ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav g20-india-2023

ಅಮೆರಿಕಾದ ಪಿಟ್ಸಬರ್ಗ್ ನಲ್ಲಿ ನಡೆದ ಜಾಗತಿಕ ಶುದ್ಧ ಇಂಧನ ಕ್ರಿಯಾ ವೇದಿಕೆ-2022 ನಲ್ಲಿ ಬ್ರೆಜಿಲ್, ಕೆನಡಾ ಮತ್ತು ಇಸಿ ಹಾಗೂ ಯುಕೆ ಜತೆಗಿನ ಸಕ್ರಿಯ ಮಾಹಿತಿ ಮತ್ತು ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಿರುವ “ಇಂಟಿಗ್ರೇಟೆಡ್ ಬಯೋರಿಫೈನರಿ ವಿಷನ್ ಕುರಿತ ಹೊಸತನ ಶೋಧದ ನೀಲನಕ್ಷೆ’’ ಯನ್ನು ಪ್ರಕಟಿಸಿದ ಭಾರತ  


ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್ ನೇತೃತ್ವದ ಉನ್ನತಮಟ್ಟದ ಜಂಟಿ ಭಾರತೀಯ ಸಚಿವರ ನಿಯೋಗ ಪಿಟ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ “ಸುಸ್ಥಿರ ಜೈವಿಕ ಇಂಧನ ಮತ್ತು ಜೈವಿಕ ಸಂಸ್ಕರಣಾಗಾರ’’ ಕುರಿತು ಮೊದಲ ಸುತ್ತಿನಲ್ಲಿ ಘೋಷಣೆ

ಸಾರ್ವಜನಿಕ ಖಾಸಗಿ ಹೂಡಿಕೆ ಮೂಲಕ ಮುಂದಿನ 5 ವರ್ಷಗಳಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ಸಹಭಾಗಿತ್ವ ಮತ್ತು ಇಂಧನ ಸಂಶೋಧನೆ, ಅಭಿವೃದ್ಧಿ ಮತ್ತು ಪ್ರಾತ್ಯಕ್ಷಿಕೆ (ಆರ್ ಡಿ ಮತ್ತು ಡಿ)ಗಳಿಗೆ ಹೆಚ್ಚಿನ ಅನುದಾನ ಹೆಚ್ಚಿರುವ ಗುರಿಯನ್ನು ಮಿಷನ್ ಹೊಂದಿದೆ ; ಡಾ.ಜಿತೇಂದ್ರ ಸಿಂಗ್

ಹರಿಯಾಣದ ಪಾಣಿಪತ್ ನಲ್ಲಿ ಎಥೆನಾಲ್ ಗಾಗಿ ಸಮಗ್ರ ಕಿಣ್ವ ಉತ್ಪಾದನೆಯೊಂದಿಗೆ ದಿನಕ್ಕೆ 10 ಟನ್ ಸಾಮರ್ಥ್ಯದ ಭಾರತದ ಮೊದಲನೇ ಸ್ಥಳೀಯ ಘಟಕ ಡಿಸೆಂಬರ್ 2022ರ ವೇಳೆಗೆ ಸ್ಥಾಪನೆ ; ಡಾ.ಜಿತೇಂದ್ರ ಸಿಂಗ್

ಹರಿಯಾಣದ ಪಾಣಿಪತ್ ನಲ್ಲಿ ಎಥೆನಾಲ್ ಗಾಗಿ ಸಮಗ್ರ ಕಿಣ್ವ ಉತ್ಪಾದನೆಯೊಂದಿಗೆ ದಿನಕ್ಕೆ 10 ಟನ್ ಸಾಮರ್ಥ್ಯದ ಭಾರತದ ಮೊದಲನೇ ಸ್ಥಳೀಯ ಘಟಕ ಡಿಸೆಂಬರ್ 2022ರ ವೇಳೆಗೆ ಸ್ಥಾಪನೆ ; ಡಾ.ಜಿತೇಂದ್ರ ಸಿಂಗ್

