ಗಣಿ ಸಚಿವಾಲಯ
azadi ka amrit mahotsav

ವಿಶೇಷ ಸ್ವಚ್ಛತಾ ಅಭಿಯಾನ 2.0


ಗಣಿ ಮತ್ತು ಅಧೀನ ಕಚೇರಿಗಳ ಸಚಿವಾಲಯದಿಂದ ಆಯೋಜನೆ

Posted On: 20 OCT 2022 1:30PM by PIB Bengaluru

ಅಕ್ಟೋಬರ್‌ 2 ಮತ್ತು ಅಕ್ಟೋಬರ್‌ 31 ರ ನಡುವೆ ಭಾರತ ಸರ್ಕಾರದಾದ್ಯಂತ ಎಲ್ಲಾ ಸಚಿವಾಲಯಗಳು ನಡೆಸುತ್ತಿರುವ ವಿಶೇಷ ಅಭಿಯಾನ 2.0ರ ಭಾಗವಾಗಿ , ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್‌ ಭಾರದ್ವಾಜ್‌ ಅವರು ಅಕ್ಟೋಬರ್‌ 2 ರಂದು ಖನಿಜ್‌ ಕಕ್ಷ್ ನಲ್ಲಿಸಚಿವಾಲಯದ ಗಣಿಗಳ ಚಟುವಟಿಕೆಗಳನ್ನು ಪ್ರಾರಂಭಿಸಿದರು, ಅಲ್ಲಿಸಚಿವಾಲಯದ ಅಡಿಯಲ್ಲಿನ ಎಲ್ಲಾ ಸಂಸ್ಥೆಗಳು ವಿ.ಸಿ. ಮೂಲಕ ಸೇರಿಕೊಂಡವು. ಸಚಿವಾಲಯವು 116 ಸ್ವಚ್ಛತಾ ಅಭಿಯಾನಗಳನ್ನು ಅನುಷ್ಠಾನಗೊಳಿಸಲು ಭಾರತದಾದ್ಯಂತ 84 ಸೈಟ್‌(ಜಾಗ) ಕಚೇರಿಗಳನ್ನು ಗುರುತಿಸಿದೆ.

ಸೆಪ್ಟೆಂಬರ್‌ 15 ರಿಂದ 30ರವರೆಗೆ ಸಿದ್ಧತೆಯ ಹಂತದಲ್ಲಿಗಣಿ ಸಚಿವಾಲಯದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಕಾರ್ಯದರ್ಶಿಗಳು ಜಿಎಸ್‌ಐ ಮತ್ತು ಐಬಿಎಂನ ಕ್ಷೇತ್ರ ಕಚೇರಿಗಳಿಗೆ ಭೇಟಿ ನೀಡಿ ಕಚೇರಿಗಳನ್ನು ಪರಿಶೀಲಿಸಿದರು ಮತ್ತು ಅಭಿಯಾನಕ್ಕಾಗಿ ಮಾರ್ಗದರ್ಶನ ನೀಡಿದರು.

NALCO vermicompost

‘‘ಮಳೆನೀರು ಕೊಯ್ಲು, ಕಾಂಪೋಸ್ಟ್‌ ಗುಂಡಿಗಳು, ಸರೋವರಗಳು / ಕೊಳಗಳನ್ನು ಸ್ವಚ್ಛಗೊಳಿಸುವುದು ಮತ್ತು ತ್ಯಾಜ್ಯದ ಪರಿಸರ-ವಿಲೇವಾರಿಯ ರೂಪದಲ್ಲಿಪರಿಸರಕ್ಕೆ ಮರಳುವುದು,’’ ಸಚಿವಾಲಯವು ಈ ವರ್ಷ ನಿಗದಿಪಡಿಸಿದ ಗುರಿಯಾಗಿದೆ. ಅತ್ಯುತ್ತಮ ಆಚರಣೆಗಳ ಭಾಗವಾಗಿ ಗಣಿ ಸಚಿವಾಲಯದ ಕಚೇರಿಗಳ ಮಾಲೀಕತ್ವದ ಕಟ್ಟಡಗಳು ಮಳೆನೀರು ಕೊಯ್ಲು ರಚನೆಗಳನ್ನು ಸ್ಥಾಪಿಸುತ್ತಿವೆ. ಕಾಂಪೋಸ್ಟ್‌ ಪಿಟ್‌ ಯೋಜನೆಗಳಿಗಾಗಿ ಮೂರು ಸ್ಥಳಗಳನ್ನು ಗುರುತಿಸಲಾಗಿದೆ.

