ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

44ನೇ ಚೆಸ್ ಒಲಿಂಪಿಯಾಡ್ ನ ಓಪನ್ ಸೆಕ್ಷನ್ ನ 9ನೇ ಸುತ್ತಿನ ಪಂದ್ಯದಲ್ಲಿ ಭಾರತ ಎ ತಂಡ ಪುಟಿದೆದ್ದು ಬ್ರೆಜಿಲ್ ಸೋಲಿಸಲು ನೆರವಾದ ಶಶಿಕಿರಣ್, ಎರಿಗೈಸಿ

Posted On: 08 AUG 2022 2:26PM by PIB Bengaluru

ತಮಿಳುನಾಡಿನ ಮಾಮಲ್ಲಪುರಂನಲ್ಲಿ ನಡೆಯುತ್ತಿರುವ 44ನೇ ಚೆಸ್ ಒಲಿಪಿಂಯಾಡ್ ನ ಓಪನ್ ಸೆಕ್ಷನ್ ನ 9ನೇ ಸುತ್ತಿನ ಭಾನುವಾರ ನಡೆದ ಪಂದ್ಯದಲ್ಲಿ ಕೃಷ್ಣನ್ ಶಶಿಕಿರಣ್ ಮತ್ತು ಅರ್ಜುನ್ ಎರಿಗೈಸಿ ಅವರ ಗೆಲುವಿನಿಂದಾಗಿ ಭಾರತ ಎ ತಂಡ ಬ್ರೆಜಿಲ್ ಅನ್ನು 3-1ರಿಂದ ಮಣಿಸುವ ಮೂಲಕ ಮತ್ತೆ ತನ್ನ ಲಯ ಕಂಡುಕೊಂಡಿತು.

ತಮಿಳುನಾಡಿನ ಮಾಮಲ್ಲಪುರಂನಲ್ಲಿ ಭಾನುವಾರ ನಡೆದ 44ನೇ ಚೆಸ್ ಒಲಿಂಪಿಯಾಡ್‌ನ 9ನೇ ಸುತ್ತಿನಲ್ಲಿ ಇಂಡಿಯಾ ಓಪನ್ ಟೀಮ್ ಎ ತಂಡದ ಕೃಷ್ಣನ್ ಶಶಿಕಿರಣ್ ಆಡುತ್ತಿರುವುದು (ಫೋಟೋ ಕೃಪೆ: ಎಫ್ ಐಡಿಇ)

ಶನಿವಾರ ಅರ್ಮೇನಿಯಾ ವಿರುದ್ಧದ ಸೋಲಿನ ನಂತರ ಪಂದ್ಯಕ್ಕೆ ಮರಳಿದ ಭಾರತ ಎ ತಂಡ, ನಿಮ್ಜೊ ಇಂಡಿಯನ್ ಗೇಮ್‌ನಲ್ಲಿ ಆಂಡ್ರೆ ಡೈಮಂಟ್ ವಿರುದ್ಧ ಶಶಿಕಿರಣ್ ಮೊದಲ ಪಾಯಿಂಟ್‌ ಗಳಿಸಿ ಮೇಲುಗೈನೊಂದಿಗೆ ಗೆಲುವಿನ ಸೂಚನೆ ನೀಡಿ ಆಟ ಆರಂಭಿಸಿದರು. 42ನೇ ಮತ್ತು 43 ನೇ ನಡೆಗಳಲ್ಲಿ ಬಿಷಪ್‌ಗಳ ಸತತ ಒಂದೆರಡು ತಪ್ಪು ನಡೆಗಳು ಶಶಿಕಿರಣ್ ಗೆ ಲಾಭವನ್ನು ಪಡೆದರು ಮತ್ತು 49ನೇ ನಡೆಗಳಲ್ಲಿ ಅದನ್ನು ಗೆಲುವನ್ನಾಗಿ ಪರಿವರ್ತಿಸಿದಾಗ ಸಿಕ್ಕ ಅವಕಾಶಗಳು ಫಲ ನೀಡಿದವು.