Posted On: 23 SEP 2022 11:04AM by PIB Bengaluru

ಯುನೈಟೆಡ್ ಸ್ಟೇಟ್ಸ್‌ನ ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಜಾಗತಿಕ ಶುದ್ಧ ಇಂಧನ ಕ್ರಿಯಾ ವೇದಿಕೆಯಲ್ಲಿ ಉನ್ನತ ಮಟ್ಟದ ಜಂಟಿ ಭಾರತೀಯ ಸಚಿವರ ನಿಯೋಗ ಮುನ್ನಡೆಸುತ್ತಿರುವ ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು, ಬ್ರೆಜಿಲ್, ಕೆನಡಾ, ಇಸಿ ಮತ್ತು ಯುಕೆಯ  ಸಹಭಾಗಿತ್ವ ಮತ್ತು ಸಕ್ರಿಯ ಮಾಹಿತಿಯೊಂದಿಗೆ ಅಭಿವೃದ್ಧಿಪಡಿಸಿದ “ಮಿಷನ್ ಇಂಟಿಗ್ರೇಟೆಡ್ ಬಯೋಫೈನರೀಸ್‌ನ ಇನ್ನೋವೇಶನ್ ರೋಡ್‌ಮ್ಯಾಪ್”ಅನ್ನು ಆರಂಭಿಸುವುದಾಗಿ ಘೋಷಿಸಿದರು. 

https://static.pib.gov.in/WriteReadData/userfiles/image/image00172EI.jpg

ಇಂಧನ ಸಂಶೋಧನೆ, ಅಭಿವೃದ್ಧಿ ಮತ್ತು ಪ್ರಾತ್ಯಕ್ಷಿಕೆ (ಸಂಶೋಧನಾ ಅಭಿವೃದ್ಧಿ &ಪ್ರಾತ್ಯಕ್ಷಿಕೆ) ಗಾಗಿ ಮುಂದಿನ ಐದು ವರ್ಷಗಳಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ಸಹಯೋಗ ಸಾಧಿಸಲು ಮತ್ತು ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯ ಅವಕಾಶಗಳನ್ನು ಅನಾವರಣಗೊಳಿಸಲು ಮತ್ತು ಹೆಚ್ಚಿನ ಹಣಕಾಸು ಅಗತ್ಯವನ್ನು ಹೆಚ್ಚಿಸುವ ಉದ್ದೇಶವನ್ನು ಈ ಮಿಷನ್  ಹೊಂದಿದೆ ಎಂದು ಸಚಿವರು ಹೇಳಿದರು.

ಡಾ. ಜಿತೇಂದ್ರ ಸಿಂಗ್  ಅವರು 7ನೇ ಮಿಷನ್ ಇನ್ನೋವೇಷನ್ ಮತ್ತು 13ನೇ ಶುದ್ಧ ಇಂಧನ ಸಚಿವರ-2022 ರ ಜಂಟಿ ಸಮಾವೇಶವಾದ ಜಾಗತಿಕ ಶುದ್ಧ ಇಂಧನ ಕ್ರಿಯಾ ವೇದಿಕೆಯಲ್ಲಿ “ “ಸುಸ್ಥಿರ ಜೈವಿಕ ಇಂಧನ ಮತ್ತು ಜೈವಿಕ ಸಂಸ್ಕರಣಾಗಾರ” ಕುರಿತು 1ನೇ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದರು.

 “ಮಿಷನ್ ಇಂಟಿಗ್ರೇಟೆಡ್ ಬಯೋಫೈನರೀಸ್‌ನ ನಾವೀನ್ಯತೆ ನೀಲನಕ್ಷೆ” ಸದ್ಯದ ಜೈವಿಕ ಸಂಸ್ಕರಣಾ ಮೌಲ್ಯ ಸರಪಳಿಗಳಲ್ಲಿನ ಅಂತರ ಮತ್ತು ಸವಾಲುಗಳನ್ನು ಗುರುತಿಸುವ ಮೂಲಕ ಕೊರತೆ ತುಂಬುವ ಗುರಿಯನ್ನು ಹೊಂದಿದೆ ಮತ್ತು ಮಿಷನ್ ಅನ್ನು ಬೆಂಬಲಿಸಲು ಎಂಟು ಪ್ರಮುಖ ಕ್ರಮಗಳಿಗೆ ಆದ್ಯತೆ ನೀಡುತ್ತದೆ ಮತ್ತು ಅದರ ಗುರಿಯನ್ನು ಸಾಧಿಸುವಲ್ಲಿ ಮಿಷನ್‌ನ ಒಟ್ಟಾರೆ ಮಾರ್ಗದರ್ಶನ ಮಾಡುತ್ತದೆ.

