ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಫಿಟ್ ಇಂಡಿಯಾ ಕ್ವಿಜ್ ಇದೀಗ ರಾಷ್ಟ್ರೀಯ ಸುತ್ತಿಗೆ ಪ್ರವೇಶ
ದೇಶದ 36 ಶಾಲೆಗಳು ಶ್ರೇಷ್ಠ ಗೌರವ ಮತ್ತು ಭಾರಿ ನಗದು ಬಹುಮಾನ ಪಡೆಯುವತ್ತ
ರಾಷ್ಟ್ರೀಯ ಸುತ್ತಿನ ಮಹಾರಾಷ್ಟ್ರವನ್ನು ಪ್ರತಿನಿಧಿಸಲಿರುವ ಮುಂಬೈನ ಪಿ.ಜಿ. ಗರೋಡಿಯಾ ಶಾಲೆಯ ತನಯ್ ಗೌತಮ್ ಸೇಥ್ ಮತ್ತು ಆಕಾಶ್ ವಿಶ್ವನಾಥ್
ಮುಂಬೈನಲ್ಲಿ ಫಿಟ್ ಇಂಡಿಯಾ ಕ್ವಿಜ್ ನ ರಾಜ್ಯಮಟ್ಟದ ವಿಜೇತರನ್ನು ಸನ್ಮಾನಿಸಿದ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್
Posted On:
22 JUL 2022 3:00PM by PIB Bengaluru
ಫಿಟ್ ಇಂಡಿಯಾ ಕ್ವಿಜ್ 2021 ರ ರಾಷ್ಟ್ರೀಯ ಸುತ್ತು ಆರಂಭವಾಗಿದೆ. 36 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಂದ ರಾಜ್ಯ ಮಟ್ಟದ ವಿಜೇತರು ಶ್ರೇಷ್ಠ ಗೌರವ ಮತ್ತು ಭಾರಿ ನಗದು ಬಹುಮಾನಕ್ಕಾಗಿ ಸ್ಪರ್ಧೆ ಎದುರಿಸುತ್ತಿದ್ದಾರೆ.
ಫಿಟ್ ಇಂಡಿಯಾ ರಸಪ್ರಶ್ನೆ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾಗವಹಿಸಲು 72 ವಿದ್ಯಾರ್ಥಿ ಸ್ಪರ್ಧಿಗಳು ತಮ್ಮ ಶಿಕ್ಷಕರೊಂದಿಗೆ ಇದೀಗ ಮುಂಬೈನಲ್ಲಿದ್ದಾರೆ. ರಾಷ್ಟ್ರೀಯ ಸುತ್ತುಗಳನ್ನು ಸ್ಟಾರ್ ಸ್ಪೋರ್ಟ್ಸ್ ಮತ್ತು ನ್ಯಾಷನಲ್ ಟೆಲಿವಿಷನ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಸಾಮಾಜಿಕ ಮಾಧ್ಯಮ ಚಾನಲ್‌ಗಳಲ್ಲಿ ವೆಬ್‌ಕಾಸ್ಟ್ ಮಾಡಲಾಗುತ್ತದೆ.
ಮಹಾರಾಷ್ಟ್ರದ ಮುಂಬೈನ ಪಿ.ಜಿ.ಗರೋಡಿಯಾ ಶಾಲೆ (ಐಸಿಎಸ್‌ಇ)ಯಿಂದ ತನಯ್ ಗೌತಮ್ ಸೇಥ್ ಮತ್ತು ಆಕಾಶ್ ವಿಶ್ವನಾಥ್ ರಾಷ್ಟ್ರೀಯ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. (ಇತರ ರಾಜ್ಯಗಳ ಸ್ಪರ್ಧಿಗಳ ಪಟ್ಟಿಯನ್ನು ಲಗತ್ತಿಸಲಾಗಿದೆ)
ಫಿಟ್ ಇಂಡಿಯಾ ಕ್ವಿಜ್ 2021ರ ರಾಷ್ಟ್ರೀಯ ಸುತ್ತಿನಲ್ಲಿ ವಿಜೇತ ಶಾಲೆಯು 25 ಲಕ್ಷ ರೂ. ನಗದು ಬಹುಮಾನವನ್ನು ಮತ್ತು ವಿಜೇತ ವಿದ್ಯಾರ್ಥಿಗಳ ತಂಡಕ್ಕೆ 2.5 ಲಕ್ಷ ರೂ. (ತಲಾ 1.25 ಲಕ್ಷ ರೂ.) ನಗದು ಬಹುಮಾನ ನೀಡಲಾಗುವುದು.
