ಚುನಾವಣಾ ಆಯೋಗ
azadi ka amrit mahotsav

ಚುನಾವಣಾ ಆಯೋಗವು 253 ಆರ್.ಪಿ.ಪಿ.ಗಳನ್ನು ನಿಷ್ಕ್ರಿಯ ಎಂದು ಘೋಷಿಸಿ 1968 ರ ಚಿಹ್ನೆಯ ಆದೇಶದ ಪ್ರಯೋಜನ ಪಡೆಯುವುದನ್ನು ನಿರ್ಬಂಧಿಸಿದೆ


ಅಸ್ತಿತ್ವದಲ್ಲಿಲ್ಲದ  86 ಹೆಚ್ಚುವರಿ ಆರ್.ಪಿ.ಪಿ.ಗಳನ್ನು ಪಟ್ಟಿಯಿಂದ ಅಳಿಸಲಾಗುತ್ತದೆ ಮತ್ತು ಚಿಹ್ನೆಗಳ ಆದೇಶದ ಅಡಿಯಲ್ಲಿ (1968) ನೀಡಿರುವ ಪ್ರಯೋಜನಗಳನ್ನು ಹಿಂಪಡೆಯಲಾಗಿದೆ

ನಿಯಮಾವಳಿಗಳ ಅನುಸರಣೆಯಿಲ್ಲದ ಈ 339 (86+253) ಆರ್.ಪಿ.ಪಿ.ಗಳ ವಿರುದ್ಧ ಕ್ರಮವು ಸೇರಿದಂತೆ ಮೇ 25, 2022 ರಿಂದ ಈ ತನಕ ಒಟ್ಟು ಡಿಫಾಲ್ಟ್ ಆರ್.ಪಿ.ಪಿ.ಗಳ ಸಂಖ್ಯೆ 537 ಕ್ಕೆತಲುಪಿದೆ

Posted On: 13 SEP 2022 6:03PM by PIB Bengaluru

ಮೇ 25, 2022 ರಂದು ಪ್ರಾರಂಭವಾದ ಹಿಂದಿನ ಕ್ರಮದ ಮುಂದುವರಿಕೆಯಾಗಿ, ನಿಯಮಾವಳಿಗಳಿಗೆ ಬದ್ಧವಾಗದ ನೋಂದಾಯಿತ ಅಂಗೀಕರಿಸದ(ಮಾನ್ಯತೆ ಇಲ್ಲದ) ರಾಜಕೀಯ ಪಕ್ಷ(ಆರ್.ಪಿ.ಪಿ.)ಗಳ ವಿರುದ್ದ ಕ್ರಮ ಜಾರಿಗೊಳಿಸುವ ನಿಟ್ಟಿನಲ್ಲಿ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಶ್ರೀ ಅನುಪ್ ಚಂದ್ರ ಪಾಂಡೆ ನೇತೃತ್ವದ ಭಾರತದ ಚುನಾವಣಾ ಆಯೋಗವು ಇಂದು ಅಸ್ಥಿತ್ವದಲ್ಲಿ ಇಲ್ಲದ 86  ಆರ್.ಪಿ.ಪಿ.ಗಳನ್ನು ಪಟ್ಟಿಯಿಂದ ತೆಗೆದು ಹಾಕಿದೆ ಮತ್ತು ಹೆಚ್ಚುವರಿ 253  ರಾಜಕೀಯ ಪಕ್ಷಗಳನ್ನು 'ನಿಷ್ಕ್ರಿಯ ಆರ್.ಪಿ.ಪಿ.ʼಗಳು ಎಂದು ಘೋಷಿಸಿದೆ. ನಿಯಮಾವಳಿಗಳಿಗೆ ಬದ್ಧವಾಗದ ಈ 339 ಆರ್.ಪಿ.ಪಿ.ಗಳ ವಿರುದ್ದ ಕ್ರಮವು ಸೇರಿದಂತೆ ಮೇ 25, 2022 ರಿಂದ ಈ ತನಕ ಒಟ್ಟಾರೆ 537 ಆರ್.ಪಿ.ಪಿ.ಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.

