ಕಳೆದ 8 ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಒಂದಾದ ನಂತರ ಮತ್ತೊಂದು ಹೆಜ್ಜೆಗಳನ್ನು ಸರ್ಕಾರ ಇಡುತ್ತಿದೆ ಎಂದರು. ಇತ್ತೀಚೆಗೆ ಕೈಗೊಂಡು ಎರಡು ಪ್ರಮುಖ ಸಂಪರ್ಕ ಯೋಜನೆಗಳ ಕುರಿತು ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಭಾರತ್ ಮಾಲಾ ಮತ್ತು ಸಾಗರ್ ಮಾಲ ಇದಕ್ಕೆ ಉದಾಹರಣೆಯಾಗಿದೆ ಎಂದರು. ಭಾರತ್ ಮಾಲಾ ದೇಶದ ಗಡಿ ಪ್ರದೇಶಗಳನ್ನು ಉತ್ತಮ ಮತ್ತು ವಿಶಾಲ ಹೆದ್ದಾರಿಗಳ ಮೂಲಕ ಸಂಪರ್ಕಿಸುತ್ತದೆ ಮತ್ತು ಸಾಗರ್ ಮಾಲಾ ಭಾರತದ ಸಮುದ್ರ ತೀರಗಳನ್ನು ಬಲಪಡಿಸುತ್ತದೆ ಎಂದು ಮಾಹಿತಿ ನೀಡಿದರು. 8 ವರ್ಷಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಗಡಿಗಳನ್ನು ಸಂಪರ್ಕಿಸುವುದನ್ನು ಸರ್ಕಾರ ವಿಸ್ತಾರಗೊಳಿಸಿದೆ. “2014 ರಿಂದ ಗಡಿ ರಸ್ತೆ ಸಂಘಟನೆ ಸುಮಾರು 7,000 ಕಿಲೋಮೀಟರ್ ಹೊಸ ರಸ್ತೆಗಳನ್ನು ಮತ್ತು ನೂರಾರು ಸೇತುವೆಗಳನ್ನು ನಿರ್ಮಿಸಿದೆ. ಹಲವಾರು ಸುರಂಗ ಮಾರ್ಗಗಳನ್ನು ಸಹ ಪೂರ್ಣಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಪ್ರಧಾನಮಂತ್ರಿ ಅವರು ಪರ್ವತಮಾಲಾ ಯೋಜನೆ ಕುರಿತು ಬೆಳಕು ಚೆಲ್ಲಿದ್ದು, ಇದರಿಂದ ಗುಡ್ಡಗಾಡು ರಾಜ್ಯಗಳ ನಡುವೆ ಸಂಪರ್ಕ ವಲಯದಲ್ಲಿ ಮಹತ್ವದ ಸುಧಾರಣೆಯಾಗಲಿದೆ. ಈ ಯೋಜನೆಯಡಿ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ರೋಪ್ ವೇ ಗಳ ದೊಡ್ಡ ಸಂಪರ್ಕ ಜಾಲವನ್ನು ನಿರ್ಮಿಸಲಾಗುತ್ತಿದೆ. ಸೇನೆ ಸ್ಥಾಪನೆಯಂತೆ ಗಡಿ ಪ್ರದೇಶಗಳ ಗ್ರಹಿಕೆಯನ್ನು ಸಹ ಬದಲಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. “ಈ ಪ್ರದೇಶಗಳು ಅಭಿವೃದ್ಧಿಯನ್ನು ಆಚರಿಸುವ, ಉಜ್ವಲ ಜೀವನ ಪಡೆಯುವಂತೆ ಮಾಡಲು ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ” ಎಂದು ಹೇಳಿದರು. ಮಾನದಿಂದ ಮಾನವರೆಗೆ ರಸ್ತೆ ನಿರ್ಮಿಸಿದರೆ ಅದರಿಂದ  ಈ ವಲಯಕ್ಕೆ ಅಪಾರ ಲಾಭವಾಗುತ್ತದೆ. ಜೋಶಿಮಾತ ಮತ್ತು ಮಲಾರಿ ರಸ್ತೆಯನ್ನು ವಿಸ್ತರಣೆ ಮಾಡಿದರೆ ಸಾಮಾನ್ಯ ಜನತೆಯಷ್ಟೇ ಅಲ್ಲದೇ ನಮ್ಮ ಯೋಧರು ಗಡಿಯನ್ನು ಸುಲಭವಾಗಿ ತಲುಪಲು ನೆರವಾಗಲಿದೆ ಎಂದು ಹೇಳಿದರು.

