ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಮೂರು ಪ್ರಮುಖ ರೈಲ್ವೆ ಯೋಜನೆಗಳನ್ನು ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್ ಶಿಫಾರಸು ಮಾಡಿದೆ
ಗೋರಖ್ ಪುರ ಕಂಟೋನ್ಮೆಂಟ್ - ವಾಲ್ಮೀಕಿನಗರ ರೈಲು ಮಾರ್ಗ ದ್ವಿಗುಣಗೊಳಿಸುವಿಕೆ, ಕತಿಹಾರ್ - ಮುಕುರಿಯಾ ಮತ್ತು ಕತಿಹಾರ್ - ಕುಮೇದ್ಪುರ ಮಾರ್ಗ ದ್ವಿಗುಣಗೊಳಿಸುವಿಕೆ, ಮತ್ತು ಪಚೋರಾ – ಜಾಮ್ ನಗರ್ ಗೇಜ್ ಪರಿವರ್ತನೆ ಮತ್ತು ಬೋಡ್ವಾಡ್ವರೆಗೆ ವಿಸ್ತರಣೆ
प्रविष्टि तिथि:
04 AUG 2022 1:59PM by PIB Bengaluru
'ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್' ನ ಸಾಂಸ್ಥಿಕ ಚೌಕಟ್ಟಿನಡಿಯಲ್ಲಿ ರಚಿಸಲಾದ ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್ 3 ಆಗಸ್ಟ್ 2022 ರಂದು 3 ಪ್ರಮುಖ ರೈಲ್ವೆ ಯೋಜನೆಗಳನ್ನು ಪರಿಶೀಲಿಸಿದೆ ಮತ್ತು ಶಿಫಾರಸು ಮಾಡಿದೆ. ಗೋರಖ್ ಪುರ ಕಂಟೋನ್ಮೆಂಟ್ - ವಾಲ್ಮೀಕಿನಗರ ರೈಲು ಮಾರ್ಗ ದ್ವಿಗುಣಗೊಳಿಸುವಿಕೆ, ಕತಿಹಾರ್ - ಮುಕುರಿಯಾ ಮತ್ತು ಕತಿಹಾರ್ - ಕುಮೇದ್ಪುರ ಮಾರ್ಗ ದ್ವಿಗುಣಗೊಳಿಸುವಿಕೆ, ಮತ್ತು ಪಚೋರಾ – ಜಾಮ್ ನಗರ್ ಗೇಜ್ ಪರಿವರ್ತನೆ ಮತ್ತು ಬೋಡ್ವಾಡ್ವರೆಗೆ ವಿಸ್ತರಣೆ ಸೇರಿವೆ. ಎಲ್ಲಾ ಮೂರು ಯೋಜನೆಗಳು ಒಳನಾಡಿನಲ್ಲಿ ಸರಕುಗಳ ವೇಗದ ಸಂಚಾರವನ್ನು ಖಾತ್ರಿಪಡಿಸುವ ದೃಷ್ಟಿಯಿಂದ ಬಹಳ ಮುಖ್ಯವಾಗಿದ್ದು, ಇದು ಸಾಗಾಣಿಕೆಯ ದಕ್ಷತೆಯನ್ನು ವೃದ್ಧಿಗೊಳಿಸುತ್ತದೆ ಮತ್ತು ವೆಚ್ಚದಲ್ಲಿ ಕಡಿತವನ್ನು ಮಾಡುತ್ತದೆ.
