ಜಲ ಶಕ್ತಿ ಸಚಿವಾಲಯ
azadi ka amrit mahotsav

ಜಲ ಶಕ್ತಿ ಸಚಿವಾಲಯವು ಸ್ವಚ್ಛ ಭಾರತ ದಿವಸ, 2022 ಅನ್ನು ಆಚರಿಸಿತು


ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಸಮಾರಂಭದಲ್ಲಿ ಉಪಸ್ಥಿತರಿದ್ದರು ಮತ್ತು ಸ್ವಚ್ಛ ಭಾರತ ಮಿಷನ್ - ಗ್ರಾಮೀಣ ಮತ್ತು ಜಲ ಜೀವನ್ ಮಿಷನ್ ಗಾಗಿ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದರು

ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ಸ್ವಚ್ಛ ಸರ್ವೇಕ್ಷಣ್ 2022 ಮತ್ತು ಜಲ ಜೀವನ್ ಮಿಷನ್ ಕಾರ್ಯನಿರ್ವಹಣೆಯ ಮೌಲ್ಯಮಾಪನ 2022 ರ ಮೊದಲ ಪ್ರತಿಗಳನ್ನು ರಾಷ್ಟ್ರಪತಿಗಳಿಗೆ ಹಸ್ತಾಂತರಿಸಿದರು.

Posted On: 02 OCT 2022 7:54PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸ್ವಚ್ಛತಾ ಸ್ಫೂರ್ತಿ ಮತ್ತು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜಯಂತಿಯ ಸ್ಮರಣಾರ್ಥವಾಗಿ ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಡಿಡಿಡಬ್ಲ್ಯೂಎಸ್)ಯ ಸ್ವಚ್ಛ ಭಾರತ ದಿವಸ-2022 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ವರ್ಷ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳನ್ನು ಪ್ರೋತ್ಸಾಹಿಸಲು ಮತ್ತು ಶ್ಲಾಘಿಸಲು, ಒಡಿಎಫ್   ಪ್ಲಸ್ (ಬಯಲು ಶೌಚ ಮುಕ್ತ) ಮತ್ತು ‘ಹರ್ ಘರ್ ಜಲ್’  (ಮನೆ ಮನೆಗೂ ನೀರು) ಯೋಜನೆಯ ಕಾರ್ಯವನ್ನು ವೇಗಗೊಳಿಸಲು ಮತ್ತು ಸಮಗ್ರ ನೈರ್ಮಲ್ಯ ಉದ್ದೇಶಿತ ‘ಜನ  ಆಂದೋಲನ’ವನ್ನು ಬಲಪಡಿಸಲು - ಸ್ವಚ್ಛ ಭಾರತ ಮಿಷನ್ - ಗ್ರಾಮೀಣ (ಎಸ್.ಬಿ.ಎಮ್‍-ಜಿ) ಮತ್ತು ಜಲ ಜೀವನ್ ಮಿಷನ್ (ಜೆ.ಜೆ.ಎಂ.) ಎರಡರ ಪುರಸ್ಕೃತರನ್ನು  ರಾಷ್ಟ್ರಪತಿಗಳು ಸನ್ಮಾನಿಸಿದರು. ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಗಿರಿರಾಜ್ ಸಿಂಗ್, ಜಲಶಕ್ತಿ ಮತ್ತು ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ, ಶ್ರೀ ಬಿಶ್ವೇಶ್ವರ ತುಡು ಮತ್ತು ಜಲಶಕ್ತಿ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಸ್ವಚ್ಛ ಸರ್ವೇಕ್ಷಣ ಗ್ರಾಮೀಣ  (ಎಸ್.ಎಸ್.ಜಿ) 2022, ಸ್ವಚ್ಛತಾ ಹಿ ಸೇವಾ 2022 (ಸ್ವಚ್ಛತೆಯೇ ಸೇವೆ) ಸುಜ್ಲಾಮ್ 1.0 & 2.0,  ಜೆ.ಜೆ.ಎಂ.ಕಾರ್ಯನಿರ್ವಹಣೆಯ ಮೌಲ್ಯಮಾಪನ, ಹರ್ ಘರ್ ಜಲ್ ಪ್ರಮಾಣೀಕರಣ ಮತ್ತು ಸ್ಟಾರ್ಟ್ಅಪ್ ಗ್ರ್ಯಾಂಡ್ ಚಾಲೆಂಜ್ ವಿಜೇತರಿಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಶಸ್ತಿಗಳನ್ನು ನೀಡಿದರು. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗಾಗಿ ನವೀನ ತಂತ್ರಜ್ಞಾನ (ಎಸ್.ಎಲ್.ಡಬ್ಲ್ಯೂ.ಎಂ.), ಒಡಿಎಫ್ ಪ್ಲಸ್ ನ ವಿವಿಧ ಘಟಕಗಳ ಕುರಿತು ಗ್ರಾಮ ಪಂಚಾಯತಿಗಳಿಗೆ ರಾಷ್ಟ್ರೀಯ ಚಲನಚಿತ್ರ ಸ್ಪರ್ಧೆ, ಎಸ್.ಬಿ.ಎಂ.(ಜಿ) ನಲ್ಲಿ ರಾಷ್ಟ್ರೀಯ ಗೋಡೆ ಚಿತ್ರಕಲೆ ಸ್ಪರ್ಧೆ.  ರಾಷ್ಟ್ರಪತಿಗಳಿಗೆ ಸ್ವಚ್ಛ ಸರ್ವೇಕ್ಷಣೆ 2022 ಮತ್ತು ಜೆ.ಜೆ.ಎಂ. ಕಾರ್ಯನಿರ್ವಹಣೆಯ ಮೌಲ್ಯಮಾಪನ 2022 ವರದಿಗಳ ಮೊದಲ ಪ್ರತಿಗಳನ್ನು ಕೇಂದ್ರ ಜಲ ಶಕ್ತಿ ಸಚಿವ ಶ್ರೀ. ಗಜೇಂದ್ರ ಸಿಂಗ್ ಶೇಖಾವತ್ ಅವರು ನೀಡಿದರು.