ಮುಂದಿನ ಐದು ವರ್ಷಗಳಲ್ಲಿ ಆರ್‌ಡಿ ಮತ್ತು ಡಿ ವಿಭಾಗವನ್ನು ಅಭಿವೃದ್ಧಿಪಡಿಸಲು ನೀತಿ ನಿರೂಪಕರಿಗೆ ಇದು ಕಾರ್ಯತಂತ್ರದ ಚೌಕಟ್ಟನ್ನು ಒದಗಿಸುತ್ತದೆ, ಪ್ರಮುಖ ಬಯೋರಿಫೈನರಿ ತಂತ್ರಜ್ಞಾನದ ಎಲ್ಲ ಆಯಾಮಗಳಲ್ಲಿ ನಿರ್ದಿಷ್ಟ ಹಣಕಾಸು ಪ್ರಸ್ತಾಪಗಳು ಮತ್ತು ತ್ವರಿತ ಕ್ರಿಯೆಯ ಸಲಹೆ ನೀಡುತ್ತದೆ.

ಸಚಿವರು ಮತ್ತು ಸಿಇಒ ಗಳು, ಹಿರಿಯ ಪ್ರತಿನಿಧಿಗಳು (ಅಮೆರಿಕಾದ ಡಿಒಇನ  ಮಿಷನ್ ಇನ್ನೋವೇಷನ್ ಸ್ಟೀರಿಂಗ್ ಕಮಿಟಿ (ಎಂಐಎಸ್ ಸಿ) ) ಮತ್ತು ಮಿಷನ್ ಇನ್ನೋವೇಶನ್ ಸಚಿವಾಲಯದ ಹಿರಿಯ ಪ್ರತಿನಿಧಿಗಳು, ಎಂಐ ಸದಸ್ಯ ರಾಷ್ಟ್ರಗಳು ಮತ್ತು ಪಾಲುದಾರ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ.ಜಿತೇಂದ್ರ ಸಿಂಗ್, ಶುದ್ಧ ಇಂಧನ ಸಭೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹವಾಮಾನ ಮತ್ತು ಶುದ್ಧ ಇಂಧನ ದೂರದೃಷ್ಟಿಯನ್ನು ಪ್ರಪಂಚದ ಮುಂದೆ ಪ್ರಸ್ತುತಪಡಿಸಲು ಭಾರತಕ್ಕೆಅವಕಾಶ ನೀಡುತ್ತದೆ ಎಂದರು.ಜಾಗತಿಕ ಇಂಧನ ಸಮುದಾಯವು ಯಶಸ್ವಿ ಜಾಗತಿಕ ಹಸಿರು ಪರಿವರ್ತನೆ ನಿಟ್ಟಿನಲ್ಲಿ ವಿಚಾರ ವಿನಿಮಯಕ್ಕೆ ಮತ್ತು ಸಹಕಾರಕ್ಕಾಗಿ ಒಗ್ಗೂಡಿರುವ ಈ ಸಭೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಸಚಿವರು ಹೇಳಿದರು.

