ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ನವೋದ್ಯಮಗಳಿಗೆ ಸಾಲ ಖಾತ್ರಿ ಯೋಜನೆ (ಸಿಜಿಎಸ್ಎಸ್) ಸ್ಥಾಪಿಸಲು ಅಧಿಸೂಚನೆ ಹೊರಡಿಸಿದ ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ)


ನವೋದ್ಯಮಗಳಿಗೆ ಮೇಲಾಧಾರರಹಿತ ಸಾಲ ನೀಡುವ  ಸಂಸ್ಥೆಗಳಿಗೆ ಪ್ರಮುಖ ಸಕ್ರಿಯಗೊಳಿಸುವ ಮತ್ತು ಅಪಾಯ ತಗ್ಗಿಸುವ ಕ್ರಮವಾಗಿ ಕಾರ್ಯನಿರ್ವಹಿಸಲಿರುವ ಯೋಜನೆ 

Posted On: 07 OCT 2022 2:35PM by PIB Bengaluru

ನವದೆಹಲಿ: ಅನುಸೂಚಿತ ವಾಣಿಜ್ಯ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಭಾರತೀಯ ಭದ್ರತೆ ಮತ್ತು ವಿನಿಮಯ ಮಂಡಳಿ (ಸೆಬಿ) ನೋಂದಾಯಿತ ಪರ್ಯಾಯ ಹೂಡಿಕೆ ನಿಧಿಗಳು (ಎಐಎಫ್.ಗಳು) ನೀಡುವ ಸಾಲಗಳಿಗೆ ಸಾಲ ಖಾತ್ರಿ ಒದಗಿಸಲು ನವೋದ್ಯಮಗಳಿಗೆ ಸಾಲ ಖಾತ್ರಿ ಯೋಜನೆ (ಸಿಜಿಎಸ್ಎಸ್) ಅನ್ನು ಸ್ಥಾಪಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಅಧಿಸೂಚನೆ ಹೊರಡಿಸಿದೆ.

ಅರ್ಹ ಸಾಲಗಾರರಿಗೆ ಹಣಕಾಸು ಒದಗಿಸಲು ಸದಸ್ಯ ಸಂಸ್ಥೆಗಳು (ಎಂ.ಐ.ಗಳು) ನೀಡುವ ಸಾಲಗಳಿಗೆ ಪ್ರತಿಯಾಗಿ ನಿರ್ದಿಷ್ಟ ಮಿತಿಯವರೆಗೆ ಸಾಲ ಖಾತ್ರಿಯನ್ನು ಒದಗಿಸುವ ಗುರಿಯನ್ನು ಸಿಜಿಎಸ್ಎಸ್ ಹೊಂದಿದೆ. ಡಿಪಿಐಐಟಿ ಹೊರಡಿಸಿದ ಗೆಜೆಟ್ ಅಧಿಸೂಚನೆಯಲ್ಲಿ ವ್ಯಾಖ್ಯಾನಿಸಲಾದ ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ನವೋದ್ಯಮಗಳು. ಈ ಯೋಜನೆಯಡಿ ಸಾಲ ಖಾತ್ರಿ ವ್ಯಾಪ್ತಿ ವಹಿವಾಟು ಆಧಾರಿತ ಮತ್ತು ಅಂಬ್ರೆಲಾ ಆಧಾರಿತವಾಗಿರುತ್ತದೆ. ವೈಯಕ್ತಿಕ ಪ್ರಕರಣಗಳಿಗೆ ತೆರೆದುಕೊಳ್ಳುವಿಕೆಯನ್ನು ಪ್ರತಿ ಪ್ರಕರಣಕ್ಕೆ 10 ಕೋಟಿ ರೂ.ಗಳಿಗೆ ಅಥವಾ ನಿಜವಾದ ಬಾಕಿ ಇರುವ ಸಾಲದ ಮೊತ್ತಕ್ಕೆ, ಇವುಗಳಲ್ಲಿ ಯಾವುದು ಕಡಿಮೆಯೋ ಅದಕ್ಕೆ ಮಿತಿಗೊಳಿಸಲಾಗುತ್ತದೆ.

