ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ "ಸಿಎಪಿಎಫ್ ಇ- ಆವಾಸ್" ವೆಬ್ ಪೋರ್ಟಲ್ ಗೆ ಚಾಲನೆ ನೀಡಿದರು


ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ದೇಶದ ಆಂತರಿಕ ಭದ್ರತೆಗೆ ಎಲ್ಲ ಆಯಾಮದಿಂದಲೂ ಬಲವಾದ ಆಧಾರಸ್ತಂಭವಾಗಿವೆ


ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಅಭಿವೃದ್ಧಿಯ ಹೊಸ ಯುಗ ಪ್ರಾರಂಭವಾಗಿದೆ ಮತ್ತು ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗುತ್ತಿದೆ, ಆಂತರಿಕ ಭದ್ರತೆಯನ್ನು ಖಾತ್ರಿಪಡಿಸುವ ಸಿಎಪಿಎಫ್ ಸಿಬ್ಬಂದಿಯು ಇದರಲ್ಲಿ ದೊಡ್ಡ ಪಾತ್ರವನ್ನು ಹೊಂದಿದೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯೋಧರ ಕುಟುಂಬಗಳ ಬಗ್ಗೆ ಕಾಳಜಿ ವಹಿಸುತ್ತದೆ, ಇದರಿಂದ ಕಷ್ಟಕರ ಸಂದರ್ಭಗಳಲ್ಲಿ ನಮ್ಮ ಗಡಿಯನ್ನು ಕಾಯುವ ಯೋಧರು ಯಾವುದೇ ಆತಂಕವಿಲ್ಲದೆ ತಮ್ಮ ಕೆಲಸ ನಿರ್ವಹಿಸಬಹುದು.


ಪ್ರಧಾನಿ ನರೇಂದ್ರ ಮೋದಿಯವರು ಯೋಧರು ಮತ್ತು ವಿಶೇಷವಾಗಿ ಅವರ ಕುಟುಂಬದ ಬಗ್ಗೆ ಕಾಳಜಿ ವಹಿಸಿದ್ದಾರೆ ಮತ್ತು ಕಳೆದ 8 ವರ್ಷಗಳಲ್ಲಿ ಅನೇಕ ಅಭೂತಪೂರ್ವ ನಿರ್ಧಾರಗಳನ್ನು ಕೈಗೊಂಡಿದ್ದಾರೆ.


ವಸತಿ ತೃಪ್ತಿ ಅನುಪಾತ (ಹೆಚ್ ಎಸ್ ಆರ್) 2014 ರಲ್ಲಿ ಸುಮಾರು 33 ಪ್ರತಿಶತದಷ್ಟಿತ್ತು, ಅದು ಇಂದು ಶೇಕಡಾ 48 ಆಗಿದೆ, ಸಿಎಪಿಎಫ್ ಇ-ಆವಾಸ್ ಪೋರ್ಟಲ್ನ ಪ್ರಾರಂಭದಿಂದಾಗಿ ಹೊಸ ಕಟ್ಟಡಗಳ ನಿರ್ಮಾಣವಿಲ್ಲದೆ ಹೆಚ್ ಎಸ್ ಆರ್  13 ಪ್ರತಿಶತದಷ್ಟು ಹೆಚ್ಚಾಗಲಿದೆ


ಗೃಹ ಸಚಿವಾಲಯದ ಈ ಅರ್ಥಪೂರ್ಣ ಪ್ರಯತ್ನಗಳೊಂದಿಗೆ, ನವೆಂಬರ್ 2024 ರ ವೇಳೆಗೆ ಹೆಚ್ ಎಸ್ ಆರ್ ಶೇಕಡಾ 73 ರಷ್ಟು ಆಗಲಿದೆ ಎಂದು ಸರ್ಕಾರವು ವಿಶ್ವಾಸ ಹೊ

Posted On: 01 SEP 2022 7:43PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ "ಸಿಎಪಿಎಫ್ ಇ-ಆವಾಸ್" ವೆಬ್ ಪೋರ್ಟಲ್ ಗೆ ಚಾಲನೆ ನೀಡಿದರು. ಗೃಹ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ನಿತ್ಯಾನಂದ ರೈ ಮತ್ತು ಶ್ರೀ ಅಜಯ್ ಕುಮಾರ್ ಮಿಶ್ರಾ, ಕೇಂದ್ರ ಗೃಹ ಕಾರ್ಯದರ್ಶಿ, ಗಡಿ ನಿರ್ವಹಣೆ ಕಾರ್ಯದರ್ಶಿ ಮತ್ತು ವಿವಿಧ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಮಹಾನಿರ್ದೇಶಕರು ಮತ್ತು ಎನ್ಎಸ್ಜಿ ಸೇರಿದಂತೆ ಇತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