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು  ಅವರು ತೆಲಂಗಾಣ, ಹರಿಯಾಣ ಮತ್ತು ತಮಿಳುನಾಡಿಗೆ ದೊಡ್ಡ ರಾಜ್ಯಗಳ ವಿಭಾಗದಲ್ಲಿ,  ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಭಾಗದ ಅಡಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರ ಮತ್ತು ನಗರ್ ಹವೆಲಿ,  ದಮನ್ ಮತ್ತು ದಿಯು ಹಾಗೂ ಸಿಕ್ಕಿಂ ರಾಜ್ಯಕ್ಕೆ ಅನುಕ್ರಮವಾಗಿ ಮತ್ತು ಭಿವಾನಿ (ಹರಿಯಾಣ)ಗೆ ಒಟ್ಟಾರೆ ಟಾಪ್ ಪರ್ಫಾರ್ಮಿಂಗ್ ಜಿಲ್ಲೆಯಾಗಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2022 ಪ್ರಶಸ್ತಿಗಳನ್ನು ನೀಡಿದರು. ಇದರ ನಂತರ ರಾಷ್ಟ್ರಪತಿಗಳು ಜಲ ಜೀವನ್ ಮಿಷನ್ ಕಾರ್ಯನಿರ್ವಹಣೆಯ ಮೌಲ್ಯಮಾಪನಕ್ಕಾಗಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಶೇ.60 ಕ್ಕಿಂತ ಹೆಚ್ಚು ಟ್ಯಾಪ್ ವಾಟರ್ ಕವರೇಜ್ (ನಲ್ಲಿ ನೀರು ಪೋರೈಕೆಯ ವ್ಯಾಪ್ತಿ) ವಿಭಾಗದಲ್ಲಿ, ಪುದುಚೇರಿ ಮತ್ತು ಗೋವಾವನ್ನು ಗೌರವಿಸಲಾಯಿತು; ಶೇ.60 ಕ್ಕಿಂತ ಕಡಿಮೆ ಟ್ಯಾಪ್ ವಾಟರ್ ಕವರೇಜ್ ವಿಭಾಗದಲ್ಲಿ ತಮಿಳುನಾಡು ಮತ್ತು ಮೇಘಾಲಯ ಮೊದಲ ಮತ್ತು ಎರಡನೇ ಸ್ಥಾನವನ್ನು ಪಡೆದುಕೊಂಡಿವೆ. ಶ್ರೀಮತಿ ಮುರ್ಮು ಅವರು ದೇಶದ ಮೊದಲ ‘ಹರ್ ಘರ್ ಜಲ್’ ಪ್ರಮಾಣೀಕೃತ ಮಧ್ಯಪ್ರದೇಶ ರಾಜ್ಯದ ಬುರ್ಹಾನ್‌ಪುರ ಜಿಲ್ಲೆಗೆ ಪ್ರಶಸ್ತಿಯನ್ನು ನೀಡಿದರು,   ಅಲ್ಲಿ ಗ್ರಾಮ ಸಭೆಗಳ ಮೂಲಕ ಎಲ್ಲಾ ಹಳ್ಳಿಗಳು ತಮ್ಮನ್ನು ‘ಹರ್ ಘರ್ ಜಲ್’ ಎಂದು ಘೋಷಿಸಿಕೊಂಡಿವೆ.