ಆರ್‌.ಪಿ. ಕಾಯಿದೆಯ ಪರಿಚ್ಛೇದ 29 ಎ ಅಡಿಯಲ್ಲಿ ಶಾಸನಬದ್ಧ ಅವಶ್ಯಕತೆಗಳ ಪ್ರಕಾರ, ಪ್ರತಿ ರಾಜಕೀಯ ಪಕ್ಷವು ತನ್ನ ಹೆಸರು, ಮುಖ್ಯ ಕಚೇರಿ, ಪದಾಧಿಕಾರಿಗಳು, ವಿಳಾಸ, ಪ್ಯಾನ್‌ (ಪಿ.ಎ.ಎನ್.)ಗಳಲ್ಲಿ ಯಾವುದೇ ಬದಲಾವಣೆಯನ್ನು ವಿಳಂಬವಿಲ್ಲದೆ ಚುನಾವಣಾ ಆಯೋಗಕ್ಕೆ ತಿಳಿಸಬೇಕು. ಸಂಬಂಧಿತ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳು ನಡೆಸಿದ ಭೌತಿಕ ಪರಿಶೀಲನೆಯ ನಂತರ ಅಥವಾ ಸಂಬಂಧಪಟ್ಟ ಆರ್.ಪಿ.ಪಿ.ಗಳ ನೋಂದಾಯಿತ ವಿಳಾಸಕ್ಕೆ ಪ್ರಾಧಿಕಾರದಿಂದ ಕಳುಹಿಸಲಾದ ಅಂಚೆ ಪತ್ರಗಳು/ನೋಟಿಸ್‌ಗಳ ತಲುಪದಿರುವ ವರದಿಯನ್ನು ಆಧರಿಸಿ 86 ಆರ್.ಪಿ.ಪಿ.ಗಳು ಅಸ್ತಿತ್ವದಲ್ಲಿಲ್ಲ ಎಂದು ಕಂಡುಬಂದಿದೆ.

ಮೇ 25, 2022 ಮತ್ತು ಜೂನ್ 20, 2022 ರ ದಿನಾಂಕದ ಆದೇಶಗಳ ಮೂಲಕ ಚುನಾವಣಾ ಆಯೋಗವು  87 ಆರ್.ಪಿ.ಪಿ.ಗಳು ಮತ್ತು 111 ಆರ್.ಪಿ.ಪಿ.ಗಳನ್ನು ಪಟ್ಟಿಯಿಂದ ತೆಗೆದು ಹಾಕಿದೆ. ಈಮೂಲಕ, ತನಕ ಪಟ್ಟಿಯಿಂದ ತೆಗೆದು ಹಾಕಿದ ಆರ್.ಪಿ.ಪಿ.ಗಳ ಒಟ್ಟಾರೆ ಸಂಖ್ಯೆಯು 284ಕ್ಕೇರಿದೆ.

