ಹಣಕಾಸು ಸಚಿವಾಲಯ

2022 ರ ಅಕ್ಟೋಬರ್ 11 ರಿಂದ 16 ರವರೆಗೆ ಐಎಂಎಫ್-ವಿಶ್ವಬ್ಯಾಂಕ್ ವಾರ್ಷಿಕ ಸಭೆಗಳಲ್ಲಿ ಭಾಗವಹಿಸಲು ಯುಎಸ್ಎಗೆ ಅಧಿಕೃತ ಭೇಟಿಗಾಗಿ  ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ತಡರಾತ್ರಿ ಪ್ರಯಾಣ ಬೆಳೆಸಲಿದ್ದಾರೆ


ಅನೇಕ ದೇಶಗಳೊಂದಿಗಿನ ದ್ವಿಪಕ್ಷೀಯ ಸಭೆಗಳ ಜೊತೆಗೆ ಜಿ 20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ಸಭೆಗಳಲ್ಲಿಯೂ ಕೇಂದ್ರ ಹಣಕಾಸು ಸಚಿವರು ಭಾಗವಹಿಸಲಿದ್ದಾರೆ

Posted On: 10 OCT 2022 2:37PM by PIB Bengaluru

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2022ರ ಅಕ್ಟೋಬರ್ 11 ರಿಂದ ಅಧಿಕೃತ ಭೇಟಿಗಾಗಿ ಯುಎಸ್ಎಗೆ ಪ್ರಯಾಣಿಸಲಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ, ಶ್ರೀಮತಿ ಸೀತಾರಾಮನ್ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್ ವಾರ್ಷಿಕ ಸಭೆ ಹಾಗು  ಜಿ 20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ (ಎಫ್ಎಂಸಿಬಿಜಿ) ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ಹಣಕಾಸು ಸಚಿವರು ಜಪಾನ್, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಭೂತಾನ್, ನ್ಯೂಜಿಲೆಂಡ್, ಈಜಿಪ್ಟ್, ಜರ್ಮನಿ, ಮಾರಿಷಸ್, ಯುಎಇ, ಇರಾನ್ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ ಹಲವಾರು ದೇಶಗಳೊಂದಿಗೆ ದ್ವಿಪಕ್ಷೀಯ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಒಇಸಿಡಿ, ಯುರೋಪಿಯನ್ ಕಮಿಷನ್ ಮತ್ತು ಯುಎನ್ಡಿಪಿಯ ನಾಯಕರು ಮತ್ತು ಮುಖ್ಯಸ್ಥರೊಂದಿಗೆ ಹಣಕಾಸು ಸಚಿವರು ಪರಸ್ಪರ ಸಭೆಗಳನ್ನು ನಡೆಸಲಿದ್ದಾರೆ.

ಉನ್ನತ ಮಟ್ಟದ ಸಭೆಯಲ್ಲಿ, ಹಣಕಾಸು ಸಚಿವರು ಯುಎಸ್ ಖಜಾನೆ ಕಾರ್ಯದರ್ಶಿ ಶ್ರೀಮತಿ ಜಾನೆಟ್ ಯೆಲೆನ್ ಮತ್ತು ವಿಶ್ವಬ್ಯಾಂಕ್ ಅಧ್ಯಕ್ಷ ಶ್ರೀ ಡೇವಿಡ್ ಮಾಲ್ಪಾಸ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.

ಕೇಂದ್ರ ಹಣಕಾಸು ಸಚಿವರು ವಾಷಿಂಗ್ಟನ್ ಡಿಸಿ ಮೂಲದ  ಪ್ರಮುಖ ಲಾಭರಹಿತ ಸಾರ್ವಜನಿಕ ನೀತಿ ಸಂಸ್ಥೆಯಾದ ಬ್ರೂಕಿಂಗ್ಸ್ ಇನ್ಸ್ಟಿಟ್ಯೂಷನ್ನಲ್ಲಿ "ಭಾರತದ ಆರ್ಥಿಕ ಭವಿಷ್ಯಗಳು ಮತ್ತು ವಿಶ್ವ ಆರ್ಥಿಕತೆಯಲ್ಲಿ ಪಾತ್ರ" ಕುರಿತ ಅನೌಪಚಾರಿಕ ಸಂವಾದ (ಫೈರ್ ಸೈಡ್ ಚಾಟ್)ದಲ್ಲಿ  ಭಾಗವಹಿಸಲಿದ್ದಾರೆ.

ಶ್ರೀಮತಿ ಸೀತಾರಾಮನ್ ಅವರು ಈ ಭೇಟಿಯ ಸಂದರ್ಭದಲ್ಲಿ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್ಡ್ ಇಂಟರ್ನ್ಯಾಷನಲ್ ಸ್ಟಡೀಸ್ (ಎಸ್ಎಐಎಸ್) ನಲ್ಲಿ 'ತಂತ್ರಜ್ಞಾನ, ಹಣಕಾಸು ಮತ್ತು ಆಡಳಿತ'ದ ಅಂತರ್ಜೋಡಣೆಯ  ಮೂಲಕ ಭಾರತದಲ್ಲಿ ರೂಪುಗೊಂಡ  ಭಾರತದ ಅನನ್ಯ ಡಿಜಿಟಲ್ ಸಾರ್ವಜನಿಕ ಸರಕುಗಳ (ಡಿಪಿಜಿ) ಕಥೆ ಮತ್ತು ಬಹು ಪರಿಣಾಮಗಳ ಬಗ್ಗೆ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ.

ಪ್ರವಾಸದ  ಮುಂದಿನ  ಭಾಗದಲ್ಲಿ, ಕೇಂದ್ರ ಹಣಕಾಸು ಸಚಿವರು 'ಭಾರತ-ಯುಎಸ್ ಕಾರಿಡಾರ್ ನಲ್ಲಿ ಹೂಡಿಕೆ ಮತ್ತು ನಾವೀನ್ಯತೆಯನ್ನು ಬಲಪಡಿಸುವುದು' ಮತ್ತು 'ಭಾರತದ ಡಿಜಿಟಲ್ ಕ್ರಾಂತಿಯಲ್ಲಿ ಹೂಡಿಕೆ' ಎಂಬ ವಿಷಯಗಳ ಬಗ್ಗೆ ಯುಎಸ್ ಐಬಿಸಿ ಮತ್ತು ಯುಎಸ್ ಐಎಸ್ ಪಿಎಫ್ ನೊಂದಿಗೆ ದುಂಡುಮೇಜಿನ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಮುಖ ವಾಣಿಜ್ಯೋದ್ಯಮಗಳ  ನಾಯಕರು ಮತ್ತು ಹೂಡಿಕೆದಾರರೊಂದಿಗಿನ ಈ ಸಭೆಗಳು ಭಾರತದ ನೀತಿ ಆದ್ಯತೆಗಳನ್ನು ಎತ್ತಿ ತೋರಿಸುವ ಮತ್ತು ಹೂಡಿಕೆಯ ತಾಣವಾಗಿ ಭಾರತದ ಆಕರ್ಷಣೆಯನ್ನು ಪ್ರದರ್ಶಿಸುವ ಮೂಲಕ ವಿದೇಶಿ ಹೂಡಿಕೆಯನ್ನು ಸುಗಮಗೊಳಿಸುವ ಕ್ರಮಗಳ ಬಗ್ಗೆ ಚರ್ಚಿಸುವ ಉದ್ದೇಶವನ್ನು  ಹೊಂದಿವೆ.

******



(Release ID: 1866678) Visitor Counter : 147