ಮೊದಲ ರನ್ನರ್ ಅಪ್ ಗೆ 15 ಲಕ್ಷ ರೂ. (ಶಾಲೆಗೆ) ಮತ್ತು 1.5 ಲಕ್ಷ ರೂಪಾಯಿಗಳು (ಪ್ರತಿ ವಿದ್ಯಾರ್ಥಿಗೆ 75,000 ರೂ.) ಮತ್ತು 2ನೇ ರನ್ನರ್ ಅಪ್ ಗೆ 10 ಲಕ್ಷ ರೂಪಾಯಿಗಳು (ಶಾಲೆಗೆ) ಮತ್ತು 1 ಲಕ್ಷ ರೂ. (ಪ್ರತಿ ವಿದ್ಯಾರ್ಥಿಗೆ ರೂ. 50,000) ನೀಡಲಾಗುವುದು.
ರಾಷ್ಟ್ರೀಯ ಸುತ್ತು ಕ್ವಾರ್ಟರ್-ಫೈನಲ್ಸ್, ಸೆಮಿ-ಫೈನಲ್ಸ್ ಮತ್ತು ಫೈನಲ್ ಈ ಕೆಳಗಿನಂತೆ ಒಳಗೊಂಡಿರುತ್ತದೆ.
ಕ್ವಾರ್ಟರ್ ಫೈನಲ್
• 36 ತಂಡಗಳನ್ನು ತಲಾ 3 ತಂಡಗಳಂತೆ 12 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. 3 ತಂಡಗಳು ಪರಸ್ಪರ ಸ್ಪರ್ಧಿಸಲಿವೆ ಮತ್ತು ಪ್ರತಿ ಗುಂಪಿನಿಂದ ಅಗ್ರ ತಂಡ (ಒಟ್ಟು 12 ತಂಡಗಳು) ಸೆಮಿಫೈನಲ್ ಸುತ್ತಿಗೆ ತೆರಳುತ್ತವೆ.
• ಉಳಿದ 24 ತಂಡಗಳಿಗೆ, 4 ಅತ್ಯುತ್ತಮ ರನ್ನರ್-ಅಪ್‌ಗಳು ಸಹ ಸೆಮಿ ಫೈನಲ್‌ಗೆ ಹೋಗಲಿದೆ.
• ಆದ್ದರಿಂದ ಒಟ್ಟು 16 ತಂಡಗಳು ಸೆಮಿ-ಫೈನಲ್‌ಗೆ ಅರ್ಹತೆ ಪಡೆಯುತ್ತವೆ.
ಸೆಮಿಫೈನಲ್
- ಸೆಮಿಫೈನಲ್‌ಗೆ ಪ್ರವೇಶಿಸುವ 16 ತಂಡಗಳನ್ನು ತಲಾ 4 ತಂಡಗಳ 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ವಿಜೇತರು ರಾಷ್ಟ್ರೀಯ ಅಂತಿಮ ಸುತ್ತಿಗೆ ತೆರಳುತ್ತಾರೆ, ಇದನ್ನು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.ಫೈನಲ್
- ಫಿಟ್ ಇಂಡಿಯಾ ಕ್ವಿಜ್‌ನಲ್ಲಿ ಭಾರತದ ನಂ 1 ಶಾಲೆಯ ಅಗ್ರ ಸ್ಥಾನವನ್ನು ಪಡೆಯಲು 4 ತಂಡಗಳು ಸ್ಪರ್ಧಿಸಲಿವೆ.
ರಾಜ್ಯ ಸುತ್ತಿನ ಚಾಂಪಿಯನ್ ಗಳು
- ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಮುಂಬೈನಲ್ಲಿ ನಿನ್ನೆ ಸಂಜೆ ರಾಜ್ಯ ಸುತ್ತಿನಲ್ಲಿ ವಿಜೇತ 36 ಶಾಲೆಗಳ 72 ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಈ ರಾಜ್ಯ ಮಟ್ಟದ ವಿಜೇತರಿಗೆ 99 ಲಕ್ಷ ರೂ. ನಗದು ಬಹುಮಾನ ನೀಡಲಾಯಿತು.