          

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಮಿತ್ ಶಾ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಯಾವಾಗಲೂ ದೇಶದ ಆಂತರಿಕ ಭದ್ರತೆಯ ಬಲವಾದ ಆಧಾರಸ್ತಂಭವಾಗಿವೆ ಮತ್ತು ಇಂದು ಅವುಗಳ ಸಿಬ್ಬಂದಿಗೆ ಬಹಳ ಮುಖ್ಯವಾದ ದಿನವಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಯ ಹೊಸ ಯುಗ ಪ್ರಾರಂಭವಾಗಿದೆ ಮತ್ತು ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗುತ್ತಿದೆ ಮತ್ತು ಆಂತರಿಕ ಭದ್ರತೆಯನ್ನು ಖಾತ್ರಿಪಡಿಸುವ ಸಿಎಪಿಎಫ್ ಸಿಬ್ಬಂದಿ ಇದರಲ್ಲಿ ದೊಡ್ಡ ಪಾತ್ರವನ್ನು ಹೊಂದಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ 35,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಆಂತರಿಕ ಭದ್ರತೆಯನ್ನು ಕಾಪಾಡುವಾಗ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಅವರ ತ್ಯಾಗದಿಂದಾಗಿ ನಾಗರಿಕರು ಭದ್ರತೆಯ ಭಾವನೆಯೊಂದಿಗೆ ನೆಮ್ಮದಿಯಾಗಿದ್ದಾರೆ ಎಂದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕಷ್ಟಕರ ಸಂದರ್ಭಗಳಲ್ಲಿ ರಾಷ್ಟ್ರದ ಗಡಿಯನ್ನು ರಕ್ಷಿಸುವ ಯೋಧರ ಕುಟುಂಬಗಳ ಬಗ್ಗೆ ಕಾಳಜಿ ವಹಿಸುವುದು ತನ್ನ ಜವಾಬ್ದಾರಿ ಎಂದು ನಂಬಿದೆ. ಇದರಿಂದ ಅವರು ಆತಂಕವಿಲ್ಲದೆ ದೇಶಕ್ಕೆ ಸೇವೆ ಸಲ್ಲಿಸಬಹುದು. ಇಂದು ಆರಂಭವಾಗಿರುವ ಸಿಎಪಿಎಫ್ ಇ-ಆವಾಸ್ ಪೋರ್ಟಲ್ ಅದೇ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.

 