ಉತ್ತರಾಖಂಡದ ಕಠಿಣ ಶ್ರಮ ಮತ್ತು ಸಮರ್ಪಣಾ ಭಾವ ಸದಾ ಕಾಲ ರಾಜ್ಯದ ನಿರೀಕ್ಷೆ ಮತ್ತು ಆಕಾಂಕ್ಷೆಯನ್ನು ಸಾಕಾರಗೊಳಿಸಲು ಸಹಕಾರಿಯಾಗಲಿದೆ. “ನಂಬಿಕೆಯನ್ನು ಕಾರ್ಯರೂಪಕ್ಕೆ ತರಲು ತಾವು ಬಾಬಾ ಕೇದಾರ್ ಮತ್ತು ಬದ್ರಿ ವಿಶಾಲ್ ಅವರ ಆಶಿರ್ವಾದ ಪಡೆಯಲು ಇಲ್ಲಿಗೆ ಆಗಮಿಸಿದ್ದೇನೆ” ಎಂದು ಪ್ರಧಾನಮಂತ್ರಿ ಅವರು ತಮ್ಮ ಭಾಷಣ ಪೂರ್ಣಗೊಳಿಸಿದರು.

ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಮಿ, ಉತ್ತರಾಖಂಡ ರಾಜ್ಯಪಾಲರಾದ ನಿವೃತ್ತ ಜನರಲ್ ಗುರ್ಮಿತ್ ಸಿಂಗ್, ಸಂಸದರಾದ ಶ್ರೀ ತೀರ್ಥಸಿಂಗ್ ರಾವತ್, ಉತ್ತರಾಖಂಡ ಸರ್ಕಾರದ ಸಚಿವರಾದ ಶ್ರೀ ಧನ್ ಸಿಂಗ್ ರಾವತ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಮಹೇಂದ್ರ ಭಟ್ಟ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಕೇದಾರನಾಥ್ ರೂಪ್ ವೇ 9.7 ಕಿಲೋಮೀಟರ್ ಉದ್ದ ಇದೆ ಮತ್ತು ಇದು ಗೌರಿಕುಂದ್ ನಿಂದ ಕೇದಾರನಾಥ್ ವರೆಗೆ ಸಂಪರ್ಕ ಕಲ್ಪಿಸುತ್ತದೆ, ಇದರಿಂದ 6-7 ಗಂಟೆ ಇದ್ದ ಪ್ರಯಾಣದ ಸಮಯವನ್ನು 30 ನಿಮಿಷಗಳಿಗೆ ಇಳಿಸುತ್ತದೆ. ಹೇಮಕುಂದ್ ರೋಪ್ ವೇ ಗೋವಿಂದಘಾಟ್ ನಿಂದ ಹೇಮಕುಂದ್ ಸಾಹಿಬ್ ವರೆಗೆ ಸಂಪರ್ಕ ಕಲ್ಪಿಸುತ್ತದೆ. ಇದು 12.4 ಕಿಲೋಮೀಟರ್ ಉದ್ದ ಇದೆ ಮತ್ತು ಒಂದು ದಿನಕ್ಕೂ ಹೆಚ್ಚು ಇದ್ದ ಪ್ರವಾಸದ ಸಮಯವನ್ನು 45 ನಿಮಿಷಗಳಿಗೆ ಇಳಿಕೆ ಮಾಡುತ್ತದೆ. ಈ ರೋಪ್ ವೇ ಘಾನಂಗರಿಯ ಪ್ರದೇಶವನ್ನು ಸಂಪರ್ಕಿಸಲಿದ್ದು, ಇದು ಹೂವುಗಳ ರಾಷ್ಟ್ರೀಯ ಉದ್ಯಾನವನದ ಹೆಬ್ಬಾಗಿಲು ಎನ್ನುವುದು ವಿಶೇಷ.