ಬಿಹಾರ, ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ಎಂಬ ಏಳು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಂದ ಪಡೆದ ವರದಿಗಳ ಆಧಾರದ ಮೇಲೆ ನಿಯಮಾವಳಿಗಳನ್ನು ಅನುಸರಿಸದ 253 ಆರ್.ಪಿ.ಪಿ.ಗಳ ವಿರುದ್ಧ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ 253 ಆರ್.ಪಿ.ಪಿ.ಗಳನ್ನು ʼನಿಷ್ಕ್ರಿಯʼ ಎಂದು ಘೋಷಿಸಲಾಗಿದೆ, ಏಕೆಂದರೆ ಅವುಗಳಿಗೆ ತಲುಪಿಸಲಾದ ಪತ್ರ/ಸುತ್ತೋಲೆಗಳಿಗೆ ರಾಜಕೀಯ ಪಕ್ಷಗಳು ಪ್ರತಿಕ್ರಿಯಿಸಿಲ್ಲ ಮತ್ತು 2014 ಮತ್ತು 2019 ರ ನಡುವೆ ನಡೆದ ರಾಜ್ಯಗಳ ಅಥವಾ ಸಂಸತ್ತಿನ ಸಾರ್ವತ್ರಿಕ ಚುನಾವಣೆಗಳಲ್ಲಿ, ಒಂದೇ ಒಂದು ಚುನಾವಣೆಯಲ್ಲಿ ಕೂಡಾ ಸ್ಪರ್ಧಿಸಿಲ್ಲ. ಈ ಆರ್.ಪಿ.ಪಿ.ಗಳು ನಿಯಮಾವಳಿಯನ್ನು ಅನುಸರಿಸಲು ವಿಫಲವಾಗಿವೆ. 2015 ರಿಂದ 16 ಕ್ಕಿಂತ ಹೆಚ್ಚು ಶಾಸನಬದ್ಧ ಅವಶ್ಯಕತೆಗಳ ಹಾಗೂ ನಿಯಮಾವಳಿಗಳ ಅನುಸರಣೆಯ ಹಂತಗಳನ್ನು ಪಾಲಿಸುವಲ್ಲಿ ವಿಫಲವಾಗಿವೆ ಮತ್ತು ಡಿಫಾಲ್ಟ್ ಆಗಿ ಮುಂದುವರಿಯುತ್ತಿವೆ. 

ಮೇಲಿನ 253 ರಾಜಕೀಯ ಪಕ್ಷಗಳಲ್ಲಿ, 66 ಆರ್.ಪಿ.ಪಿ.ಗಳು ವಾಸ್ತವವಾಗಿ ಚಿಹ್ನೆ ಆದೇಶ (ಸಿಂಬಲ್ ಆರ್ಡರ್) 1968 ರ ಪ್ಯಾರಾ 10ಬಿ ಪ್ರಕಾರ ಸಾಮಾನ್ಯ ಒಂದೇ ಚಿಹ್ನೆಗಾಗಿ ಅರ್ಜಿ ಸಲ್ಲಿಸಿವೆ ಮತ್ತು ಆಯಾ ಕಾಲಕ್ಕೆ ಜರುಗಿದ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸಲಿಲ್ಲ. ಒಂದು ರಾಜ್ಯದ ಶಾಸಕಾಂಗ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು ಅಭ್ಯರ್ಥಿಗಳಲ್ಲಿ ಕನಿಷ್ಠ 5 ಪ್ರತಿಶತದಷ್ಟು ಅಭ್ಯರ್ಥಿಗಳನ್ನು ಸ್ಪರ್ಧೆಯಲ್ಲಿ ಕಣಕ್ಕಿಳಿಸುವ ಒಪ್ಪಂದದ ಆಧಾರದ ಮೇಲೆ ಆರ್.ಪಿ.ಪಿ.ಗೆ ಈ ಸಾಮಾನ್ಯ ಚಿಹ್ನೆಯ ಸವಲತ್ತು ನೀಡಲಾಗಿದೆ, ಆದರೆ ಅಂತಹ ರಾಜಕೀಯ ಪಕ್ಷಗಳು ಚುನಾವಣೆಗೆ ಸ್ಪರ್ಧಿಸದೆ ಸ್ವೀಕಾರಾರ್ಹ ಅರ್ಹತೆಗಳ ಲಾಭವನ್ನು ಪಡೆಯುವ ಮೂಲಕ ಲಭ್ಯವಿರುವ ಚುನಾವಣಾ ಪೂರ್ವ ರಾಜಕೀಯ ಅವಕಾಶ ಮತ್ತು ವ್ಯವಸ್ಥೆಗಳನ್ನು ಆಕ್ರಮಿಸಿಕೊಳ್ಳುವ ಸಾಧ್ಯತೆಯನ್ನು ಆಯೋಗವು ತಳ್ಳಿಹಾಕಲಾಗುವುದಿಲ್ಲ. ಇದು ನಿಜವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳಲ್ಲಿ ದೊಡ್ಡ ಗುಂಪು ಸೃಷ್ಠಿಸುತ್ತದೆ ಮತ್ತು ಮತದಾರರಿಗೆ ಗೊಂದಲಮಯ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.  

