ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಬಲವರ್ಧಿತ ಅಕ್ಕಿ ಘೋಷಣೆಯ ಒಂದು ವರ್ಷ


ಬಲವರ್ಧಿತ ಅಕ್ಕಿಯ ಎತ್ತುವಳಿ ಮಾಡಿದ 24 ರಾಜ್ಯಗಳ 151 ಜಿಲ್ಲೆಗಳು; ಹಂತ 2ರಲ್ಲಿ 6.83 ಲಕ್ಷ ಮೆಟ್ರಿಕ್ ಟನ್  ವಿತರಿಸಿದ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು 

ಹಂತ 2ರಲ್ಲಿ ಐಸಿಡಿಎಸ್ ಮತ್ತು ಪಿ.ಎಂ. ಪೋಷಣ್ ಅಡಿಯಲ್ಲಿ 7.36 ಲಕ್ಷ ಮೆಟ್ರಿಕ್ ಟನ್ ಅನ್ನು  ಎತ್ತುವಳಿ ಮಾಡಿದ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು.

75ನೇ ಸ್ವಾತಂತ್ರ್ಯ ದಿನಾಚರಣೆಯಂದು ಭಾರತ ಸರ್ಕಾರದ ಪ್ರತಿಯೊಂದು ಯೋಜನೆಯಲ್ಲೂ ಬಲವರ್ಧಿತ ಅಕ್ಕಿಯ ಪೂರೈಕೆಯನ್ನುಪ್ರಕಟಿಸಿದ್ದ ಮಾನ್ಯ ಪ್ರಧಾನಮಂತ್ರಿಯವರು

ಒಂದು ವರ್ಷದೊಳಗೆ, ಬಲವರ್ಧಿತ ಅಕ್ಕಿಗಾಗಿ ಮಿಶ್ರಣದ ಮೂಲಸೌಕರ್ಯಗಳನ್ನು ಹೊಂದಿರುವ ಅಕ್ಕಿ ಗಿರಣಿಗಳ ಸಂಖ್ಯೆಯು 2690 ರಿಂದ 9000 ಕ್ಕೆ ಏರಿಕೆ

Posted On: 11 AUG 2022 6:07PM by PIB Bengaluru

ಬಲವರ್ಧಿತ ಅಕ್ಕಿ ಕಾರ್ಯಕ್ರಮದ ಎರಡನೇ ಹಂತದಲ್ಲಿ ಒಟ್ಟು 151 ಜಿಲ್ಲೆಗಳು (24 ರಾಜ್ಯಗಳಲ್ಲಿ) ಈಗಾಗಲೇ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿಪಿಡಿಎಸ್) ಅಡಿಯಲ್ಲಿ  ಬಲವರ್ಧಿತ ಅಕ್ಕಿಯನ್ನು ಎತ್ತುವಳಿ ಮಾಡಿವೆ. ಏಪ್ರಿಲ್ 1, 2022 ರಿಂದ ಪ್ರಾರಂಭವಾದ ಈ ಹಂತದಲ್ಲಿ ಸುಮಾರು 6.83 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ವಿತರಣೆ ಮಾಡಿವೆ. ಐಸಿಡಿಎಸ್ ಮತ್ತು ಪಿಎಂ ಪೋಷಣ್ ಅಡಿಯಲ್ಲಿ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಇಲ್ಲಿಯವರೆಗೆ ಸುಮಾರು 7.36 ಲಕ್ಷ ಮೆಟ್ರಿಕ್ ಟನ್ ಅನ್ನು ಎತ್ತುವಳಿ ಮಾಡಿವೆ. ಸುಮಾರು ಶೇ.52ರಷ್ಟು ಜಿಲ್ಲೆಗಳು ಎರಡನೇ ಹಂತದಲ್ಲಿ ಆಹಾರ ಧಾನ್ಯಗಳನ್ನು ಎತ್ತುವಳಿ ಮಾಡಿವೆ.
ಮಾನ್ಯ ಪ್ರಧಾನಮಂತ್ರಿಯವರು 75ನೇ ಸ್ವಾತಂತ್ರ್ಯ ದಿನಾಚರಣೆಯಂದು (2021 ರ ಆಗಸ್ಟ್ 15) ತಮ್ಮ ಭಾಷಣದಲ್ಲಿ, 2024ರ ವೇಳೆಗೆ ದೇಶಾದ್ಯಂತ ಭಾರತ ಸರ್ಕಾರದ ಪ್ರತಿಯೊಂದು ಯೋಜನೆಯಲ್ಲಿ ಹಂತಹಂತವಾಗಿ ಬಲವರ್ಧಿತ ಅಕ್ಕಿಯನ್ನು ಪೂರೈಸುವುದಾಗಿ ಘೋಷಿಸಿದರು. ಅಂದಿನಿಂದ, ಈ ಉಪಕ್ರಮವು ಕಳೆದ ಒಂದು ವರ್ಷದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ.
ಐಸಿಡಿಎಸ್ ಮತ್ತು ಪಿಎಂ ಪೋಷಣ್ ಒಳಗೊಂಡ ಮೊದಲ ಹಂತವನ್ನು 2021-22 ರಲ್ಲಿ ಜಾರಿಗೆ ತರಲಾಗಿತ್ತು ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 17.51 ಲಕ್ಷ ಮೆಟ್ರಿಕ್ ಟನ್ ವಿತರಿಸಲಾಗಿದೆ.
ಏತನ್ಮಧ್ಯೆ, ದೇಶದಲ್ಲಿ 2021ರ ಆಗಸ್ಟ್ 15 ರವರೆಗೆ ಸುಮಾರು 13.67 ಲಕ್ಷ ಮೆಟ್ರಿಕ್ ಟನ್ ಸಂಚಿತ ಮಿಶ್ರಣ ಸಾಮರ್ಥ್ಯದೊಂದಿಗೆ ಇದ್ದ 2690 ಅಕ್ಕಿ ಗಿರಣಿಗಳ ಸಂಖ್ಯೆ ಈಗ 9000ಕ್ಕೆ ಏರಿದೆ, ಅವು ಬಲವರ್ಧಿತ ಅಕ್ಕಿ ಉತ್ಪಾದನೆಗೆ ಮಿಶ್ರಣ ಮೂಲಸೌಕರ್ಯವನ್ನು ಸ್ಥಾಪಿಸಿವೆ. ಪ್ರಸ್ತುತ ಸಂಚಿತ ಮಾಸಿಕ ಉತ್ಪಾದನಾ ಸಾಮರ್ಥ್ಯವು ಸುಮಾರು 60 ಲಕ್ಷ ಮೆಟ್ರಿಕ್ ಟನ್ ಅಂದರೆ ಕಳೆದ ವರ್ಷಕ್ಕಿಂತ 4 ಪಟ್ಟು ಹೆಚ್ಚಾಗಿದೆ.
2023ರ ಮಾರ್ಚ್ ವೇಳೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಇತರ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಹಂತ-1ಕ್ಕಿಂತ ಹೆಚ್ಚಿನ ಎಲ್ಲಾ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಹೆಚ್ಚಿನ ಒತ್ತಡದ ಜಿಲ್ಲೆಗಳನ್ನು (ಒಟ್ಟು 291 ಜಿಲ್ಲೆಗಳು) ಹಂತ-2 ಒಳಗೊಂಡಿದ್ದು, ಒಟ್ಟು 175 ಲಕ್ಷ ಮೆಟ್ರಿಕ್ ಟನ್ ನಷ್ಟು ಬಲವರ್ಧಿತ ಅಕ್ಕಿಯನ್ನು ವಿತರಿಸಬೇಕಿದೆ.