ಸಿಎಪಿಎಫ್ಗಳಲ್ಲಿ ಮನೆಗಳನ್ನು ನಿರ್ಮಿಸಿದ ಪಡೆಯ ಸಿಬ್ಬಂದಿಗೆ ಮಾತ್ರ ಈ ಮನೆಗಳನ್ನು ಹಂಚಿಕೆ ಮಾಡುವ ವ್ಯವಸ್ಥೆಯನ್ನು ರಚಿಸಲಾಗಿತ್ತು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇದರಿಂದ ಸಾವಿರಾರು ಮನೆಗಳು ಖಾಲಿ ಬಿದ್ದಿದ್ದವು. ಇದನ್ನು ಈಗ ಇ-ಆವಾಸ್ ಪೋರ್ಟಲ್ ಮೂಲಕ ಬದಲಾಯಿಸಲಾಗಿದೆ ಮತ್ತು ಖಾಲಿ ಇರುವ ಮನೆಗಳು ಇತರ ಸಿಎಪಿಎಫ್ ಸಿಬ್ಬಂದಿಗಳಿಗೂ ಲಭ್ಯವಿರುತ್ತವೆ. ಇದು ಹೊಸ ಕಟ್ಟಡವನ್ನು ನಿರ್ಮಿಸದೆಯೇ ವಸತಿ ತೃಪ್ತಿ ಅನುಪಾತವನ್ನು 13 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದರು. 2014 ರಲ್ಲಿ ಶ್ರೀ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ನಂತರ, ಗೃಹ ವ್ಯವಹಾರಗಳ ಸಚಿವಾಲಯವು ವಸತಿ ತೃಪ್ತಿ ಅನುಪಾತವನ್ನು ಹೆಚ್ಚಿಸಲು ವಿವಿಧ ಯೋಜನೆಗಳನ್ನು ಅಭಿವೃದ್ಧಿಪಡಿಸಿದೆ. ಇವುಗಳಲ್ಲಿ ಕಚೇರಿಗಳನ್ನು ನಿರ್ಮಿಸುವುದು, ಆಸ್ಪತ್ರೆಗಳನ್ನು ಬಲಪಡಿಸುವುದು ಮತ್ತು ಮನೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಸೇರಿವೆ. ಕಳೆದ ಎಂಟು ವರ್ಷಗಳಲ್ಲಿ 31 ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ, 17 ಸಾವಿರಕ್ಕೂ ಹೆಚ್ಚು ಮನೆಗಳು ನಿರ್ಮಾಣ ಹಂತದಲ್ಲಿವೆ ಮತ್ತು ಸುಮಾರು 15 ಸಾವಿರ ಹೆಚ್ಚುವರಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ವಸತಿ ತೃಪ್ತಿ ಅನುಪಾತವು 2014 ರಲ್ಲಿ ಶೇಕಡಾ 33 ರಷ್ಟಿತ್ತು, ಅದು ಇಂದು ಶೇಕಡಾ 48 ರಷ್ಟಿದೆ, ಸಿಎಪಿಎಫ್ ಇ-ಆವಾಸ್ ಪೋರ್ಟಲ್ ಪ್ರಾರಂಭದೊಂದಿಗೆ, ಹೊಸ ಕಟ್ಟಡಗಳ ನಿರ್ಮಾಣವಿಲ್ಲದೆ ವಸತಿ ತೃಪ್ತಿ ಅನುಪಾತವು ಶೇಕಡಾ 13 ರಷ್ಟು ಹೆಚ್ಚಾಗುತ್ತದೆ. ಗೃಹ ಸಚಿವಾಲಯದ ಈ ಅರ್ಥಪೂರ್ಣ ಪ್ರಯತ್ನಗಳಿಂದ ನವೆಂಬರ್ 2024 ರ ವೇಳೆಗೆ ವಸತಿ ತೃಪ್ತಿ ಅನುಪಾತವು ಶೇ.73 ತಲುಪಲಿದೆ, ಇದೊಂದು ಉತ್ತಮ ಸಾಧನೆಯಾಗಲಿದೆ ಎಂದು ಶ್ರೀ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

 

ಪ್ರಧಾನಿ ನರೇಂದ್ರ ಮೋದಿ ಅವರು ಯೋಧರು ಮತ್ತು ವಿಶೇಷವಾಗಿ ಅವರ ಕುಟುಂಬದ ಬಗ್ಗೆ ಕಾಳಜಿ ಹೊಂದಿದ್ದಾರೆ ಮತ್ತು ಕಳೆದ 8 ವರ್ಷಗಳಲ್ಲಿ ಈ ದಿಕ್ಕಿನಲ್ಲಿ ಅನೇಕ ಅಭೂತಪೂರ್ವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ಭಾರತ ಸರ್ಕಾರವು ಯೋಧರ ಕುಟುಂಬಗಳಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು 'ಆಯುಷ್ಮಾನ್ ಸಿಪಿಎಫ್' ಯೋಜನೆಯನ್ನು ಪ್ರಾರಂಭಿಸಿದೆ, ಇದರ ಅಡಿಯಲ್ಲಿ 35 ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಕಾರ್ಡ್ಗಳನ್ನು 10 ಲಕ್ಷ ಸಿಬ್ಬಂದಿಗೆ ವಿತರಿಸಲಾಗಿದೆ. ಈ ಯೋಜನೆಯಡಿ ಇದುವರೆಗೆ 31 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸುಮಾರು 56,000 ಬಿಲ್ಗಳನ್ನು ಪಾವತಿಸಲಾಗಿದೆ ಎಂದು ಅವರು ಹೇಳಿದರು.

