ಪ್ರಧಾನ ಮಂತ್ರಿಯವರ ಕಛೇರಿ

14ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ.

Posted On: 24 JUN 2022 10:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 23 ಮತ್ತು 24 ಜೂನ್ 2022 ರಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅಧ್ಯಕ್ಷತೆಯಲ್ಲಿ ವರ್ಚುವಲ್ ಆಗಿ ನಡೆಸಲಾದ 14ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತದ ಭಾಗವಹಿಸುವಿಕೆಯನ್ನು ಮುನ್ನಡೆಸಿದರು. ಜೂನ್ 23 ರಂದು ನಡೆದ ಶೃಂಗಸಭೆಯಲ್ಲಿ ಬ್ರೆಜಿಲ್‌ನ ಅಧ್ಯಕ್ಷ ಜೈರ್ ಬೋಲ್ಸನಾರೊ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಸಹ ಭಾಗವಹಿಸಿದ್ದರು. ಜಾಗತಿಕ ಅಭಿವೃದ್ಧಿ, ಶೃಂಗಸಭೆಯ ಇತರ ಕಾರ್ಯಕ್ರಮದ ವಿಭಾಗದಲ್ಲಿ ಉನ್ನತ ಮಟ್ಟದ ಸಂವಾದವನ್ನು ಜೂನ್ 24 ರಂದು ನಡೆಸಲಾಯಿತು. .

ಜೂನ್ 23 ರಂದು, ಭಾಗವಹಿಸಿದ ದೇಶಗಳ ನಾಯಕರು ಭಯೋತ್ಪಾದನೆ ನಿಗ್ರಹ, ವ್ಯಾಪಾರ, ಆರೋಗ್ಯ, ಸಾಂಪ್ರದಾಯಿಕ ಔಷಧ, ಪರಿಸರ, ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ, ಕೃಷಿ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮತ್ತು ಜಾಗತಿಕ ಸನ್ನಿವೇಶದಲ್ಲಿ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದರು. ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆ, ಕೋವಿಡ್-19 ಸಾಂಕ್ರಾಮಿಕ, ಜಾಗತಿಕ ಆರ್ಥಿಕ ಚೇತರಿಕೆ, ಇತರವುಗಳಲ್ಲಿ. ಬ್ರಿಕ್ಸ್ ಗುರುತನ್ನು ಬಲಪಡಿಸಲು ಮತ್ತು ಬ್ರಿಕ್ಸ್ ದಾಖಲೆಗಳಿಗಾಗಿ ಆನ್‌ಲೈನ್ ದತ್ತಾಂಶದ ಸ್ಥಾಪನೆ, ಬ್ರಿಕ್ಸ್ ದೇಶಗಳ ರೈಲ್ವೇ ಸಂಶೋಧನಾ ಜಾಲ ಮತ್ತು ಎಂಎಸ್‌ಎಂಇಗಳ ನಡುವಿನ ಸಹಕಾರವನ್ನು ಬಲಪಡಿಸಲು ಪ್ರಧಾನ ಮಂತ್ರಿಯವರು ಕರೆ ನೀಡಿದರು. ಬ್ರಿಕ್ಸ್ ದೇಶಗಳಲ್ಲಿನ ನವೊದ್ಯಮಗಳ ನಡುವಿನ ಸಂಪರ್ಕವನ್ನು ಬಲಪಡಿಸಲು ಭಾರತವು ಈ ವರ್ಷ ಬ್ರಿಕ್ಸ್ ನವೋದ್ಯಮಗಳ ಕಾರ್ಯಕ್ರಮವನ್ನು ಆಯೋಜಿಸಲಿದೆ. ಬ್ರಿಕ್ಸ್ ಸದಸ್ಯರಾದ ನಾವು ಪರಸ್ಪರರ ಭದ್ರತಾ ಕಾಳಜಿಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಭಯೋತ್ಪಾದನೆಯ ನಿಗ್ರಹಕ್ಕೆ ಪರಸ್ಪರ ಬೆಂಬಲವನ್ನು ನೀಡಬೇಕು ಮತ್ತು ಈ ಸೂಕ್ಷ್ಮ ವಿಷಯವನ್ನು ರಾಜಕೀಯಗೊಳಿಸಬಾರದು ಎಂದು ಪ್ರಧಾನಮಂತ್ರಿಯವರು ಹೇಳಿದರು. . ಶೃಂಗಸಭೆಯ ಮುಕ್ತಾಯದಲ್ಲಿ, ಬ್ರಿಕ್ಸ್ ನಾಯಕರು 'ಬೀಜಿಂಗ್ ಘೋಷಣೆ'ಯನ್ನು ಅಂಗೀಕರಿಸಿದರು.