   Innovative idea HCLVermicompost (jharkhand)(1)

ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್‌ ಭಾರದ್ವಾಜ್‌ ಅವರು, ಇತ್ತೀಚೆಗೆ ಕೋಲ್ಕತಾದ ಜಿಎಸ್‌ಐ ಪ್ರಧಾನ ಕಚೇರಿಗೆ ಭೇಟಿ ನೀಡಿ ವಿಶೇಷ ಅಭಿಯಾನ 2.0 ರ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು ಮತ್ತು ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿಸಲು ಅತ್ಯಂತ ಪ್ರಾಮಾಣಿಕತೆಯಿಂದ ಕೈಗೊಳ್ಳುವಂತೆ ಉದ್ಯೋಗಿಗಳಿಗೆ ಸೂಚಿಸಿದರು.

     waste gsi

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಲ್ಹಾದ್‌ ಜೋಶಿ ಮತ್ತು ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್‌ ಭಾರದ್ವಾಜ್‌ ಅವರು, ಜಾಗವನ್ನು ವೆಲ್‌ ನೆಸ್‌ ಕೆಫೆಯಾಗಿ ಪರಿವರ್ತಿಸಲು ಸಚಿವಾಲಯ ಗುರುತಿಸಿರುವ ಸ್ಥಳಕ್ಕೆ ಭೇಟಿ ನೀಡಿದರು ಮತ್ತು ಅದರ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಉದ್ಯೋಗಿಗಳನ್ನು ಉತ್ತೇಜಿಸಿದರು. ಸಚಿವ ಶ್ರೀ ಪ್ರಲ್ಹಾದ್‌ ಜೋಶಿ ಅವರು ಕೋಲ್ಕತಾದ ಜಿ.ಎಸ್‌.ಐ ಕೇಂದ್ರ ಕಚೇರಿಗೆ ಭೇಟಿ ನೀಡಿದರು ಮತ್ತು ವಿಶೇಷ ಅಭಿಯಾನ 2.0 ರ ಅಡಿಯಲ್ಲಿಅಲ್ಲಿನ ವೆಲ್‌ನೆಸ್‌ ಕೆಫೆಟೇರಿಯಾವನ್ನು ಉದ್ಘಾಟಿಸಿದರು.

GSI CANTEEN INAUGURATION

ಬಾಕಿ ಉಳಿದಿರುವ ಸಂಸದರ ಉಲ್ಲೇಖಗಳು, ರಾಜ್ಯ ಸರ್ಕಾರಗಳ ಉಲ್ಲೇಖಗಳು, ಅಂತರ ಸಚಿವಾಲಯದ ಉಲ್ಲೇಖಗಳು, ಸಂಸದೀಯ ಭರವಸೆಗಳು, ಪ್ರಧಾನಮಂತ್ರಿ ಕಾರ್ಯಾಲಯದ ಉಲ್ಲೇಖಗಳು, ಸಾರ್ವಜನಿಕ ಕುಂದುಕೊರತೆ ಮತ್ತು ಪಿಜಿ (ಸಾರ್ವಜನಿಕ ಆಡಳಿತ) ಅಪೀಲುಗಳನ್ನು ಗುರುತಿಸುವ ಮೂಲಕ ಸಚಿವಾಲಯವು ಉತ್ತಮ ದಾಖಲೆ ನಿರ್ವಹಣೆಗಾಗಿ ಅಭಿಯಾನವನ್ನು ಬಳಸಿಕೊಂಡಿತು.

ಸಚಿವ ಶ್ರೀ ಪ್ರಲ್ಹಾದ್‌ ಜೋಶಿ ಅವರು ವಿಶೇಷ ಅಭಿಯಾನದಡಿ ಮಾಡಲಾದ ಕಾಮಗಾರಿಗಳನ್ನು ಪರಾಮರ್ಶಿಸುವಾಗ, ಗಣಿ ಸಚಿವಾಲಯವು ಅನುಷ್ಠಾನಗೊಳಿಸುತ್ತಿರುವ ಇಲಾಖಾ ಕ್ಯಾಂಟೀನ್‌ನಲ್ಲಿ ತ್ಯಾಜ್ಯವನ್ನು ಬೇರ್ಪಡಿಸುವಂತೆ ಸಲಹೆ ನೀಡಿದರು. ನೋಡಲ್‌ ಸಚಿವಾಲಯವಾಗಿರುವ ಶಿಕ್ಷಣ ಸಚಿವಾಲಯವು ಇಲಾಖಾ ಕ್ಯಾಂಟೀನ್‌ಗೆ ಇದೇ ರೀತಿಯ ಮಾರ್ಗಸೂಚಿಗಳನ್ನು ಹೊರಡಿಸಲು ವಿನಂತಿಸಲಾಗಿದೆ ಮತ್ತು ಅವರು ತ್ಯಾಜ್ಯ ವಿಂಗಡಣೆ ಮತ್ತು ಗೊಬ್ಬರ ಗುಂಡಿಗಳನ್ನು ನಿರ್ಮಿಸಲು ಜೈವಿಕ ತ್ಯಾಜ್ಯವನ್ನು ಬಳಸಲು ಶಾಸ್ತ್ರಿ ಭವನದಲ್ಲಿರುವ ಎಲ್ಲಾ ಇಲಾಖಾ ಕ್ಯಾಂಟೀನ್‌ಗಳೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ.

