ಚುನಾವಣಾ ಆಯೋಗ
ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ನೇರ ಸಂಪರ್ಕ ಹೊಂದಲು ಕೇಂದ್ರ ಚುನಾವಣಾ ಆಯೋಗ – ಇಸಿಐ ಮತಗಟ್ಟೆ ಮಟ್ಟದ ಇ – ಪತ್ರಿಕೆ ಹೊರ ತಂದಿದೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ದೇಶಾದ್ಯಂತ ಇರುವ ಬಿಎಲ್ಒ ಗಳ ಜೊತೆ ಮೊದಲ ಬಾರಿಗೆ ಸಂವಾದ ಆಯೋಜನೆ ದೊಡ್ಡ ಪ್ರಮಾಣದಲ್ಲಿ ಮತದಾರರೊಂದಿಗೆ ಸಂಪರ್ಕ ಹೊಂದಲು ಮತ್ತು ಇಸಿಐ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ಬಿಎಲ್ಒಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಇಸಿಐ ಭಾರತ ಚುನಾವಣಾ ಆಯೋಗ ಇಂದು ಭಾರತದ ರಾಜ್ಯಗಳಾದ್ಯಂತ ಹರಡಿರುವ ಬಿಎಲ್ಒ ಗಳ ಜೊತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ “ಬಿಎಲ್ಒ ಇ ಪತ್ರಿಕೆ” ಎಂಬ ಹೊಸ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿ ಕಚೇರಿಗಳಿಂದ [ಸಿಇಓಗಳು] 350 ಬಿಎಲ್ಒಗಳು ಪಾಲ್ಗೊಂಡಿದ್ದರು ಮತ್ತು ಸಮೀಪದ ರಾಜ್ಯಗಳಾದ ರಾಜಸ್ಥಾನ, ಉತ್ತರ ಪ್ರದೇಶದಿಂದ ದೆಹಲಿಯ ಇಂಡಿಯಾ ಹೆಬಿಟೇಟ್ ಸೆಂಟರ್ ನಲ್ಲಿ 50 ಬಿಎಲ್ಒಗಳು ಪಾಲ್ಗೊಂಡಿದ್ದರು. ಇಎಸ್ಐ ಯುಟ್ಯೂಬ್ ವಾಹಿನಿ ಮೂಲಕ (https://www.youtube.com/watch?v=vNI2qtQD5VA) ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು 25,000 ಚಂದಾದಾರರು ನೋಂದಣಿಯಾಗಿದ್ದು, 2.4 ಲಕ್ಷ ಜನ ಕಾಯಕ್ರಮವನ್ನು ವೀಕ್ಷಿಸಿದ್ದಾರೆ. ಸಂವಾದದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಬಿಎಲ್ಒಗಳು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್
ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ನೇರ ಸಂಪರ್ಕ ಹೊಂದಲು ಕೇಂದ್ರ ಚುನಾವಣಾ ಆಯೋಗ – ಇಸಿಐ ಮತಗಟ್ಟೆ ಮಟ್ಟದ ಇ – ಪತ್ರಿಕೆ ಹೊರ ತಂದಿದೆ
ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ದೇಶಾದ್ಯಂತ ಇರುವ ಬಿಎಲ್ಒ ಗಳ ಜೊತೆ ಮೊದಲ ಬಾರಿಗೆ ಸಂವಾದ ಆಯೋಜನೆ
ದೊಡ್ಡ ಪ್ರಮಾಣದಲ್ಲಿ ಮತದಾರರೊಂದಿಗೆ ಸಂಪರ್ಕ ಹೊಂದಲು ಮತ್ತು ಇಸಿಐ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ಬಿಎಲ್ಒಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಇಸಿಐ
Posted On:
14 SEP 2022 5:37PM by PIB Bengaluru
ಭಾರತ ಚುನಾವಣಾ ಆಯೋಗ ಇಂದು ಭಾರತದ ರಾಜ್ಯಗಳಾದ್ಯಂತ ಹರಡಿರುವ ಬಿಎಲ್ಒ ಗಳ ಜೊತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ “ಬಿಎಲ್ಒ ಇ ಪತ್ರಿಕೆ” ಎಂಬ ಹೊಸ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿ ಕಚೇರಿಗಳಿಂದ [ಸಿಇಓಗಳು] 350 ಬಿಎಲ್ಒಗಳು ಪಾಲ್ಗೊಂಡಿದ್ದರು ಮತ್ತು ಸಮೀಪದ ರಾಜ್ಯಗಳಾದ ರಾಜಸ್ಥಾನ, ಉತ್ತರ ಪ್ರದೇಶದಿಂದ ದೆಹಲಿಯ ಇಂಡಿಯಾ ಹೆಬಿಟೇಟ್ ಸೆಂಟರ್ ನಲ್ಲಿ 50 ಬಿಎಲ್ಒಗಳು ಪಾಲ್ಗೊಂಡಿದ್ದರು. ಇಎಸ್ಐ ಯುಟ್ಯೂಬ್ ವಾಹಿನಿ ಮೂಲಕ http://(https://www.youtube.com/watch?v=vNI2qtQD5VA) ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು 25,000 ಚಂದಾದಾರರು ನೋಂದಣಿಯಾಗಿದ್ದು, 2.4 ಲಕ್ಷ ಜನ ಕಾಯಕ್ರಮವನ್ನು ವೀಕ್ಷಿಸಿದ್ದಾರೆ.