https://static.pib.gov.in/WriteReadData/userfiles/image/image002KTS4.jpg

ಭಾರತವು ಗಮನಾರ್ಹವಾದ ಶುದ್ಧ ಇಂಧನ ಪಾಲು ಹೊಂದುವ ಮೂಲಕ ದೇಶದ ಇಂಧನದ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ ಮತ್ತು 2030 ರ ವೇಳೆಗೆ ಭಾರತವು 500 ಗಿಗಾವ್ಯಾಟ್ ಬರಿದಾಗದೆ ಇರುವಂತಹ ಇಂಧನ ಸಾಮರ್ಥ್ಯವನ್ನು ತಲುಪುವ ಗುರಿ ಹೊಂದಿದೆ, ಅದರಲ್ಲಿ ಶೇ.50ರಷ್ಟು ಇಂಧನದ  ಅಗತ್ಯತೆಗಳನ್ನು ನವೀಕರಿಸಬಹುದಾದ ಮೂಲಗಳಿಂದ ಬರುತ್ತದೆ, ಒಟ್ಟಾರೆ ನಿರೀಕ್ಷಿತ ಇಂಗಾಲ  ಹೊರಸೂಸುವಿಕೆ ಪ್ರಮಾಣವನ್ನು ಒಂದು ಶತಕೋಟಿ ಟನ್‌ಗಳಷ್ಟು ತಗ್ಗಿಸಿ, ಆರ್ಥಿಕತೆಯ ಇಂಗಾಲದ ತೀವ್ರತೆಯನ್ನು 2005ರ ಮಟ್ಟಕ್ಕಿಂತ ಶೇ.45ರಷ್ಟು ತಗ್ಗಿಸುತ್ತದೆ ಮತ್ತು 2070ರ ವೇಳೆಗೆ ಶೂನ್ಯ ಇಂಗಾಲದ  ಹೊರಸೂಸುವಿಕೆ ಗುರಿಯನ್ನು ಸಾಧಿಸುತ್ತದೆ ಎಂದು ಡಾ.ಜಿತೇಂದ್ರ ಸಿಂಗ್ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಹರಿಯಾಣದ ಪಾಣಿಪತ್ನಲ್ಲಿ ಪ್ರತಿ ದಿನ 10 ಟನ್ ಸಾಮರ್ಥ್ಯದ ಸಮಗ್ರ ಕಿಣ್ವ(ಎನ್ಜೈಮ್) ಉತ್ಪಾದನಾ ಸ್ಥಾವರವನ್ನು ಸ್ಥಾಪಿಸಲಾಗುತ್ತಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೆಮ್ಮೆಯಿಂದ ಹಂಚಿಕೊಂಡರು. ಇದು ಡಿಸೆಂಬರ್ 2022 ರ ವೇಳೆಗೆ ಕಾರ್ಯಾರಂಭ ಮಾಡಲಿದೆ. ಇದು ಸ್ಥಳದಲ್ಲಿಯೇ  ಕಿಣ್ವ ಉತ್ಪಾದನೆಯ ಮೊತ್ತಮೊದಲ ಸ್ಥಳೀಯ ತಂತ್ರಜ್ಞಾನವಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಈ ಸ್ಥಳೀಯ ಕಿಣ್ವವನ್ನು ಪ್ರತಿದಿನ 100 ಕೆಎಲ್ ನಂತೆ ವಾಣಿಜ್ಯ 2ಜಿ ಎಥೆನಾಲ್ ಸ್ಥಾವರಕ್ಕೆ 2024 ರ ಎರಡನೇ ತ್ರೈಮಾಸಿಕದ ವೇಳೆಗೆ ಪೂರೈಕೆ ಮಾಡಲು ಯೋಜಿಸಿದೆ ಎಂದು ಸಚಿವರು ಗಮನಸೆಳೆದರು. ಇದಲ್ಲದೆ, ತ್ಯಾಜ್ಯ ಲಿಗ್ನಿನ್‌ನಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಲು ಲಿಗ್ನಿನ್ ಮೌಲ್ಯೀಕರಣ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರ ಯಶಸ್ವಿ ಪ್ರಾತ್ಯಕ್ಷಿಕೆಯು ದೇಶಕ್ಕೆ ಸ್ಥಳೀಯ ತಂತ್ರಜ್ಞಾನವನ್ನು ನೀಡುತ್ತದೆ ಮತ್ತು ಸ್ವಾವಲಂಬಿ ಭಾರತಕ್ಕೆ ಕೊಡುಗೆ ನೀಡುತ್ತದೆ ಮತ್ತು ಸಾರಿಗೆ ವಲಯದಲ್ಲಿ ಇಂಗಾಲದ ಹೊರಸೂಸುವಿಕೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.