- 2022ರ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ನಡೆದ ರಾಜ್ಯ ಸುತ್ತಿನ ಸ್ಪರ್ಧೆಗಳಲ್ಲಿ 360 ಶಾಲೆಗಳು ಪಾಲ್ಗೊಂಡಿದ್ದವು. ರಾಜ್ಯ ಸುತ್ತಿನ 36 ತಂಡಗಳು (ಪ್ರತಿ ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳು) ಮತ್ತು ಅವರ ಶಾಲಾ ಪ್ರತಿನಿಧಿಗಳಿಗೆ ಬಹುಮಾನದ ಹಣವನ್ನು ನೀಡಲಾಯಿತು, ಜೊತೆಗೆ ಶಾಲೆಗೆ 2,50,000/- ಲಕ್ಷ ರೂ. ಮತ್ತು ಇಬ್ಬರು ವಿದ್ಯಾರ್ಥಿಗಳಿಗೆ ತಲಾ 12,500/- ರೂ. ನೀಡಲಾಯಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, “ಫಿಟ್ ಇಂಡಿಯಾ ರಸಪ್ರಶ್ನೆಯು ಫಿಟ್ ಇಂಡಿಯಾ ಅಭಿಯಾನವನ್ನು ಉತ್ತೇಜಿಸುತ್ತದೆ, ಕ್ರೀಡೆ ಮತ್ತು ದೈಹಿಕ ಕ್ಷಮತೆ ಬಗ್ಗೆ ಅರಿವು ಮೂಡಿಸುತ್ತದೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕನಸಿನಂತೆ ಆರೋಗ್ಯಕರ ಮತ್ತು ಸದೃಢ ಭಾರತದ ನಿರ್ಮಾಣಕ್ಕೆ ಕಾರಣವಾಗುತ್ತದೆ’’ ಎಂದು ಹೇಳಿದರು. “ನಿಮ್ಮಲ್ಲಿ ಪ್ರತಿಯೊಬ್ಬರೂ ಈಗ ಕ್ರೀಡೆ ಮತ್ತು ದೈಹಿಕ ಕ್ಷಮತೆಯ ರಾಯಭಾರಿಯಾಗಿದ್ದೀರಿ’’ ಎಂದು ಹೇಳಿದ ಅವರು ವಿದ್ಯಾರ್ಥಿಗಳು ಫಿಟ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್‌ನಲ್ಲಿಯೂ ಪ್ರಚಾರ ಮಾಡಬೇಕು ಎಂದು ಹೇಳಿದರು.
ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಮುಂಬೈನ ಪಿಜಿ ಗರೋಡಿಯಾ ಐಸಿಎಸ್‌ಇ ಶಾಲೆಯ ವಿದ್ಯಾರ್ಥಿಗಳಾದ ತನಯ್ ಗೌತಮ್ ಸೇಥ್ ಮತ್ತು ಆಕಾಶ್ ವಿಶ್ವನಾಥ್ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥರಾದ ವಿನೋದ್ ಪಾಟೀಲ್ ಅವರನ್ನು ಸನ್ಮಾನಿಸಿದರು.
ಫಿಟ್ ಇಂಡಿಯಾ ಕ್ವಿಜ್ ಕುರಿತು
ಭಾರತದ ಶ್ರೀಮಂತ ಕ್ರೀಡಾ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಾರಂಭಿಸಲಾದ ಫಿಟ್ ಇಂಡಿಯಾ ಕ್ವಿಜ್ ನ ಪ್ರಾಥಮಿಕ ಸುತ್ತಿನಲ್ಲಿ 36,299 ವಿದ್ಯಾರ್ಥಿಗಳು ಭಾಗವಹಿಸಿದ್ದರು, ಅಲ್ಲಿ 13,500 ಶಾಲೆಗಳು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಎಇಎ) ಆಯೋಜಿಸಿದ ಆನ್‌ಲೈನ್ ವೇದಿಕೆಯಲ್ಲಿ ಸ್ಪರ್ಧಿಸಿದವು.
ಆ ಪೈಕಿ 360 ಆಯ್ದ ಶಾಲೆಗಳು ರಾಜ್ಯ ಸುತ್ತಿನಲ್ಲಿ ಸ್ಪರ್ಧಿಸಿದ್ದವು. ರಾಜ್ಯ ಮಟ್ಟದ ಕ್ವಾರ್ಟರ್-ಫೈನಲ್ ಮತ್ತು ಸೆಮಿ-ಫೈನಲ್ ಸುತ್ತುಗಳ ಸರಣಿಯ ನಂತರ, 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಅಂತಿಮ ಸ್ಪರ್ಧಾಳುಗಳನ್ನು ರಾಷ್ಟ್ರೀಯ ಫೈನಲ್‌ನಲ್ಲಿ ಭಾಗವಹಿಸಲು ಗುರುತಿಸಲಾಗಿದೆ.
ಅಂತಿಮ ಸುತ್ತಿಗೆ ಆಯ್ಕೆಯಾಗಿರುವವವರ ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ here.
***********
(Release ID: 1843934)
Visitor Counter : 148