ರಾಜಕೀಯ ಪಕ್ಷಗಳ ನೋಂದಣಿಯ ಪ್ರಾಥಮಿಕ ಉದ್ದೇಶವು ಪರಿಚ್ಛೇಧ 29ಎ ಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದ್ದು,  ಇದು ರಾಜಕೀಯ ಪಕ್ಷವಾಗಿ ನೋಂದಾಯಿಸಲ್ಪಟ್ಟ ನಂತರ ಸಂಘಟನೆಗೆ ಸೇರಿಕೊಳ್ಳುವ ಸವಲತ್ತುಗಳು ಮತ್ತು ಅನುಕೂಲಗಳನ್ನು ಪಟ್ಟಿ ಮಾಡುತ್ತದೆ ಮತ್ತು ಅಂತಹ ಎಲ್ಲಾ ಅನುಕೂಲಗಳು ಹಾಗೂ ಸವಲತ್ತುಗಳು ಚುನಾವಣೆ ಪ್ರಕ್ರಿಯೆಗಳಲ್ಲಿ ಭಾಗವಹಿಸುವಿಕೆಗೆ ನೇರವಾಗಿ ಸಂಬಂಧಿಸಿರುತ್ತವೆ.  ಅದರಂತೆ, ರಾಜಕೀಯ ಪಕ್ಷಗಳ ನೋಂದಣಿಗಾಗಿ, ನೋಂದಣಿಯ ಷರತ್ತಿಗೆ ಆಯೋಗವು ಹೊರಡಿಸಿದ  13 (ii) (ಇ) ಮಾರ್ಗಸೂಚಿಗಳಲ್ಲಿ ಮಾಹಿತಿ ಈ ಕೆಳಗಿನಂತಿದೆ:   

“ಪಕ್ಷವು ತನ್ನ ನೋಂದಣಿಯಾದ ಐದು ವರ್ಷಗಳೊಳಗೆ ಚುನಾವಣಾ ಆಯೋಗವು ನಡೆಸುವ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಮತ್ತು ನಂತರ ಸ್ಪರ್ಧಿಸುವುದನ್ನು ಮುಂದುವರಿಸಬೇಕು ಎಂದು ಘೋಷಿಸುತ್ತದೆ. (ಪಕ್ಷವು ಆರು ವರ್ಷಗಳ ಕಾಲ ನಿರಂತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೆ, ಪಕ್ಷವನ್ನು ನೋಂದಾಯಿತ ಪಕ್ಷಗಳ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ)."  

ಆರ್ಥಿಕ ಶಿಸ್ತು, ಔಚಿತ್ಯ, ಸಾರ್ವಜನಿಕ ಹೊಣೆಗಾರಿಕೆ, ಪಾರದರ್ಶಕತೆ ಕಾಯ್ದುಕೊಳ್ಳುವುದು ಸೇರಿದಂತೆ ಸ್ಥಾಪನೆಯ ಸಂದರ್ಭದ ಪರಿಸ್ಥಿತಿಗಳ ಅನುಸರಣೆಯು, ಕಡ್ಡಾಯವಾದ ಮತ್ತು ಸ್ವಯಂ-ಅಂಗೀಕೃತ ನಿಬಂಧನೆಗಳ ಸಂಯೋಜನೆಯಾಗಿದೆ ಎಂದು ಚುನಾವಣಾ ಆಯೋಗವು ಅರಿತಿದೆ. ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಅಗತ್ಯವಾದ ರಾಜಕೀಯ ಪಕ್ಷಗಳ ವ್ಯವಹಾರಗಳ ಬಗ್ಗೆ ಮತದಾರರಿಗೆ ತಿಳಿಸಲು, ನಿಯಮಾವಳಿಗಳ ಅನುಸರಣೆಗಳಲ್ಲಿ ಪಾರದರ್ಶಕ ಕಾರ್ಯವಿಧಾನವು ಒಂದು ಪ್ರಾರಂಭಿಕ ಹಂತವಾಗಿ ಕಾರ್ಯನಿರ್ವಹಿಸುತ್ತವೆ. ನಿಯಮಾವಳಿಗಳ ಅಗತ್ಯ ಅನುಸರಣೆಗಳ ನಿಟ್ಟಿನಲ್ಲಿ, ಮತದಾರರು ಮತ್ತು ಚುನಾವಣಾ ಆಯೋಗವು ಕಣ್ಮುಚ್ಚಿಕೂರುವಂತಿಲ್ಲ. ಇದಲ್ಲದೆ ಈ ಎಲ್ಲಾ ನಿಯಂತ್ರಕ ಅಗತ್ಯತೆಗಳು ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸುವ ಆಯೋಗದ ಸಾಂವಿಧಾನಿಕ ಆದೇಶದ ಮೇಲೆ ನೇರವಾದ ಪ್ರಭಾವವನ್ನು ಹೊಂದಿವೆ.  

