ಪ್ರಧಾನ ಮಂತ್ರಿಯವರ ಕಛೇರಿ
ವಾಯುಪಡೆ ದಿನದಂದು ಭಾರತೀಯ ವಾಯುಪಡೆಗೆ ಶುಭ ಕೋರಿದ ಪ್ರಧಾನಮಂತ್ರಿ
Posted On:
08 OCT 2022 9:27AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತೀಯ ವಾಯುಪಡೆಯ ಸದಸ್ಯರು ಮತ್ತು ಅವರ ಕುಟುಂಬದವರಿಗೆ ವಾಯುಪಡೆ ದಿನದ ಸಂದರ್ಭದಲ್ಲಿ ಶುಭ ಕೋರಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು,
"ವಾಯುಪಡೆ ದಿನದಂದು, ಧೈರ್ಯಶಾಲಿಗಳಾದ ವಾಯು ಯೋಧರು ಮತ್ತು ಅವರ ಕುಟುಂಬದವರಿಗೆ ನನ್ನ ಶುಭಾಶಯಗಳು. नभः स्पृशं दीप्तम् ಎಂಬ ಘನೋದ್ದೇಶದೊಂದಿಗೆ ಅವರು ದಶಕಗಳಿಂದ ಅಪರಿಮಿತ ಕೌಶಲ್ಯ ಮೆರೆದಿದ್ದಾರೆ. ಸಂಕಷ್ಟಗಳ ಸಮಯದಲ್ಲಿ ಅವರು ದೇಶವನ್ನು ಸುರುಕ್ಷಿತಗೊಳಿಸಿ, ಗಮನಾರ್ಹ ಮಾನವೀಯ ಸ್ಫೂರ್ತಿಯನ್ನು ತೋರಿಸಿದ್ದಾರೆ." ಎಂದು ತಿಳಿಸಿದ್ದಾರೆ.
******
(Release ID: 1866108)
Read this release in:
English
,
Urdu
,
Hindi
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam