ಕಲ್ಲಿದ್ದಲು ಸಚಿವಾಲಯ

ರಾಮ್ಸರ್ ಪಟ್ಟಿಗೆ ಐದು ಕಲ್ಲಿದ್ದಲು ಗಣಿಗಳ ಸರೋವರಗಳನ್ನು ಸೇರಿಸಲು ಕಲ್ಲಿದ್ದಲು ಸಚಿವಾಲಯವು ಪರಿಸರ ಸಚಿವಾಲಯವನ್ನು ಸಂಪರ್ಕಿಸಿದೆ.


ತೊರೆದ ಕಲ್ಲಿದ್ದಲು ಗಣಿಗಳನ್ನು ಮರುಬಳಕೆ ಮಾಡಲು ಸಚಿವಾಲಯವು ವಿಶ್ವಬ್ಯಾಂಕ್‌ನಿಂದ ಸಹಾಯವನ್ನು ಕೋರಿದೆ.

Posted On: 29 JUN 2022 1:49PM by PIB Bengaluru

ಕಲ್ಲಿದ್ದಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ತೀವ್ರವಾಗಿ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ಭಾರತದ ಕಲ್ಲಿದ್ದಲು ವಲಯವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಅದೇ ಸಮಯದಲ್ಲಿ, ಕಲ್ಲಿದ್ದಲು ವಲಯವು ಪರಿಸರದ ಕಾಳಜಿ ಮತ್ತು ಅರಣ್ಯಗಳು ಮತ್ತು ಜೀವವೈವಿಧ್ಯವನ್ನು ರಕ್ಷಿಸುವ ಕ್ರಮಗಳಿಗೆ  ಒತ್ತು ನೀಡುವ ಮೂಲಕ ವಿವಿಧ ಸುಸ್ಥಿರ ಚಟುವಟಿಕೆಗಳ ಭಾಗವಾಗಿ, ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಕಲ್ಲಿದ್ದಲು ಗಣಿ ಸರೋವರಗಳ ಸಂರಕ್ಷಣೆ, ಆರ್ದ್ರ ಭೂಮಿಗಳ ಪರಿಸರ ಗುಣಲಕ್ಷಣಗಳ ನಿರ್ವಹಣೆ ಮತ್ತು ಆಯಾ ರಾಜ್ಯ ಸರ್ಕಾರಗಳು ಹಾಗು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನೆರವಿನೊಂದಿಗೆ ಪ್ರತಿಷ್ಠಿತ ರಾಮ್ಸಾರ್ ಪಟ್ಟಿಯಲ್ಲಿ ಅಂತಹ ಪಿಟ್ ಹೊಂಡಗಳನ್ನು ಸೇರಿಸಿದೆ. 