ಈ ಮೇಲಿನವುಗಳ ಹಿತದೃಷ್ಟಿಯಿಂದ, ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿ ಮತ್ತು ಚುನಾವಣಾ ಪ್ರಜಾಪ್ರಭುತ್ವದ ಶುದ್ಧತೆಗಾಗಿ, ತಕ್ಷಣದ ಸರಿಪಡಿಸುವ ಕ್ರಮಗಳನ್ನು ಸಮರ್ಥಿಸಿಕೊಂಡು, ಎಲ್ಲಾ ಕ್ರಮಗಳನ್ನು ಮಾಡಲಾಗುತ್ತದೆ. ಆದ್ದರಿಂದ, ಆಯೋಗವು ನ್ಯಾಯಯುತ, ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣಾ ಪ್ರಕ್ರಿಯೆಯನ್ನು ಖಾತ್ರಿಪಡಿಸುವ ತನ್ನ ಆದೇಶವನ್ನು ನಿರ್ವಹಿಸುವಲ್ಲಿ ಈ ಮೂಲಕ ಹೀಗೆ ನಿರ್ದೇಶಿಸುತ್ತದೆ:

86 ಅಸ್ತಿತ್ವದಲ್ಲಿಲ್ಲದ ಆರ್.ಪಿ.ಪಿ. ಗಳನ್ನು ಆರ್.ಪಿ.ಪಿ.ಗಳ ನೋಂದಣಿ (ರಿಜಿಸ್ಟರ್) ಪಟ್ಟಿಯಿಂದ ಅಳಿಸಲಾಗುತ್ತದೆ ಮತ್ತು ಚಿಹ್ನೆಗಳ ಆದೇಶ, 1968 ರ ಅಡಿಯಲ್ಲಿ ಯಾವುದೇ ಪ್ರಯೋಜನಗಳನ್ನು ಹೊಂದಲು ಅರ್ಹರಾಗಿರುವುದಿಲ್ಲ.

1951 ರ ಜನರ ಪ್ರಾತಿನಿಧ್ಯ ಕಾಯ್ದೆಯ ಪರಿಚ್ಛೇದ  29ಎ ಅಡಿಯಲ್ಲಿ ಆರ್.ಪಿ.ಪಿ.ಗಳ ನೋಂದಣಿಯಲ್ಲಿ ಆಯೋಗವು 253 ಆರ್.ಪಿ.ಪಿ.ಗಳನ್ನು 'ನಿಷ್ಕ್ರಿಯ ಆರ್.ಪಿ.ಪಿ.ಗಳು' ಎಂದು ಗುರುತಿಸಿ ಆದೇಶ ಹೊರಡಿಸಿದೆ.  

ಈ 253 ಆರ್.ಪಿ.ಪಿ.ಗಳು ಚುನಾವಣಾ ಚಿಹ್ನೆಗಳ(ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968 ಇದರ ಯಾವುದೇ ಪ್ರಯೋಜನವನ್ನು ಪಡೆಯಲು ಅರ್ಹತೆ ಹೊಂದಿರುವುದಿಲ್ಲ.