`
ಸಂವಾದದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಬಿಎಲ್ಒಗಳು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಎದುರಾಗುವ ಸವಾಲುಗಳು, ಅನುಭವಗಳು ಮತ್ತು ಯಶೋಗಾಥೆಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಅನುಭವಗಳನ್ನು ವ್ಯಕ್ತಪಡಿಸಲು ದೇಶಾದ್ಯಂತ ಇರುವ ಬಿಎಲ್ಒ ಗಳ ಜೊತೆ ಮೊದಲ ಬಾರಿಗೆ ಸಂವಾದ ಆಯೋಜಿಸಲಾಗಿತ್ತು. ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಮತ್ತು ಮತ್ತು ಎಲ್ಲಾ ರಾಜ್ಯಗಳ ಸಿಇಓಗಳು [ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ] ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ –ಸಿಇಸಿ ಶ್ರೀ ರಾಜೀವ್ ಕುಮಾರ್, ಬಿಇಒಗಳು ತಮ್ಮ ಮೂಲ ಬ್ಲಾಕ್ ಗಳಲ್ಲಿ ಸ್ಮರಣೀಯ ಪಾತ್ರ ನಿರ್ವಹಿಸುತ್ತಿದ್ದಾರೆ. ಇದು ಕ್ಷೇತ್ರ ಮಟ್ಟದ ಪರಿಣಾಮಕಾರಿ ಸಂಸ್ಥೆಯಾಗಿದ್ದು, ಆಯೋಗ ಜನರೊಂದಿಗೆ ನೇರ ಸಂಪರ್ಕ ಹೊಂದಿದೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಸುಗಮಗೊಳಿಸುತ್ತದೆ ಎಂದರು.
ಶ್ರೀ ಕುಮಾರ್ ಅವರು ಕಾವ್ಯಾತ್ಮಕವಾಗಿ “ ಚುನಾವಣಾ ಆಯೋಗದ ಸ್ವರೂಪದ ರೂಪದಲ್ಲಿ ನೀವು ಸಾಕಾರವಾಗಿದ್ದೀರಿ. ಆಯೋಗದ ನಡವಳಿಕೆ, ಆಯೋಗದ ದೃಷ್ಟಿಕೋನ ಮತ್ತು ಇದಕ್ಕೆ ಧ್ವನಿಯಾಗಿದ್ದೀರಿ. ಅದಕ್ಕಾಗಿ ನಾವು ಆಭಾರಿ (निर्वाचन आयोग के स्वरुप के रूप मेंसाकार हैं, आयोग का व्यवहार है, आयोग की दृष्टि और स्वर भी हैं, इसीलिए आप सब का अत्यंत आभार है)” ಎಂದು ಹೇಳಿದರು.
ಮತದಾರರಿಗೆ ಸೇವೆಗಳನ್ನು ತಲುಪಿಸುವ, ನಿಖರವಾಗಿ ಮನೆ ಮನೆಗೆ ಸೇವೆ ಒದಗಿಸುವ ಬಿಎಲ್ಒ ಸಾಂಸ್ಥಿಕ ಶಕ್ತಿಯನ್ನು ಆಯೋಗ ಗುರುತಿಸುತ್ತದೆ ಎಂದು ಶ್ರೀ ಕುಮಾರ್ ವಾಗ್ದಾನ ನೀಡಿದರು. ಬಿಇಒಗಳು ದೇಶದ ಉದ್ದಗಲಕ್ಕೂ ಪ್ರತಿಯೊಬ್ಬ ಮತದಾರನಿಗೆ ಮಾಹಿತಿಯ ಮೂಲವಾಗಿವೆ. “ಬಿಎಲ್ಒ ಇ – ಪತ್ರಿಕೆ” ಯನ್ನು ಪರಿಚಯಿಸುತ್ತಿರುವ ಉದ್ದೇಶವೆಂದರೆ ಮತಗಟ್ಟೆ ಅಧಿಕಾರಿಗಳನ್ನು ಉತ್ತೇಜಿಸುವ ಮತ್ತು ಉತ್ತಮ ಮಾಹಿತಿ, ವ್ಯಕ್ತಿಗತ ವಿವರಗಳನ್ನು ಖಾತರಿಪಡಿಸುವುದಾಗಿದೆ ಎಂದು ಹೇಳಿದರು.