ರಾಮ್ಸಾರ್ ಪಟ್ಟಿಗೆ ಕಲ್ಲಿದ್ದಲು ಗಣಿ ಹೊಂಡಗಳನ್ನು ಸೇರಿಸುವ ಕಾರ್ಯಸಾಧ್ಯತೆಯನ್ನು ಜೌಗು ಭೂಮಿಯ ಗುರುತಿಸುವಿಕೆಗಾಗಿ ನೋಡಲ್ ಸಚಿವಾಲಯವಾದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲದೊಂದಿಗೆ ಚರ್ಚಿಸಲಾಗಿದೆ. ಸಚಿವಾಲಯದ ನಿರ್ದೇಶನದಂತೆ, ಕೋಲ್‌ ಇಂಡಿಯಾ ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್ ಮತ್ತು ಮಧ್ಯಪ್ರದೇಶದಲ್ಲಿ ಐದು ಅಂತಹ ಹೊಂಡಗಳನ್ನು ಗುರುತಿಸಿದೆ ಮತ್ತು ಅವುಗಳನ್ನು ರಾಮ್ಸಾರ್ ಪಟ್ಟಿಗೆ ಸೇರಿಸಲು ಪರಿಗಣಿಸುವಂತೆ ವಿನಂತಿಸಿದೆ.  ರಾಮ್ಸಾರ್ ಮಾಹಿತಿ ಪಟ್ಟಿಯನ್ನು (ಆರ್‌ಐಎಸ್‌) ಸಿದ್ಧಪಡಿಸುತ್ತಿದೆ. ಈ ಜೌಗು ಪ್ರದೇಶಗಳಿಗೆ ವಿವಿಧ ರೀತಿಯ ಪಕ್ಷಿಗಳು ಆಗಾಗ್ಗೆ ಬರುತ್ತವೆ ಮತ್ತು ಇಲ್ಲಿ ವಿವಿಧ ರೀತಿಯ ಮರಗಳು ಹಾಗು ಸಸ್ಯಗಳು ಇವೆ. ಕೋಲ್‌ ಇಂಡಿಯಾದಿಂದ ದೊಡ್ಡ ಪ್ರಮಾಣದ ಅರಣ್ಯೀಕರಣ ಮತ್ತು ಮಣ್ಣಿನ ತೇವಾಂಶ ಧಾರಣ ಚಟುವಟಿಕೆಗಳು ಈ ಜೌಗುಭೂಮಿಗಳ ಸುತ್ತಲಿನ ಪರಿಸರವನ್ನು ಗಣನೀಯವಾಗಿ ಸುಧಾರಿಸಿದೆ.

ಹೆಚ್ಚುವರಿಯಾಗಿ, ಕಲ್ಲಿದ್ದಲು ಸಚಿವಾಲಯವು ವಿಶ್ವ ಬ್ಯಾಂಕ್, ಜಿಐಜೆಡ್ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಸಹಕಾರ ಮತ್ತು  ಕಲ್ಲಿದ್ದಲು ಕ್ಷೇತ್ರಗಳ ಮರುಬಳಕೆಗಾಗಿ, ಅವುಗಳನ್ನು ಸುರಕ್ಷಿತ, ಪರಿಸರ ಸ್ಥಿರ ಮತ್ತು ವಾಣಿಜ್ಯ ಬಳಕೆಗೆ ಸೂಕ್ತವಾಗಿಸುವ ನಿಟ್ಟಿನಲ್ಲಿ ಸಹಕಾರ ಮತ್ತು ಸಹಾಯವನ್ನು ಪಡೆಯುತ್ತಿದೆ. ಈ ಭೂಮಿಯನ್ನು ಸೋಲಾರ್ ಪಾರ್ಕ್‌ಗಳು, ಪ್ರವಾಸೋದ್ಯಮ, ಕ್ರೀಡೆ, ಅರಣ್ಯ ಚಟುವಟಿಕೆಗಳು, ಕೃಷಿ, ತೋಟಗಾರಿಕೆ ಮತ್ತು ನಗರೀಕರಣದಂತಹ ಆರ್ಥಿಕ ಬಳಕೆಗಾಗಿ ಮರುಬಳಕೆ ಮಾಡಲಾಗುತ್ತದೆ. ವಿವಿಧ ದೇಶಗಳಲ್ಲಿ ಈ ಸಂಸ್ಥೆಗಳು ಹೊಂದಿರುವ ವ್ಯಾಪಕವಾದ ಗಣಿಗಾರಿಕೆ ಅನುಭವವು ತುಂಬಾ ಸಹಾಯಕವಾಗಿದೆ ಮತ್ತು ಭಾರತೀಯ ಕಲ್ಲಿದ್ದಲು ಗಣಿ ಸ್ಥಳಗಳನ್ನು ಮರುಬಳಕೆ ಮಾಡುವಾಗ ವಿಶ್ವದ ಅತ್ಯುತ್ತಮ ಅಭ್ಯಾಸಗಳನ್ನು ಬಳಸಲು ಸಹಾಯ ಮಾಡುತ್ತದೆ.

******



(Release ID: 1838074) Visitor Counter : 155