ಇದರಿಂದ  ಸಮಸ್ಯೆಗೊಳಗಾದ  ಯಾವುದೇ ರಾಜಕೀಯ ಪಕ್ಷವು, ತಮ್ಮಲ್ಲಿರುವ ಎಲ್ಲಾ ಪುರಾವೆಗಳೊಂದಿಗೆ, ವರ್ಷವಾರು (ಡಿಫಾಲ್ಟ್ ಅಡಿಯಲ್ಲಿ ಸೂಚಿಸಿದ ಎಲ್ಲಾ ವರ್ಷಗಳವರೆಗೆ) ಕೊಡುಗೆ ವರದಿ, ವೆಚ್ಚದ ವರದಿ, ಹಣಕಾಸಿನ ವಹಿವಾಟುಗಳಿಗೆ ಅಧಿಕೃತ ಸಹಿದಾರರನ್ನು ಒಳಗೊಂಡಂತೆ (ಬ್ಯಾಂಕ್ ಖಾತೆ ಮಾಹಿತಿಯನ್ನು ಒಳಗೊಂಡಂತೆ) ಪದಾಧಿಕಾರಿಗಳ ನವೀಕರಣ, ವಾರ್ಷಿಕ ಲೆಕ್ಕಪರಿಶೋಧಕ ಖಾತೆಗಳು ಸೇರಿದಂತೆ, ಇತರ ಕಾನೂನು ಮತ್ತು ನಿಯಂತ್ರಕ ನಿಯಮಾವಳಿಗಳ ಅನುಸರಣೆಗಳ ಮಾಹಿತಿಯೊಂದಿಗೆ, ಈ ನಿರ್ದೇಶನವನ್ನು ನೀಡಿದ 30 ದಿನಗಳ ಒಳಗಾಗಿ ಸಂಬಂಧಿತ ಮುಖ್ಯ ಚುನಾವಣಾ ಅಧಿಕಾರಿ/ಚುನಾವಣಾ ಆಯೋಗವನ್ನು ಸಂಪರ್ಕಿಸಬಹುದು.

ಈ 253 ಆರ್. ಯು.ಪಿ.ಪಿ.ಗಳಲ್ಲಿ, 66 ಆರ್. ಯು.ಪಿ.ಪಿ.ಗಳು ವಿವಿಧ ಚುನಾವಣೆಗಳಲ್ಲಿ ಪ್ಯಾರಾ 10ಬಿ ಅಡಿಯಲ್ಲಿ ಸಾಮಾನ್ಯ ಚಿಹ್ನೆಯನ್ನು ಬಯಸಿದವು ಆದರೆ ಆಯಾ ಸಾರ್ವತ್ರಿಕ ಚುನಾವಣೆಗಳಿಗೆ ಯಾವುದೇ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಕಣಕ್ಕಿಳಿಸಿ ಸ್ಪರ್ಧಿಸಲಿಲ್ಲ, ಈ ವಿಷಯದಲ್ಲಿ ಇನ್ನೂ ಸ್ಪಷ್ಟವಾಗಿ  ( ಮೇಲಿನ iii ವಿಷಯದಲ್ಲಿ ವಿವರಿಸಿದಂತೆ)  "ಚಿಹ್ನೆಗಳ ಆದೇಶದ ಪ್ಯಾರಾ 10 ಬಿ" ನಲ್ಲಿ ಪರಿಗಣಿಸಬಹುದಾದಂತಹ ದಂಡನಾತ್ಮಕ ಕ್ರಮಕ್ಕೆ ಅವರನ್ನು ಹೊಣೆಗಾರರನ್ನಾಗಿ ಮಾಡುವ ಸೂಕ್ತ ಕ್ರಮವನ್ನು ಆಯೋಗವು ತೆಗೆದುಕೊಳ್ಳಬಹುದು.

*****


(Release ID: 1859066) Visitor Counter : 463