ಚುನಾವಣಾ ಆಯುಕ್ತ ಶ್ರೀ ಅನೂಪ್ ಚಂದ್ರ ಪಾಂಡೆ ಮಾತನಾಡಿ, ದ್ವೈಮಾಸಿಕ ಪತ್ರಿಕೆಯನ್ನು ಪರಿಚಯಿಸುವ ಕಲ್ಪನೆಯು ಆಯೋಗದ ವಿನೂತನ ಉಪಕ್ರಮವಾಗಿದೆ. ವಾಸ್ತವವಾಗಿ ಪತ್ರಿಕೆ ಮೂರು ಹಂತದಲ್ಲಿ ಸಂಪರ್ಕ ಸಾಧಿಸಲು ವೇದಿಕೆಯಾಗಿದೆ. ಇಸಿಐ ತಳಮಟ್ಟದಲ್ಲಿ ಸೂಚನೆಗಳನ್ನು, ಪ್ರತಿಕ್ರಿಯೆ ಮತ್ತು ಯಶೋಗಾಥೆಯನ್ನು ಹಂಚಿಕೊಳ್ಳುವ ವೇದಿಕೆಯಾಗಿದೆ ಮತ್ತು ಅಂತರರಾಜ್ಯ ಹಂತದಲ್ಲಿನ ಉತ್ತಮ ಅಭ್ಯಾಸದ ಕಲಿಕೆಯನ್ನು ಇದು ಸುಗಮಗೊಳಿಸಲಿದೆ ಎಂದು ಹೇಳಿದರು. ಬಿಎಲ್ಒ ಸಾಂಸ್ಥಿಕವಾಗಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಕುರಿತು ಬೆಳಕು ಚೆಲ್ಲಿದ ಅವರು, ಈ ಹಿಂದೆ ಐದು ವರ್ಷಗಳಿಗೊಮ್ಮೆ ಮತದಾರರ ಪಟ್ಟಿ ಸಿದ್ಧಪಡಿಸುವ, ಚುನಾವಣಾ ದತ್ತಾಂಶವಾಗಿ ಅದು ಹೇಗೆ ರೂಪಾಂತರಗೊಂಡಿತು, ಭಾವಚಿತ್ರವಿರುವ ಮತದಾರರ ಪಟ್ಟಿ ಹೇಗೆ ತ್ವರಿತವಾಗಿ ಸಿದ್ಧಪಡಿಸಲಾಯಿತು ಎಂಬುದನ್ನು ವಿವರಿಸಿದರು. ಮುಖ್ಯ ಚುನಾವಣಾಧಿಕಾರಿಗಳು ಬಿಎಲ್ಒಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಬೇಕು ಮತ್ತು ಸಾಮರ್ಥ್ಯ ವೃದ್ಧಿ, ಡಿಜಿಟಲ್ ಸಾಕ್ಷರತೆ ಹಾಗೂ ಸಮರ್ಥವಾಗಿ ಸವಾಲುಗಳನ್ನು ಎದುರಿಸುವ ಮತ್ತು ಕೆಲಸ ಮಾಡುವಾಗ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಹಿರಿಯ ಉಪ ಚುನಾವಣಾ ಆಯುಕ್ತ ಶ್ರೀ ಧರ್ಮೇಂದ್ರ ಶರ್ಮಾ ಮತ್ತು ಶ್ರೀ ನಿತೇಶ್ ವ್ಯಾಸ್ ಅವರು ವ್ಯವಸ್ಥಿತ ಮತದಾರರ ಶಿಕ್ಷಣ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಸಹಭಾಗಿತ್ವ ಹೊಂದುವ ವಿಭಾಗದ [ಸ್ವೀಪ್] ಉಸ್ತುವಾರಿ ಹೊಂದಿದ್ದಾರೆ. ಅವರು ಮಾತನಾಡಿ, ಮುಕ್ತ, ನ್ಯಾಯ ಸಮ್ಮತ ಹಾಗೂ ಚುನಾವಣೆಯಲ್ಲಿ ಪ್ರಾಥಮಿಕವಾಗಿ ಎಲ್ಲರನ್ನು