ಅಭಿವೃದ್ಧಿ ವೆಚ್ಚ ಸುಮಾರು 2430 ಕೋಟಿ ರೂಪಾಯಿ ಆಗಿದ್ದು, ಇದು ಪರಿಸರ ಸ್ನೇಹಿ ರೋಪ್ ವೇ ಆಗಿದೆ. ಸುರಕ್ಷಿತ ಪ್ರಯಾಣ, ಸ್ಥಿರ ಮತ್ತು ರಕ್ಷಣೆಯನ್ನು  ಈ ರೂಪ್ ವೇ ಒಳಗೊಂಡಿದೆ. ಇದರಿಂದ ಧಾರ್ಮಿಕ ಪ್ರವಾಸೋದ್ಯಮಕ್ಕೆ ಪುಷ್ಟಿ ದೊರೆಯಲಿದ್ದು, ಈ ಮೂಲಕ ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ ಹಾಗೂ ಬಹುಹಂತದ ಉದ್ಯೋಗಾವಕಾಶಗಳನ್ನು ಸಹ ಒದಗಿಸಲಿದೆ.

ತಮ್ಮ ಭೇಟಿ ಸಂದರ್ಭದಲ್ಲಿ 1000 ಕೋಟಿ ರೂಪಾಯಿ ಮೊತ್ತದ ರಸ್ತೆ ವಿಸ್ತರಣೆ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಿದರು.  ಮಾನದಿಂದ ಮಾನ ಪಾಸ್ ನಡುವೆ [ಎನ್.ಎಚ್07] ಮತ್ತು ಜೋಶಿಮಥ್ ನಿಂದ ಮಲಾರಿ [ಎನ್.ಎಚ್107ಬಿ] ಮಾರ್ಗ ಗಡಿ ಪ್ರದೇಶಗಳನ್ನು ಸಂಪರ್ಕಿಸುವ ಸರ್ವಋತು ಮಾರ್ಗವಾಗಿದೆ. ಇದರಿಂದ ಸಂಪರ್ಕ ಹೆಚ್ಚಳವಾಗುವ ಜೊತೆಗೆ ಈ ಯೋಜನೆಯ ಕಾರ್ಯತಂತ್ರದ ದೃಷ್ಟಿಕೋನದಿಂದಲೂ ಹೆಚ್ಚು ಪ್ರಯೋಜನಕಾರಿಯಾಗಿದೆ.

ಕೇದಾರನಾಥ್ ಮತ್ತು ಬದರಿನಾಥ್ ಅತ್ಯಂತ ಪ್ರಮುಖ ಹಿಂದೂ ದೇವಾಲಯಗಳಾಗಿವೆ. ಈ ಪ್ರದೇಶ ಸಿಖ್ ರ ಪೂಜ್ಯ ಯಾತ್ರಾಸ್ಥಳಗಳಲ್ಲಿ ಒಂದಾದ ಹೇಮಕುಂದ್ ಸಾಹೀಬ್ ಗೆ ಹೆಸರುವಾಸಿಯಾಗಿದೆ. ಕೈಗೊಳ್ಳಲಾಗುತ್ತಿರುವ ಸಂಪರ್ಕ ಯೋಜನೆಗಳು ಧಾರ್ಮಿಕ ಪ್ರಾಮುಖ್ಯದ ಸ್ಥಳಗಳಲ್ಲಿ  ಸೌಲಭ್ಯಗಳನ್ನು ಸುಲಭಗೊಳಿಸುವ ಮತ್ತು ಸುಧಾರಿಸುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

******


(Release ID: 1870196) Visitor Counter : 159