3000 ಮಿಲಿಯನ್ ಮೆಟ್ರಿಕ್ ಟನ್ ಸರಕು ಸಾಗಣೆಯ ಗುರಿಯನ್ನು ಸಾಧಿಸಲು ರೈಲ್ವೆ ಮಾರ್ಗಗಳ 'ಹೆಚ್ಚಿನ ಸಾಂದ್ರತೆಯ ಜಾಲ'ವನ್ನು ಸಚಿವಾಲಯವು ಗುರುತಿಸಿದೆ. ಆ ಕಾರ್ಯಾಚರಣೆಯ ಭಾಗವಾಗಿ, 3 ನಿರ್ಣಾಯಕ ಪ್ರಮುಖ ಯೋಜನೆಗಳನ್ನು ಈ ಕೆಳಗಿನಂತೆ ಗುರುತಿಸಲಾಗಿದೆ:
I. ಗೋರಖ್ ಪುರ ಕಂಟೋನ್ಮೆಂಟ್ - ವಾಲ್ಮೀಕಿನಗರ ರೈಲು ಮಾರ್ಗವನ್ನು ದ್ವಿಗುಣಗೊಳಿಸುವುದು:
ಸರಕು ಸಾಗಣೆಯನ್ನು ಖಚಿತಪಡಿಸಿಕೊಳ್ಳಲು, ವಿಶೇಷವಾಗಿ ಪಶ್ಚಿಮ ಭಾರತದಿಂದ ಈಶಾನ್ಯ ರಾಜ್ಯಗಳಿಗೆ ಆಹಾರ ಧಾನ್ಯದ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು, ಗೋರಖ್‌ಪುರ ಕಂಟೋನ್ಮೆಂಟ್ - ವಾಲ್ಮೀಕಿನಗರ (95 ಕಿ.ಮೀ.) ಸರಕು ಸಾಗಣೆಯ ಮೇಲೆ ಪರಿಣಾಮ ಬೀರುವ ಏಕೈಕ ರೈಲು ಮಾರ್ಗವನ್ನು ಹೊಂದಿರುವ ಪ್ರಮುಖ ಮಾರ್ಗವಾಗಿದೆ. ವಾಲ್ಮೀಕಿನಗರದಿಂದ ಮುಜಾಫರ್‌ಪುರದವರೆಗೆ ದ್ವಿಗುಣಗೊಳಿಸುವ ಕೆಲಸ ಈಗಾಗಲೇ ನಡೆಯುತ್ತಿದೆ. ರೂ. 1120 ಕೋಟಿಯ ಈ ಉದ್ದೇಶಿತ ದ್ವಿಗುಣಗೊಳಿಸುವ ಯೋಜನೆಯು ಸಾಗಾಣಿಕೆಯ ದಕ್ಷತೆಯನ್ನು ಗಣನೀಯವಾಗಿ ಸುಧಾರಿಸುವ ನಿರೀಕ್ಷೆಯಿದೆ.
II. ಕತಿಹಾರ್ - ಮುಕುರಿಯಾ ಮತ್ತು ಕತಿಹಾರ್ - ಕುಮೇದ್ಪುರ್ ಡಬ್ಲಿಂಗ್
ಕತಿಹಾರ್ - ಮುಕುರಿಯಾ ಮತ್ತು ಕತಿಹಾರ್ - ಕುಮೇದ್ಪುರ್ ಅತ್ಯಂತ ಕಾರ್ಯನಿರತ ವಿಭಾಗಗಳಾಗಿವೆ. ಪ್ರಸ್ತುತ ಇದು ಏಕ ಮಾರ್ಗವಾಗಿದೆ ಮತ್ತು ಇದು ರಾಜಧಾನಿ ರೈಲು ಮಾರ್ಗವಾಗಿದೆ. ಈಶಾನ್ಯ ಮತ್ತು ಹೌರಾವನ್ನು ಸಂಪರ್ಕಿಸಲು ಇದು ಪ್ರಮುಖ ಲಿಂಕ್ ಆಗಿದೆ. ಈ ವಿಭಾಗಗಳ ದ್ವಿಗುಣಗೊಳಿಸುವಿಕೆಯು ಕೋಲ್ಕತ್ತಾ ಬಂದರಿನಿಂದ ವಿರಾಟ್ ನಗರಕ್ಕೆ ಸರಕು ಸಾಗಣೆಗೆ ಗಣನೀಯವಾಗಿ ಸಹಾಯ ಮಾಡುತ್ತದೆ. ಈ ಯೋಜನೆಯ ವೆಚ್ಚ ರೂ.942 ಕೋಟಿಯಾಗಿದೆ.
