ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಅಧ್ಯಕ್ಷತೆಯಲ್ಲಿ ಪಿಎಂ ಕೇರ್ಸ್ ನಿಧಿಯ ಟ್ರಸ್ಟಿ ಮಂಡಳಿಯ ಸಭೆ


ಪಿಎಂ ಕೇರ್ಸ್ ನಿಧಿಗೆ ಹೃದಯಪೂರ್ವಕವಾಗಿ ದೇಣಿಗೆ ನೀಡುತ್ತಿರುವ ಭಾರತೀಯರನ್ನು ಶ್ಲಾಘಿಸಿದ ಪ್ರಧಾನಿ

ಪಿಎಂ ಕೇರ್ಸ್ ತುರ್ತು ಮತ್ತು ಸಂಕಷ್ಟದ ಸಂದರ್ಭಗಳಲ್ಲಿ ಸ್ಪಂದಿಸುವ ಬಹುದೊಡ್ಡ ದೂರದೃಷ್ಟಿಯೊಂದಿಗೆ ಕಾರ್ಯನಿರ್ವಹಿಸುವುದಲ್ಲದೆ, ಪರಿಹಾರ ಸಹಾಯ ಒದಗಿಸುತ್ತದೆ ಮತ್ತು ಸಂಕಷ್ಟ ತಗ್ಗಿಸುವ ಕ್ರಮಗಳು ಮತ್ತು ಸಾಮರ್ಥ್ಯ ವೃದ್ಧಿಯನ್ನೂ ಸಹ ಮಾಡುತ್ತದೆ

ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಗೌರವಾನ್ವಿತ ನ್ಯಾ. ಕೆ.ಟಿ.ಥಾಮಸ್, ಮಾಜಿ ಡೆಪ್ಯೂಟಿ ಸ್ಪೀಕರ್ ಶ್ರೀ ಕರಿಯಾ ಮುಂಡಾ ಮತ್ತು ಶ್ರೀ ರತನ್ ಟಾಟಾ ಪಿಎಂ ಕೇರ್ಸ್ ನಿಧಿಯ ಟ್ರಸ್ಟಿಗಳಾಗಿ ಸಭೆಯಲ್ಲಿ ಭಾಗಿ

Posted On: 21 SEP 2022 11:44AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಧ್ಯಕ್ಷತೆಯಲ್ಲಿ 20.09.2022 ರಂದು ಪಿಎಂ ಕೇರ್ಸ್ ನಿಧಿಯ ಟ್ರಸ್ಟಿ ಮಂಡಳಿಯ ಸಭೆ ನಡೆಯಿತು. 

4345 ಮಕ್ಕಳಿಗೆ ನೆರವು ನೀಡುತ್ತಿರುವ ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆ ಸೇರಿದಂತೆ ಪಿಎಂ ಕೇರ್ಸ್ ನಿಧಿಯ ಸಹಾಯದಿಂದ ಕೈಗೊಂಡ ನಾನಾ ಉಪಕ್ರಮಗಳ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ದೇಶದ ಅತ್ಯಂತ ನಿರ್ಣಾಯಕ ಸಮಯದಲ್ಲಿ ನಿಧಿಯು ನಿರ್ವಹಿಸಿದ ಪಾತ್ರವನ್ನು ಟ್ರಸ್ಟಿಗಳು ಶ್ಲಾಘಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಿಎಂ ಕೇರ್ಸ್ ನಿಧಿಗೆ  ಹೃದಯಪೂರ್ವಕವಾಗಿ ದೇಣಿಗೆ ನೀಡಿದ್ದಕ್ಕಾಗಿ ದೇಶದ ಜನರನ್ನು ಶ್ಲಾಘಿಸಿದರು.

