ಸಹಕಾರ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸೆಪ್ಟೆಂಬರ್ 8 ರಂದು ನವದೆಹಲಿಯಲ್ಲಿ ರಾಜ್ಯ ಸಹಕಾರ ಸಚಿವರ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಹಕಾರದಿಂದ ಸಮೃದ್ಧಿ ('ಸಹಕಾರ ಸೇ ಸಮೃದ್ಧಿ') ಯ ಸಂಕಲ್ಪ ಮೂಲಕ ಸಹಕಾರಿ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಬದ್ಧರಾಗಿದ್ದಾರೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಕ್ರಿಯಾಶೀಲ ನಾಯಕತ್ವದಲ್ಲಿ ಸಹಕಾರ ಸಚಿವಾಲಯವು ಸಹಕಾರಿ ಕ್ಷೇತ್ರವನ್ನು ಬಲಪಡಿಸಿ ಅಭಿವೃದ್ಧಿಗೆ ಹೊಸ ಉತ್ತೇಜನವನ್ನು ನೀಡುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸರ್ವರನ್ನು ಒಳಗೊಂಡ ಅಭಿವೃದ್ಧಿಯ ಮಾದರಿಯಾಗಿಸಿದೆ.

ಭಾಗವಹಿಸುವವರ ನಡುವೆ ಚರ್ಚೆ ಮತ್ತು ಸಮನ್ವಯದ ಮೂಲಕ ಕಾರ್ಯಗತಗೊಳಿಸಬಹುದಾದ ನೀತಿ/ಯೋಜನೆ ಚೌಕಟ್ಟನ್ನು ರೂಪಿಸಲು ಸಮ್ಮೇಳನವು ವೇದಿಕೆಯನ್ನು ಒದಗಿಸುತ್ತದೆ.

Posted On: 06 SEP 2022 6:35PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಸೆಪ್ಟೆಂಬರ್ 8 ರಂದು ನವದೆಹಲಿಯಲ್ಲಿ ಜರಗುವ ರಾಜ್ಯ ಸಹಕಾರ ಸಚಿವರ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಹಕಾರ ರಾಜ್ಯ ಸಚಿವರಾದ ಶ್ರೀ ಬಿ.ಎಲ್.ವರ್ಮಾ ,  ರಾಜ್ಯಗಳ ಸಹಕಾರ ಸಚಿವರುಗಳು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಸಹಕಾರಿ ರಂಗದ ಪ್ರತಿನಿಧಿಗಳು ಮತ್ತು 36 ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಹಕಾರದಿಂದ ಸಮೃದ್ಧಿ ('ಸಹಕಾರ ಸೇ ಸಮೃದ್ಧಿ') ಸಂಕಲ್ಪದ ದೃಷ್ಟಿಕೋನ ಮೂಲಕ ಸಹಕಾರಿಗಳೊಂದಿಗೆ ಸಂಬಂಧ ಹೊಂದಿರುವ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಬದ್ಧರಾಗಿದ್ದಾರೆ. ಈ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ 06 ಜುಲೈ 2021 ರಂದು ಕೇಂದ್ರ ಸಹಕಾರ ಸಚಿವಾಲಯವನ್ನು ರಚಿಸಲಾಯಿತು. ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಕ್ರಿಯಾಶೀಲ ನಾಯಕತ್ವದಲ್ಲಿ ಸಹಕಾರ ಸಚಿವಾಲಯವು ಸಹಕಾರಿ ಕ್ಷೇತ್ರವನ್ನು ಬಲಪಡಿಸಿ ಸಮಗ್ರ ಅಭಿವೃದ್ಧಿಗಾಗಿ ಹೊಸ ಉತ್ತೇಜನವನ್ನು ನೀಡುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸರ್ವರನ್ನು ಒಳಗೊಂಡ ಅಭಿವೃದ್ಧಿಯ ಮಾದರಿಯಾನ್ನಾಗಿಸಿದೆ.

ಈ ಸಮ್ಮೇಳನವು ಸಹಕಾರಿಗಳ ಸಂಪೂರ್ಣ ಜೀವನ ಚಕ್ರವನ್ನು ಮಾತ್ರವಲ್ಲದೆ ಕ್ಷೇತ್ರದ ವ್ಯವಹಾರ ಮತ್ತು ಆಡಳಿತದ ಎಲ್ಲಾ ಅಂಶಗಳನ್ನು ಒಳಗೊಂಡ ಪ್ರಮುಖ ವಿಷಯಗಳ ಕುರಿತು ಭಾಗವಹಿಸುವವರ ನಡುವೆ ಪರಸ್ಪರ ಚರ್ಚೆ ಮತ್ತು ಸಮನ್ವಯದ ಮೂಲಕ ಕಾರ್ಯಗತಗೊಳಿಸಬಹುದಾದ ನೂತನ ನೀತಿ/ಯೋಜನೆ ಚೌಕಟ್ಟನ್ನು ರೂಪಿಸಲು ವೇದಿಕೆಯನ್ನು ಒದಗಿಸುತ್ತದೆ:  

1.ನೀತಿ/ಯೋಜನೆಗಳ ವಿಷಯಗಳು

 ರಾಷ್ಟ್ರೀಯ ಸಹಕಾರ ನೀತಿ

 ರಾಷ್ಟ್ರೀಯ ಸಹಕಾರಿ ಡೇಟಾಬೇಸ್

2.ಹೊಸ ಪ್ರಸ್ತಾವಿತ ಯೋಜನೆಗಳು

 ಪ್ರತಿ ಪಂಚಾಯಿತಿಯಲ್ಲಿ ಪಿ.ಎ.ಸಿ.ಎಸ್.

 ಕೃಷಿ ಆಧಾರಿತ ಮತ್ತು ಇತರ ಉತ್ಪನ್ನಗಳ ರಫ್ತು

 ಸಾವಯವ ಉತ್ಪನ್ನಗಳ ಪ್ರಚಾರ ಮತ್ತು ಮಾರುಕಟ್ಟೆ

 ಹೊಸ ಪ್ರದೇಶಗಳಿಗೆ ಸಹಕಾರಿ ಸಂಸ್ಥೆಗಳ ವಿಸ್ತರಣೆ

3.ಪಿ.ಎ.ಸಿ.ಎಸ್. ಮತ್ತು ಮಾದರಿ ಬೈ-ಲಾಗಳಿಗೆ ಸಂಬಂಧಿಸಿದ ವಿಷಯಗಳು

 ಪಿ.ಎ.ಸಿ.ಎಸ್.ಗಣಕೀಕರಣ

 ನಿಷ್ಕ್ರಿಯ ಪಿ.ಎ.ಸಿ.ಎಸ್. ಗಳ ಪುನರುಜ್ಜೀವನಕ್ಕಾಗಿ ಕ್ರಿಯಾ ಯೋಜನೆ

 ಪಿ.ಎ.ಸಿ.ಎಸ್. ನ ಮಾದರಿ ಬೈ-ಲಾಸ್

 ರಾಜ್ಯ ಸಹಕಾರ ಕಾನೂನುಗಳಲ್ಲಿ ಏಕರೂಪತೆಯನ್ನು ತರುವುದು

4.ಪ್ರಾಥಮಿಕ ಸಹಕಾರ ಸಂಘಗಳು

 ದೀರ್ಘಾವಧಿಯ ಹಣಕಾಸಿಗೆ ಆದ್ಯತೆ 

 ಹಾಲು ಸಹಕಾರ ಸಂಘಗಳು

 ಮೀನು ಸಹಕಾರ ಸಂಘಗಳು

*****



(Release ID: 1857731) Visitor Counter : 180