ತಮ್ಮ ಭಾಷಣದಲ್ಲಿ ಗಾಂಧೀಜಿಯವರನ್ನು ಸ್ಮರಿಸಿದ ರಾಷ್ಟ್ರಪತಿಯವರು ಅವರ ಚಿಂತನೆಗಳು ಶಾಶ್ವತವಾದವು ಎಂದು ಹೇಳಿದರು. ಸತ್ಯ, ಅಹಿಂಸೆಯಂತೆ ಸ್ವಚ್ಛತೆಗೂ ಗಾಂಧೀಜಿಯವರು ಒತ್ತಾಯಿಸಿದರು. ಅವರ ಜನ್ಮದಿನವನ್ನು ‘ಸ್ವಚ್ಛ ಭಾರತ  ದಿವಸ’ ಎಂದು ಆಚರಿಸುವುದು ಅವರಿಗೆ ಸಲ್ಲುವ ಗೌರವವಾಗಿದೆ. ಮೊದಲಿನಿಂದಲೂ ಮಕ್ಕಳಲ್ಲಿ ಸ್ವಚ್ಛತೆಯ ಅಭ್ಯಾಸವನ್ನು ಬೆಳೆಸಿದರೆ, ಅವರು ತಮ್ಮ ಜೀವನದುದ್ದಕ್ಕೂ ಸ್ವಚ್ಛತೆಯ ಅರಿವನ್ನು ಹೊಂದಿರುತ್ತಾರೆ ಎಂದು ಗಾಂಧೀಜಿಯವರು ಭಾವಿಸಿದ್ದರು. ಶತಮಾನಗಳಿಂದ ನೈರ್ಮಲ್ಯವು ಭಾರತೀಯ ಸಂಸ್ಕೃತಿ ಮತ್ತು ಜೀವನ ವಿಧಾನದ ಅವಿಭಾಜ್ಯ ಅಂಗವಾಗಿದೆ. 'ಸ್ವಚ್ಛ ಭಾರತ ಮಿಷನ್ (ಗ್ರಾಮೀಣ)' ಪ್ರಾರಂಭವಾದಾಗಿನಿಂದ, ಹನ್ನೊಂದು ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದೆ ಮತ್ತು ಸುಮಾರು 60 ಕೋಟಿ ಜನರು ತಮ್ಮ ಬಯಲು ಮಲವಿಸರ್ಜನೆಯ ಅಭ್ಯಾಸವನ್ನು ಬಿಟ್ಟಿದ್ದಾರೆ. ಈ ಮಿಷನ್ ಮೂಲಕ, ಭಾರತವು 2015 ರಲ್ಲಿ ವಿಶ್ವಸಂಸ್ಥೆಯು ನಿಗದಿಪಡಿಸಿದ ಸುಸ್ಥಿರ ಅಭಿವೃದ್ಧಿ ಗುರಿ 6 (ಎಸ್‍,ಡಿ.ಜಿ-6) ಅನ್ನು 2030ರ ಗಡುವುಗಿಂತ ಹನ್ನೊಂದು ವರ್ಷ ಮುಂಚಿತವಾಗಿ ಸಾಧಿಸಿದೆ ಎಂದು ಅವರು ಹೇಳಿದರು.

ಕೋವಿಡ್-19ರ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ, ವೈಯಕ್ತಿಕ ಶೌಚಾಲಯಗಳು, ಸಾಬೂನಿನಿಂದ ಕೈ ತೊಳೆಯುವ ಅಭ್ಯಾಸ ಮತ್ತು ಮನೆಯಲ್ಲಿ ನಲ್ಲಿಗಳ ಮೂಲಕ ನೀರು ಸರಬರಾಜು ಮಾಡುವ ಅನುಕೂಲವು ವಿಪತ್ತಿನ ಸಮಯದಲ್ಲಿ ಕವಚದಂತೆ  ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಎಲ್ಲರೂ ಅರಿತುಕೊಂಡರು.

ಜಲ ಜೀವನ್ ಮಿಷನ್ ಕುರಿತು ಮಾತನಾಡಿದ ಅವರು, 2019 ರಲ್ಲಿ ಮಿಷನ್ ಘೋಷಣೆಯ ಸಮಯದಲ್ಲಿ, ದೇಶದ 3.23 ಗ್ರಾಮೀಣ ಕುಟುಂಬಗಳು ಮಾತ್ರ ನಲ್ಲಿ ನೀರಿನ ಸಂಪರ್ಕವನ್ನು ಹೊಂದಿದ್ದವು,  ಕಳೆದ 3 ವರ್ಷಗಳಲ್ಲಿ 10.27 ಕೋಟಿಗೆ ಏರಿಕೆಯಾಗಿದೆ. ಮನೆಗಳಿಗೆ ನೀರು ಪೂರೈಕೆಯ ಸೌಲಭ್ಯದಿಂದಾಗಿ ನೀರಿನಿಂದ ಹರಡುವ ರೋಗಗಳು ಗಣನೀಯವಾಗಿ ಕಡಿಮೆಯಾಗಿವೆ. ನೀರು ನಿರ್ವಹಣೆ ಮತ್ತು ನೈರ್ಮಲ್ಯ ಕ್ಷೇತ್ರಗಳಲ್ಲಿ ನಾವು ಜಗತ್ತಿಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.

ಸ್ವಚ್ಛ ಸರ್ವೇಕ್ಷಣೆ ಗ್ರಾಮೀಣ 2022 ಮತ್ತು ಜಲ ಜೀವನ್ ಮಿಷನ್ ಕಾರ್ಯನಿರ್ವಹಣೆಯ ಮೌಲ್ಯಮಾಪನಕ್ಕಾಗಿ ಉಳಿದ ಪ್ರಶಸ್ತಿಗಳನ್ನು ಕೇಂದ್ರ ಜಲ ಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಜೊತೆಗೆ ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ಬಿಶ್ವೇಶ್ವರ ತುಡು ಮತ್ತು ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಪ್ರದಾನ ಮಾಡಿದರು. ಸಚಿವರ ಸಮಿತಿಯು ಇತರ ವಿಭಾಗಗಳ ವಿಜೇತರಿಗೆ ಪ್ರಶಸ್ತಿಗಳನ್ನು ನೀಡಿತು. ಎಲ್ಲಾ ವಿವಿಧ ವಿಭಾಗಗಳಲ್ಲಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿ ಲಭ್ಯವಿದೆ. http://( ಪ್ರಶಸ್ತಿ ಪುರಸ್ಕೃತರ ಪಟ್ಟಿಯ ಲಿಂಕ್ ).