ಸಾರಿಗೆ ವಲಯದಲ್ಲಿ ಹಸಿರು ಮನೆ ಅನಿಲ (ಜಿಎಚ್ ಜಿ) ಇಂಗಾಲದ ಹೊರಸೂಸುವಿಕೆ ತಗ್ಗಿಸುವಲ್ಲಿ ಸುಸ್ಥಿರ ಜೈವಿಕ ಇಂಧನಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಡಾ.ಜಿತೇಂದ್ರ ಸಿಂಗ್ ಬಲವಾಗಿ ಪ್ರತಿಪಾದಿಸಿದರು.ಭಾರತವು ಜೈವಿಕ ತಂತ್ರಜ್ಞಾನ ವಿಭಾಗದ ಮೂಲಕ ಸುಧಾರಿತ ಜೈವಿಕ ಇಂಧನ ಮತ್ತು ತ್ಯಾಜ್ಯದಿಂದ ಇಂಧನ ತಂತ್ರಜ್ಞಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಆವಿಷ್ಕಾರಗಳನ್ನು ಬೆಂಬಲಿಸುತ್ತಿದೆ. ಭಾರತವು 5 ಬಯೋಎನರ್ಜಿ ಕೇಂದ್ರಗಳನ್ನು ಸ್ಥಾಪಿಸಿದೆ. ಅಲ್ಲಿ ಅಂತರ ಶಿಸ್ತೀಯ ತಂಡವು ಆಧುನಿಕ ಜೈವಿಕ ತಂತ್ರಜ್ಞಾನದ ಸಾಧನಗಳನ್ನು ಬಳಸಿಕೊಂಡು ಸುಧಾರಿತ ಸುಸ್ಥಿರ ಜೈವಿಕ ಇಂಧನಗಳ ಬಗ್ಗೆ  ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಪ್ರತಿನಿಧಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡರು.

ಇತ್ತೀಚೆಗೆ ಭಾರತವು ನವದೆಹಲಿಯಲ್ಲಿ ಎಂಐ ವಾರ್ಷಿಕ ಕೂಟದ ಆತಿಥ್ಯ ವಹಿಸಿದ್ದಾಗ  ಪ್ರಮುಖ ಸದಸ್ಯರು, ಅಂತಾರಾಷ್ಟ್ರೀಯ ಸಂಸ್ಥೆಗಳು, ಕಾರ್ಪೊರೇಟ್ ವಲಯ, ಶೈಕ್ಷಣಿಕ ಸಂಸ್ಥೆಗಳು ಮತ್ತು ನಾಗರಿಕ ಸಮಾಜವನ್ನು ಒಗ್ಗೂಡಿಸಿ ಕಡಿಮೆ ಇಂಗಾಲದ ಭವಿಷ್ಯಕ್ಕಾಗಿ ನವೀಕರಿಸಬಹುದಾದ ಇಂಧನಗಳು, ರಾಸಾಯನಿಕಗಳು ಮತ್ತು ವಸ್ತುಗಳಿಗೆ ನಾವೀನ್ಯತೆಯ ವೇಗ ನೀಡಲು ನೆದರ್‌ಲ್ಯಾಂಡ್‌ನ ಸಹ-ನಾಯಕರ ನೇತೃತ್ವದಲ್ಲಿ ಮಿಷನ್ ಇಂಟಿಗ್ರೇಟೆಡ್ ಬಯೋಫೈನರಿಗಳನ್ನು ಆರಂಭಿಸಲಾಯಿತು ಎಂದು ಸಚಿವರು ಹೇಳಿದರು.

********(Release ID: 1861764) Visitor Counter : 122