ವಹಿವಾಟು-ಆಧಾರಿತ ಖಾತ್ರಿ ವ್ಯಾಪ್ತಿಗೆ ಸಂಬಂಧಿಸಿದಂತೆ, ಏಕ ಅರ್ಹ ಸಾಲಗಾರನ ಆಧಾರದ ಮೇಲೆ ಎಂಐಗಳಿಂದ ಖಾತ್ರಿ ವ್ಯಾಪ್ತಿಯನ್ನು ಪಡೆಯಲಾಗುತ್ತದೆ. ವಹಿವಾಟು ಆಧಾರಿತ ಖಾತರಿಗಳು ಅರ್ಹ ನವೋದ್ಯಮಗಳಿಗೆ ಬ್ಯಾಂಕುಗಳು / ಎನ್.ಬಿ.ಎಫ್.ಸಿ.ಗಳಿಂದ ಸಾಲ ನೀಡುವುದನ್ನು ಉತ್ತೇಜಿಸುತ್ತವೆ. ವಹಿವಾಟು ಆಧಾರಿತ ವ್ಯಾಪ್ತಿಯು ಮೂಲ ಮಂಜೂರಾದ ಸಾಲ ಮೊತ್ತವು 3 ಕೋಟಿ ರೂ. ಆಗಿದ್ದಲ್ಲಿ ಶೇ.80ರಷ್ಟು, ಮೂಲ ಮಂಜೂರಾದ ಸಾಲದ ಮೊತ್ತ 3 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳವರೆಗೆ ಆಗಿದ್ದಲ್ಲಿ, ಕಟ್ಟುಬಾಕಿ ಮೊತ್ತ ಶೇ.75ರಷ್ಟು ಮತ್ತು ಮೂಲ ಮಂಜೂರಾದ ಸಾಲದ ಮೊತ್ತ 5 ಕೋಟಿ ರೂ.ಗಿಂತ ಅಧಿಕವಾಗಿದ್ದಲ್ಲಿ (ಪ್ರತಿ ಸಾಲಗಾರನಿಗೆ 10 ಕೋಟಿ ರೂ.ವರೆಗೆ ಇದ್ದಲ್ಲಿ) ಕಟ್ಟುಬಾಕಿ ಮೊತ್ತ ಶೇ.65ರಷ್ಟು ಆಗಿರುತ್ತದೆ. 

ಅಂಬ್ರೆಲಾ-ಆಧಾರಿತ ಖಾತ್ರಿ ವ್ಯಾಪ್ತಿ ಸೆಬಿಯ ಎಐಎಫ್ ನಿಬಂಧನೆಗಳ ಅಡಿಯಲ್ಲಿ ನೋಂದಾಯಿತ ಸಾಹಸೋದ್ಯಮ ಸಾಲ ನಿಧಿ (ವಿಡಿಎಫ್) ಖಾತರಿಯನ್ನು ಒದಗಿಸುತ್ತದೆ (ಭಾರತೀಯ ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ನಿಧಿಯ ಬೆಳೆಯುತ್ತಿರುವ ವಿಭಾಗ), ಅವರು ಸಂಗ್ರಹಿಸಿದ ನಿಧಿಗಳ ಸ್ವರೂಪ ಮತ್ತು ಅವರು ಒದಗಿಸಿದ ಸಾಲ ಧನಸಹಾಯದ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು. ಅಂಬ್ರೆಲಾ-ಆಧಾರಿತ ವ್ಯಾಪ್ತಿಯು ನಿಜವಾದ ನಷ್ಟಗಳು ಅಥವಾ ಅರ್ಹ ನವೋದ್ಯಮಗಳಲ್ಲಿ ನಿಧಿಯಿಂದ ವ್ಯಾಪ್ತಿ ತೆಗೆದುಕೊಳ್ಳಲಾಗುತ್ತಿರುವ ಸಂಗ್ರಹಿತ ಹೂಡಿಕೆಯ ಗರಿಷ್ಠ ಶೇ.5ವರೆಗೆ ಯಾವುದು ಕಡಿಮೆಯೋ ಅದು ಆಗಿರುತ್ತದೆ,, ಪ್ರತಿ ಸಾಲಗಾರನಿಗೆ ಗರಿಷ್ಠ 10 ಕೋಟಿ ರೂ.ಗಳ ಮಿತಿಗೆ ಒಳಪಟ್ಟಿರುತ್ತದೆ.

ಯೋಜನೆಯನ್ನು ಕಾರ್ಯಗತಗೊಳಿಸಲು ಸಾಂಸ್ಥಿಕ ಕಾರ್ಯವಿಧಾನಗಳ ಜೊತೆಗೆ, ಯೋಜನೆಯ ಪರಾಮರ್ಶೆ, ಮೇಲ್ವಿಚಾರಣೆ ಮತ್ತು ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಡಿಪಿಐಐಟಿ ನಿರ್ವಹಣಾ ಸಮಿತಿ (ಎಂಸಿ) ಮತ್ತು ಅಪಾಯ ಮೌಲ್ಯಮಾಪನ ಸಮಿತಿ (ಆರ್.ಇ.ಸಿ) ಅನ್ನು ರಚಿಸಲಾಗುತ್ತದೆ. ರಾಷ್ಟ್ರೀಯ ಸಾಲ ಖಾತ್ರಿಯ ನ್ಯಾಸ ಕಂಪನಿ ನಿಯಮಿತ (ಎನ್.ಸಿ.ಜಿ.ಟಿ.ಸಿ) ಈ ಯೋಜನೆಯನ್ನು ನಿರ್ವಹಿಸಲಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2016ರ ಜನವರಿ 16ರಂದು ಭಾರತೀಯ ನವೋದ್ಯಮ ಕ್ರಿಯಾ ಯೋಜನೆಗೆ ಚಾಲನೆ ನೀಡಿ, ದೇಶದಲ್ಲಿ ರೋಮಾಂಚಕ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಉದ್ದೇಶಿಸಿರುವ ಸರ್ಕಾರದ ಬೆಂಬಲ, ಯೋಜನೆಗಳು ಮತ್ತು ಪ್ರೋತ್ಸಾಹಕಗಳಿಗೆ ಅಡಿಪಾಯ ಹಾಕಿದರು. ನವೋದ್ಯಮಿಗಳಿಗೆ ಸಾಲದ ಮೂಲಕ ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ನವೋದ್ಯಮಗಳಿಗೆ ಸಾಹಸೋದ್ಯಮ ಸಾಲವನ್ನು ಒದಗಿಸಲು ಪರಿಸರ ವ್ಯವಸ್ಥೆಯಲ್ಲಿ ಬ್ಯಾಂಕುಗಳು ಮತ್ತು ಇತರ ಸದಸ್ಯ ಸಂಸ್ಥೆಗಳನ್ನು ಉತ್ತೇಜಿಸಲು ಸಾಲ ಖಾತರಿ ಯೋಜನೆಯನ್ನು ಈ ಕ್ರಿಯಾ ಯೋಜನೆ ಕಲ್ಪಿಸಿದೆ.