ಕೇಂದ್ರ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ತಮ್ಮ ಭಾಷಣದಲ್ಲಿ ಸ್ವಚ್ಛ ಭಾರತ್ ಮಿಷನ್ ಕೇವಲ ಸರ್ಕಾರಿ ಕಾರ್ಯಕ್ರಮವಾಗಿರದೆ ಇನ್ನೂ ಹೆಚ್ಚಿನದಾಗಿದೆ ಮತ್ತು ‘ಜನರ ಆಂದೋಲನ’ವಾಗಿ ರೂಪಾಂತರಗೊಂಡಿದೆ, ಇದು ಗ್ರಾಮೀಣ ಭಾರತದ ಚಿತ್ರವನ್ನು ಸಂಪೂರ್ಣವಾಗಿ ಪರಿವರ್ತಿಸಿದೆ. ಸ್ವಚ್ಛತೆಯೇ ಸೇವೆ - ಸ್ವಚ್ಛತಾ ಹಿ ಸೇವಾ (ಎಸ್.ಎಚ್.ಎಸ್)2022 ಹದಿನೈದು ದಿನಗಳ ಅಭಿಯಾನದಲ್ಲಿ ಜನರು ಭಾಗವಹಿಸಿದ್ದಕ್ಕಾಗಿ ಮತ್ತು 'ಶ್ರಮದಾನ'ಕ್ಕಾಗಿ ಶ್ರೀ ಶೇಖಾವತ್ ಧನ್ಯವಾದ ಹೇಳಿದರು; ಮತ್ತು ಎಸ್‌.ಎಚ್‌.ಎಸ್-2022ರಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಗಳನ್ನು ಅಭಿನಂದಿಸಿದರು. ಜಲ ಜೀವನ ಮಿಷನ್ (ಜೆ.ಜೆ.ಎಂ) ಬಗ್ಗೆ ಮಾತನಾಡಿದ ಅವರು, ನಮ್ಮ ಗುರಿ ನಲ್ಲಿ ನೀರನ್ನು ಒದಗಿಸುವುದು ಮಾತ್ರವಲ್ಲ, ಸೂಕ್ತವಾದ ಗುಣಮಟ್ಟ ಮತ್ತು ಪ್ರಮಾಣವನ್ನು ಖಚಿತಪಡಿಸಿಕೊಳ್ಳುವುದು ಎಂದು ಹೇಳಿದರು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಗಳನ್ನು ಶ್ಲಾಘಿಸಿದ ಅವರು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಮೊದಲನೇ ಸ್ವಜಲ ಮತ್ತು ಸ್ವಚ್ಚ ಪ್ರದೇಶವಾಗಿರುವುದಕ್ಕಾಗಿ   ಅಭಿನಂದಿಸಿದರು, ಅಂದರೆ ಕೇಂದ್ರಾಡಳಿತ ಪ್ರದೇಶಗಳ  ಎಲ್ಲಾ ಗ್ರಾಮಗಳು ಈಗ ‘ಹರ್ ಘರ್ ಜಲ್’ ಪ್ರಮಾಣೀಕರಿಸಲ್ಪಟ್ಟಿವೆ ಮತ್ತು ಒಡಿಎಫ್  ಜೊತೆಗೆ ಪರಿಶೀಲಿಸಲ್ಪಟ್ಟಿವೆ. ಯಾವುದೇ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಪ್ರಧಾನ ಮಂತ್ರಿಯವರ “4ಪಿ ಗಳ ಮಂತ್ರ”ವನ್ನು ಅವರು ಪುನರುಚ್ಚರಿಸಿದರು ಅಂದರೆ ರಾಜಕೀಯ ಇಚ್ಛೆ, ಸಾರ್ವಜನಿಕ ನಿಧಿ, ಜನರ ಭಾಗವಹಿಸುವಿಕೆ ಮತ್ತು ಪಾಲುದಾರಿಕೆ.

ಈ ಸಂದರ್ಭದಲ್ಲಿ ಉಪಸ್ಥಿತರಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಕನಸನ್ನು ನನಸು ಮಾಡಲು ನಮ್ಮ ದೂರದೃಷ್ಟಿಯ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿಯವರು ಸ್ವಚ್ಛ ಭಾರತ್ ಮಿಷನ್, ಉಜ್ವಲ ಯೋಜನೆ ಮತ್ತು ಜಲ ಜೀವನ್ ಮಿಷನ್‌ನಂತಹ ವಿವಿಧ ಯೋಜನೆಗಳನ್ನು ಪ್ರಾರಂಭಿಸಿದ್ದಾರೆ, ಇದು ಗ್ರಾಮೀಣ ಭಾರತದ ಜನರಿಗೆ ಪ್ರಯೋಜನವನ್ನು ನೀಡಿದೆ ಮತ್ತು ಜನಾಂದೋಲನವಾಗಿದೆ ಎಂದು ಹೇಳಿದರು. 

