ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಿನ್ನೆ ಮೀರಾಬಾಯಿ ಚಾನು ಅವರು ಭಾರತಕ್ಕೆ ಮೊದಲ ಚಿನ್ನವನ್ನು ಗೆದ್ದ ನಂತರ, ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಜೆರೆಮಿ ಅವರು ತಂದಿದ್ದಾರೆ

Posted On: 31 JUL 2022 5:36PM by PIB Bengaluru

ಪ್ರಮುಖಾಂಶಗಳು:

• ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೆರೆಮಿ ಲಾಲ್ರಿನ್ನುಂಗಾ ಅವರ ಅಸಾಧಾರಣ ಪ್ರದರ್ಶನಕ್ಕಾಗಿ ಅಭಿನಂದಿಸಿದ್ದಾರೆ

• ಜೆರೆಮಿಯವರನ್ನು ಅಭಿನಂದಿಸಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್, ಭಾರತವು ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.

ಭಾನುವಾರ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ 67 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಮಿಜೋರಾಂನ 19 ವರ್ಷದ ಜೆರೆಮಿ ಲಾಲ್ರಿನ್ನುಂಗಾ ಭಾರತಕ್ಕೆ ಎರಡನೇ ಚಿನ್ನದ ಪದಕ ಗೆದ್ದಿದ್ದಾರೆ. ಜೆರೆಮಿ ಒಟ್ಟು 300 ಕೆಜಿ (ಸ್ನ್ಯಾಚ್‌ನಲ್ಲಿ 140 ಕೆಜಿ, ಕ್ಲೀನ್ & ಜರ್ಕ್‌ ನಲ್ಲಿ 160 ಕೆಜಿ) ಭಾರ ಎತ್ತಿದರು, ಇದು ಕಾಮನ್‌ವೆಲ್ತ್ ಕ್ರೀಡಾಕೂಟದ ದಾಖಲೆಯಾಗಿದೆ. ಸ್ಪರ್ಧೆಯಲ್ಲಿ ಭಾರತಕ್ಕೆ ಇದು ಐದನೇ ಮತ್ತು ಎರಡನೇ ಚಿನ್ನದ ಪದಕವಾಗಿದೆ. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ದೇಶದ ಮೂಲೆ ಮೂಲೆಗಳಿಂದ ಭಾರತೀಯರು ಜೆರೆಮಿ ಅವರ ಸಾಧನೆಗಾಗಿ ಅಭಿನಂದಿಸಿದ್ದಾರೆ.

ಇದಕ್ಕೂ ಮೊದಲು, ಮೀರಾಬಾಯಿ ಚಾನು 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ 49 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದರು. ಪುರುಷರ 55 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಸಂಕೇತ್ ಸರ್ಗರ್ ಬೆಳ್ಳಿ ಪದಕ ಜಯಿಸಿದರು. ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಬಿಂದ್ಯಾರಾಣಿ ದೇವಿ ಬೆಳ್ಳಿ ಪದಕ ಮತ್ತು ಪುರುಷರ 61 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಗುರುರಾಜ ಪೂಜಾರಿ ಕಂಚಿನ ಪದಕ ಗೆದ್ದುಕೊಂಡರು.

