ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಿ ಅವರನ್ನು ಭೇಟಿ ಮಾಡಿದ 2021ನೇ ಬ್ಯಾಚ್ ನ ತರಬೇತಿಯಲ್ಲಿರುವ ಐಎಫ್ ಎಸ್  ಅಧಿಕಾರಿಗಳು 


ತರಬೇತಿಯಲ್ಲಿರುವ ಅಧಿಕಾರಿಗಳೊಂದಿಗೆ ಅನೌಪಚಾರಿಕ ಮುಕ್ತ ಸಂವಾದ ನಡೆಸಿದ ಪ್ರಧಾನಿ

Posted On: 29 AUG 2022 7:50PM by PIB Bengaluru

2021ನೇ ಬ್ಯಾಚ್ ನ ಭಾರತೀಯ ವಿದೇಶಾಂಗ ಸೇವೆಯ (ಐಎಫ್ ಎಸ್) ತರಬೇತಿಯಲ್ಲಿರುವ ಅಧಿಕಾರಿಗಳು ಇಂದು ಮುಂಜಾನೆ 7, ಲೋಕ ಕಲ್ಯಾಣ ಮಾರ್ಗದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. 


ಅನೌಪಚಾರಿಕ ಮುಕ್ತ ಸಂವಾದ ನಡೆಸಿದ ಪ್ರಧಾನಿ, ಸೇವೆಗೆ ಸೇರಿದ ತರಬೇತಿಯಲ್ಲಿರುವ ಐಎಫ್‌ಎಸ್ ಅಧಿಕಾರಿಗಳನ್ನು ಅಭಿನಂದಿಸಿದರು ಮತ್ತು ಇದೀಗ ನೀವು ವಿಶ್ವ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅವಕಾಶವನ್ನು ಪಡೆಯುತ್ತಿದ್ದೀರಿ ಎಂದು ಹೇಳಿದರು. ಸೇವೆಗೆ ಸೇರುವ ಹಿಂದಿನ ಕಾರಣವನ್ನು ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು. 


ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ 2023 ಆಚರಣೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಸಿರಿಧಾನ್ಯಗಳನ್ನು ಹೇಗೆ ಜನಪ್ರಿಯಗೊಳಿಸಬೇಕು, ಅದರಿಂದ ನಮ್ಮ ರೈತರಿಗೆ ಅನುಕೂಲವಾಗುತ್ತದೆ ಎಂದು ಬಗ್ಗೆ ವಿವರವಾಗಿ ಚರ್ಚಿಸಿದರು. ಹೇಗೆ ಸಿರಿಧಾನ್ಯಗಳು ಪರಿಸರ ಸ್ನೇಹಿ ಮತ್ತು ಅವುಗಳಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಕುರಿತು ಮಾತನಾಡಿದರು. ಅಲ್ಲದೆ ಅವರು, ಲೈಫ್ ಬಗ್ಗೆ (ಪರಿಸರಕ್ಕಾಗಿ ಜೀವನಶೈಲಿ) ಮತ್ತು ಹೇಗೆ ವ್ಯಕ್ತಿಯೊಬ್ಬರು ಪರಿಸರಕ್ಕೆ ಲಾಭವಾಗುವಂತೆ ತಮ್ಮ ಜೀವನಶೈಲಿಯನ್ನು ಬದಲಾವಣೆ ಮಾಡಬೇಕು ಎಂಬ ಕುರಿತು ಮಾತನಾಡಿದರು. ಪ್ರಧಾನಮಂತ್ರಿ ಅವರು ತಮ್ಮ ಸ್ವಾತಂತ್ರೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದ ಪಂಚ ಪ್ರಾಣದ ಕುರಿತು ತರಬೇತಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು ಮತ್ತು ಅವುಗಳ ಸಾಕಾರ ನಿಟ್ಟಿನಲ್ಲಿ ಐಎಫ್ ಎಸ್ ಅಧಿಕಾರಿಗಳು ಹೇಗೆ ಕೊಡುಗೆ ನೀಡಬಹುದು ಎಂಬ ಕುರಿತು ಮಾಹಿತಿ ನೀಡಿದರು.


ಪ್ರಧಾನಮಂತ್ರಿ ಅವರು  ಅಧಿಕಾರಿಗಳಿಗೆ ಮುಂದಿನ 25 ವರ್ಷಗಳ ಕುರಿತು ಆಲೋಚಿಸಬೇಕು ಮತ್ತು ದೀರ್ಘಾವಧಿಗೆ ಯೋಜನೆಗಳನ್ನು ರೂಪಿಸಬೇಕು ಮತ್ತು ಆ ಅವಧಿಯಲ್ಲಿ ಹೇಗೆ ತಾವು ಬೆಳವಣಿಗೆ ಸಾಧಿಸಬೇಕು ಮತ್ತು ದೇಶದ ಪ್ರಗತಿಗೆ ಹೇಗೆ ಬಳಸಿಕೊಳ್ಳಬೇಕೆಂಬ ಕುರಿತು ವಿವರಿಸಿದರು. 
 

*******


(Release ID: 1855445) Visitor Counter : 154