ಸಂಪುಟ
azadi ka amrit mahotsav

2021-22ರ ಹಣಕಾಸು ವರ್ಷಕ್ಕೆ ರೈಲ್ವೆ ಉದ್ಯೋಗಿಗಳಿಗೆ 78 ದಿನಗಳಿಗೆ ಸಮಾನವಾದ ಉತ್ಪಾದಕತೆ ಆಧಾರಿತ  ಬೋನಸ್ ಪಾವತಿಗೆ ಸಚಿವ ಸಂಪುಟ ಅನುಮೋದನೆ

प्रविष्टि तिथि: 12 OCT 2022 4:23PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು 2021-22ನೇ ಹಣಕಾಸು ವರ್ಷಕ್ಕೆ ರೈಲ್ವೇ ಉದ್ಯೋಗಿಗಳಿಗೆ ಉತ್ಪಾದಕತೆ  ಆಧಾರಿತ ಬೋನಸ್ ಪಾವತಿಗೆ ಹಿಂದಿನಿಂದಲೇ ಅನ್ವಯವಾಗುವಂತೆ ತನ್ನ ಅನುಮೋದನೆಯನ್ನು ನೀಡಿದೆ.

ಅರ್ಹ ರೈಲ್ವೇ ಉದ್ಯೋಗಿಗಳಿಗೆ ಉತ್ಪಾದಕತೆ  ಆಧಾರಿತ ಬೋನಸ್ ಪಾವತಿಯನ್ನು ಪ್ರತಿ ವರ್ಷ ದಸರಾ/ಪೂಜಾ ರಜೆಗಳ ಮೊದಲು ಮಾಡಲಾಗುತ್ತದೆ. ಈ ವರ್ಷವೂ ಸುಮಾರು 11.27 ಲಕ್ಷ ಗೆಜೆಟೆಡ್ ಅಲ್ಲದ ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮನಾದ ಉತ್ಪಾದಕತೆ  ಆಧಾರಿತ ಬೋನಸ್ ಮೊತ್ತವನ್ನು ಪಾವತಿಸಲಾಗಿದೆ. ಅರ್ಹ ರೈಲ್ವೆ ಉದ್ಯೋಗಿಗೆ ಪಾವತಿಸಬೇಕಾದ ಗರಿಷ್ಠ ಮೊತ್ತ 78 ದಿನಗಳಿಗೆ ರೂ. 17,951/-. ಈ ಮೊತ್ತವನ್ನು ವಿವಿಧ ವರ್ಗಗಳಿಗೆ ಅಂದರೆ ಟ್ರ್ಯಾಕ್ ನಿರ್ವಾಹಕರು, ಚಾಲಕರು ಮತ್ತು ಗಾರ್ಡ್‌ಗಳು, ಸ್ಟೇಷನ್ ಮಾಸ್ಟರ್‌ಗಳು, ಸೂಪರ್‌ವೈಸರ್‌ಗಳು, ತಂತ್ರಜ್ಞರು, ತಂತ್ರಜ್ಞ ಸಹಾಯಕರು, ನಿಯಂತ್ರಕರು, ಪಾಯಿಂಟ್‌ಮೆನ್, ಸಚಿವಾಲಯದ ಸಿಬ್ಬಂದಿ ಮತ್ತು ಇತರ ಗ್ರೂಪ್ 'ಸಿ' ಸಿಬ್ಬಂದಿಯವರಿಗೆ ಪಾವತಿಸಲಾಗಿದೆ.

ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ಉತ್ಪಾದಕತೆ  ಆಧಾರಿತ ಬೋನಸ್ ಆರ್ಥಿಕ ಪರಿಣಾಮವು ರೂ.1832.09 ಕೋಟಿ. ಕೋವಿಡ್-19 ನಂತರದ ಸವಾಲುಗಳಿಂದ ಉಂಟಾದ ಪ್ರತಿಕೂಲ ಆರ್ಥಿಕ ಪರಿಸ್ಥಿತಿಯ ಹೊರತಾಗಿಯೂ ಉತ್ಪಾದಕತೆ  ಆಧಾರಿತ ಬೋನಸ್ ಪಾವತಿಗಾಗಿಮೇಲಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಪಾವತಿಸಿದ ಉತ್ಪಾದಕತೆ  ಆಧಾರಿತ ಬೋನಸ್ ದಿನಗಳ ನಿಜವಾದ ಸಂಖ್ಯೆಯು ವ್ಯಾಖ್ಯಾನಿಸಲಾದ ಸೂತ್ರಗಳ ಆಧಾರದ ಮೇಲೆ ಕೆಲಸ ಮಾಡಿದ ದಿನಗಳಿಗಿಂತ ಹೆಚ್ಚು. ಉತ್ಪಾದಕತೆ  ಆಧಾರಿತ ಬೋನಸ್ ಪಾವತಿಯು ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು, ಕೆಲಸ ಮಾಡಲು ರೈಲ್ವೆ ಉದ್ಯೋಗಿಗಳನ್ನು ಪ್ರೇರೇಪಿಸಲು ಉತ್ತೇಜನದಂತೆ  ಕಾರ್ಯನಿರ್ವಹಿಸುತ್ತದೆ.

*****


(रिलीज़ आईडी: 1867127) आगंतुक पटल : 262
इस विज्ञप्ति को इन भाषाओं में पढ़ें: Tamil , Odia , English , Urdu , Marathi , हिन्दी , Manipuri , Bengali , Assamese , Punjabi , Gujarati , Telugu , Malayalam