ತಮಿಳುನಾಡಿನ ಮಾಮಲ್ಲಪುರಂನಲ್ಲಿ ನಡೆಯುತ್ತಿರುವ 44ನೇ ಚೆಸ್ ಒಲಿಂಪಿಯಾಡ್‌ನ 6ನೇ ಸುತ್ತಿನಲ್ಲಿ ಇಂಡಿಯಾ ಓಪನ್ ಎ ಟೀಮ್ ನ ಜಿ.ಎಂ. ಪೆಂಟಾಲ ಹರಿಕೃಷ್ಣ ಆಡುತ್ತಿರುವುದು (ಫೋಟೋ ಕೃಪೆ: ಎಫ್ ಐಡಿಇ)

ಮತ್ತೊಂದೆಡೆ ಎರಿಗೈಸಿ, ಸೆವಾಗ್ ಕ್ರಿಕೋರ್ ಮೆಖಿಟೇರಿಯನ್ ವಿರುದ್ಧ ಮೇಲುಗೈ ಸಾಧಿಸಿದರು. 25 ನೇ ನಡೆಯಲ್ಲಿ ಎದುರಾಳಿಯು ಸ್ವಲ್ಪ ತಡ ಮಾಡಿದಾಗ, ಎರಿಗೈಸಿ ನಡೆ ವಿನಿಮಯದಲ್ಲಿ ಗೆದ್ದರು ಮತ್ತು ಗೆಲುವನ್ನು ತನ್ನದಾಗಿಸಿಕೊಳ್ಳಲು 63 ನಡೆ ಬೇಕಾಗಿದ್ದವು. ಉಳಿದ ಇಬ್ಬರು ಆಟಗಾರರಾದ ಪೆಂಟಾಲ ಹರಿಕೃಷ್ಣ ಮತ್ತು ವಿದಿತ್ ಗುಜರಾತಿ ತಮ್ಮ ತಮ್ಮ ಪಂದ್ಯಗಳನ್ನು ಡ್ರಾ ಮಾಡಿಕೊಂಡರು.

ಭಾನುವಾರದಂದು ಅರ್ಮೇನಿಯಾ ವಿರುದ್ಧದ ಸೋಲಿನಿಂದ ತಪ್ಪಿಸಿಕೊಂಡ ಶಶಿಕಿರಣ್ ಅವರು “ಕೆಲವೊಮ್ಮೆ ಇಂತಹ ಸಂಗತಿಗಳು ಸಂಭವಿಸುತ್ತವೆ, ಆದರೆ ನಾವು ಸದಾ ದೀರ್ಘಾವಧಿಯವರೆಗೆ ಸಾಗುವ ಮೂಲಕ ತಂಡವಾಗಿ ಅಂತಹ ತೊಂದರೆಗಳಿಂದ ಹೊರಬರಲು ಪ್ರಯತ್ನಿಸುತ್ತೇವೆ. ಇಡೀ ತಂಡವು ಒಗ್ಗಟ್ಟಿನಿಂದ ಕೂಡಿರುವುದು ನನಗೆ ಸಂತೋಷ ತಂದಿದೆ, ನಾವು ಯಾವಾಗಲೂ ಒಟ್ಟಿಗೆ ತಿನ್ನುತ್ತೇವೆ ಮತ್ತು ಅನೇಕ ವಿಷಯಗಳ ಕುರಿತು ಒಟ್ಟಿಗೆ ಚರ್ಚಿಸುತ್ತೇವೆ’’ ಎಂದರು.

ತಮಿಳುನಾಡಿನ ಮಾಮಲ್ಲಪುರಂನಲ್ಲಿ ಭಾನುವಾರ ನಡೆದ 44ನೇ ಚೆಸ್ ಒಲಿಂಪಿಯಾಡ್‌ನ 9ನೇ ಸುತ್ತಿನ ವೇಳೆ ಭಾರತ ಓಪನ್ ಟೀಮ್ ಬಿ ತಂಡದ ಗುಕೇಶ್ ಡಿ ಆಟವಾಡುತ್ತಿರುವುದು (ಫೋಟೋ ಕೃಪೆ: ಎಫ್ ಐಡಿಇ)

ತಮಿಳುನಾಡಿನ ಮಾಮಲ್ಲಪುರಂನಲ್ಲಿ ಭಾನುವಾರ ನಡೆದ 44ನೇ ಚೆಸ್ ಒಲಿಂಪಿಯಾಡ್‌ನ 9ನೇ ಸುತ್ತಿನ ಸಂದರ್ಭದಲ್ಲಿ ಭಾರತದ ಓಪನ್ ಬಿ ತಂಡದ ಸದಸ್ಯ ಆರ್, ಪ್ರಗ್ನಾನಂದ ಆಟ (ಫೋಟೋ ಕೃಪೆ: ಎಫ್ ಐಡಿಇ)

ಭಾರತ ಸಿ ತಂಡವು ಪರಾಗ್ವೆಯನ್ನು 3-1ರಿಂದ ಸೋಲಿಸಿ ಜಯಶಾಲಿಯಾಯಿತು. ಏತನ್ಮಧ್ಯೆ, ಆರ್. ಪ್ರಜ್ಞಾನಂದ ಅವರು ವಾಸಿಫ್ ದುರಾರ್ ಬೈಲಿ ಅವರನ್ನು ಸೋಲಿಸಿದರು, ಭಾರತ ಬಿ ತಂಡ ಆರನೇ ಶ್ರೇಯಾಂಕದ ಅಜೆರ್ ಬೈಜಾನ್ ಅನ್ನು 2-2 ರಿಂದ ಡ್ರಾ ಮಾಡಿಕೊಂಡರು.