ಜೂನ್ 24 ರಂದು, ಪ್ರಧಾನಮಂತ್ರಿಯವರು ಆಫ್ರಿಕಾ, ಮಧ್ಯ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್‌ನಿಂದ ಕೆರಿಬಿಯನ್‌ಗೆ ಭಾರತದ ಅಭಿವೃದ್ಧಿ ಪಾಲುದಾರಿಕೆಯ ಬಗ್ಗೆ; ಸ್ವತಂತ್ರ, ಮುಕ್ತ, ಅಂತರ್ಗತ, ಮತ್ತು ನಿಯಮ-ಆಧಾರಿತ ಸಮುದ್ರಯ ವಲಯದ ಮೇಲೆ ಭಾರತದ ಗಮನ; ಹಿಂದೂ ಮಹಾಸಾಗರದ ಪ್ರದೇಶದಿಂದ ಪೆಸಿಫಿಕ್ ಮಹಾಸಾಗರದವರೆಗಿನ ಎಲ್ಲಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ; ಮತ್ತು ಬಹುಪಕ್ಷೀಯ ವ್ಯವಸ್ಥೆಯ ಸುಧಾರಣೆ ಏಷ್ಯಾ ಮತ್ತು ಎಲ್ಲ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ದೊಡ್ಡ ಭಾಗಗಳಾಗಿ ಜಾಗತಿಕ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಾವುದೇ ರೀತಿ ತಮ್ಮ ನಿಲುವಿನ ಕುರಿತು ಹೇಳದೆ ಇರುವುದು, ಈ ವಿಷಯಗಳ ಬಗ್ಗೆ ಎತ್ತಿ ತೋರಿಸಿದರು. ಪ್ರಧಾನ ಮಂತ್ರಿಗಳು ವೃತ್ತಾಕಾರದ ಆರ್ಥಿಕತೆಯ ಪ್ರಾಮುಖ್ಯದ ಬಗ್ಗೆ ಮಾತನಾಡಿದರು ಮತ್ತು ಭಾಗವಹಿಸುವ ದೇಶಗಳ ನಾಗರಿಕರನ್ನು ಪರಿಸರಕ್ಕಾಗಿ ಜೀವನಶೈಲಿ (ಲೈಫ್) ಅಭಿಯಾನಕ್ಕೆ ಸೇರಲು ಆಹ್ವಾನಿಸಿದರು. ಅಲ್ಜೀರಿಯಾ, ಅರ್ಜೆಂಟೀನಾ, ಕಾಂಬೋಡಿಯಾ, ಈಜಿಪ್ಟ್, ಇಥಿಯೋಪಿಯಾ, ಫಿಜಿ, ಇಂಡೋನೇಷಿಯಾ, ಇರಾನ್, ಕಝಕಿಸ್ತಾನ್, ಮಲೇಷ್ಯಾ, ಸೆನೆಗಲ್, ಥೈಲ್ಯಾಂಡ್ ಮತ್ತು ಉಜ್ಬೇಕಿಸ್ತಾನ್ ಭಾಗವಹಿಸಿದ ಅತಿಥಿ ರಾಷ್ಟ್ರಗಳಾಗಿದ್ದವು.

ಇದಕ್ಕೂ ಮೊದಲು, ಜೂನ್ 22 ರಂದು ಬ್ರಿಕ್ಸ್ ಬಿಸಿನೆಸ್ ಫೋರಂನ ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಮುಖ್ಯ ಭಾಷಣದಲ್ಲಿ, ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ತಮ್ಮ ಕೆಲಸವನ್ನು ಮುಂದುವರಿಸಿದ ಬ್ರಿಕ್ಸ್ ಬಿಸಿನೆಸ್ ಕೌನ್ಸಿಲ್ ಮತ್ತು ಬ್ರಿಕ್ಸ್ ಮಹಿಳಾ ವ್ಯಾಪಾರ ಒಕ್ಕೂಟವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು, ನವೋದ್ಯಮಗಳು ಮತ್ತು ಎಂಎಸ್‌ಎಂಇಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳ ಕ್ಷೇತ್ರದಲ್ಲಿ ಮತ್ತಷ್ಟು ಸಹಕರಿಸಲು ಬ್ರಿಕ್ಸ್ ವ್ಯಾಪಾರ ಸಮುದಾಯಕ್ಕೆ ಪ್ರಧಾನಮಂತ್ರಿಯವರು ಸಲಹೆ ನೀಡಿದರು.

 

******

 

 

 



(Release ID: 1836912) Visitor Counter : 166