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಜೆರೆಮಿ ಸಾಧನೆಗೆ ಅಭಿನಂದನೆ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ಕಾಮನ್‌ವೆಲ್ತ್ ಕ್ರೀಡಾಕೂಟದ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಜೆರೆಮಿ ಲಾಲ್ರಿನ್ನುಂಗಾ ಅವರಿಗೆ ಅಭಿನಂದನೆಗಳು. ಸ್ಪರ್ಧೆಯ ಸಮಯದಲ್ಲಿ ಗಾಯದ ಹೊರತಾಗಿಯೂ ನಿಮ್ಮ ಆತ್ಮ ವಿಶ್ವಾಸವು ಇತಿಹಾಸವನ್ನು ಸೃಷ್ಟಿಸಲು ಮತ್ತು ಲಕ್ಷಾಂತರ ಜನರನ್ನು ಪ್ರೇರೇಪಿಸಲು ಅನುವು ಮಾಡಿಕೊಟ್ಟಿತು. ನೀವು ಪದಕ ಪ್ರದಾನ ವೇದಿಕೆಯಲ್ಲಿ ನಿಂತಿದ್ದು ಭಾರತೀಯರಲ್ಲಿ ಹೆಮ್ಮೆಯನ್ನು ತಂದಿದೆ. ಇಂತಹ ಯಶಸ್ಸಿನ ಕ್ಷಣಗಳು ನಿಮಗೆ ಮತ್ತಷ್ಟು ಸಿಗಲಿ ಎಂದು ಹಾರೈಸುತ್ತೇನೆ.” ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೇ ಚಿನ್ನದ ಪದಕ ಗೆದ್ದು ಅಪೂರ್ವ ಕಾಮನ್‌ವೆಲ್ತ್ ಗೇಮ್ಸ್ ದಾಖಲೆಯನ್ನು ನಿರ್ಮಿಸಿದ್ದಕ್ಕಾಗಿ ಜೆರೆಮಿ ಲಾಲ್ರಿನ್ನುಂಗಾ ಅವರನ್ನು ಅಭಿನಂದಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿಯವರು, “ನಮ್ಮ ಯುವ ಶಕ್ತಿಯು ಇತಿಹಾಸವನ್ನು ಸೃಷ್ಟಿಸುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಜೆರೆಮಿ ದೇಶಕ್ಕೆ ಅಪಾರ ಹೆಮ್ಮೆ ಮತ್ತು ಕೀರ್ತಿ ತಂದಿದ್ದಾರೆ.” ಎಂದು ಹೇಳಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ಪ್ರಧಾನಿಯವರು ಶುಭ ಹಾರೈಸಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಕ್ರೀಡಾಕೂಟ 2022 ರಲ್ಲಿ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಅವರು ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಅಭಿನಂದಿಸಿದರು. ಈ ಕುರಿತು ಅವರು ಟ್ವೀಟ್‌ ಮಾಡಿ, "ಮೀರಾಬಾಯಿ ಚಾನು ತಮ್ಮ ಅಸಾಧಾರಣ ಸಾಧನೆಯಿಂದ ಭಾರತವನ್ನು ಮತ್ತೊಮ್ಮೆ ಹೆಮ್ಮೆಪಡುವಂತೆ ಮಾಡಿದ್ದಾರೆ! ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಹೊಸ ಕಾಮನ್ವೆಲ್ತ್ ದಾಖಲೆಯನ್ನು ಸ್ಥಾಪಿಸಿದ್ದಕ್ಕಾಗಿ ಪ್ರತಿಯೊಬ್ಬ ಭಾರತೀಯನೂ ಸಂತೋಷಪಡುತ್ತಾರೆ. ಆಕೆಯ ಯಶಸ್ಸು ಹಲವಾರು ಭಾರತೀಯರಿಗೆ, ವಿಶೇಷವಾಗಿ ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ." ಎಂದು ಹೇಳಿದ್ದಾರೆ.

ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವೇಟ್ ಲಿಫ್ಟಿಂಗ್ 67 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಜೆರೆಮಿ ಲಾಲ್ರಿನ್ನುಂಗಾ ಅವರನ್ನು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅಭಿನಂದಿಸಿದ್ದಾರೆ. ಶ್ರೀ ಠಾಕೂರ್ ಅವರು ಟ್ವೀಟ್ ಈ ಕುರಿತು ಮಾಡಿದ್ದಾರೆ, " ಕಾಮನ್ವೆಲ್ತ್ ಕ್ರೀಡಾಕೂಟ 2022 ರಲ್ಲಿ ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಜೆರೆಮಿಯವರ ಚಿನ್ನದ ಸಾಧನೆಯು ಖೇಲೋ ಇಂಡಿಯಾದಿಂದ ಟಾಪ್ಸ್ ಕೋರ್ ಗ್ರೂಪ್‌ ವರೆಗೆ ಒಬ್ಬ ಕ್ರೀಡಾಪಟುವಿನ ಬೆಳವಣಿಗೆಗೆ ಪರಿಪೂರ್ಣ ಉದಾಹರಣೆಯಾಗಿದೆ." ಎಂದು ಹೇಳಿದ್ದಾರೆ. ಜೆರೆಮಿ ಕ್ರೀಡಾಕೂಟ ದಾಖಲೆಯನ್ನೂ ಮುರಿದಿರುವ ಜೆರೆಮಿಯವರ ಬಗ್ಗೆ ಭಾರತ ಹೆಮ್ಮೆಪಡುತ್ತದೆ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ಶ್ರೀ ಠಾಕೂರ್ ಅವರು ಮೀರಾಬಾಯಿ ಚಾನು ಅವರನ್ನು ಚಿನ್ನದ ಸಾಧನೆಗಾಗಿ ಅಭಿನಂದಿಸಿದರು ಮತ್ತು ಈ ಬಗ್ಗೆ ಟ್ವೀಟ್ ಮಾಡಿದರು. “ಮೀರಾಬಾಯಿ ಚಾನು ಅವರಿಂದ ನಿರೀಕ್ಷಿಸಿದ್ದ ಚಿನ್ನ ಬಂದಿದೆ. ಮಹಿಳೆಯರ 49 ಕೆಜಿ ಸ್ನ್ಯಾಚ್, ಕ್ಲೀನ್ ಮತ್ತು ಜರ್ಕ್ ಹಾಗು ಒಟ್ಟು ಲಿಫ್ಟ್‌ನಲ್ಲಿ ಹೊಸ ಗೇಮ್ಸ್ ದಾಖಲೆಯನ್ನು ಅವರು ಸೃಷ್ಟಿಸಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟ 2022 ರಲ್ಲಿ ಅದ್ಭುತ ಪ್ರದರ್ಶನದೊಂದಿಗೆ ನೀವು ಭಾರತವನ್ನು ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಇರಿಸಿದ್ದೀರಿ. #Cheer4India" ಎಂದು ಅವರು ಟ್ವೀಟ್‌ ನಲ್ಲಿ ಹೇಳಿದ್ದಾರೆ.

