ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಐಐಟಿ ಖರಗ್ ಪುರ್ ಇ-ರಿಕ್ಷಾಗಳಿಗಾಗಿ ಅಭಿವೃದ್ಧಿಪಡಿಸಿರುವ ಬಿಎಲ್ ಡಿಸಿ ಮೋಟಾರು ಮತ್ತು ಸ್ಮಾರ್ಟ್ ನಿಯಂತ್ರಕದ ದೇಶೀಯ ತಂತ್ರಜ್ಞಾನ ವಾಣಿಜ್ಯ ಬಳಕೆಗೆ ಹಸ್ತಾಂತರ


ಈ ತಂತ್ರಜ್ಞಾನ ಸಚಿವಾಲಯದ ವಿದ್ಯುನ್ಮಾನ ವಾಹನಗಳಿಗೆ ಉಪ-ವ್ಯವಸ್ಥೆಯ ದೇಶೀಯ ಅಭಿವೃದ್ಧಿ ಕಾರ್ಯಕ್ರಮದಡಿ ಅಭಿವೃದ್ಧಿ

Posted On: 06 JUL 2022 11:28AM by PIB Bengaluru

ನಮ್ಮ ಪರಿಸರ, ರಸ್ತೆ ಮತ್ತು ವಾಹನಗಳ ಸಂಚಾರಕ್ಕೆ ಹೊಂದಿಕೆಯಾಗದ ಶೇ.90ಕ್ಕೂ ಅಧಿಕ ವಿದ್ಯುನ್ಮಾನ ವಾಹನಗಳ ತಂತ್ರಜ್ಞಾನ ಮತ್ತು ಬಿಡಿಭಾಗ (ಮೋಟಾರು / ನಿಯಂತ್ರಕ / ಪರಿವರ್ತಕ / ಬ್ಯಾಟರಿ ನಿರ್ವಹಣಾ ವ್ಯವಸ್ಥೆ / ಚಾರ್ಜರ್‌ನಂತಹ) ಗಳನ್ನು ನಮ್ಮ ದೇಶ ಆಮದು ಮಾಡಿಕೊಳ್ಳುತ್ತಿದೆ ಎಂಬುದು ವಾಸ್ತವ ಸಂಗತಿಯಾಗಿದೆ. ಆದ್ದರಿಂದ, ಈ ಸವಾಲನ್ನು ಎದುರಿಸಲು ಮತ್ತು ಸ್ಥಳೀಯ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡಲು ಮಾಹಿತಿ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಚಿವಾಲಯ (ಎಂಇಐಟಿವೈ), ವಿದ್ಯುನ್ಮಾನ ವಾಹನಗಳಿಗೆ ಉಪ-ವ್ಯವಸ್ಥೆಯ ದೇಶೀಯ

ಅಭಿವೃದ್ಧಿ ಕಾರ್ಯಕ್ರಮ ಆರಂಭಿಸಿದೆ. ಆರಂಭದಲ್ಲಿ, 2ವ್ಯಾಟ್ /3 ವ್ಯಾಟ್ ಗಾಗಿ ತಂತ್ರಜ್ಞಾನ ಅಭಿವೃದ್ಧಿ ಪ್ರೊತ್ಸಾಹಿಸುವುದನ್ನು ಕೈಗೆತ್ತಿಕೊಳ್ಳಲಾಗಿದೆ, ಏಕೆಂದರೆ ನಮ್ಮ ರಸ್ತೆಗಳಲ್ಲಿ ಶೇ. 80 ಕ್ಕಿಂತ ಅಧಿಕ ವಾಹನಗಳು ಅಂತಹವೇ ಇವೆ.

ಈ ಮೇಲೆ ತಿಳಿಸಿದ ಕಾರ್ಯಕ್ರಮದ ಅಡಿಯಲ್ಲಿ ಐಐಟಿ ಖರಗ್‌ಪುರದಿಂದ ಇ-ರಿಕ್ಷಾಗಳಿಗಾಗಿ ಸ್ಥಳೀಯ, ದಕ್ಷ, ಕೈಗೆಟುಕುವ ದರದ ಮತ್ತು ಪ್ರಮಾಣೀಕೃತ ಬಿಎಲ್ ಡಿಸಿ ಮೋಟಾರ್ ಮತ್ತು ಸ್ಮಾರ್ಟ್ ನಿಯಂತ್ರಕವನ್ನು ಅಭಿವೃದ್ಧಿಪಡಿಸಲಾಗಿದೆ.

ಈ ತಂತ್ರಜ್ಞಾನವನ್ನು ನಿನ್ನೆ ಮೆಸರ್ಸ್ ಬ್ರಶ್‌ಲೆಸ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ವಾಣಿಜ್ಯ ಉತ್ಪಾದನೆಗಾಗಿ ಎಂಇಐಟಿವೈ ಕಾರ್ಯದರ್ಶಿ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ, ಎಂಇಐಟಿವೈಹೆಚ್ಚುವರಿ ಕಾರ್ಯದರ್ಶಿ ಡಾ. ಜೈದೀಪ್ ಕುಮಾರ್ ಮಿಶ್ರಾ, ಎಂಇಐಟಿವೈ ಗ್ರೂಪ್ ಗುಂಪು ಸಮನ್ವಯಕಾರರು ( ಎಲೆಕ್ಟ್ರಾನಿಕ್ಸ್‌ನಲ್ಲಿ ಸಂಶೋಧನೆ& ಅಭಿವೃದ್ಧಿ), ಐಐಟಿ ಖರಗ್‌ಪುರ ಡಾ ಸೋಮನಾಥ್ ಸೇನ್‌ಗುಪ್ತ ಮತ್ತು, ಎಂಇಐಟಿವೈನ ವಿಜ್ಞಾನಿ ಶ್ರೀ ಓಂ ಕ್ರಿಶನ್ ಸಿಂಗ್ ಸಮಕ್ಷಮದಲ್ಲಿ ವರ್ಗಾಯಿಸಲಾಯಿತು. 2022 ರ ಜುಲೈ 4 ರಂದು ಗುಜರಾತ್‌ನ ಗಾಂಧಿನಗರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಡಿಜಿಟಲ್ ಇಂಡಿಯಾ ಸಪ್ತಾಹದ ಭಾಗವಾಗಿ ಈ ತಂತ್ರಜ್ಞಾನ ವರ್ಗಾವಣೆ ನಡೆದಿದೆ

*******(Release ID: 1839608) Visitor Counter : 120