ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav g20-india-2023

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯು ಎರಡು ರಾಜ್ಯಗಳಿಗೆ 1,043.23 ಕೋಟಿ ರೂ.ಗಳ ಹೆಚ್ಚುವರಿ ಕೇಂದ್ರ ನೆರವು ನೀಡಲು ಅನುಮೋದನೆ ನೀಡಿದೆ.


ರಾಜಸ್ಥಾನ ಮತ್ತು ನಾಗಾಲ್ಯಾಂಡ್ 2021-22 ರಲ್ಲಿ ಸಂಭವಿಸಿದ ಬರಕ್ಕೆ ಈ ನಿಧಿಯನ್ನು ಪಡೆಯಲಿವೆ

Posted On: 16 JUN 2022 2:55PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿನ ಉನ್ನತ ಮಟ್ಟದ ಸಮಿತಿ (ಎಚ್ಎಲ್ ಸಿ) 2021-22ರಲ್ಲಿ ಬರದಿಂದ ಬಾಧಿತವಾದ ಎರಡು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ (ಎನ್ ಡಿ ಆರ್ ಎಫ್) ಅಡಿಯಲ್ಲಿ ಹೆಚ್ಚುವರಿ ಕೇಂದ್ರದ ನೆರವನ್ನು ಅನುಮೋದಿಸಿದೆ.

ಎನ್.ಡಿ.ಆರ್.ಎಫ್.ನಿಂದ ಎರಡು ರಾಜ್ಯಗಳಿಗೆ 1,043.23 ಕೋಟಿ ರೂ.ಗಳ ಹೆಚ್ಚುವರಿ ಕೇಂದ್ರ ನೆರವನ್ನು ಎಚ್.ಎಲ್.ಸಿ. ಅನುಮೋದಿಸಿತು:

ರಾಜಸ್ಥಾನಕ್ಕೆ 1,003.95 ಕೋಟಿ ರೂ.

ನಾಗಾಲ್ಯಾಂಡ್ ಗೆ 39.28 ಕೋಟಿ ರೂ.

ಈ ಹೆಚ್ಚುವರಿ ನೆರವು ಈಗಾಗಲೇ ರಾಜ್ಯಗಳ ವಶದಲ್ಲಿರುವ ರಾಜ್ಯ ವಿಪತ್ತು ಸ್ಪಂದನಾ ನಿಧಿಯಲ್ಲಿ (ಎಸ್.ಡಿ.ಆರ್.ಎಫ್.) ಕೇಂದ್ರವು ರಾಜ್ಯಗಳಿಗೆ ಬಿಡುಗಡೆ ಮಾಡುವ ಹಣಕ್ಕಿಂತ ಹೆಚ್ಚಾಗಿದೆ. 2021-22ರ ಆರ್ಥಿಕ ವರ್ಷದಲ್ಲಿ. ಕೇಂದ್ರ ಸರ್ಕಾರವು 28 ರಾಜ್ಯಗಳಿಗೆ ಎಸ್ ಡಿಆರ್ ಎಫ್ ನಲ್ಲಿ 17,747.20 ಕೋಟಿ ರೂ.ಗಳನ್ನು ಮತ್ತು 11 ರಾಜ್ಯಗಳಿಗೆ 7,342.30 ಕೋಟಿ ರೂ.ಗಳನ್ನು ಎನ್ ಡಿ ಆರ್ ಎಫ್ ನಿಂದ ಬಿಡುಗಡೆ ಮಾಡಿದೆ.

 

****



(Release ID: 1834703) Visitor Counter : 135