“#CommonwealthGames ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಜೆರೆಮಿ ಲಾಲ್ರಿನ್ನುಂಗಾ ಅವರಿಗೆ ಅಭಿನಂದನೆಗಳು. ಸ್ಪರ್ಧೆಯ ಸಮಯದಲ್ಲಿ ಗಾಯದ ಹೊರತಾಗಿಯೂ ನಿಮ್ಮ ಆತ್ಮ ವಿಶ್ವಾಸವು ಇತಿಹಾಸವನ್ನು ಸೃಷ್ಟಿಸಲು ಮತ್ತು ಲಕ್ಷಾಂತರ ಜನರನ್ನು ಪ್ರೇರೇಪಿಸಲು ಅನುವು ಮಾಡಿಕೊಟ್ಟಿತು. ನೀವು ಪದಕ ಪ್ರದಾನ ವೇದಿಕೆಯಲ್ಲಿ ನಿಂತಿದ್ದು ಭಾರತೀಯರಲ್ಲಿ ಹೆಮ್ಮೆಯನ್ನು ತಂದಿದೆ. ಇಂತಹ ಯಶಸ್ಸಿನ ಕ್ಷಣಗಳು ನಿಮಗೆ ಮನ್ನಷ್ಟು ಸಿಗಲಿ ಎಂದು ಹಾರೈಸುತ್ತೇನೆ.”

- ಭಾರತದ ರಾಷ್ಟ್ರಪತಿ (@rashtrapatibhvn) ಜುಲೈ 31, 2022

“ನಮ್ಮ ಯುವ ಶಕ್ತಿಯು ಇತಿಹಾಸವನ್ನು ಸೃಷ್ಟಿಸುತ್ತಿದೆ. @raltejeremy ಅವರಿಗೆ ಅಭಿನಂದನೆಗಳು. ಅವರು ತಮ್ಮ ಮೊದಲ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನವನ್ನು ಗೆದ್ದಿದ್ದಾರೆ ಮತ್ತು ಕ್ರೀಡಾಕೂಟ ದಾಖಲೆಯನ್ನು ಸಹ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಜೆರೆಮಿ ದೇಶಕ್ಕೆ ಅಪಾರ ಹೆಮ್ಮೆ ಮತ್ತು ಕೀರ್ತಿ ತಂದಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು.”

 

 

— ನರೇಂದ್ರ ಮೋದಿ (@narendramodi) ಜುಲೈ 31, 2022

#CWG2022 ರಲ್ಲಿ ಪುರುಷರ 67kg ವೇಟ್‌ಲಿಫ್ಟಿಂಗ್‌ನಲ್ಲಿ @raltejeremy ಯವರ ಚಿನ್ನದ ಸಾಧನೆಯು ಖೇಲೋ ಇಂಡಿಯಾದಿಂದ ಟಾಪ್ಸ್ ಕೋರ್ ಗ್ರೂಪ್‌ ವರೆಗೆ ಒಬ್ಬ ಕ್ರೀಡಾಪಟುವಿನ ಬೆಳವಣಿಗೆಗೆ ಪರಿಪೂರ್ಣ ಉದಾಹರಣೆಯಾಗಿದೆ. ಕ್ರೀಡಾಕೂಟದ ದಾಖಲೆಯನ್ನೂ ನೀವು ಮುರಿದಿದ್ದೀರಿ. ಭಾರತ ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ.#Cheer4India”

 

— ಅನುರಾಗ್ ಠಾಕೂರ್ (@ianuragthakur) ಜುಲೈ 31, 2022

“@mirabai_chanu ಅವರಿಂದ ಬಹುನಿರೀಕ್ಷಿತ ಚಿನ್ನದ ಪದಕ ಬಂದಿದೆ. ಮಹಿಳೆಯರ 49 ಕೆಜಿ ಸ್ನ್ಯಾಚ್, ಕ್ಲೀನ್ ಮತ್ತು ಜರ್ಕ್ ಮತ್ತು ಒಟ್ಟು ಲಿಫ್ಟ್‌ನಲ್ಲಿ ಹೊಸ ಗೇಮ್ಸ್ ದಾಖಲೆಯನ್ನು ಅವರು ಸೃಷ್ಟಿಸಿದ್ದಾರೆ. #CWG2022 ದಲ್ಲಿ ಅದ್ಭುತ ಪ್ರದರ್ಶನದೊಂದಿಗೆ ನೀವು ಭಾರತವನ್ನು ಮತ್ತೊಮ್ಮೆ ಅಗ್ರಸ್ಥಾನದಲ್ಲಿ ಇರಿಸಿದ್ದೀರಿ. #Cheer4India"

— ಅನುರಾಗ್ ಠಾಕೂರ್ (@ianuragthakur) ಜುಲೈ 30, 2022.

 

Click here for achievements of Jeremy Lalrinnunga

 

********

 

 

 

 



(Release ID: 1846798) Visitor Counter : 237