                                                                                                             
 
ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್, ಜಲ ಶಕ್ತಿ ಮತ್ತು ಆಹಾರ ಸಂಸ್ಕರಣಾ ಉದ್ಯಮಗಳ ರಾಜ್ಯ ಸಚಿವರು, ತಮ್ಮ ಭಾಷಣದಲ್ಲಿ ಸ್ವಚ್ಛತೆಯನ್ನು ಒಂದು ಸಂಕಲ್ಪ ಮತ್ತು ಜೀವನದ ಗುರಿಯನ್ನಾಗಿ ಮಾಡಿಕೊಳ್ಳಲು ಜನರನ್ನು ಉತ್ತೇಜಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಬೂದು ನೀರು ನಿರ್ವಹಣೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.

ಜಲ ಶಕ್ತಿ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವರಾದ ಶ್ರೀ ಬಿಶ್ವೇಶ್ವರ ತುಡು ಅವರು ತಮ್ಮ ಭಾಷಣದಲ್ಲಿ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ನಡೆಯುತ್ತಿರುವ ಉತ್ತಮ ಕೆಲಸಗಳನ್ನು ಶ್ಲಾಘಿಸಿದರು. ಯೋಜನೆಗಳನ್ನು ಯಶಸ್ವಿಗೊಳಿಸಲು ಸಮುದಾಯದ ಭಾಗವಹಿಸುವಿಕೆ ಮತ್ತು ವಿವಿಧ ಪಾಲುದಾರರ ನಡುವೆ ಉತ್ತಮ ಸಮನ್ವಯವನ್ನು ಅವರು ಒತ್ತಿ ಹೇಳಿದರು.

ಸಮಾರಂಭದಲ್ಲಿ ಈ ಕೆಳಗಿನ ವಿಭಾಗಗಳ ಪ್ರಶಸ್ತಿಗಳನ್ನು ನೀಡಲಾಯಿತು.

1.    ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2022: ಇದು ಎಸ್.ಬಿ.ಎಂ-ಜಿ ಹಂತ II ರ ಪ್ರಮುಖ ಪರಿಮಾಣಾತ್ಮಕ ಮತ್ತು ಗುಣಾತ್ಮಕ ನಿಯತಾಂಕಗಳ ಮೇಲೆ ಸಾಧಿಸಿದ ಕಾರ್ಯಕ್ಷಮತೆಯ ಆಧಾರದ ಮೇಲೆ ರಾಜ್ಯಗಳು ಮತ್ತು ಜಿಲ್ಲೆಗಳ ಶ್ರೇಯಾಂಕವನ್ನು ಕೈಗೊಳ್ಳುವ ಗುರಿಯನ್ನು ಹೊಂದಿದೆ. ಸಮೀಕ್ಷೆಯು ಭಾರತದಾದ್ಯಂತ 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ (ಚಂಡೀಗಢ, ದೆಹಲಿ ಮತ್ತು ಲಕ್ಷದ್ವೀಪಗಳ 3 ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ) 709 ಜಿಲ್ಲೆಗಳಲ್ಲಿ 17,559 ಹಳ್ಳಿಗಳನ್ನು ಒಳಗೊಂಡಿದೆ. ಎಸ್.ಬಿ.ಎಂ-ಜಿ   ಸಂಬಂಧಿತ ಸಮಸ್ಯೆಗಳ ಕುರಿತ  ಮಾಹಿತಿಗಾಗಿ  1.75 ಲಕ್ಷಕ್ಕೂ ಹೆಚ್ಚು ಕುಟುಂಬಗಳನ್ನು ಸಂದರ್ಶಿಸಲಾಗಿದೆ.

2.    ಸ್ವಚ್ಛತಾ ಹಿ ಸೇವಾ (ಎಸ್HS) 2022: ಗರಿಷ್ಠ ಸಂಖ್ಯೆಯ ಚಟುವಟಿಕೆಗಳನ್ನು ನಡೆಸಿ ವರದಿ ಮಾಡಿದ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಅಂದರೆ ಜನರು ಶ್ರಮದಾನ ಮತ್ತು ಶುಚಿಗೊಳಿಸುವ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು, ಸಾರ್ವಜನಿಕ ಸ್ಥಳಗಳು ಮತ್ತು ಸಾಂಸ್ಥಿಕ ಕಟ್ಟಡಗಳನ್ನು ಸ್ವಚ್ಛಗೊಳಿಸಿರುವುದು, ಪಾರಂಪರಿಕ ತ್ಯಾಜ್ಯ ಸ್ಥಳಗಳನ್ನು ಸ್ವಚ್ಛಗೊಳಿಸಿರುವುದು, ಜಲಮೂಲಗಳ ಸುತ್ತಲೂ ಮರಗಳನ್ನು ನೆಡಲಾಗಿರುವುದು, 'ಏಕ ಬಳಕೆಯ ಪ್ಲಾಸ್ಟಿಕ್' ನಿಷೇಧಕ್ಕಾಗಿ, ಗ್ರಾಮ ಪಂಚಾಯತಿಗಳು  ನಿರ್ಣಯವನ್ನು ಅಂಗೀಕರಿಸಿರುವುದು, ಒಡಿಎಫ್  ಪ್ಲಸ್ ಅಂಶಗಳ ಕುರಿತು ಸರಪಂಚರು ಸಂವಾದದಲ್ಲಿ ಭಾಗವಹಿಸಿರುವುದು, ಜನರು ಜಾಗೃತಿ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು, ತ್ಯಾಜ್ಯ ಸಂಗ್ರಹಣೆ ಮತ್ತು ಪ್ರತ್ಯೇಕ ಶೆಡ್‌ಗಳನ್ನು ನಿರ್ಮಿಸಿರುವುದು ಮತ್ತು ಇತರ ಎಸ್.ಎಚ್.ಎಸ್  ಚಟುವಟಿಕೆಗಳಲ್ಲಿ ಜನರು ಭಾಗವಹಿಸಿರುವುದು; ಇವುಗಳ ಪರಿಗಣಿನೆಯಿಂದ ವಿಜೇತರಾಗಿ ಆಯ್ಕೆಯಾದರು.