ಕಳೆದ ವರ್ಷದ ಆಗಸ್ಟ್ ನಲ್ಲಿ 0.9 ಲಕ್ಷ ಮೆಟ್ರಿಕ್ ಟನ್ (34 ಎಫ್ಆರ್.ಕೆ. ಉತ್ಪಾದನೆ) ಇದ್ದ ಸಂಚಿತ ವಾರ್ಷಿಕ ಬಲವರ್ಧಿತ ಅಕ್ಕಿಯ ತಿರುಳು (ಎಫ್ಆರ್.ಕೆ.) ಉತ್ಪಾದನಾ ಸಾಮರ್ಥ್ಯವು 3.5 ಲಕ್ಷ ಮೆಟ್ರಿಕ್ ಟನ್ (153 ಎಫ್ಆರ್.ಕೆ. ತಯಾರಕೆ) ಗೆ ಏರಿದೆ, ಇದು ನಾಲ್ಕು ಪಟ್ಟು ಹೆಚ್ಚಾಗಿದೆ.
2021ರ ಆಗಸ್ಟ್ ನಲ್ಲಿ ಬಲವರ್ಧನೆಯ ಪರೀಕ್ಷೆಗಾಗಿ ಎನ್ಎಬಿಎಲ್ ಮಾನ್ಯತೆ ಪಡೆದ ಲ್ಯಾಬ್ ಗಳನ್ನು 20 ರಿಂದ 30ಕ್ಕೆ ಹೆಚ್ಚಿಸಲಾಗಿದೆ.
ಎಫ್.ಸಿ.ಐ ಮತ್ತು ಡಿಸಿಪಿ ರಾಜ್ಯಗಳ ರಾಜ್ಯ ಏಜೆನ್ಸಿಗಳು ಕೆಎಂಎಸ್ 2020-21 ರಿಂದ ಬಲವರ್ಧಿಸಲಾದ ಅಕ್ಕಿಯನ್ನು ಸಂಗ್ರಹಿಸುತ್ತಿದ್ದು, ಇಲ್ಲಿಯವರೆಗೆ ಸುಮಾರು 145.93 ಲಕ್ಷ ಮೆಟ್ರಿಕ್ ಟನ್ ಬಲವರ್ಧಿತ ಅಕ್ಕಿಯನ್ನು ದಾಸ್ತಾನು ಮಾಡಿವೆ.
ಬಲವರ್ಧಿತ ಅಕ್ಕಿ/ ಎಫ್ಆರ್.ಕೆ.ಗಳ ಉತ್ಪಾದನೆ ಮತ್ತು ವಿತರಣೆಯ ಗುಣಮಟ್ಟ ಖಾತ್ರಿ (ಕ್ಯೂಎ) ಮತ್ತು ಗುಣಮಟ್ಟ ನಿಯಂತ್ರಣ (ಕ್ಯೂಸಿ) ಶಿಷ್ಟಾಚಾರಗಳ ಅನುಸರಣೆಗಾಗಿ ಇಲಾಖೆಯು ಗುಣಮಟ್ಟದ  ಕಾರ್ಯಾಚರಣೆ ಪ್ರಕ್ರಿಯೆ (ಎಸ್ಒಪಿ) ಅನ್ನು ಸಹ ಅಭಿವೃದ್ಧಿಪಡಿಸಿದೆ.