III. ಪಚೋರಾ - ಜಾಮ್ನರ್ ಗೇಜ್ ಪರಿವರ್ತನೆ ಮತ್ತು ಬೋಡ್ವಾಡ್ ವರೆಗೆ ವಿಸ್ತರಣೆ
ಈ ಯೋಜನೆ ಮಹಾರಾಷ್ಟ್ರ ರಾಜ್ಯದಲ್ಲಿದೆ. ಪಚೋರಾದಿಂದ ಜಾಮ್ನರ್ ಗೇಜ್ ಪರಿವರ್ತನೆ ಮತ್ತು ಬೋಡ್ವಾಡ್ ರೈಲ್ವೆ ಮಾರ್ಗದ ವಿಸ್ತರಣೆ. 84 ಕಿ.ಮೀ ಗಳ ಈ ಯೋಜನೆಯ ನಿರೀಕ್ಷಿತ ವೆಚ್ಚ ರೂ.955 ಕೋಟಿ ಆಗಿದೆ. ಈ ಯೋಜನೆಯು ಜಲಗಾಂವ್ ಮತ್ತು ಭೂಸಾವಲ್‌ಗೆ ಬೈ ಪಾಸ್ ಡಬಲ್ ಲೈನ್ ರೈಲ್ವೆ ಸಂಪರ್ಕವನ್ನು ಒದಗಿಸುತ್ತದೆ. ಇದು ಜೆಎನ್‌ಪಿಟಿಯಿಂದ ನಾಗ್ಪುರ ಮತ್ತು ದೇಶದ ಪೂರ್ವ ಪ್ರದೇಶಕ್ಕೆ ವೇಗವಾಗಿ ಸರಕು ಸಾಗಣೆಯ ಸೌಲಭ್ಯವನ್ನು ಒದಗಿಸುತ್ತದೆ.
ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್ ಎಲ್ಲಾ ಮೂರು ಯೋಜನೆಗಳ ಪ್ರಸ್ತಾವನೆಗಳನ್ನು ಶಿಫಾರಸು ಮಾಡಿದೆ. ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್‌ನ ಸದಸ್ಯರು ಸಂಯೋಜಿತ ಯೋಜನೆ ಮಾಡಿದ ಅನುಷ್ಠಾನದ ಪರಿಕಲ್ಪನೆಯಿಂದ ಕೆಲವು ಅಂಶಗಳನ್ನು ಮತ್ತಷ್ಟು ಸೂಚಿಸಿದ್ದಾರೆ. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಗಳು ತ್ವರಿತ ಅನುಮತಿಗಳಭರವಸೆ ನೀಡಿದೆ. ಈ ಎಲ್ಲಾ ಯೋಜನೆಗಳನ್ನು ಪಿಎಮ್ ಗತಿಶಕ್ತಿ ಎನ್‌ಎಮ್‌ಪಿ ಯಲ್ಲಿ ಯೋಜಿಸಲಾಗಿದೆ ಪಿಎಮ್ ಗತಿಶಕ್ತಿ ಎನ್‌ಎಮ್‌ಪಿ ಮೂಲಕ ಮುಂದಿನ ಐದು ವರ್ಷಗಳಲ್ಲಿ ಅಂದಾಜು ಮಾಡಿದ ವೆಚ್ಚದೊಳಗೆ ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ.
ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್ ರೈಲ್ವೇ, ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಇಂಧನ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, , ದೂರ ಸಂಪರ್ಕ, ನಾಗರಿಕ ವಿಮಾನಯಾನ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯಗಳ ಮುಖ್ಯಸ್ಥರು ಸೇರಿದಂತೆ ಮೂಲಸೌಕರ್ಯ ಸಚಿವಾಲಯಗಳ ಯೋಜನಾ ವಿಭಾಗಗಳ ಮುಖ್ಯಸ್ಥರನ್ನು ನೀತಿ ಆಯೋಗ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವಿಶೇಷ ಪ್ರತಿನಿಧಿಗಳನ್ನು ಹೊಂದಿದೆ. ಲಾಜಿಸ್ಟಿಕ್ಸ್ ವಿಭಾಗ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯು ಪ್ರಧಾನ ಮಂತ್ರಿ ಗತಿಶಕ್ತಿಯ ಆಡಳಿತ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ.
*******
(रिलीज़ आईडी: 1848498)
आगंतुक पटल : 220