3.    ಜಲ ಜೀವನ ಮಿಷನ್ - ಕಾರ್ಯನಿರ್ವಹಣೆಯ ಮೌಲ್ಯಮಾಪನ: ಜೆ.ಜೆ.ಎಂ. ಅಡಿಯಲ್ಲಿ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿವಿಧ ಸ್ಥಳೀಯ ನೀರಿನ ಉಪಯುಕ್ತತೆಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು, ಮನೆಗಳಿಗೆ ನೀರಿನ ಸೇವೆಯ ವಿತರಣೆಯ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರತಿ ವರ್ಷ ಕಾರ್ಯನಿರ್ವಹಣೆಯ ಮೌಲ್ಯಮಾಪನ ಕಾರ್ಯವನ್ನು ಕೈಗೊಳ್ಳಲಾಗುತ್ತದೆ. ನಲ್ಲಿ ನೀರಿನ (ಟ್ಯಾಪ್ ವಾಟರ್) ಸಂಪರ್ಕವು ಈ ಕೆಳಗಿನ ನಿಯತಾಂಕಗಳನ್ನು ಪೂರೈಸಿದರೆ ಅದನ್ನು ಕ್ರಿಯಾತ್ಮಕ ಎಂದು ಉಲ್ಲೇಖಿಸಲಾಗುತ್ತದೆ: (i) ಸಾಕಷ್ಟು ನೀರಿನ @55 ಎಲ್.ಪಿ.ಸಿ.ಡಿ  ಅಥವಾ ಹೆಚ್ಚಿನ ಪೂರೈಕೆ; (ii) ನೀರಿನ ಕುಡಿಯುವ ನೀರಿನ ಪೂರೈಕೆ/ ನಿಗದಿತ ಗುಣಮಟ್ಟ (BIS:10500); (iii) ನಿಯಮಿತವಾಗಿ ನೀರು ಸರಬರಾಜು, ಅಂದರೆ ದೈನಂದಿನ ಅಥವಾ ವೇಳಾಪಟ್ಟಿಯಂತೆ. 13,299 ಮಾದರಿ ಗ್ರಾಮಗಳಲ್ಲಿ 3.01 ಲಕ್ಷ ಕುಟುಂಬಗಳು ಮತ್ತು 22,596 ಗ್ರಾಮ ಮಟ್ಟದ ಸಂಸ್ಥೆಗಳೊಂದಿಗೆ 712 ಜಿಲ್ಲೆಗಳಲ್ಲಿ ಎಲ್ಲಾ 33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕಾರ್ಯನಿರ್ವಹಣೆಯ ಮೌಲ್ಯಮಾಪನ ಕಾರ್ಯವನ್ನು ಕೈಗೊಳ್ಳಲಾಗಿದೆ.

4.    ಸ್ಟಾರ್ಟ್-ಅಪ್ ಗ್ರ್ಯಾಂಡ್ ಚಾಲೆಂಜ್ ಅನ್ನು ಗ್ರಾಮೀಣ ಪ್ರದೇಶಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಸವಾಲುಗಳಿಗೆ ಸಮರ್ಥನೀಯ, ಕೈಗೆಟುಕುವ, ಉನ್ನತ ಮಟ್ಟಕ್ಕೇರಿಸುವ ಮತ್ತು ಸ್ಪಂದಿಸುವ ಪರಿಹಾರಗಳನ್ನು ಬೆಂಬಲಿಸುವ ತಂತ್ರಜ್ಞಾನಗಳನ್ನು ಹುಡುಕಲು  ನಡೆಸಲಾಯಿತು. ಕ್ರೌಡ್ ಸೋರ್ಸಿಂಗ್ ಸವಾಲನ್ನು 10ನೇ ಸೆಪ್ಟೆಂಬರ್ 2021 ರಂದು ಪ್ರಾರಂಭಿಸಲಾಯಿತು ಮತ್ತು ಬಿಡುಗಡೆಯಾದ 1 ತಿಂಗಳ ನಂತರ ಡಿಡಿಡಬ್ಲ್ಯೂ ಎಸ್ ಜಾಲತಾಣದಲ್ಲಿ ಲೈವ್ ಆಗಿ ಹೋಸ್ಟ್ ಮಾಡಲಾಗಿದೆ. ಒಟ್ಟು 372 ಅರ್ಜಿದಾರರು ನೋಂದಣಿ ಮಾಡಿದ್ದು, ಅದರಲ್ಲಿ 62 ಅರ್ಜಿಗಳನ್ನು ಆಧರಿಸಿ ಆಯ್ಕೆ ಮಾಡಲಾಗಿದೆ. ವಿಜೇತರಿಗೆ  ರೂ. 2 ಲಕ್ಷ ಮತ್ತು ರೂ. 1 ಲಕ್ಷ ನಗದು ಬಹುಮಾನಗಳನ್ನು ನೀಡಲಾಯಿತು.