ಡಿಪಿಐಐಟಿ ಮಾನ್ಯತೆ ಪಡೆದ ನವೋದ್ಯಮಗಳಿಗೆ ಮೀಸಲಾದ ಸಾಲ ಖಾತರಿಯು ಮೇಲಾಧಾರ ರಹಿತ ಸಾಲದ ಅಲಭ್ಯತೆಯ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ನಾವೀನ್ಯಪೂರ್ಣ ನವೋದ್ಯಮಗಳಿಗೆ ಪೂರ್ಣ ಪ್ರಮಾಣದ ವ್ಯವಹಾರ ಘಟಕಗಳಾಗಿ ರೂಪುಗೊಳ್ಳುವ ಪ್ರಯಾಣದ ಮೂಲಕ ಆರ್ಥಿಕ ನೆರವಿನ ಹರಿವನ್ನು ಸಕ್ರಿಯಗೊಳಿಸುತ್ತದೆ. ಈ ಯೋಜನೆಯು ಭಾರತೀಯ ನವೋದ್ಯಮ ಪರಿಸರ ವ್ಯವಸ್ಥೆಯನ್ನು ವಿಶ್ವದಲ್ಲಿ ಅತ್ಯುತ್ತಮವಾಗಿಸಲು ನಾವಿನ್ಯತೆಯನ್ನು ಉತ್ತೇಜಿಸುವ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವತ್ತ ಸರ್ಕಾರದ ಗಮನವನ್ನು ಪುನರುಚ್ಚರಿಸುತ್ತದೆ.

ಭಾರತೀಯ ನವೋದ್ಯಮಳಿಗೆ ದೇಶೀಯ ಬಂಡವಾಳವನ್ನು ಕ್ರೋಡೀಕರಿಸುವ ಉದ್ದೇಶದೊಂದಿಗೆ, ಸಿಜಿಎಸ್ಎಸ್ ನವೋದ್ಯಮ ಭಾರತ ಉಪಕ್ರಮ ಅಂದರೆ ನವೋದ್ಯಮಗಳಿಗೆ ನಿಧಿ ಮತ್ತು ನವೋದ್ಯಮ ಭಾರತ ಸೀಡ್ ನಿಧಿ ಯೋಜನೆ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ಪೂರಕವಾಗಿರಲಿದೆ.

ಸಿಜಿಎಸ್ಎಸ್ ನ ಚೌಕಟ್ಟನ್ನು ಈ ನಿಟ್ಟಿನ ಸಚಿವಾಲಯಗಳು, ಬ್ಯಾಂಕುಗಳು, ಎನ್.ಬಿ.ಎಫ್.ಸಿ.ಗಳು, ಸಾಹಸೋದ್ಯಮ ಸಾಲ ನಿಧಿಗಳು, ಶೈಕ್ಷಣಿಕ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯ ತಜ್ಞರೊಂದಿಗೆ ಬಾಧ್ಯಸ್ಥರೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಿ ಸಿದ್ಧಪಡಿಸಲಾಗಿದೆ. ಈ ಯೋಜನೆಯು ನವೋದ್ಯಮಗಳಿಗೆ ಮೇಲಾಧಾರ ರಹಿತ ಧನಸಹಾಯ ಒದಗಿಸುವ ಸಾಲ ನೀಡುವ ಸಂಸ್ಥೆಗಳಿಗೆ ಪ್ರಮುಖ ಸಕ್ರಿಯಗೊಳಿಸುವ ಮತ್ತು ಅಪಾಯ ತಗ್ಗಿಸುವ ಕ್ರಮವಾಗಿ ಕಾರ್ಯನಿರ್ವಹಿಸುತ್ತದೆ.

*****



(Release ID: 1865880) Visitor Counter : 265