ಡಿ ಗುಕೇಶ್ ಅವರು ಉತ್ತಮ ಹೋರಾಟದ ಆಟದಲ್ಲಿ ಶಖ್ರಿಯಾರ್ ಮಮೆದ್ಯರೋವ್ ವಿರುದ್ಧ ಮೊದಲ ಡ್ರಾ ಮಾಡಿಕೊಂಡು ಬಿಟ್ಟುಕೊಟ್ಟ ನಂತರ ಅವರ ಗೆಲುವಿನ ಓಟವು ಕೊನೆಯಾಯಿತು. ನಿಹಾಲ್ ಸರಿನ್ ಅವರು ರೌಫ್ ಮಮೆಡೋವ್ ಎದುರು ಡ್ರಾ ಮಾಡಿಕೊಂಡರು, ಆದರೆ ರೌನಕ್ ಸಾಧ್ವನಿ ಅವರು ನಿಜತ್ ಅಬಾಸೊವ್ ವಿರುದ್ಧ ಸೋಲುಂಡರು.

ಮತ್ತೊಂದು ಓಪನ್ ವಿಭಾಗದ ಪಂದ್ಯದಲ್ಲಿ, ಅಮೆರಿಕಾದ ಗ್ರೀಸ್ ವಿರುದ್ಧ 2.5-1.5 ಗೆಲುವು ದಾಖಲಿಸುವ ಮೂಲಕ ಭಾರತದ ವಿರುದ್ಧ ಶನಿವಾರದ ಸೋಲನ್ನು ಮರೆಸಿತು. ಪ್ರಸ್ತುತ, ಉಜ್ಬೇಕಿಸ್ತಾನ್ ಮುಕ್ತ ವಿಭಾಗದಲ್ಲಿ 16 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿರುವ ಏಕೈಕ ರಾಷ್ಟ್ರವಾದರೆ, ಭಾರತ ಬಿ ಮತ್ತು ಅರ್ಮೇನಿಯಾ ತಲಾ 15 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿವೆ.

ಮಹಿಳೆಯರ ವಿಭಾಗದಲ್ಲಿ ಭಾರತ ಬಿ ಮತ್ತು ಇಂಡಿಯಾ ಸಿ ತಂಡಗಳು ಸ್ವಿಟ್ಜರ್ ಲೆಂಡ್ ಮತ್ತು ಎಸ್ಟೋನಿಯಾವನ್ನು ಕ್ರಮವಾಗಿ 4-0 ಮತ್ತು 3-1 ಅಂತರದಿಂದ ಸೋಲಿಸಿದರೆ, ಭಾರತ ಎ ನಾಲ್ಕನೇ ಶ್ರೇಯಾಂಕದ ಪೋಲೆಂಡ್ ವಿರುದ್ಧ 1.5-2.5 ಸೋಲುಂಡಿತು.

ನಿರ್ಣಾಯಕ ಪಂದ್ಯವೊಂದರಲ್ಲಿ, ಎರಡನೇ ಶ್ರೇಯಾಂಕದ ಉಕ್ರೇನ್ ಅನ್ನು ಜಾರ್ಜಿಯಾ ವಿರುದ್ಧ 2-2 ಡ್ರಾ ಮಾಡಿಕೊಂಡು ಹಿಡಿದಿಟ್ಟುಕೊಂಡರೆ ಮತ್ತು ಭಾರತ ಎ ಮಹಿಳಾ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. ಆದರೆ ಇದೀಗ ಜಾರ್ಜಿಯಾ, ಪೋಲೆಂಡ್ ಮತ್ತು ಕಜಕಿಸ್ತಾನ್ ಎಲ್ಲವೂ ತಲಾ 15 ಅಂಕಗಳನ್ನು ಗಳಿಸಿದ ಗುಂಪಿಗೆ ಸೇರಿವೆ. ಕಜಕಸ್ತಾನ, ಬಲ್ಗೇರಿಯಾ ವಿರುದ್ಧ 3-1 ರ ಭರ್ಜರಿ ಗೆಲುವು ಸಾಧಿಸಿದೆ.

 

*****



(Release ID: 1850004) Visitor Counter : 133