5.    ಹರ್ ಘರ್ ಜಲ್ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳು: ದೇಶದ ಮೊದಲ ‘ಹರ್ ಘರ್ ಜಲ್’ ಪ್ರಮಾಣೀಕೃತ ಜಿಲ್ಲೆ ಎಂಬುದಾಗಿ ಮಧ್ಯಪ್ರದೇಶದ ಬುರ್ಹಾನ್‌ಪುರಕ್ಕೆ ವಿಶೇಷ ಪ್ರಶಸ್ತಿ ನೀಡಲಾಗಿದೆ. 100% ಗ್ರಾಮಗಳನ್ನು ಪ್ರಮಾಣೀಕರಿಸಿದ 31 ಜಿಲ್ಲೆಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು, ಅಂದರೆ, ಎಲ್ಲಾ ಹಳ್ಳಿಗಳ ಜನರು ತಮ್ಮ ಗ್ರಾಮವನ್ನು 'ಹರ್ ಘರ್ ಜಲ್' ಎಂದು ಗ್ರಾಮ ಸಭೆಯು ಅಂಗೀಕರಿಸಿದ ನಿರ್ಣಯದ ಮೂಲಕ ಘೋಷಿಸಿದ್ದಾರೆ, ಹಳ್ಳಿಗಳಲ್ಲಿನ ಎಲ್ಲಾ ಮನೆಗಳಿಗೆ ನಲ್ಲಿಗಳ ಮೂಲಕ ಸುರಕ್ಷಿತ ಕುಡಿಯುವ ನೀರು ದೊರಕಿದ್ದು, 'ಯಾರನ್ನೂ ಬಿಟ್ಟಿಲ್ಲ' ಎಂದು  ಖಚಿತಪಡಿಸಿ ಪ್ರಮಾಣೀಕರಿಸಿದ್ದಾರೆ. 

6.    ಸುಜ್ಲಾಮ್ 1.0 & 2.0: ಸುಜ್ಲಾಮ್ ಎಂಬುದು 100 ದಿನಗಳ ಅಭಿಯಾನವಾಗಿದ್ದು, ಸೋಕ್ ಪಿಟ್‌ಗಳು, ಲೀಚ್ ಪಿಟ್, ಮ್ಯಾಜಿಕ್ ಪಿಟ್ ಮೂಲಕ ತ್ಯಾಜ್ಯ ನೀರು ಕಡಿಮೆ ನಿಲ್ಲುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಗ್ರಾಮದ ಕೊಳದಲ್ಲಿ ಅದರ ವಿಸರ್ಜನೆಯನ್ನು ಪರಿಶೀಲಿಸಲು ಬೂದು-ನೀರನ್ನು ನಿರ್ವಹಿಸಲು ಪ್ರಾರಂಭಿಸಲಾಯಿತು. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಪೋರ್ಟಲ್‌ನಲ್ಲಿ ಅಭಿಯಾನದ ಸಮಯದಲ್ಲಿ ನಿರ್ಮಿಸಲಾದ ಮನೆ ಮತ್ತು ಸಮುದಾಯ ಸೋಕ್ ಪಿಟ್‌ಗಳ ಸಂಖ್ಯೆಯನ್ನು ವರದಿ ಮಾಡಬೇಕಾಗಿತ್ತು. ಒಟ್ಟು 23,04,029 ಹೊಂಡಗಳನ್ನು ನಿರ್ಮಿಸಲಾಗಿದೆ ಮತ್ತು ಉತ್ತಮ ಸಾಧನೆ ಮಾಡಿದ ರಾಜ್ಯಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು.

7.    ರಾಷ್ಟ್ರೀಯ ಚಲನಚಿತ್ರ ಸ್ಪರ್ಧೆ: ಗ್ರಾಮ ಪಂಚಾಯತಿ ಮಟ್ಟದಲ್ಲಿ ಚಲನಚಿತ್ರಗಳನ್ನು ನಿರ್ಮಿಸಲು ರಾಷ್ಟ್ರೀಯ ಮಟ್ಟದ ಸ್ಪರ್ಧೆಯನ್ನು 15ನೇ ಡಿಸೆಂಬರ್ 2021 ರಿಂದ 15ನೇ ಮೇ, 2022 ರವರೆಗೆ ಒಡಿಎಫ್  ಪ್ಲಸ್‌ನ ವಿವಿಧ ಘಟಕಗಳ ಮೇಲೆ ನಡೆಸಲಾಯಿತು. ರಾಜ್ಯಗಳಿಂದ 33 ಚಲನಚಿತ್ರಗಳನ್ನು ಶಿಫಾರಸು ಮಾಡಲಾಗಿದೆ. ಗುಡ್ಡಗಾಡು ಪ್ರದೇಶಗಳು, ದ್ವೀಪಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳು ಎಂದು 3 ವಿಭಿನ್ನ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು  