ಹೈದರಾಬಾದ್‌ನ ಜಿಎಸ್‌ಐಟಿಐ ಕೂಡ ಅತ್ಯುತ್ತಮ ಆಚರಣೆಗಾಗಿ ತನ್ನ ಹಾಸ್ಟೆಲ್‌ ಕ್ಯಾಂಟೀನ್‌ನಲ್ಲಿ ತ್ಯಾಜ್ಯ ವಿಂಗಡಣೆಯನ್ನು ಪ್ರಾರಂಭಿಸಿತು ಮತ್ತು ಕಾಂಪೋಸ್ಟ್‌ ತಯಾರಿಸಲು ಜೈವಿಕ ತ್ಯಾಜ್ಯವನ್ನು ಬಳಸಿತು. ಹೈದರಾಬಾದ್‌ನನ ಜಿಎಸ್‌ಐಟಿಐನಲ್ಲಿ ಕಾಂಪೋಸ್ಟ್‌ ಪಿಟ್‌ ಅನ್ನು ರಚಿಸಲಾಗಿದೆ.

                    

ವಿಶೇಷ ಅಭಿಯಾನ 1.0 ರಲ್ಲಿಗಣಿ ಸಚಿವಾಲಯವು ಸುಮಾರು ಒಂದು ಲಕ್ಷ  ಕಡತಗಳನ್ನು ಹೊರಹಾಕಿದೆ. ಈ ವರ್ಷ ಕ್ಷೇತ್ರ ಕಚೇರಿಗಳಿಗೆ ಒತ್ತು ನೀಡಿರುವುದರಿಂದ, ಅದರ ಲಗತ್ತಿಸಲಾದ ಮತ್ತು ಅಧೀನ ಕಚೇರಿಗಳ ಮೂಲಕ ಎಂ/ಓ ಮೈನ್ಸ್‌ ದಾಖಲೆ ನಿರ್ವಹಣೆಯಲ್ಲಿ3.32 ಲಕ್ಷ  ಖಡತಗಳನ್ನು  ಪರಿಶೀಲಿಸುವ ಗುರಿಯನ್ನು ಇಟ್ಟುಕೊಂಡಿದೆ ಅಭಿಯಾನದ ಸಮಯದಲ್ಲಿ ಕ್ಷೇತ್ರ ಕಚೇರಿಗಳು ಭಾರತದಾದ್ಯಂತ ಹರಡಿರುವ ತಮ್ಮ ಕಚೇರಿಗಳಿಂದ 20 ವರ್ಷಗಳಷ್ಟು ಹಳೆಯದಾದ ಅನುಪಯುಕ್ತ ವಸ್ತುಗಳನ್ನು ತೆಗೆದುಹಾಕುತ್ತಿವೆ.

ಇಲ್ಲಿಯವರೆಗೆ, ಗಣಿ ಸಚಿವಾಲಯ ಮತ್ತು ಅದರ ಕ್ಷೇತ್ರ ಸಂಸ್ಥೆಗಳು ಸ್ವಚ್ಛತಾ ಅಭಿಯಾನದ ಶೇ. 90.51 ರಷ್ಟನ್ನು ಸಾಧಿಸಿವೆ ಮತ್ತು ಗುಜರಿ ವಿಲೇವಾರಿಯಿಂದ 1,58,40,266/- ರೂ.ಗಳ ಆದಾಯವನ್ನು ಗಳಿಸಿವೆ. ದಕ್ಷ  ದಾಖಲೆಗಳ ನಿರ್ವಹಣೆಯ ಮೂಲಕ ಸುಮಾರು 92,199 ಚದರ ಅಡಿ ಜಾಗವನ್ನು ಮುಕ್ತಗೊಳಿಸಲಾಗಿದೆ. 2022 ರ ಅಕ್ಟೋಬರ್‌ 31 ರೊಳಗೆ ಸಚಿವಾಲಯವು ವಿಶೇಷ ಸ್ವಚ್ಛತಾ ಅಭಿಯಾನ 2.0 ಕ್ಕೆ ನಿಗದಿಪಡಿಸಿದ ಗುರಿಯ ಶೇ. 100  ರಷ್ಟನ್ನು ಸಾಧಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

******


(Release ID: 1869561) Visitor Counter : 129


Read this release in: English , Urdu , Hindi , Telugu