ಒಳಗೊಳ್ಳುವ, ದೋಷಮುಕ್ತ ಮತದಾರರ ಪಟ್ಟಿಯನ್ನು ಖಚಿತಪಡಿಸಿಕೊಳ್ಳಲು ಆಯೋಗ 2006 ರಲ್ಲಿ ಬಿಎಲ್ಒ ಸಂಸ್ಥೆಯನ್ನು ಸ್ಥಾಪಿಸಿತು. ವರ್ಷಗಳಿಂದ ಬಿಎಲ್ಒ ಸಂಸ್ಥೆ ಇಸಿಐ ನಲ್ಲಿ ಹೊಸ ತಂತ್ರಜ್ಞಾನ ವಿಧಾನಗಳನ್ನು ಮೇಲ್ದೆರ್ಜೆಗೇರಿಸಿಕೊಳ್ಳುವ ಮತ್ತು ಅಳವಡಿಸಿಕೊಳ್ಳುವ ಕಾರ್ಯದಲ್ಲಿ ನಿರತವಾಗಿದೆ. ದ್ವೈಮಾಸಿಕ ಇ – ಪತ್ರಿಕೆ, ಇವಿಎಂ-ವಿವಿಪ್ಯಾಟ್ ತರಬೇತಿ, ಐಟಿ ಅಪ್ಲಿಕೇಶನ್ಸ್, ವಿಶೇಷ ಸಾರಾಂಶ ಪರಿಷ್ಕರಣೆ, ಮತಗಟ್ಟೆ ಹಂತದಲ್ಲಿ ಕನಿಷ್ಠ ಸ್ವೀಪ್ ಚಟುವಟಿಕೆಗಳು, ಅಂಚೆ ಮತ ಸೌಲಭ್ಯ, ಚುನಾವಣೆ ಕೈಗೆಟುಕುವಂತೆ ಮಾಡುವುದು, ಚುನಾವಣಾ ಸಾಕ್ಷರತೆ ಕ್ಲಬ್ ಗಳು, ವಿಶೇಷವಾಗಿ ಮತದಾರರ ಜಾಗೃತಿ ಉಪಕ್ರಮಗಳು ಹಾಗೂ ರಾಷ್ಟ್ರೀಯ ಮತದಾರರ ದಿನದಂತಹ ವಿಷಯಗಳನ್ನು ಒಳಗೊಂಡಿದೆ. ಬಿಇಒಗಳ ಜೊತೆ ಅನೌಪಚಾರಿಕ ಸಂವಾದ, ಅವರ ಯಶೋಗಾಥೆಗಳು ಹಾಗೂ ದೇಶಾದಾದ್ಯಂತ ಅಳವಡಿಸಿಕೊಂಡಿರುವ ಉತ್ತಮ ಅಭ್ಯಾಸಗಳನ್ನು ಕೂಡ ಇದು ಒಳಗೊಂಡಿದೆ. ಭಾಷೆ, ಸರಳ, ಸಂವಹನಾತ್ಮಕ ಹಾಗೂ ಸುಂದರವಾಗಿರಲಿದೆ. ಪತ್ರಿಕೆ ಇಂಗ್ಲೀಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಲಭ್ಯವಿದೆ. ಇಂಗ್ಲೀಷ್ ಮತ್ತು ಹಿಂದಿ ಅವತರಣಿಕೆಗಳ ಬಿಎಲ್ಒ ಇ – ಪತ್ರಿಕೆಗಳನ್ನು ಈ ಕೆಳಕಂಡ ಇಸಿಐ ವೆಬ್ ಸೈಟ್ ಅಥವಾ ಇಸಿಐ ಟ್ವಿಟರ್ ಹ್ಯಾಂಡಲ್ (http://@ECISVEEP) ನಲ್ಲಿ ಓದಬಹುದು ಮತ್ತು ಅಲ್ಲದೇ ಗರುಡಾ ಆಪ್ ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ.
https://ecisveep.nic.in/ebook/BLO-E-Patrika-en/index. http://html https://ecisveep.nic.in/ebook/BLO-E-Patrika-hindi/index.tr
*****
(Release ID: 1859573)
Visitor Counter : 317