ಎಫ್ಎಸ್ಎಸ್ಎಐ ಆಹಾರ ಬಲವರ್ಧನೆಗಾಗಿ ನಿಯಂತ್ರಕ / ಪರವಾನಗಿ ಪ್ರಾಧಿಕಾರ, ಎಫ್ಆರ್.ಕೆ, ಪೂರ್ವ-ಮಿಶ್ರಣಕ್ಕಾಗಿ ಮಾನದಂಡಗಳನ್ನು ರೂಪಿಸಿದೆ ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ಕರಡು ಮಾನದಂಡಗಳ ಕಾರ್ಯಾಚರಣೆಗಾಗಿ ಎಲ್ಲಾ ಬಾಧ್ಯಸ್ಥರಿಗೆ ನಿರ್ದೇಶನವನ್ನು ಒದಗಿಸಿದೆ.  ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಎಫ್ಆರ್.ಕೆ, ಮಿಶ್ರಣ ಪೂರ್ವ (ಜೀವಸತ್ವಗಳು ಮತ್ತು ಖನಿಜಗಳು), ಯಂತ್ರೋಪಕರಣಗಳು (ಮಿಶ್ರಕಗಳು, ಎಕ್ಸ್ ಟ್ರೂಡರ್ ಗಳು ಮತ್ತು ಇತರ ಸಂಬಂಧಿತ ಯಂತ್ರೋಪಕರಣಗಳು ಇತ್ಯಾದಿ) ಮಾನದಂಡಗಳನ್ನು ಸಹ ಸೂಚಿಸಿದೆ.
ಬಲವರ್ಧಿತ ಅಕ್ಕಿ ಉಪಕ್ರಮದ ಪರಿಣಾಮದ ಬಗ್ಗೆ ಒಂದು ಬಾರಿಯ ಮೌಲ್ಯಮಾಪನಕ್ಕಾಗಿ ನೀತಿ ಆಯೋಗವು ಐಸಿಎಂಆರ್, ಎನ್.ಐಎನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಇತರ ಬಾಧ್ಯಸ್ಥರೊಂದಿಗೆ ಕೆಲಸ ಮಾಡುತ್ತಿದೆ.
ಎಫ್ಎಸ್ಎಸ್ಎಐ, ತಜ್ಞರು ಮತ್ತು ಅಭಿವೃದ್ಧಿ ಪಾಲುದಾರರನ್ನು ಒಳಗೊಂಡ ಐಇಸಿ ಅಭಿಯಾನಗಳ ಮೂಲಕ ಬಲವರ್ಧಿತ ಅಕ್ಕಿಯ ಪೌಷ್ಟಿಕಾಂಶದ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಬಲವರ್ಧನೆ ಎಂದರೆ ಎಫ್ಎಸ್ಎಸ್ಎಐ ಸೂಚಿಸಿದ ಸೂಕ್ಷ್ಮ ಪೋಷಕಾಂಶಗಳನ್ನು (ಕಬ್ಬಿಣ, ಫೋಲಿಕ್ ಆಮ್ಲ, ವಿಟಮಿನ್ ಬಿ 12) ಹೊಂದಿರುವ ಬಲವರ್ಧಿತ ಅಕ್ಕಿಯ ತಿರುಳು(ಎಫ್ಆರ್.ಕೆ.) ಅನ್ನು ಸಾಮಾನ್ಯ ಅಕ್ಕಿಗೆ (ರೂಢಿಯಲ್ಲಿ ಮಿಲ್ ಮಾಡಲಾದ ಅಕ್ಕಿ) 1:100 ರ ಅನುಪಾತದಲ್ಲಿ (100 ಕೆಜಿ ರೂಢಿಯಂತೆ ಮಿಲ್ ಮಾಡಿದ ಅಕ್ಕಿಯೊಂದಿಗೆ 1 ಕೆಜಿ ಎಫ್ಆರ್ಕೆ ಮಿಶ್ರಣ) ಸೇರಿಸುವ ಪ್ರಕ್ರಿಯೆಯಾಗಿದೆ. ಬಲವರ್ಧಿತ ಅಕ್ಕಿಯು ಸುವಾಸನೆ, ರುಚಿ ಮತ್ತು ವಿನ್ಯಾಸದಲ್ಲಿ ಸಾಂಪ್ರದಾಯಿಕ ಅಕ್ಕಿಗೆ ಹೆಚ್ಚು ಕಡಿಮೆ ಹೋಲುತ್ತದೆ. ಅಕ್ಕಿಯನ್ನು ಮಿಲ್ ಮಾಡುವ ಸಮಯದಲ್ಲಿ ಈ ಪ್ರಕ್ರಿಯೆಯನ್ನು ಅಕ್ಕಿ ಗಿರಣಿಗಳಲ್ಲಿ ಮಾಡಲಾಗುತ್ತದೆ.