 

 

ಸಿಎಪಿಎಫ್ ಸಿಬ್ಬಂದಿಯ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಇ-ವರ್ಗಾವಣೆ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಸ್ತುತ, ಐಟಿಬಿಪಿ ಮತ್ತು ಸಿಐಎಸೆಫ್ ಈ ಸಾಫ್ಟ್ವೇರ್ ಅನ್ನು ಪ್ರಾಯೋಗಿಕವಾಗಿ ಬಳಸುತ್ತಿವೆ. ಈ ಸಾಫ್ಟ್ವೇರ್ನೊಂದಿಗೆ, ಕೆಲಸದ ನಿಯೋಜನೆಯನ್ನು ಯೋಧರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯೊಂದಿಗೆ ಲಿಂಕ್ ಮಾಡಬಹುದು. ಪ್ರಧಾನ ಮಂತ್ರಿಗಳ ವಿದ್ಯಾರ್ಥಿವೇತನ ಯೋಜನೆಯಲ್ಲಿ ಈ ಹಿಂದೆ 42 ಕೋರ್ಸ್ಗಳಿದ್ದವು ಮತ್ತು ಈಗ 80 ಕ್ಕೂ ಹೆಚ್ಚು ಹೊಸ ಕೋರ್ಸ್ಗಳನ್ನು ಸೇರಿಸಲಾಗಿದೆ ಎಂದು ಶ್ರೀ ಶಾ ಹೇಳಿದರು. ಕೇಂದ್ರೀಯ ಎಕ್ಸ್-ಗ್ರೇಷಿಯಾವನ್ನು ಹೆಚ್ಚು ವೈಜ್ಞಾನಿಕವಾಗಿ ಮಾಡುವ ಮೂಲಕ ಹೆಚ್ಚಿಸಲಾಗಿದೆ. ಏರ್ ಕೊರಿಯರ್ ಸೇವೆಗಳನ್ನು ಸಹ ಜಾರಿಗೊಳಿಸಲಾಗಿದೆ ಮತ್ತು ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರವನ್ನು ಬಲಪಡಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಯೋಧರ ಕಲ್ಯಾಣಕ್ಕಾಗಿ ಯಾವುದೇ ಸಕಾರಾತ್ಮಕ ಸಲಹೆಯನ್ನು ಪರಿಗಣಿಸಲು ಸಿದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಆದರೆ ಕೆಲಸದ ವಾತಾವರಣವನ್ನು ಸುಸ್ಥಿತಿಯಲ್ಲಿಡಲು ನಾವು ನಮ್ಮ ಕರ್ತವ್ಯವನ್ನೂ ಪಾಲಿಸಬೇಕು. ಗೃಹ ಸಚಿವಾಲಯದ ಗಿಡ ನೆಡುವ ಅಭಿಯಾನದಲ್ಲಿ ಇದುವರೆಗೆ ಸುಮಾರು ಮೂರು ಕೋಟಿ ಸಸಿಗಳನ್ನು ನೆಡಲಾಗಿದೆ, ಆದರೆ ಯೋಧರಲ್ಲಿ ತಾವು ನೆಟ್ಟ ಸಸಿಗಳ ಬಗ್ಗೆ ಬಾಂಧವ್ಯವನ್ನು ಬೆಳೆಸುವುದು ಹಿರಿಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಶ್ರೀ ಶಾ ಹೇಳಿದರು. ಮರವಾಗುವ ಸಸಿ ಯೋಧರ ಜೀವನವನ್ನು ಬದಲಾಯಿಸುತ್ತದೆ. ಗಿಡ ನೆಡುವ ಅಭಿಯಾನದ ಉದ್ದೇಶವು ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸುವ ಚಿಂತನೆಯಾಗಿದೆ. ಹಾಗೆಯೇ ಸೃಜನಶೀಲ ಮತ್ತು ಸಕಾರಾತ್ಮಕ ಚಿಂತನೆಯನ್ನು ಉತ್ತೇಜಿಸುವುದೂ ಆಗಿದೆ. ಇದು ಮಾನವ ಸ್ವಭಾವದಲ್ಲಿ ಬದಲಾವಣೆ ಮತ್ತು ತೃಪ್ತಿಯ ಭಾವನೆಯನ್ನು ತರುತ್ತದೆ. ಪ್ರಧಾನಮಂತ್ರಿಯವರು ಸೈನಿಕರ ಮತ್ತು ವಿಶೇಷವಾಗಿ ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಯಾವಾಗಲೂ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಪ್ರಧಾನಿಯವರ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಗೃಹ ಸಚಿವಾಲಯವು ಸದಾ ಸಿದ್ಧವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.

*****



(Release ID: 1856583) Visitor Counter : 159