8.    ರಾಷ್ಟ್ರೀಯ ವಾಲ್ ಪೇಂಟಿಂಗ್ ಸ್ಪರ್ಧೆ (ಗೋಡೆಯ ಮೇಲೆ ಚಿತ್ರಕಲೆ): 15 ಆಗಸ್ಟ್ 2021 ರಿಂದ 15 ಅಕ್ಟೋಬರ್ 2021 ರವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಒಡಿಎಫ್ ಪ್ಲಸ್ ಥೀಮ್‌ಗಳಲ್ಲಿ ಗೋಡೆಯ ಮೇಲೆ ಚಿತ್ರಕಲೆ ಸ್ಪರ್ಧೆಯನ್ನು ನಡೆಸಲಾಯಿತು. ಪ್ರತಿ 5 ವಿಷಯಗಳಿಗೆ 3 ಅತ್ಯುತ್ತಮ ಪ್ರದರ್ಶನ ರಾಜ್ಯಗಳಿಗೆ ಪ್ರಶಸ್ತಿ ನೀಡಲಾಯಿತು (ಜೈವಿಕ-ವಿಘಟನೀಯ ತ್ಯಾಜ್ಯ ನಿರ್ವಹಣೆ (ಬಿಡಬ್ಲ್ಯೂಎಂ), ಗೋಬರ್ಧನ್, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ಪಿಡಬ್ಲ್ಯೂಎಂ) ಗ್ರೇ ವಾಟರ್ ಮ್ಯಾನೇಜ್‌ಮೆಂಟ್ (ಜಿಡಬ್ಲ್ಯೂಎಂ) ಮತ್ತು ಫೀಕಲ್ ಸ್ಲಡ್ಜ್ ಮ್ಯಾನೇಜ್‌ಮೆಂಟ್ (ಎಫ್ ಎಸ್ ಎಂ) ಪ್ರತಿ 6 ವಲಯಗಳಿಂದ (ಉತ್ತರ ವಲಯ, ಈಶಾನ್ಯ ವಲಯ, ಮಧ್ಯ ವಲಯ, ಪೂರ್ವ ವಲಯ, ಪಶ್ಚಿಮ ವಲಯ ಮತ್ತು ದಕ್ಷಿಣ ವಲಯ).

ಈ ಸಂದರ್ಭದಲ್ಲಿ ಕೇಂದ್ರ ಜಲ ಶಕ್ತಿ ಸಚಿವರ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ (ಎಸ್.ಎಸ್.ಜಿ) 2022 ವರದಿ ಮತ್ತು ಜೆ.ಜೆ.ಎಂ ಕಾರ್ಯನಿರ್ವಹಣೆ ಮೌಲ್ಯಮಾಪನ 2022 ವರದಿಯನ್ನು ಬಿಡುಗಡೆ ಮಾಡಿದರು ಮತ್ತು ಈ ವರದಿಗಳ ಮೊದಲ ಪ್ರತಿಗಳನ್ನು  ರಾಷ್ಟ್ರಪತಿಗಳಿಗೆ ಹಸ್ತಾಂತರಿಸಿದರು. 

                                                                                                    

ಈ ಸಮಾರಂಭದಲ್ಲಿ ಕೇಂದ್ರ ಜಲ ಶಕ್ತಿ ಸಚಿವರು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ (ಎಸ್‍.ಎಸ್.ಜಿ) 2023 ಮತ್ತು ಜಲ ಜೀವನ ಸಮೀಕ್ಷೆ (ಜೆ.ಜೆ.ಎಸ್,) 2023 ಅನ್ನು ಸಹ ಘೋಷಿಸಿದರು. ಇದಲ್ಲದೆ, ಇಲಾಖೆಯು ಈ ಸಂದರ್ಭದಲ್ಲಿ ಈ ಕೆಳಗಿನ ಅಭಿಯಾನಗಳನ್ನು ಪ್ರಾರಂಭಿಸಿತು:
•    "ರಿಟ್ರೋಫಿಟ್ ಟು ಟ್ವಿನ್ ಪಿಟ್ ಅಭಿಯಾನ" (ಒಂದು ಪಿಟ್ ನಿಂದ ಅವಳಿ ಪಿಟ್ ಅಭಿಯಾನ ) ಮಲದ ಕೆಸರಿನ ಸುಧಾರಿತ ನಿರ್ವಹಣೆಯ ಕಡೆಗೆ ಮನೆಗಳಲ್ಲಿ ಅವಳಿ ಗುಂಡಿಗಳ ಶೌಚಾಲಯಗಳನ್ನು ಉತ್ತೇಜಿಸಲು.
•    ‘ಸ್ವಚ್ಛ ಜಲ ಸೇ ಸುರಕ್ಷಾ’ ( ‘ಸ್ವಚ್ಛ ಜಲದಿಂದ ಸುರಕ್ಷತೆ’ ): ನೀರಿನ ಗುಣಮಟ್ಟದ ಅಭಿಯಾನವು ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ ಮತ್ತು ಗ್ರಾಮೀಣ ಮನೆಗಳಲ್ಲಿ ಸರಬರಾಜು ಮಾಡಿದ ನೀರಿನ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ.
ಸಮಾರಂಭದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಗಣ್ಯರು ಅಂದರೆ ಸಚಿವರು, ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು, ಅಭಿವೃದ್ಧಿ ಪಾಲುದಾರರು, ಇತ್ಯಾದಿ ಭಾಗವಹಿಸಿದ್ದರು.


(Release ID: 1865023) Visitor Counter : 315