ಪಿಎಂ ಕೇರ್ಸ್ ನಿಧಿ, ತುರ್ತು ಮತ್ತು ಸಂಕಷ್ಟದ ಸಂದರ್ಭಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಬಹು ದೊಡ್ಡ ದೂರದೃಷ್ಟಿಯನ್ನು ಹೊಂದಿರುವುದು ಮಾತ್ರವಲ್ಲದೆ, ಪರಿಹಾರ ಸಹಾಯದ ಮೂಲಕ ಸಂಕಷ್ಟ ತಗ್ಗಿಸುವ ಕ್ರಮಗಳು ಮತ್ತು ಸಾಮರ್ಥ್ಯವೃದ್ಧಿಯ ಬಗ್ಗೆಯೂ ಗಮನಹರಿಸುತ್ತದೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಪಿಎಂ ಕೇರ್ಸ್ ಫಂಡ್‌ನ ಅವಿಭಾಜ್ಯ ಅಂಗವಾಗುವಂತೆ ಪ್ರಧಾನಮಂತ್ರಿ ಟ್ರಸ್ಟಿಗಳನ್ನು ಸ್ವಾಗತಿಸಿದರು. 

ಸಭೆಯಲ್ಲಿ ಪಿಎಂ ಕೇರ್ಸ್ ನಿಧಿಯ ಟ್ರಸ್ಟಿಗಳು, ಅಂದರೆ ಕೇಂದ್ರ ಗೃಹ ಸಚಿವರು ಮತ್ತು ಕೇಂದ್ರ ಹಣಕಾಸು ಸಚಿವರು ಮತ್ತು ಪಿಎಂ ಕೇರ್ಸ್ ನಿಧಿಗೆ ಹೊಸದಾಗಿ ನಾಮನಿರ್ದೇಶನಗೊಂಡ ಟ್ರಸ್ಟಿಗಳು ಭಾಗವಹಿಸಿದ್ದರು:

•    ನ್ಯಾ. ಕೆ.ಟಿ.ಥಾಮಸ್, ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ
•    ಶ್ರೀ ಕರಿಯಾ ಮುಂಡಾ, ಮಾಜಿ ಡೆಪ್ಯೂಟಿ ಸ್ಪೀಕರ್
•     ಶ್ರೀ ರತನ್ ಟಾಟಾ, ಅಧ್ಯಕ್ಷರು, ಎಮೆರಿಟಸ್, ಟಾಟಾ ಸನ್ಸ್ 

ಪಿಎಂ ಕೇರ್ಸ್ ನಿಧಿಗೆ ಸಲಹಾ ಮಂಡಳಿಯ ರಚನೆಗೆ ಕೆಳಗಿನ ಗಣ್ಯ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಲು ಟ್ರಸ್ಟ್ ನಿರ್ಧರಿಸಿತು. 

•    ಶ್ರೀ ರಾಜೀವ್ ಮೆಹರ್ಷಿ, ಭಾರತದ ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್
•    ಶ್ರೀಮತಿ ಸುಧಾಮೂರ್ತಿ,ಮಾಜಿ ಅಧ್ಯಕ್ಷರು, ಇನ್ಫೋಸಿಸ್ ಫೌಂಡೇಷನ್ 
•    ಶ್ರೀ ಆನಂದ್ ಶಾ, ಟೀಚ್ ಫಾರ್ ಇಂಡಿಯಾದ ಸಹ ಸಂಸ್ಥಾಪಕರು ಮತ್ತು ಇಂಡಿಕಾರ್ಪ್ಸ್ ಮತ್ತು ಪಿರಾಮಲ್ ಫೌಂಡೇಶನ್‌ನ ಮಾಜಿ ಸಿಇಒ. 

ಹೊಸ ಟ್ರಸ್ಟಿಗಳು ಮತ್ತು ಸಲಹೆಗಾರರ ಪಾಲ್ಗೊಳ್ಳುವಿಕೆಯು ಪಿಎಂ ಕೇರ್ಸ್ ಫಂಡ್‌ನ ಕಾರ್ಯಚಟುವಟಿಕೆಗೆ ವ್ಯಾಪಕ ದೂರದೃಷ್ಟಿಯನ್ನು ಒದಗಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಾರ್ವಜನಿಕ ಜೀವನದ ಅವರ ಅಪಾರ ಅನುಭವವು ನಾನಾ ಸಾರ್ವಜನಿಕ ಅಗತ್ಯತೆಗಳಿಗೆ ನಿಧಿಯನ್ನು ಹೆಚ್ಚು ಸ್ಪಂದಿಸುವಂತೆ ಮಾಡುವಲ್ಲಿ ಮತ್ತಷ್ಟು ಚೈತನ್ಯ ನೀಡಲಿದೆ. 
 

******



(Release ID: 1861082) Visitor Counter : 111