ಅಕ್ಕಿ ಗಿರಣಿದಾರರು, ಎಫ್.ಆರ್.ಕೆ ತಯಾರಕರು, ಕೈಗಾರಿಕೆಗಳು ಮತ್ತು ಇತರ ಬಾಧ್ಯಸ್ಥರನ್ನು ಗುರಿಯ ಅಗತ್ಯವನ್ನು ಪೂರೈಸಲು ಬಲವರ್ಧಿತ ಅಕ್ಕಿಯ ಉತ್ಪಾದನೆ ಮತ್ತು ಪೂರೈಕೆಗಾಗಿ ಬಲವರ್ಧಿತ ಅಕ್ಕಿ ಪರಿಸರ ವ್ಯವಸ್ಥೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ, ದೇಶದಲ್ಲಿ 9000 ಕ್ಕೂ ಹೆಚ್ಚು ಅಕ್ಕಿ ಗಿರಣಿಗಳಿವೆ, ಅವು ಬಲವರ್ಧಿತ ಅಕ್ಕಿಯ ಉತ್ಪಾದನೆಗಾಗಿ ಮಿಶ್ರಣ ಮೂಲಸೌಕರ್ಯಗಳನ್ನು ಸ್ಥಾಪಿಸಿವೆ ಮತ್ತು ಅವುಗಳ ಸಂಚಿತ ಮಾಸಿಕ ಉತ್ಪಾದನಾ ಸಾಮರ್ಥ್ಯವು ಸುಮಾರು 60 ಲಕ್ಷ ಮೆಟ್ರಿಕ್ ಟನ್ ಆಗಿದ್ದು, ಇದು ಕಳೆದ ವರ್ಷಕ್ಕಿಂತ 4 ಪಟ್ಟು ಹೆಚ್ಚಾಗಿದೆ.  ಕಳೆದ ವರ್ಷ 2021 ಆಗಸ್ಟ್ 15, ರವರೆಗೆ ಮಿಶ್ರಣ ಮೂಲಸೌಕರ್ಯಗಳನ್ನು ಹೊಂದಿದ್ದ ಅಕ್ಕಿ ಗಿರಣಿಗಳ ಸಂಖ್ಯೆ 2690 ಆಗಿದ್ದು, 13.67 ಲಕ್ಷ ಮೆಟ್ರಿಕ್ ಟನ್ ಸಂಚಿತ ಮಿಶ್ರಣ ಸಾಮರ್ಥ್ಯ ಹೊಂದಿದೆ.
ಅಕ್ಕಿಯ ಬಲವರ್ಧನೆಯು ಕಡಿಮೆ ಪರಿವರ್ತನೆ ಸಮಯ (ಟಿಎಟಿ) ಹೊಂದಿರುವ ಆಹಾರಗಳಲ್ಲಿ ಅನ್ನಾಂಗ ಮತ್ತು ಖನಿಜಾಂಶವನ್ನು ಹೆಚ್ಚಿಸಲು ಮತ್ತು ಪೌಷ್ಟಿಕಾಂಶದ ಸುರಕ್ಷತೆಯತ್ತ ಒಂದು ಹೆಜ್ಜೆಯಾಗಿದೆ ಮತ್ತು ದೇಶದಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡಲು ನೆರವಾಗುತ್ತದೆ. ಈ ಕಾರ್ಯತಂತ್ರವನ್ನು ವಿಶ್ವದ ಅನೇಕ ಭೌಗೋಳಿಕ ಪ್ರದೇಶಗಳಲ್ಲಿ ಜಾರಿಗೆ ತರಲಾಗಿದೆ.


*******
 



(Release ID: 1851112) Visitor Counter : 160